ಪ್ರಸ್ತುತಿ: ಪ್ರಸನ್ನ.ಎಂ.ಮಾವಿನಕುಳಿ
ಬೆಂಗಳೂರು
ಮತ್ತದೇ ಕೆಕ್ಕಾರಿನಲ್ಲಿ ನಡೆದ ಘಟನೆ ಗಳನ್ನು ಪ್ರಸ್ತಾಪಿಸಲಿಕ್ಕಿದ್ದೇನೆ – ಪೂಜ್ಯ ಶ್ರೀಗಳು ಕೆಕ್ಕಾರಿನಲ್ಲಿ ಚಾತುರ್ಮಾಸ ಆರಂಭ ಮಾಡಿದ ದಿನಗಳವು.
ಒಂದು ದಿನ ಅಲ್ಲಿ ಹಲವು ಜನರ ಒಂದು ಗುಂಪು ಬಂದು ಶ್ರೀಗಳನ್ನು ಭೇಟಿ ಆಯಿತು – ಶ್ರೀಗಳಿಂದ ಮಂತ್ರಾಕ್ಷತೆ ಎಲ್ಲಾ ತೆಗೆದು ಕೊಂಡು ಅದ ಮೇಲೆ ಅಲ್ಲಿ ಕೆಲವರು ಅದೇನೋ ಹೇಳಲಿಕ್ಕೆ ಪ್ರಯತ್ನ ಪಡುತ್ತಿದ್ದರು; ಆದರೆ ಹೇಳುತ್ತಿರಲಿಲ್ಲ – ಗಮನಿಸಿದ್ದು ಗುರುಗಳು – ಅದೇನು ಹೇಳಿ ಎಂದು ಆತ್ಮೀಯತೆ ಯಿಂದ ಶ್ರೀಗಳು ಕೇಳಿದಾಗ ಯಾರಿಗಾದರೂ ಆ ಕ್ಷಣದಲ್ಲಿ ಎಲ್ಲ ಮುಜುಗರ ಎಲ್ಲವೂ ಹೊರಟೆ ಹೋಗುತ್ತದಲ್ಲ – ಸರಿ – “ಗುರುಗಳೇ ನಮ್ಮ ಸಮುದಾಯಕ್ಕೆ ಯಾರೂ ಗುರುಗಳಿಲ್ಲ – ಹತ್ತಾರು ಸಮುದಾಯಕ್ಕೆ ಮಾರ್ಗದರ್ಶನ ನೀಡುತ್ತಾ ಬಂದಿರುವ ತಾವು ನಮಗೂ ಸ್ವಾಮಿಗಳಾಗಬೇಕು .. ಆದರೆ“.. ಮತ್ತೆ ಮತ್ತೆ ತಡವರಿಸಿದರು “…ಆದರೆ ನಾವು ಹರಿಜನರ ಪಂಗಡ ಸ್ವಾಮಿ” -.. ಕೃತ್ರಿಮವಲ್ಲದ ಪ್ರಾಮಾಣಿಕ ಪ್ರಾರ್ಥನೆ ಆಗಿತ್ತು ಅದು .. ತಡವರಿಸಿದ್ದು ತಡೆದದ್ದು ಎಲ್ಲ ಆ ನನ್ನ ಬಾಂಧವರು.
ನಮ್ಮ ಸಂಸ್ಥಾನ ತಡೆಯಲೂ ಇಲ್ಲ ತಡವರಿಸಲೂ ಇಲ್ಲ – ಮತ್ತದೇ ಆತ್ಮೀಯತೆಯೊಂದಿಗೆ ತಕ್ಷಣ ಹೇಳಿಯೇ ಬಿಟ್ಟರು – ನೀವು ಇಂದಿನಿಂದ “ಕೇವಲ ಹರಿಜನರು ಮಾತ್ರವಲ್ಲ ಗುರು ಜನರೂ ಹೌದು”! ..
