ಹರೇ ರಾಮ ಓದುಗರೇ.
ಶ್ರೀ ರಾಮಚಂದ್ರಾಪುರ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಅಂತರಜಾಲತಾಣವಾದ ಹರೇರಾಮ.ಇನ್ ನಲ್ಲಿ ಓದುಗರಿಗಾಗಿ ಮತ್ತೊಂದು ಸದವಕಾಶ!
ಸಹಸ್ರಾರು ಓದುಗರ ಅಕ್ಷರದಾಹವನ್ನು ತಣಿಸುವುದಕ್ಕಾಗಿ ವೈಶಿಷ್ಟ್ಯಪೂರ್ಣ ಅಂಕಣಗಳನ್ನು ಹರೇರಾಮ.ಇನ್ ಹೊರತರುವುತ್ತಿರುವುದು ನಮಗೆಲ್ಲರಿಗೂ ಗೊತ್ತಿರುವ ವಿಷಯವೇ!
ಈಗಾಗಲೇ ಶ್ರೀಗಳ ಮುಖವಾಣಿಯಾದ ಬ್ಲಾಗ್ ಎರಡು ವಿಭಿನ್ನ ದೃಷ್ಟಿಕೋನದಿಂದ ಹರಿದು ಬರುತ್ತಿದೆ.
ಆಧ್ಯಾತ್ಮಿಕ ವಿಚಾರಗಳ ಹೂರಣವಾದ “ರಾಮ“, ಹಾಗೂ ಸಾಮಾಜಿಕ ವಿಚಾರಗಳ ವಿಮರ್ಶೆಗಳನ್ನೊಳಗೊಂಡ “ರಾಜ್ಯ” ಎಂಬೆರಡು ಬ್ಲಾಗ್ ಗಳು ಕ್ರಮವಾಗಿ ಪ್ರತಿ ಗುರುವಾರ ಹಾಗೂ ಭಾನುವಾರ ಪ್ರಕಟಗೊಳ್ಳುತ್ತಿದ್ದು, ಅದೆಷ್ಟೋ ಓದುಗರನ್ನು ತನ್ನತ್ತ ಸೆಳೆದುಕೊಂಡಿವೆ.
ಅದಷ್ಟೇ ಅಲ್ಲದೆ, ಶ್ರೀಗಳ ಸಂಗ್ರಹಗಳಿಂದ ಮನೋಜ್ಞವಾದ, ಮನರಂಜಕ ವಿಚಾರಗಳನ್ನು ಹರಿಯಬಿಡುವುದಕ್ಕಾಗಿ ಶ್ರೀಮುಖ ಅಂಕಣವಿದೆ.
ಸಮಾಜದಲ್ಲಿ ಪ್ರಮುಖವಾಗಿ ಗುರುತಿಸಲ್ಪಟ್ಟ ವ್ಯಕ್ತಿತ್ವಗಳಿಂದ ವಿಶೇಷವಾಗಿ ಆಹ್ವಾನಿತ ಬರಹಗಳನ್ನು ಹರಿಯಬಿಡಲು “ಪ್ರಮುಖ”ವಿದೆ.
ಆರ್ಕುಟ್, ಫೇಸ್ ಬುಕ್ ಗಳಿಗೆ ಏನೂ ಕಡಿಮೆಯಿಲ್ಲವೆಂಬಂತೆ ಹರೇರಾಮ.ಇನ್ ನಲ್ಲಿಯೂ ಸದಸ್ಯತ್ವವಿದೆ, ಮಾತುಗಾರಿಕೆಯಿದೆ, ಚರ್ಚೆಯಿದೆ, ಬ್ಲಾಗ್ ಗಳಿಗೆ ವಿಮರ್ಶೆಯಿದೆ, ಪ್ರತಿಕ್ರಿಯೆಗಳಿವೆ.
ಇದೆಲ್ಲ ಅವಕಾಶಗಳ ವೆಬ್‌ಸೈಟ್ ಹೊಂದಿರುವ ಪ್ರಪಂಚದ ಮೊದಲ ಧಾರ್ಮಿಕ ಕೇಂದ್ರವೆಂಬ ಹೆಗ್ಗಳಿಕೆಗೂ ಪಾತ್ರವಾಯಿತು, ಶ್ರೀಮಠ.
