ದೇಶಿಯತೆಯ ಬುನಾದಿ ಇದ್ದರಷ್ಟೆ ದೇಶಕ್ಕೊಂದು ಗಟ್ಟಿ ಅಸ್ತಿತ್ವ. ದೇಶಿಯತೆಯಲ್ಲಿ ನಮ್ಮ ಸಂಸ್ಕೃತಿ, ಭಾಷೆ, ಆಚರಣೆ, ಪಾರಂಪರಿಕ ವ್ಯವಸ್ಥೆ ಎಲ್ಲವೂ ಬಂತು. ನಮ್ಮ ದೇಶದ ಮಟ್ಟಿಗೆ ಹೇಳುವುದಾದರೆ ನಮ್ಮದು ಗೋಕೇಂದ್ರಿತ ಬದುಕಿನ ವ್ಯವಸ್ಥೆಯಾಗಿತ್ತು. ಆದರೆ ಕಾಲಕ್ರಮೇಣ ನಶಿಸಿಹೋದ ಈ ವ್ಯವಸ್ಥೆಯ ಪುನರುತ್ಥಾನಕ್ಕೆ ಇದು ಸಕಾಲ. ದೇಶೀ ಗೋಸಂರಕ್ಷಣೆ ಗೊಂದಲವಿಲ್ಲದೆ ನಡೆಯಬೇಕಾದ ಕಾರ್ಯ ಎಂಬುದನ್ನು ವಿವರಿಸಿದ್ದಾರೆ  ಜಗದ್ಗುರು ಶಂಕರಾಚಾರ್ಯ  ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು.

ಪ್ರಕಟಣೆ ಕೃಪೆ: ಗೋವಾಣಿ e-ವಾರಪತ್ರಿಕೆ ( www.gouvaani.in )

ದೇಶ ಸಂರಕ್ಷಣೆಯಷ್ಟೇ ಮುಖ್ಯ ಗೋಸಂರಕ್ಷಣೆ

1. ದೇಶೀ ಗೋತಳಿಗಳ ಸಂರಕ್ಷಣೆಯ ಬಗ್ಗೆ ನಿಮ್ಮ ಚಿಂತನೆ ಏನು?
ಗೊಂದಲವೇ ಇಲ್ಲ ಆಗಲೇ ಬೇಕಾದ ಕಾರ್ಯ, ದೇಶೀ ಗೋತಳಿಗಳ ಸಂರಕ್ಷಣೆ, ದೇಶ ಸಂರಕ್ಷಣೆ ಎಷ್ಟು ಮುಖ್ಯವೋ ಒಂದು ಚೂರು ಜಾಸ್ತಿ… ಕಡಿಮೆ ಅಂತೂ ಅಲ್ಲ ಮುಖ್ಯವಾಗಿರುವುದು ದೇಶೀ ಗೋವುಗಳ,ಗೋತಳಿಗಳ ಸಂರಕ್ಷಣೆ’

2. ದೇಶೀ ತಳಿಗಳ ಪೈಕಿ ಸ್ಥಳೀಯ ತಳಿಗಳನ್ನ ಆಯಾ ಜಾಗಗಳಲ್ಲಿಯೇ ರಕ್ಷಣೆ ಮಾಡಬೇಕೆ?
ತಳಿಗಳನ್ನು ಅವುಗಳಿರುವ ಪ್ರದೇಶದಲ್ಲಿಯೇ ರಕ್ಷಣೆ ಮಾಡುವುದು ಹೆಚ್ಚು ಸೂಕ್ತ. ಯಾಕೆಂದರೆ ಅಲ್ಲಿ ಜಲ, ವಾಯು ಅಲ್ಲಿಯ ವಾತಾವರಣ ಆ ತಳಿಯ ಉಳಿಸಿಕೊಳ್ಳುವುದಕ್ಕೆ ತುಂಬಾ ಅನುಕೂಲವಾಗಿರತ್ತೆ, ಮತ್ತು ಆ ತಳಿಯ ರಚನೆ, ವಿನ್ಯಾಸಕ್ಕೆ ಅಲ್ಲಿಯ ಜಲವಾಯುಗಳು ಕಾರಣವಾಗಿರುತ್ತವೆ. ಹಾಗಾಗಿ ಆಯಾ ಪ್ರದೇಶಗಳಲ್ಲಿ ರಕ್ಷಣೆ ಮಾಡುವುದು ಒಳ್ಳೆಯದು. ಉದಾಹರಣೆಗೆ ಮಲೆನಾಡು ಗಿಡ್ಡ ಪ್ರದೇಶದಲ್ಲಿ ಒಂದು ದೊಡ್ಡ ತಳಿಯನ್ನ ತಂದರೆ, ಕ್ರಮೇಣ ಚಿಕ್ಕದಾಗಿಯೇ ಆಗ್ತದೆ. ಯಾಕೆಂದರೆ ಬೆಟ್ಟಗುಡ್ಡ ಗಳನ್ನ ಹತ್ತಿಳಿಯುವುದಕ್ಕೆ ಬೇಕಾದ ಹಾಗೆ ಪ್ರಕೃತಿ ತಾನಾಗಿಯೇ ಗೋವುಗಳ ಶರೀರವನ್ನ ಚಿಕ್ಕದು ಮಾಡ್ತದೆ. ಹಾಗಾಗಿ ಅದು ಇರೋ ಪ್ರದೇಶದಲ್ಲಿ ಮಾಡಿದರೆ ಒಳ್ಳೇದು, ಅಕಸ್ಮಾತ್ ಯಾವುದಾದರೂ ತಳಿ ಆ ಪ್ರದೇಶ ಬಿಟ್ಟು ಬೇರೆ ಪ್ರದೇಶಕ್ಕೆ ಹೋದರೆ ನಮ್ಮ ದೇಶದೊಳಗೆ, ಅಪರಾಧ ಏನೂ ಇಲ್ಲ. ಈ ದೇಶದ ಒಳಗೆ ಪ್ರದೇಶದಿಂದ ಪ್ರದೇಶಕ್ಕೆ ಗೋತಳಿಗಳನ್ನ ತೆಗೆದುಕೊಂಡು ಹೋದಾಗ ಸ್ವಲ್ಪ ಬದಲಾವಣೆ ಬರಬಹುದು ಅಲ್ಲಿ ವಾತಾವರಣಕ್ಕೆ ಹೊಂದಿಕೊಂಡು ಆದರೆ ಅನರ್ಥ ಏನೇನೂ ಆಗಲು ಸಾಧ್ಯವೇ ಇಲ್ಲ…