ಇದು ನಮ್ಮ ಪ್ರೀತಿಯ ಶ್ರೀ ಸಂಸ್ಥಾನ. ನಿಜವಾದ ಅರ್ಥದಲ್ಲಿ ಜಗದ್ಗುರುಗಳು ಅವರು.
ಒಂದು ಅರ್ಥದಲ್ಲಿ ನನಗೆ ಮರುಕವಾಗುತ್ತದೆ ಕೆಲವು ಮಾಧ್ಯಮ ಮಿತ್ರರುಗಳ ಬಗೆಗೆ. ತಮ್ಮ ಜೀವ ಮಾನದಲ್ಲಿ ಎಂದೂ ಮಠಕ್ಕೆ ಹೋಗದ, ತಮ್ಮ ಇವತ್ತಿನ ವರೆಗೆ ಕಳೆದ ಆಯುಸ್ಸಿನಲ್ಲಿ ಒಮ್ಮೆಯೂ ಶ್ರೀಗಳನ್ನು ಭೇಟಿ ಮಾಡದ ಆ ಮಿತ್ರರು ಅದ್ಯಾವುದೋ ಒಂದು ಬಾವಿ ಯಲ್ಲಿ ಕುಳಿತು ಎಲ್ಲ ಸಮುದಾಯಕ್ಕೆ ಸೇರಿದ ಗುರುಗಳನ್ನು ಒಂದು ಸಮುದಾಯಕ್ಕೆ ಕಟ್ಟಿ ಹಾಕಲು ಪ್ರಯತ್ನಿಸುತ್ತಿದ್ದಾರೆ – ಇವುಗಳ ಜೊತೆಗೆ ಫೇಸ್ಬುಕ್ ಮತ್ತಿತರ ಕಡೆ ವೃಥಾ ಜಾತಿ ಬೇಧದ ಆರೋಪ – ಯಾವತ್ತಿಗೂ ಕೂಡ ಶ್ರೀ ಗುರುಗಳ ಪಾದ ಪೂಜೆ ಎಂದರೆ ನಮ್ಮ ಮಠ ಮತ್ತು ಪರಂಪರೆ ಯಲ್ಲಿ ಅದು ಗುರುಗಳ ಕಾಲು ತೊಳೆದು ಮಾಡುವ ಪೂಜೆ ಅಲ್ಲ ಎಂಬ ಸಾಮಾನ್ಯ ಜ್ಞಾನ ಕೂಡ ಇಲ್ಲದ ಆ ಮಹನೀಯರುಗಳು ಶೂದ್ರರಿಂದ ಕಾಲು ಮುಟ್ಟಿಸಿಕೊಳ್ಳದೆ ಪಾದ ಪೂಜೆ ಮಾಡಿಸಿಕೊಳ್ಳುತ್ತಾರೆ (ಪತ್ರಿಕೆ ಗಳಲ್ಲಿ ಬಳಸಿದ ಪದ ಬಳಸಿದ್ದಕ್ಕೆ ಕ್ಷಮೆ ಇರಲಿ) ಎನ್ನುವ ಮಾತುಗಳನ್ನು ಬರೆಯುವುದರ ಮೂಲಕ ನಮ್ಮ ಗುರು ಜನರೂ ಆಗಿರುವ ಹರಿಜನರನ್ನು ಅವಮಾನಿಸುತ್ತಿದ್ದಾರೆ ಕೂಡ.