ಅಂತೆಯೇ, ಅಂತರಜಾಲ ಧಾರ್ಮಿಕ ಕೇಂದ್ರವೊಂದರ ಇನ್ನೊಂದು ಕ್ರಾಂತಿಕಾರಿ ಹೆಜ್ಜೆ, “ಸಮ್ಮುಖ“..!
ಏನಿದು ಸಮ್ಮುಖ?:
ಹರೇರಾಮದ ಓದುಗರಿಗಾಗಿ ತೆರೆದ ಅಂಕಣ ಸಮ್ಮುಖ.
ಹೌದು! – ಇದು ನಮಗೆ-ನಿಮಗಾಗಿ ಇರುವ, ನಾವುಗಳು ಬರೆಯಬಹುದಾದ ಅಂಕಣ.
ಇದರಲ್ಲಿ, ಹರೇರಾಮದ ಓದುಗರು ಶ್ರೀ ಶ್ರೀಗಳ ಸಮ್ಮುಖದಲ್ಲಿ ಸಮಾಜವನ್ನುದ್ದೇಶಿಸಿ ತಮ್ಮ ಬರಹವನ್ನು ರೂಪಿಸಬಹುದು.
ನಿಮ್ಮ ಬರಹವು ಅರ್ಥಪೂರ್ಣವಾಗಿರಲಿ, ಸ್ಪುಟವಾಗಿರಲಿ, ನಿಮ್ಮ ಭಾವವನ್ನು ಹೊರಸೂಸುವಂತಿರಲಿ!
ಕನ್ನಡ / ಇಂಗ್ಲೀಷ್ / ಹಿಂದಿ – ಈ ಮೂರು ಭಾಷೆಗಳಲ್ಲಿ ನಿಮ್ಮ ಅಂಕಣವನ್ನು ಕಳುಹಿಸಬಹುದು.
ಸಮಾಜಿಕ, ಧಾರ್ಮಿಕ, ಸಾಹಿತ್ಯಿಕ, ಸೃಜನಾತ್ಮಕ – ಯಾವದೇ ಬರಹಗಳೂ ಆಗಿರಬಹುದು. ನೆನಪಿರಲಿ, ನೀವು ಶ್ರೀಗಳ ಸಮ್ಮುಖದಲ್ಲಿ ಮಾತನಾಡುತ್ತಿದ್ದೀರಿ!
ಶ್ರೀಗಳ ಸಮ್ಮುಖದಲ್ಲಿ ಮುಕ್ತವಾದ ಚರ್ಚೆಗೆ ಅವಕಾಶವಿದೆ. ಎಂದೆಂದಿಗೂ.!
ನಿಮ್ಮ ಬರಹಗಳನ್ನು ಕಳುಹಿಸಬಹುದಾದ ವಿಳಾಸ:
“ಸಮ್ಮುಖ”
C/o: ಆಡಳಿತ ಕಾರ್ಯದರ್ಶಿಗಳು
ಶ್ರೀ ರಾಮಾಶ್ರಮ,
ನಂ- 2ಎ, ಜೆ.ಪಿ.ರಸ್ತೆ, ಗಿರಿನಗರ,
ಬೆಂಗಳೂರು – 85
ಅಥವಾ,
ನಿಮ್ಮ ಬರಹಗಳನ್ನು ಕಳುಹಿಸಬೇಕಾದ ಮಿಂಚಂಚೆ:
editor@hareraama.in
ಬನ್ನಿ, ಶ್ರೀಗಳ ಸಮ್ಮುಖದಲ್ಲಿ ಮಾತನಾಡೋಣ..
