ಎಚ್ಚರಿಕೆ! ಅವರು ನಮ್ಮ ಪ್ರೀತಿಯ ಸಂಸ್ಥಾನ !

ಘಟನೆ 1 :
ಸುಮಾರು ರಾತ್ರಿ ಹನ್ನೊಂದು ಘಂಟೆ, ಅದು ದೇಶವೆಲ್ಲಾ ಸಂಭ್ರಮದಿಂದ ಆಚರಿಸಬೇಕಾಗಿದ್ದ ಗೌರಿ ಹಬ್ಬದ ದಿನ –
ಸುಮಾರು ೮೫ ವರ್ಷದ ವೃದ್ಧರು ಶ್ರೀಗಳ ಭೇಟಿಗಾಗಿ ಕಾದು ಕುಳಿತಿದ್ದರು –
ಅವತ್ತು ರಾತ್ರಿ ಶ್ರೀಗಳು ಅನುಷ್ಟಾನದಲ್ಲಿ ನಿರತರಾಗಿದ್ದರು. ಹೋಗಲೋಲ್ಲರು ಆ ವೃದ್ಧರು.
ನಾವೇ ಹೇಳಿದೆವು ಅವರಿಗೆ ಕೊನೆ ಪಕ್ಷ ಊಟ ಮಾಡಿಕೊಂಡು ಬನ್ನಿ – ಇಲ್ಲ ಹೋಗಲಿಲ್ಲ.
ಬರ ಪೂರ್ತಿ ಶ್ರೀಗಳ ಅನುಷ್ಟಾನ ಮುಗಿಯುವರೆಗೆ ಕಾದರಲ್ಲ ಅವರು.

ಸರಿ ನಮ್ಮ ಶ್ರೀಗಳೋ ಭಕ್ತ ವತ್ಸಲರು – ಎಸ್ಟೆ ತಲೆ ಬಿಸಿ ಇದ್ದಾಗ್ಯೂ ಇವರು ಕಾಯುತ್ತಿದ್ದರೆಂದು ಸುಮಾರು 1 ಘಂಟೆ ಹೊತ್ತಿಗೆ ಹೊರಗೆ ಬಂದೆ ಬಿಟ್ಟರು.
ಸರಿ ನನಗೆ ಒಂದು ಕೆಟ್ಟ ಕುತೂಹಲ ಇಷ್ಟು ಹೊತ್ತು ಈ ಅಪರಾತ್ರಿಯಲ್ಲ್ಲಿ ಆಹಾರವೂ ಇಲ್ಲದೆ ಕಾದು ಈ ಮನುಷ್ಯ ನಮ್ಮ ಗುರುಗಳಿಗೆ ತೊಂದರೆ ಕೊಟ್ಟು ಮಾತಾಡಲಿಕ್ಕೆ ಇರುವ ಘನ ಕಾರ್ಯವಾದರೂ ಏನು.
ಪಾಪ ಆ ಪುಣ್ಯಾತ್ಮರು ಹೇಳಿದ್ದು ಎರಡೇ ವಾಕ್ಯ : ಸಂಸ್ಥಾನ ತಮ್ಮ ಆರೋಗ್ಯದ ಮೇಲೆ ದಯವಿಟ್ಟು ಗಮನ ತೆಗೆದುಕೊಳ್ಳಬೇಕು . ಉಳಿದಿದ್ದು ರಾಮ ನೋಡಿಕೊಳ್ಳುತ್ತಾನೆ.
ಶಪಿಸಿಕೊಂಡೆ ನನ್ನನ್ನು ನಾನು. ಸರಿ ಹೊರಟೆ . ಘಟನೆ ಎರಡಕ್ಕೆ ಸಾಕ್ಷಿಯಾಗಲಿಕ್ಕೆ..

ಘಟನೆ 2:
ಸುಮಾರು ೧-೩೦ ರಾತ್ರಿ ಗೌರಿ ಹಬ್ಬದ ದಿನ.
ಸ್ವಲ್ಪ ದೂರ ಹೋಗುತ್ತಿದ್ದಂತೆ ಒಂದೆರಡು ಮೂರು ವಾಹನಗಳು ಮಠದ ಕಡೆ ಬರುತ್ತಿದ್ದವು .
ಸರಿ ಆತಂಕವಾಯಿತು ನಮಗೆ . ನಮ್ಮ ಕಾರು ನಿಲ್ಲಿಸಿದೆವು . ಅವರೂ ನಿಲ್ಲಿಸಿದರು .
ನೋಡಿದರೆ ಅವರು ನಮ್ಮ ಪರಿಚಯದವರು . ಗಣೇಶನನ್ನು ತರುವ ಮನೆ ಅವರದ್ದು .
ಎರಡು ದಿನದಿಂದ ಮಠದಲ್ಲೇ ಇದ್ದು ಗಣೇಶನ ಹಬ್ಬಕ್ಕೆ ತಯಾರಿಯೇ ಆಗಲಿಲ್ಲ ಎಂದು ಸುಮಾರು ೧೦ ಘಂಟೆ ರಾತ್ರಿ ಗೆ ಮಠದಿಂದ ಮನೆಗೆ ಹೊರಟಿದ್ದರು .
ಇದೇನು ಮತ್ತೆ ಬಂದಿರಿ ಎಂದು ಕೇಳಿದೆ – ನೋಡಿದರೆ ಅದ್ಯಾರೋ ಎಲ್ಲೋ ಟಿ ವಿ ನ್ಯೂಸ್ ನಲ್ಲಿ ಮಠಕ್ಕೆ ಆತಂಕ ಎಂದೇನೋ ಹೇಳಿದರು ಎಂದು ಇವರಿಗೆ ಗೊತ್ತಾಗಿದೆ .
ಅದಕ್ಕೆ ಘಾಟಿ ಹತ್ತಿದವರು ಮತ್ತೆ ವಾಪಾಸ್ ಬಂದಿದ್ದಾರೆ .

