Category ಅಂಕಣಗಳು

||Hare Rama|| When in life you don’t know where to go, how to go, what to do or even why to move ahead, that is the time when you see light. That is the hope to lead life fruitfully again…. Continue Reading →

“ಕಲಾಪ” ಗ್ರಾಮದ ಬಗ್ಗೆ ಮತ್ತಷ್ಟು ಮಾಹಿತಿ….

ಮರುಮಹಾರಾಜನು ಕಲಿಯುಗದ ಅಂತ್ಯದಲ್ಲಿ ಸೂರ್ಯವಂಶವನ್ನು ಪುನಃ ಬೆಳಗಿಸುವವನಾದರೆ ಚಂದ್ರವಂಶದ ದೇವಾಪಿಯು ಈ ಯುಗಾಂತ್ಯದಲ್ಲಿ ಚಂದ್ರವಂಶವನ್ನು ಪುನಃ ಮುಂದುವರೆಸುವನು. ಶಂಭಲ ಎಂಬ ಗ್ರಾಮದಲ್ಲಿ  ವಿಷ್ಣುಯಶಸ ಎಂಬ ಮಹಾತ್ಮನಾದ ಬ್ರಾಹ್ಮಣನಮನೆಯಲ್ಲಿ ಪ್ರಾದುರ್ಭವಿಸುವ ಕಲ್ಕಿಯ ಆಜ್ಞೆಯಂತೆ ಮರು ಮಹಾರಾಜ ಹಾಗೂ ದೇವಾಪಿಯರೀರ್ವರೂ ಸತ್ಯಯುಗದಲ್ಲಿ ಸನಾತನಧರ್ಮವನ್ನು ಬೆಳೆಸುತ್ತಾರೆ. ಇವರಿಬ್ಬರು ಅದ್ಭುತ ಯೋಗಶಕ್ತಿಯನ್ನು ಪಡೆದವರಾಗಿದ್ದು ಈಗ “ಕಲಾಪ” ಗ್ರಾಮದಲ್ಲಿ ಗೋಪ್ಯವಾಗಿ ತಪಸ್ಸನ್ನಾಚರಿಸುತ್ತಿದ್ದಾರೆ.. ದೇವಾಪಿ :- ಭೀಷ್ಮಪಿತಾಮಹನ ತಂದೆಯಾದ… Continue Reading →

ಗುರುಮಹಿಮೆ ಅಪಾರ : ಮಂಜುನಾಥ ಭಾಗ್ವತ್

|| ಶ್ರೀ ಗುರುರಾಘವೇಶ್ವರಾಯ ನಮಃ || ಶ್ರೀಗುರುಗಳ ಅಂತರ್ಜಾಲ ತಾಣದಲ್ಲಿ ಬರೆಯಲು ನಮಗೆ ಅವಕಾಶ ಕರುಣಿಸಿದ ಶ್ರೀಗುರುಚರಣಗಳಿಗೆ ಕೋಟಿ ಕೋಟಿ ನಮನಗಳು. ನಾವು ಮೊದಲಿನಿಂದಲೂ ಶ್ರೀಗುರು ಪರಂಪರೆಯನ್ನು ಮತ್ತು ಶ್ರೀಮಠದ ಕಾರ್ಯಕ್ರಮಗಳನ್ನು ನಂಬಿಕೊಂಡು ನಡೆದುಕೊಂಡು ಬಂದಿರುವ ಕುಟುಂಬದವರು. ಶ್ರೀಸವಾರಿ ಊರಿಗೆ ಚಿತ್ತೈಸಿದಾಗಲೆಲ್ಲಾ ನಮ್ಮ ಹೆತ್ತವರು ಗುರುದರ್ಶನ ಪಡೆಯುತ್ತಿದ್ದರು. ನಮ್ಮಮ್ಮ ಯಾವಾಗಲೂ ಗುರುಪೂಜೆ ಮತ್ತು ಗೋಪೂಜೆ ಹಾಗೂ… Continue Reading →

ನವಯುಗದ ಪ್ರವರ್ತಕ-ರಾಮರಾಜ್ಯದ ರೂವಾರಿ – ರಾಘವೇಶ್ವರ ಶ್ರೀಗಳು : ಶ್ರೀಮತಿ ವಿದ್ಯಾರವಿಶಂಕರ್

ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀಮಹಾಸ್ವಾಮಿಗಳವರ ಚರಣಪದ್ಮಗಳಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು. ಭಾರತ ಸಮೃದ್ಧ ಹಾಗೂ ಸಂಪನ್ನ ರಾಷ್ಟ್ರ. ನಮ್ಮ ಭಾರತವು ವಿಶ್ವದ ಹೃದಯ ಭಾಗದಲ್ಲಿದೆ. ಮಾನವ ಶರೀರದ ಪ್ರತಿಯೊಂದು ಅವಯವಕ್ಕೂ ಶಕ್ತಿ, ತೇಜಸ್ಸು, ಮತ್ತು ರಕ್ತ ಸಂಚಾರವು ಹೃದಯದಿಂದಲೇ ವಿನಿಯೋಗವಾಗುವಂತೆ ಪ್ರಪಂಚದ ಪ್ರತಿಯೊಂದು ಪ್ರದೇಶಕ್ಕೂ ಭಾರತ ದೇಶದಿಂದಲೇ ಧಾರ್ಮಿಕತೆ, ಜ್ಞಾನ, ಸಂಸ್ಕೃತಿ  ಮುಂತಾದವುಗಳು ಪ್ರಸಾರವಾಗುತ್ತಿದೆ…. Continue Reading →