3. ನಿಮ್ಮ ಕಲ್ಪನೆಯಲ್ಲಿ, ದೇಶೀ ಗೋತಳಿಗಳ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಅಂಶಗಳು ಯಾವುವು?
ನಂದಿ, ನಂದಿಗಿಂತ ಮುಖ್ಯವಾದ ಬೇರೆ ಯಾವುದೂ ಇಲ್ಲ ಈ ವಿಷಯದಲ್ಲಿ ಅಂದರೆ ಶ್ರೇಷ್ಠ ವಗ9ಕ್ಕೆ ಸೇರಿದ ಅತಿ ಶ್ರೇಷ್ಠ ಗುಣಮಟ್ಟದ ನಂದಿಗಳನ್ನು ಹುಡುಕಿ ರಕ್ಷಣೆ ಮಾಡಬೇಕು, ಅವುಗಳ ಮೂಲಕವಾಗಿ ಸಂತಾನಾಭಿವೃದ್ಧಿಯನ್ನ ನಾವು ಮಾಡಬೇಕಾಗುತ್ತದೆ. ಹಾಗಾಗಿ ನಂದಿ ಶಾಲೆಗಳನ್ನ ಮಾಡುವಂಥದ್ದು ಮತ್ತು ಉತ್ತಮೋತ್ತಮವಾಗಿರುವಂಥ ನಂದಿಗಳು, ಅವುಗಳನ್ನ ಹುಡುಕಿ ಸಂರಕ್ಷಣೆ ಮಾಡಿ ಅವುಗಳ ಮೂಲಕ ತಳಿ ಬೆಳೆಸುವಂಥದ್ದು ತುಂಬಾ ಅಗತ್ಯ.

