ಶ್ರೀ ಸಂಸ್ಥಾನ ಗೋಕರ್ಣ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ದಿನಚರಿ:

ವಸತಿ:
ಶ್ರೀ ದೇವಶ್ರವ ಶರ್ಮ, ಅಶೋಕೆ, ಗೋಕರ್ಣ

ಶ್ರೀಭಿಕ್ಷೆ ; ರಾಘವೇಂದ್ರ ಬನದಕೊಪ್ಪ

ದಿನವಿಶೇಷ:

  • ಸೂರ್ಯೋದಯಕ್ಕೆ ಸರಿಯಾಗಿ ಗೋಕರ್ಣದ ಶ್ರೀಮಹಾಗಣಪತಿಗೆ ಶ್ರೀಕರಗಳಿಂದ ಪೂಜೆ..
  • ಶ್ರೀ ಆತ್ಮಲಿಂಗಕ್ಕೆ ರುದ್ರಾಭಿಷೇಕಪೂರ್ವಕ ಪೂಜೆ..
  • ಶ್ರೀ ತಾಮ್ರಗೌರಿಯ ಪೂಜೆ..
  • ಶ್ರೀ ಕೋಟಿತೀರ್ಥದ ಉತ್ತರ ತೀರದಲ್ಲಿ ಶೋಭಿಸುವ ಶ್ರೀ ರಘೂತ್ತಮ ಮಠದಲ್ಲಿ ಸೀತಾ-ಲಕ್ಷ್ಮಣ-ಹನುಮತ್ಸಮೇತನಾದ ಶ್ರೀ ರಾಮಚಂದ್ರನ  ಅರ್ಚನೆ – ಮೊದಲ ಬಾರಿಗೆ ಶ್ರೀಕರಗಳಿಂದ..
  • ಶ್ರೀ ರಾಮಚಂದ್ರಾಪುರ ಮಠದ ಅವಿಚ್ಛಿನ್ನ ಪರಂಪರೆಯ 33ನೆಯ ಗುರುವರ್ಯ ಜಗದ್ಗುರು ಶಂಕರಾಚಾರ್ಯ ಬ್ರಹ್ಮಲೀನ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಗುರುಮೂರ್ತಿಗೆ (ಸಮಾಧಿ)ಶ್ರೀಕರಗಳಿಂದ ಮೊದಲ ಬಾರಿಗೆ ಅರ್ಚನೆ..
  • ಶ್ರೀ ಭದ್ರಕಾಳಿಯ ಪೂಜೆ..
  • ಎಂದಿನಂತೆ ಶ್ರೀರಾಮಾರ್ಚನೆ..
  • ದರ್ಶನ ಪಡೆದವರು:
    ಬೆಂಗಳೂರಿನ ಭಕ್ತವೃಂದ
    ಬೆಳ್ಳಾರೆಯ ಭಕ್ತವೃಂದ
    ರಷಿಯಾದ ಮೂವರು ಭಕ್ತರಿಂದ  ಸಂದರ್ಶನ..
    ಸವದತ್ತಿಯ ಮಾಜಿ ಶಾಸಕ ರಾಜಣ್ಣ ಮಾಮನಿ
    ಮುನವಳ್ಳಿಯ ಸುಬ್ರಾಯ ಭಂಡಾರಿ
  • ಹವ್ಯಕರ ಮೂಲಕ್ಷೇತ್ರ ‘ಅಹಿಚ್ಚತ್ರ ‘ದಿಂದ ಪುರಾತನ ಸ್ಮಾರಕ ಇಟ್ಟಿಗೆ’ಯ ಆಗಮನ..
  • ಶ್ರೀ ಮಹಾಬಲೇಶ್ವರ ದೇವರು ವರ್ಷಕ್ಕೊಮ್ಮೆ ಉತ್ಸವ ಹೋಗುವ ಭೀಮನಕೊಂಡಕ್ಕೆ ಭೇಟಿ..
    ಅಲ್ಲಿಯ ವಿಷ್ಣುಮೂರ್ತಿ ದೇವಸ್ತಾನದ ಕಾಮಗಾರಿ ವೀಕ್ಷಣೆ..
    ಹಿಂದಿರುಗುವ ಮಾರ್ಗದಲ್ಲಿ ಸಂಪೂರ್ಣ ಪಾಳು ಬಿದ್ದ ಭೀಮೇಶ್ವರ ದೇವಸ್ಥಾನದ ವೀಕ್ಷಣೆ..ಜೀರ್ಣೋದ್ಧಾರದ ಚಿಂತನೆ..
    ಚದರವಳ್ಳಿ ವಿದ್ಯಾಸಂಸ್ಥೆಯ ಪ್ರತಿನಿಧಿಗಳೊಂದಿಗೆ ಸಮಾಲೋಚನೆ..
Facebook Comments Box