~
ಹರೇರಾಮ ಸಂಪಾದಕೀಯ ಬಳಗ
June 27, 2010 at 10:55 PM
ಜೀವನದ ಸ್ವಾರಸ್ಯಕರ ಆಯಾಮಗಳು ದೊರಕುವುದು ಅನಿರೀಕ್ಷಿತ ಸ್ಥಳಗಳಲ್ಲಿ ,ಪರಿಚಯಗಳಲ್ಲಿ,ಒಡನಾಟದಲ್ಲಿ …..ಮತ್ತು …ತದನಂತರದ ನಿರೀಕ್ಷಿತ ವಿಶ್ವಾಸದಲ್ಲಿ …!ಹೌದು ..ನಮ್ಮೊಳಗಿನ ಕಲ್ಪನೆಯ ಸುಪ್ತ ಭಾವನೆಗಳಿಗೆ “ಜ್ಞಾನದ” ರಸಗೊಬ್ಬರ ಚೆಲ್ಲಿ ಮಮತೆಯ ನೀರುಣಿಸಿ ಚೈತನ್ಯ ತುಂಬುವುದರ ಜೊತೆಗೆ …ಇದೀಗ ಅದರ ವಿಹಾರಕ್ಕೆ “ಸ್ಪೂರ್ತಿಯ ನಾವೇ”ಕೊಟ್ಟು ‘ಹರೇರಾಮ.ಇನ್”ಎಂಬ ಅಂತರಜಾಲ ಸಾಗರದಲ್ಲಿ ಪಯಣಿಸಲು ಅವಕಾಶ ಮಾಡಿಕೊಟ್ಟ ಶ್ರೀ ಶ್ರೀ ಗಳವರ ಪಾದಪದ್ಮಗಳಿಗೆ ಕೋಟಿ ಕೋಟಿ ನಮನಗಳು .ಕತ್ತಲೆ ಬೆಳಕಿಗೆ ಪ್ರಥಮಾದ್ಯಾಯವಂತೆ ….ಅಂತೆಯೇ ನಮ್ಮ ಬದುಕೂ ಕೂಡ “ನಮ್ಮ ಶ್ರೀಗಳ” ಕಾರುಣ್ಯಪ್ರಭೆಯಲ್ಲಿ ಹೊಸ ಅದ್ಯಾಯಕ್ಕೆ ಮುನ್ನುಡಿಯಾಗಲಿ .ಗೂಡು ಕಟ್ಟುವುದರಲ್ಲಿ “ಗೀಜಗ”ನಿಗಿರಬಹುದಾದ ಶ್ರದ್ದೆ:ಬದುಕು ಕಟ್ಟಿ ಕೊಳ್ಳುವುದರಲ್ಲಿ ,ನಮಗೂ ಅಷ್ಟೇ ಕನಸುಗಳಿರಲಿ :ಒಳ್ಳೆಯ ಮನಸ್ಸುಗಳಿರಲಿ. ಈ ಪ್ರಕೃತಿ ಬದುಕನ್ನು ಕಟ್ಟಿ ಕೊಡುತ್ತದೆ ,ಪ್ರೀತಿಯನ್ನು ಕಲಿಸುತ್ತದೆ ಮತ್ತು ಪರಸ್ಪರ ಪ್ರೀತಿಸುವುದನ್ನು ಆಶಿಸುತ್ತದೆ …!ಅನುಭವ ಬದುಕನ್ನು ಮುನ್ನೆಡೆಸುತ್ತದೆ .”ಪ್ರಕೃತಿಗಿಂಥ ಚೆನ್ನಾಗಿ ಯಾರು ಪಾಠ ವನ್ನು ಕಲಿಸಬಲ್ಲರು ?ಅನುಭವಕ್ಕಿಂತ ಚೆನ್ನಾಗಿ ಈ ಜೀವನವಜ್ರ ವನ್ನು ಯಾರು ಸಾಣೆ ಹಿಡಿಯಬಲ್ಲರು?”ಪ್ರಕೃತಿಯ ಪಾಠ ಶಾಲೆಯಲ್ಲಿ “ಅನುಭವದ ಗುರು”ವಿನೊಂದಿಗೆ ಗುರುತಿಸಲ್ಪಟ್ಟ ಬದುಕು ಆಕರ್ಷಕ ವಾಗಿರುತ್ತದೆ ….