4. ವಿದೇಶಗಳಲ್ಲಿಯೂ ನಮ್ಮ ದೇಶೀ ಗೋತಳಿಗಳ ಸಂರಕ್ಷಣೆ ಆಗುತ್ತಾ ಇದೆ, ಈ ಹಿನ್ನೆಲೆಯಲ್ಲಿ ಪಾರಂಪರಿಕ ವಿಧಾನದಲ್ಲಿ ಗೋ ಸಂರಕ್ಷಣೆ ಸರಿಯೋ ಅಥವಾ ಪಾಶ್ಚಾತ್ಯರಂತೆ ಆಧುನಿಕ ವಿಧಾನದಲ್ಲಿ ಸರಿಯೋ?
ಆಧುನಿಕ ವಿಧಾನ ದೋಷಗ್ರಸ್ತ. ಅವರು ಕೃತಕ ಗರ್ಭಧಾರಣೆಗೆ ಹೋಗ್ತಾರೆ. ಕೃತಕ ಗರ್ಭಧಾರಣೆಯಿಂದ ಕೃತಕ ಗೋವು ಹುಟ್ಟಬಹುದು ಹೊರತು ಸಹಜ ಗೋವು ಹುಟ್ಟೋಕೆ ಸಾಧ್ಯವಿಲ್ಲ. ಇತ್ತೀಚಿಗೆ ಹಾಗೊಂದು ಕೂಗು ಶುರುವಾಗಿದೆ. ಮಿಶ್ರತಳಿಗಳನ್ನು ವಿರೋಧ ಮಾಡ್ತಾ ಮಾಡ್ತಾ ಮಿಶ್ರತಳಿಗಳಿಗೆ ವಿರುದ್ಧ ವಾತಾವರಣ ದೇಶದಲ್ಲಿ ಬಂದಾಗ. ಹಾಗಿದ್ದರೆ ಅದನ್ನೇ ಕೃತಕ ಗರ್ಭಧಾರಣೆ ಮೂಲಕ ದೇಶೀ ಗೋವನ್ನೇ ಬಳಸೋಣ. ಗಿರ್ ಅಥವಾ ಸಾಹಿವಾಲ್ ತಳಿ ಅಭಿವೃದ್ಧಿಯನ್ನು ಕೃತಕ ಗರ್ಭಧಾರಣೆ ಮೂಲಕ ಮಾಡೋಣ ಅನ್ನುವುದು ಇತ್ತೀಚಿಗೆ ಶುರುವಾಗಿದೆ. ಅದು ತಪ್ಪು. ಯಾಕೆಂದರೆ ಮನುಷ್ಯ ಸೃಷ್ಟಿ ಮನುಷ್ಯ ಸೃಷ್ಟಿ ಯೇ. ದೈವ ಸೃಷ್ಟಿ ದೈವ ಸೃಷ್ಟಿ ಯೇ. ಸೃಷ್ಟಿ ಸಹಜವಾದ ವಿಧಾನದಲ್ಲಿ ನಂದಿಗಳ ಮೂಲಕವಾಗಿಯೇ ತಳಿಗಳು ಬೆಳೆಯಬೇಕು. ಆಗಲೇ ಪೂರ್ಣ ಸಹಜತೆ ಬರೋಕೆ ಸಾಧ್ಯ. ಮತ್ತೆ ನಂದಿಗೇನು ಕೆಲಸ? ನಂದಿಗಳನ್ನು ಬಳಸದಿದ್ದರೆ ನಂದಿಗಳನ್ನು ಬಲಿ ಹಾಕುವ ಪ್ರಮಾಣ ಜಾಸ್ತಿಯಾಗುತ್ತದೆ.

5. ಸ್ವಾತಂತ್ರ್ಯಾ ನಂತರದ ಕಾಲಘಟ್ಟದಲ್ಲಿ ನಿಜವಾಗಿ ಗೋರಕ್ಷಣೆ ಅನುಷ್ಟಾನ ಆಗಿದೆಯೇ?
ಇಲ್ಲವೇ ಇಲ್ಲ, ಸ್ವಾತಂತ್ರ್ಯಾನಂತರದ ಕಾಲಘಟ್ಟ ದೇಶೀ ಗೋವುಗಳಿಗೆ ಕರಾಳ ಕಾಲಘಟ್ಟ. ಇದೇ ಸಮಯದಲ್ಲಿ ಕಸಾಯಿಖಾನೆಗಳು ತುಂಬಾ ಪ್ರಮಾಣದಲ್ಲಿ ಜಾಸ್ತಿಯಾದವು. ಬ್ರಿಟಿಷರ ಕಾಲದಲ್ಲಿ ಎಷ್ಟಿತ್ತೋ ಅದಕ್ಕಿಂತ ಎಷ್ಟೋ ಹೆಚ್ಚಿನ ಪ್ರಮಾಣದಲ್ಲಿ ಕಸಾಯಿಖಾನೆಗಳು ಸ್ಥಾಪನೆ ಮಾಡಲ್ಪಟ್ಟಿವೆ. ಸ್ವತಂತ್ರೋತ್ತರ ಭಾರತದಲ್ಲಿ. ಸ್ವಾತಂತ್ರ ಬರುವಾಗ 360 ಇತ್ತೆಂದು ಕೇಳುತ್ತೇವೆ ನಾವು. ಈಗ ಎಷ್ಟು ಸಾವಿರ, ಸಾವಿರ! ಅಧಿಕೃತ, ಅನಧಿಕೃತ! ಇದೊಂದು ಕಡೆ. ಇನ್ನೊಂದು ಕಡೆಗೆ ಕೃತಕ ಗರ್ಭಧಾರಣೆ, ಮಿಶ್ರತಳಿ ಬಂದಿದ್ದು ಸ್ವತಂತ್ರ ಭಾರತದ ಕಾಲದಲ್ಲಿ . ಅದು ದೇಶೀ ತಳಿಗಳನ್ನು ತುಂಬಾ ದೊಡ್ಡ ಪ್ರಮಾಣದಲ್ಲಿನಾಶ ಮಾಡಿಬಿಟ್ಟಿದೆ. ಹಾಗಾಗಿ ಸ್ವತಂತ್ರ ಭಾರತದ ಕಾಲದಲ್ಲಿ ಗೋರಕ್ಷಣೆ ಅನುಷ್ಠಾನ ಅಲ್ಲ, ಗೋಭಕ್ಷಣೆ ಅಥವಾ ಗೋ ನಾಶದ ಅನುಷ್ಠಾನ ಆಗಿದೆ.

 

Read Gouvaani E-Magazine: www.gouvaani.in 

www.gouvaani.in

Facebook Comments Box