ಲೇಖಕರು: ಪ್ರಸನ್ನ.ಎಂ.ಮಾವಿನಕುಳಿ
ಹಾಗೆ ನೋಡಿದರೆ ನನಗೆ ಬೇರೆ ಸಮುದಾಯದಲ್ಲಿ ಇರುವ ಸ್ನೇಹಿತರ ಸಂಖ್ಯೆ ಯೇ ಜಾಸ್ತಿ – ಮಾತ್ರವಲ್ಲ ಅವರೊಡನೆಯೇ ಸಾಕಸ್ಟು ಬಾರಿ ಶ್ರೀ ಮಠಕ್ಕೆ ಹೋಗಿದ್ದೇನೆ ಅವರೊಂದಿಗೆ ಶ್ರೀಗಳನ್ನು ಭೇಟಿ ಮಾಡಿದ್ದೇನೆ – ಆಗೆಲ್ಲಾ ನನಗೆ ಕೊಟ್ಟಂತೆಯೇ ಅವರಿಗೂ ಅಷ್ಟೇ ಅಭಿಮಾನ ಪ್ರೀತಿಯಿಂದ ಮಂತ್ರಾಕ್ಷತೆ ಕೊಟ್ಟಿರುವುದನ್ನು ನನಗಿಂತ ಹೆಚ್ಚಾಗಿ ಅವರುಗಳೇ ಗಮನಿಸಿದ್ದಾರೆ – ಮತ್ತೆ ಮತ್ತೆ ಬಂದಿದ್ದಾರೆ -ಬಂದಾಗೆಲ್ಲಾ ಊಟ ಮಾಡಿಕೊಂಡು ಹೋಗಿ ಎನ್ನುವ ಒತ್ತಾಯ ಪೂರ್ವಕ ಆದೇಶ ಮಾಡಿದ್ದಾರೆ – ಹಾಗೆ ಒಟ್ಟಿಗೇ ನಾವೆಲ್ಲರೂ ಹೊಟ್ಟೆ ತುಂಬಾ ಊಟ ಮಾಡಿ ಎದ್ದು ಬಂದಿದ್ದೇವೆ!
ಹೌದು ಅನುಮಾನವೇ ಇಲ್ಲ – ಅವರು ನಿಜವಾದ ಅರ್ಥದಲ್ಲಿ ಜಗದ್ಗುರುಗಳು – ಅದಿಲ್ಲದಿದ್ದಲ್ಲಿ ಗೋ ಯಾತ್ರೆ ಯ ಸಂದರ್ಭದಲ್ಲಿ ೮ ಕೋಟಿ ಸಹಿ ಸಂಗ್ರಹ ಸಾದ್ಯವಾಗುತ್ತಿತ್ತೆ – (ಸ್ವಾಮಿ ನಮ್ಮ ಸಮುದಾಯ ಇರುವುದು ಕೆಲವು ಲಕ್ಷ ಮಾತ್ರ!)ಗೋ ಸಮ್ಮೇಳನ ರಾಮ ಸತ್ರಗಳಿಗೆ ಲಕ್ಷ ಲಕ್ಷ ಜನರ ಭಾಗವಹಿಸುವಿಕೆ ನಿಜವಾಗಿರುತ್ತಿತ್ತೆ – ನಮ್ಮ ಸಮುದಾಯದ ಜನ ಕೇವಲ ನೂರರ ಅಂಕೆಯಲ್ಲೂ ಇಲ್ಲದ ಆ ಗುಲ್ಬರ್ಗ ವಿಜಾಪುರದ ಭಾಗಗಳು ಅಲ್ಲೆಲ್ಲೋ ದೂರದ ಜೋಧಪುರ ಹೀಗೆ ಎಲ್ಲೇ ಶ್ರೀಗಳು ಹೋದರೂ ಸೇರುವ ಸಾವಿರ ಸಾವಿರ ಜನ – ಎಲ್ಲಿಂದ ಯಾಕಾಗಿ ಬರುತ್ತಾರೆ – ಉತ್ತರ ಇಷ್ಟೇ – ಶ್ರೀಗಳ ಮೇಲೆ ಅಭಿಮಾನ ಬೆಳೆಸಿಕೊಳ್ಳಲು ಮತ್ತು ಅವರ ಆತ್ಮೀಯತೆಯ ಅರಿವಾಗಲು ಬೇಕಾಗಿದ್ದು ಯಾವುದೇ ಜಾತಿ ಮತ ಗಳಲ್ಲ – ಬದಲಾಗಿ ಅವರ ಒಂದು ಭೇಟಿ!
