ಶ್ರೀ ರಾಮಾಶ್ರಮ, ಬೆಂಗಳೂರು 16/09/2015

ಬೆಳಗ್ಗೆ:

ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆ ಸಂಪನ್ನವಾಯಿತು.
~
ಭಜನೆ:
ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ.
~
ಛಾತ್ರಪುರಸ್ಕಾರ : ವಿವಿಧ ಕ್ಷೇತ್ರಗಳಲ್ಲಿ ಅತ್ಯುನ್ನತ ಸಾಧನೆ ಮಾಡಿದ ಶಶಾಂಕ ಕಾಶಿ ಇವರಿಗೆ

~
ಲೋಕಾರ್ಪಣೆ: : ಭಾರತೀಪ್ರಕಾಶನ ಹೊರತಂದಿರುವ ಛಾತ್ರಚಾತುರ್ಮಾಸ್ಯದಲ್ಲಿ ಶ್ರೀಗಳು ಮಕ್ಕಳೊಂದಿಗೆ ಸಂವಾದ ನಡೆಸಿದ ಗುರು-ಶಿಷ್ಯ ಸಂವಾದ ಸಿಡಿ

~
ಸರ್ವಸೇವೆ : ಸಿವಿಲ್ ಎಂಜಿನಿಯರ್ ಬಳಗದಿಂದ ಸರ್ವ ಸೇವೆ ನಡೆಯಿತು.
~
ಉಪಸ್ಥಿತಿ : ಛಾತ್ರಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಯು.ಎಸ್.ಜಿ ಭಟ್, ಛಾತ್ರ ಸಮಿತಿ ಪ್ರಾಧಾನ ಕಾರ್ಯುಅದರ್ಶಿ ಗಣೇಶ ಹೆಗಡೆ, ಮಹಾಮಂಡಲದ ಅಧ್ಯಕ್ಷ ವೈ.ವಿ ಕೃಷ್ಣಮೂರ್ತಿ, ನಿರ್ಮಾಣ ಕಾರ್ಯದರ್ಶಿ ಕೆ.ಎನ್ ಭಟ್, ಮಾತೃ ಪ್ರಧಾನೆ ಈಶ್ವರೀ ಬೇರ್ಕಡವು, ಖ್ಯಾತ ವಾಸ್ತು ತಜ್ನ ಮುನಿಯಂಗಳ ಮಹೇಶ, ಮಂಜುನಾಥ ಕಾಶಿ.

ಗಾಯನ : ವಿದುಷಿ ಜಯಲಕ್ಷ್ಮೀ

ನಿರೂಪಣೆ : ಕೊರಿಕ್ಕಾರ್ ಸಹೋದರಿಯರು ನಿರೂಪಿಸಿದರು.

ಆಶೀರ್ವಚನ
ದೇವರು ಎಲ್ಲ ಕಡೇ ಇದ್ದಾನೆ ಎನ್ನುವ ಭಾವವನ್ನು ನಮ್ಮಲ್ಲಿ ಬೆಳೆಸಿಕೊಳ್ಳಬೇಕು. ಆಗ ನಾವು ಕೆಟ್ಟದ್ದನ್ನು ಮಾಡದಂತೆ, ಮಾತನಾಡದಂತೆ ತಡೆಯುತ್ತದೆ. ಮನೆಯಲ್ಲಿ ದೇವರ ಫೋಟೊ ಇಡುವುದು ಆ ಕಾರಣಕ್ಕೆ. ದೇವರು ನಮ್ಮನ್ನು ನೋಡುತ್ತಿದ್ದಾನೆ ಎಂದೆನಿಸುತ್ತದೆ. ಆಗ ನಾವು ತಪ್ಪು ಮಾಡಲಾರೆವು ಅಂತಃಸಾಕ್ಷಿಗೂ ನಮಗೂ ವಿವಾದವಿಲ್ಲದಿದ್ದರೆ ಯಾವ ಗಂಗಾ ಸ್ನಾನವೂ ಬೇಡ, ಕುರುಕ್ಷೇತ್ರವೂ ಬೇಡ. ಯಾವ ಯಜ್ಞ ಯಾಗಾದಿಗಳೂ ಬೇಡ. ಅಂತಃಸಾಕ್ಷಿ ಮೆಚ್ಚುವಂತೆ ಜೀವನ ನಡೆಸಬೇಕು. ನಿಮಗೂ ನಿಮ್ಮ ಅಂತಃಸಾಕ್ಷಿಗೂ ಅಭಿಪ್ರಾಯ ಭೇದ ಬರದಂತೆ ಬದುಕಿದರೆ, ನಿಮ್ಮ ಜೀವನ ನೆಮ್ಮದಿಯಿಂದ ಕೂಡಿರುತ್ತದೆ
SRI_1585

SRI_1589

SRI_1593

Audio:

Download: Link

Video:

Facebook Comments Box