ಪ್ರಕರಣವನ್ನು ಕೊಡಲೇ CID ಒಪ್ಪಿಸಿ ವಿಳಂಬಕ್ಕೆ ಅವಕಾಶ ಕೊಡದೆ ತನಿಖೆ ಮಾಡಬೇಕು. ವಿಳಂಬವಾದಲ್ಲಿ ಪ್ರಕರಣದ ಸತ್ಯಾಸತ್ಯತೆಯು ಜನರನ್ನು ತಲುಪುವುದು ವಿಳಂಬವಾಗುವ ಸಾಧ್ಯತೆ ಇದೆ. ಮಠ ಮೊದಲಿನಿಂದಲೂ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿತ್ತು ಮತ್ತು CID ಯು ಈಗಾಗಲೇ ಅನೇಕ ಪ್ರಕರಣಗಳನ್ನು ಬೇಧಿಸಿದ್ದು ಈ ಪ್ರಕರಣವನ್ನೂ ಸರಿಯಾಗಿ ನಡೆಸುತ್ತದೆ, ಆದ್ದರಿಂದ ಕೂಡಲೇ ಈ ಪ್ರಕರಣವನ್ನು CID ಗೆ ಸರಕಾರ ವಹಿಸಲಿ ಎಂದು ಮಠವು ಆಗ್ರಹಿಸುತ್ತದೆ.
“ಚರಣಾರವಿಂದಗಳು” ಅಂತ ಯಾಕೆ ಹೇಳುತ್ತಾರೆ ಅಂತ ನನ್ನ ಅನುಭವಕ್ಕೆ ಬಂತು. ಹಾಗೆ ಹಣೆಯ ಮೂಲಕ ನನ್ನ ಹೃದಯಕ್ಕಿಳಿದ ಶ್ರೀಚರಣ ನನ್ನ ಹೃದಯದಲ್ಲಿ ನೆಲೆಸಿದೆ. ನನ್ನ ಕೊನೆಯುಸಿರಿನ ತನಕವೂ ಅಲ್ಲೇ ಇರುತ್ತದೆ. ನನ್ನು ಎಲ್ಲೇ ಇದ್ದರೂ ನನ್ನ ಹೃದಯಸ್ಥವಾಗಿರುವ ಶ್ರೀಚರಣದ ಮೂಲಕಪ್ರತಿ ದಿನವೂ ಅನೇಕ ಬಾರಿ ಶ್ರೀಗುರುಗಳ ದರ್ಶನ ನನಗೆ ಆಗುತ್ತಲೇ ಇರುತ್ತದೆ.
ಇನ್ನು ನನ್ನ ಬಾಳಿನ ಅನೇಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಶ್ರೀಗುರುಗಳು ತೋರಿದ ಮಾತೃವಾತ್ಸಲ್ಯವು ಕೂಡಾ ಮಾತುಗಳಿಗೆ ಮೀರಿದ್ದು.
ಪುಸ್ತಕದ ಕುರಿತಾಗಿ ದೀರ್ಘವಾಗಿ ಮಾತನಾಡಿದ ವಕೀಲರೂ ನ್ಯಾಯವಾದಿಗಳು ಆದ ಶ್ರೀ ಎಂ ಅರ್ ಸತ್ಯನಾರಾಯಣ ರವರು , ಪುಸ್ತಕವನ್ನು ಪ್ರಸನ್ನ ಅನುಭವಿಸಿ ಬರೆದಿದ್ದರಿಂದ ಭಾವ ಇದರಲ್ಲಿ ತುಂಬಿದೆ – ಇದು ಭಾವದಿಂದ ಕೂಡಿದೆಯಾದ್ದರಿಂದ ಭಾಷೆ ಕೂಡ ಅತ್ಯಂತ ಸರಳವಾಗಿದ್ದು ಓದಿಸಿಕೊಂಡು ಹೋಗುತ್ತದೆ – ಅಮೇರಿಕಾದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಒಬ್ಬ ಸಾಮಾನ್ಯ ತರುಣ ಇಂತಹ ಒಂದು ಕ್ರತಿ ರಚಿಸಿದ್ದಾನೆ ಎಂದರೆ ಸಾಮಾನ್ಯ ಜನರಿಗೆ ಶ್ರೀಗಳ ಮೇಲೆ ಸಾಮಾನ್ಯ ಜನರಿಗೆ ಇರುವ ಪ್ರೀತಿ ಮತ್ತು ಅಭಿಮಾನ ಏನು ಎಂದು ಅರ್ಥವಾಗುತ್ತದೆ ಎಂದರು . ಅಲ್ಲದೆ ಇವತ್ತಿನ ಸಂಕೀರ್ಣ ಸಂದರ್ಭ ಮತ್ತು ಸಾಮಾನ್ಯ ಜನರನ್ನೂ ಆಕರ್ಷಿಸುವ ಕೃತಿ ಯಲ್ಲಿ ಪ್ರಸ್ತಾಪಿಸಿದ ಶ್ರೀಗಳ ಹಲವು ಗುಣಗಳ ಬಗೆಗೆ ಅತ್ಯಂತ ದೀರ್ಘವಾಗಿ ಮಾತನಾಡಿದರು