ರಾಮನ ಬಳಿಕದ ರಘುವಂಶ..

 ಶ್ರೀರಾಮನ ನಂತರದ ಸೂರ್ಯವಂಶದ ಭವಿಷ್ಯದ ಕುರಿತು ಬಂದಿರುವ ಹಲವಾರು ಪ್ರಶ್ನೆಗಳಿಗೆ ಶ್ರೀ ಭಾಗವತದಲ್ಲಿ ಕಂಡುಬರುವ ಉತ್ತರವಿದು..

• ಪ್ರಭು ಶ್ರೀರಾಮಚಂದ್ರನಿಗೆ ಲವ-ಕುಶರೀರ್ವರು ಮಕ್ಕಳು..
• ಭರತನಿಗೆ ತಕ್ಷ-ಪುಷ್ಕಲರು..
• ಲಕ್ಷ್ಮಣನಿಗೆ ಅಂಗದ-ಚಂದ್ರಕೇತುಗಳು..
• ಶತ್ರುಘ್ನನಿಗೆ ಸುಬಾಹು-ಶತ್ರುಪಾತಿಗಳು..
• ಇವರಲ್ಲಿ ಹಿರಿಯವನಾದ ಕುಶನು ಕುಮುದ್ವತಿಯನ್ನು ವರಿಸಿ ಕುಶಾವತಿ ಅಥವಾ ಕುಶಸ್ಥಲಿಯಲ್ಲಿ ರಾಜ್ಯವಾಳುತ್ತಾನೆ..
• ಲವನು ಶ್ರಾವಸ್ತಿ ಅಥವಾ ಲವಸ್ಥಲಿಯಲ್ಲಿ, ತಕ್ಷನು ತಕ್ಷಶಿಲೆಯಲ್ಲಿ, ಪುಷ್ಕಲನು ಪುಷ್ಕಲಾವತದಲ್ಲಿ, ಅಂಗದನು ಕಾರುಪಥದಲ್ಲಿ,ಚಂದ್ರಕೇತುವು ಚಂದ್ರಕಾಂತದಲ್ಲಿ, ಸುಬಾಹು ಮಧುರಾನಗರಿಯಲ್ಲಿ, ಶತ್ರುಪಾತಿಯು ವಿದಿಶಾನಗರಿಯಲ್ಲಿ ರಾಜ್ಯವಾಳಿದರು..

ಸ್ವಗತ – ಗೋವಿಂದರಾಜ ಕೋರಿಕ್ಕಾರು

ಓ ಮನಸ್ಸೇ, ನೀನ್ಯಾಕೆ ಗುಣಾತ್ಮಕವಾಗಿ ಯೋಚಿಸಲಾರೆ ? ಬೆಳಕಿದ್ದೂ ಕಾಣಲಾರೆನೆಂದಾದರೆ, ಅದು ಬೆಳಕಿನ ತಪ್ಪಲ್ಲ, ಕಾಣುವ ಕಣ್ಣಿನದು ತಾನೇ ? ಮೇಲೆ ಹೇಳಿದೆ – “ಹರೇರಾಮ” ನಿಜ ಹೇಳು, ಕೆಲವು ವರ್ಷಗಳ ಹಿಂದಕ್ಕೆ ಪಯಣಿಸು, ಸಿಂಹಾವಲೋಕಿಸು. ಹೊಸತನ್ನು ಮಾಡುವ, ಪರರನ್ನು ಸಂಧಿಸುವ ಕ್ಷಣಗಳಲ್ಲಿ ಈ ಮಾತು ನೆನಪಾಗುತ್ತಿತ್ತೇ? “ನಿಜ” ಚೇತನ, ಪರಮಾತ್ಮನನ್ನೇ ನೀನು ಮರೆತಿದ್ದೆ. ಈಗ… Continue Reading →

