ಈ ಕಲಾಪ ಗ್ರಾಮವು ಹಿಮಾಲಯದ ಬದರಿಕಾಶ್ರಮದ ಸಮೀಪದಲ್ಲಿದೆ.
ಅನೇಕ ಯೋಗಿಗಳು ಈಗಲೂ ಇಲ್ಲಿ ಗುಪ್ತಸ್ವರೂಪದಲ್ಲಿ ಯೋಗಸಮಾಧಿಯಲ್ಲಿರುತ್ತಾರೆ ಎಂಬ ಪ್ರತೀತಿಯಿದೆ.
ಊರ್ವಶಿಯು ಪುರೂರವನೊಡನೆ ಕೆಲಕಾಲ ಇಲ್ಲಿ ವಾಸಿಸಿದ್ದಳು.-ಕಲ್ಕಿಪುರಾಣ.
ಕಲಾಪ ಗ್ರಾಮವು ಸರಸ್ವತೀ ಮೂಲದಲ್ಲಿ ‘ಅಲಕನಂದಾ-ಘರ್ ವಾಲ್ ‘ಗಳ ಮಧ್ಯದಲ್ಲಿದೆ -ಕ್ಯಾಪ್ಟನ್ ರೇಪರ್ ಬ್ರಿಟಿಶ್ ಸಂಶೋಧಕ.

ದೇವಾಪಿ:ಪೌರವೋ ರಾಜಾ ಮರುಶ್ಚೆಕ್ಷ್ವಾಕು ವಂಶಜ: | ಮಹಾಯೋಗಬಲೋಪೇತೌ ಕಲಾಪಗ್ರಾಮಸಂಶ್ರಯೌ||
ಏತೌ ಕ್ಷಾತ್ರಪ್ರಣೇತಾರೌ ನವವಿಂಶೇ ಚತುರ್ಯುಗೇ| ಸುವರ್ಚಾ ಮನುಪುತ್ರಶ್ಚ ಐಕ್ಷ್ವಾಕಾದ್ಯೋ ಭವಿಷ್ಯತಿ ||

ಈ ಮಾತನ್ನು ವಾಯುಪುರಾಣವು ಉಲ್ಲೇಖಿಸಿದ್ದು ಮರು ಹಾಗೂ ದೇವಾಪಿಗಳ ಮೂಲಕ ಸೂರ್ಯ, ಚಂದ್ರ ವಂಶಗಳು ಕಲಿಯುಗದ ಅಂತ್ಯದಲ್ಲಿ ಪುನಃ ಪ್ರಾದುರ್ಭವಗೊಳ್ಳುತ್ತವೆ ಎಂಬ ಶುಕಮಹರ್ಷಿಗಳ ಅಭಿಪ್ರಾಯವೇ ಇಲ್ಲಿಯೂ ವ್ಯಕ್ತವಾಗಿದೆ.
ಸದ್ಯಕ್ಕಂತೂ ಬಾಹ್ಯಜಗತ್ತಿಗೆ ಈ ಗ್ರಾಮವು ಗೋಚರಿಸುತ್ತಿಲ್ಲವೆಂಬುದು ಸಂಶೋಧಕರ ಅಭಿಪ್ರಾಯ.

Facebook Comments Box