ಅಲ್ಲ ನಾಳೆ ಗಣೇಶನ್ನ ತರುವುದು ಪೂಜೆ ಮಾಡುವುದು ಎಲ್ಲ ಇದೆ ಎಂದು ಹೊರಟಿದ್ದರಲ್ಲ ರಲ್ಲ ಎಂದು ಕೇಳಿದೆ; ಬೇಡವಿತ್ತು ನನಗೆ ಅದು – ಸಿಟ್ಟಾದರು ಅವರು.
“ಹಬ್ಬವಂತೆ ಹಬ್ಬ . ಅದು ಮುಂದಿನ ವರ್ಷವೂ ಬರುತ್ತದೆ . ಇಲ್ಲಿ ನಮ್ಮ ಸಂಸ್ಥಾನ.. ” ಅಷ್ಟೆ – ಮುಂದೆ ಮಾತನಾಡಲು ಆಗಲಿಲ್ಲ ಅವರಿಗೆ – ಆದರೆ ಅವರ ಕಣ್ಣಾಲಿ ಗಳಲ್ಲಿ ನೀರು ತುಂಬಿದ್ದು ಆ ಕಾರಿನ ಲೈಟಿ ನಲ್ಲಿ ಹೊಳೆಯುತ್ತಿತ್ತು .

ಇದು ಅವರಿಬ್ಬರ ಕಥೆ ಅಲ್ಲ. ಹೆಸರು ಬರೆದಿಲ್ಲ ಏಕೆಂದರೆ ಈ ಭಾವನೆ ಇಡೀ ಸಮಾಜದ ಪ್ರತಿಯೊಬ್ಬರದ್ದು – ಕಾರಣ ಎಲ್ಲರಿಗೂ ಗೊತ್ತಿರುವುದೇ – ನಮ್ಮ ಸಂಸ್ಥಾನ ಕೇವಲ ನಮ್ಮೆಲ್ಲರ ಮನಸ್ಸಿಗೆ ಮಾತ್ರ ಕನೆಕ್ಟ್ ಆಗಿ ಇಲ್ಲ. ಅವರು ಕನೆಕ್ಟ್ ಆಗಿರುವುದು ನಮ್ಮೆಲ್ಲರ ಹೃದಯಗಳ ಜೊತೆ.
ಅದಕ್ಕೆ ಅವರು ಕೇವಲ ದೊಡ್ಡ ಸಂಸ್ಥಾನವಾಗಿ ಮಾತ್ರ ನಾವು ನೋಡುವುದಿಲ್ಲ .
ನಮ್ಮ ಪ್ರೀತಿಯ ಸಂಸ್ಥಾನ ವಾಗಿ, ಜೀವಂತವಾಗಿರುವ ನಮ್ಮ ದೇವರ ಮನೆ ಯಲ್ಲಿರುವ ದೇವರು ಮೂರ್ತಿ ಯಂತೆ ನಾವು ಅವರನ್ನು ಭಾವಿಸುತ್ತೇವೆ

ಇಂತಹ ನಮ್ಮ ಪ್ರೀತಿಯ ಸಂಸ್ಥಾನವನ್ನು ಮುಟ್ಟಲು ಸಮಾಜದ ಯಾವುದೇ ಕ್ಷುದ್ರ ವಿಷ ಜಂತುಗಳಿಗೂ ಸಾಧ್ಯವಿಲ್ಲ –
ಇದಕ್ಕೆ ಶ್ರೀ ರಾಮ ಅವನನ್ನು ಸದಾ ಕಾಲ ಪೂಜಿಸುತ್ತಾ ಬಂದ ನಮ್ಮ ಗುರು ಪರಂಪರೆಯೇ ಸಾಕ್ಷಿ .
ಶ್ರೀಗಳ ವಿರುದ್ಧ ಮಸಲತ್ತು ಮಾಡುತ್ತಿರುವರೇ – ನೆನಪಿಟ್ಟುಕೊಳ್ಳಿಇಷ್ಟು ದಿನ ಶ್ರೀಗಳ ಯೋಜನೆಗಳಿಗಾಗಿ ಜೀವನ ವನ್ನು ಕೊಡುತ್ತಿದ್ದೆವು;
ಆದರೆ ಅಲ್ಲಿಗೆ ನಿಲ್ಲುವುದಿಲ್ಲ – ತಮ್ಮ ಷಡ್ಯಂತ್ರ ಬೇಧಿಸಿ ನಮ್ಮ ಪ್ರೀತಿಯ ಗುರುಗಳನ್ನು ಕಾಪಾಡಿಕೊಳ್ಳಲು ನಮ್ಮ ಜೀವನ ಮಾತ್ರವಲ್ಲ ಜೀವವೂ ತ್ರಣಕ್ಕೆ ಸಮಾನ – ಎಚ್ಚರಿಕೆ!

~*~

Facebook Comments