ಅಮೃತ ತಿಥಿಯಿಂದು…

ಇಂದು ಆರಾಧನೆ.. ಆದಿಶಂಕರಾಚಾರ್ಯರ ಏಕಮಾತ್ರ ಅವಿಛ್ಛಿನ್ನ ಪರಂಪರೆಯ ಮೂವತ್ತೈದನೆಯ ಧರ್ಮಾಚಾರ್ಯರೂ, ನಮ್ಮ ಪೂರ್ವಾಚಾರ್ಯರೂ ಆದ ಬ್ರಹ್ಮಲೀನ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗಳವರು ಇಹದ ಬದುಕನ್ನು ಪೂರ್ಣಗೊಳಿಸಿದ ಅಮೃತ ತಿಥಿಯಿಂದು.. ನಮ್ಮೆಲ್ಲರ ಶ್ರೇಯಸ್ಸಿಗಾಗಿ ಗುರುಗಳ ಆರಾಧನೆ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಳ್ಳುತ್ತಿರುವ ಈ ಶುಭ ಸಮಯದಲ್ಲಿ ನಿಮ್ಮೆಲ್ಲರಿಗೂ ತೀರದ ಗುರುಕರುಣೆಯನ್ನು ಹಾರೈಸುವೆವು..

ಜೋಧಪುರದಲ್ಲಿ ರಾಮಕಥೆ..

ರಾಜಸ್ಥಾನದ  ಜೋಧಪುರದಲ್ಲಿ ರಾಮಕಥೆಯ ಸಂತೋಷವನ್ನು ನಿಮ್ಮೊಡನೆ ಹಂಚಿಕೊಳ್ಳುವ ಮನಸು… [audio:Ramakatha/Raamakathe_1.mp3]

ಸಾರ್ಥಕ ಜೀವನದ ಆನಂದದ ಕ್ಷಣಗಳು – ಶ್ರೀಮತಿ ಸುಶೀಲಾಗಿರಿ, ಬೆಂಗಳೂರು

ಪರಮಪೂಜ್ಯ ಸದ್ಗುರುವಿನ ಪಾದಾರವಿಂದಗಳಿಗೆ ಶಿರಸಾ ನಮಿಸಿ, ಗೋಮಾತೆಗೂ ವಂದಿಸುವೆ. “ಪ್ರತಿಯೊಂದು ವ್ಯಕ್ತಿಯಲ್ಲಿನ ಆತ್ಮಶಕ್ತಿಯನ್ನು ಜಾಗೃತಗೊಳಿಸುವ ಆತ್ಮೋದ್ಧಾರದ ಹೆದ್ದಾರಿಯಲ್ಲಿ ನಮ್ಮನ್ನೆಲ್ಲ ಮುನ್ನಡೆಸುತ್ತಾ ಬಂದಿರುವ ನಮ್ಮೆಲ್ಲರ ಶ್ರೇಷ್ಠ ಗುರು ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀಮಹಾಸ್ವಾಮಿಗಳವರ ಚರಣಕಮಲಗಳಿಗೆ ಅನಂತ ಕೋಟಿ ಪ್ರಣಾಮಗಳು. ಹದಿನೇಳು ವರ್ಷದ ಹಿಂದೆ ಶ್ರೀಗಳು ನಮ್ಮ ಗುರುಪೀಠಕ್ಕೆ ಆಯ್ಕೆಯಾಗಿ ಬೆಂಗಳೂರಿನ ಶ್ರೀ ಬಿ. ಕೃಷ್ಣ ಭಟ್ಟರ ಮನೆಯಲ್ಲಿ… Continue Reading →

ನನ್ನ ಭಾವಗಳ ನಿಮ್ಮೊಡನೆ ಬೆರೆಸುವಾಸೆ, ಬೆರೆಸಲೇ? – ಶ್ರೀಹರ್ಷ ಜೋಯ್ಸ್ ಕೊಂಡಿಬೈಲು

ಕೃಷಿಕ ಶ್ರೀ ರಾಮಮೂರ್ತಿ ಜೋಯ್ಸ್ ಮತ್ತು ಶ್ರೀಮತಿ ಯಶೋದಾ ದಂಪತಿಗಳ ಪುತ್ರನಾಗಿ 06-11-1967ರಲ್ಲಿ ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ತಾಲೂಕಿನ ಕೊಂಡಿಬೈಲಿನಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಉತ್ತಮೇಶ್ವರದಲ್ಲಿ ಹಾಗೂ ಪದವಿ ಶಿಕ್ಷಣವನ್ನು ಕೊಪ್ಪದಲ್ಲಿ ಪಡೆದಿರುತ್ತಾರೆ. ಪ್ರಸ್ತುತ ಪರಮಪೂಜ್ಯ ಶ್ರೀಶ್ರೀಗಳ ಶ್ರೀಪರಿವಾರದಲ್ಲಿ ಸೇವೆಸಲ್ಲಿಸುತ್ತಿದ್ದು ಶ್ರೀಗುರು ಸೇವಾ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಇವರಿಗೆ ಶ್ರೀಕರಾರ್ಚಿತ ದೇವತಾನುಗ್ರಹ ಹಾಗೂ ಶ್ರೀಗುರು ಆಶೀರ್ವಾದ ಸದಾ ಇರಲೆಂದು ಹಾರೈಕೆ.

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