ಒಮ್ಮೆ ಭೇಟಿ ಆದರೆ ಮತ್ತೆ ಮತ್ತೆ ಹೋಗುವಂತೆ ಮಾಡುವುದು ಅವರ ಆತ್ಮೀಯತೆ – ಹೀಗೆ ಶ್ರೀ ಮಠದ ಪರಂಪರೆಯಂತೆ ಬಂದ ಹತ್ತು ಹಲವಾರು ಸಮುದಾಯಗಳ ಜೊತೆಗೆ ಇಡಿ ಹಿಂದೂ ಸಮಾಜ ಇದರ ಅನುಭವ ಪಟ್ಟಿದೆ ಮತ್ತು ಅದೇ ಅನುಭವ ಅವರೆಲ್ಲರನ್ನು ಶ್ರೀಗಳ ಮಠದ ಶಿಷ್ಯರನ್ನಾಗಿ ಮಾಡಿದೆ.
ಹೌದು – ನಾನೂ ಕೂಡ ವೈಯುಕ್ತಿಕವಾಗಿ ನನಗೆ ಅವರ ಮೇಲಿರುವ ಅಭಿಮಾನ ಮತ್ತು ಗೌರವಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಭಾವಿಸುವುದಿಲ್ಲ – ಆದರೆ ಈ ಸಂದರ್ಭ ಅದನ್ನು ಅನಿವಾರ್ಯ ಗೊಳಿಸಿದೆ! ಆದ್ದರಿಂದ [ಸಾಮಾಜಿಕ ಮಾಧ್ಯಮ ಗಳಲ್ಲಿ ಇರುವ] ಎಲ್ಲ ನನ್ನ ಗುರು ಜನ ಮಿತ್ರರೇ ಕೂಗಿ ಹೇಳಿ – ಯಾರು ನಮ್ಮ ನಮ್ಮಲ್ಲಿ ಒಡಕು ತರಲು ಪ್ರಯತ್ನಿಸುತ್ತಿದ್ದಾರೆಯೋ, ಯಾರು ನಮ್ಮೆಲ್ಲರ ಸ್ವಾಮಿಗಳಾಗಿರುವ ಶ್ರೀಗಳನ್ನು ಒಂದು ಸಮುದಾಯಕ್ಕೆ ಸೀಮಿತ ಗೊಳಿಸುವ ಮೀರ್ ಸಾಧಕ್ ಬುದ್ದಿ ತೋರಿಸಿ ನಮ್ಮ ಹಿಂದೂ ಸಮಾಜವನ್ನು ಒಡೆಯಲು ಯತ್ನಿಸುತ್ತಾ ಇದ್ದಾರೆಯೋ, ಯಾವ ಶ್ರೀಗಳ ಜೊತೆಗೆ ಸಂತೋಷ ಮತ್ತು ಸಂಕ್ರಮಣ ಸಂದರ್ಭ ದಲ್ಲಿ ಕೂಡ ನಾವೆಲ್ಲರೂ ಇದ್ದು ಶ್ರೀಗಳಿಸ್ಕೋರ ನಮ್ಮ ಜೀವವೂ ತೃಣ ಸಮಾನ ಎಂದು ಹೋರಾಟ ಮಾಡಿದ್ದೆವೆಯೋ ಆ ಗುರುಗಳು ನಮ್ಮೆಲ್ಲರಿಗೆ ಸೇರಿದವರು ಎಂದು ಘರ್ಜಿಸಿ – ವಿನಾ ಕಾರಣ ನಮ್ಮ ಹಿಂದೂ ಸಮಾಜವನ್ನು ಒಡೆಯಲು ಯತ್ನಿಸಿ, ಗುರು ಜನರು ಎಂದು ಪ್ರೀತಿಯಿಂದ ಕರೆಯುವ ಪ್ರಾಂಜಲ, ನಿಷ್ಕಲ್ಮಶ, ಮಗುವಿನ ಮುಗ್ದ ಮನಸ್ಸಿನ ನಮ್ಮ ಇಡೀ ಹಿಂದೂ ಸಮಾಜದ ಶ್ರೇಷ್ಠ ಸಂತರಲ್ಲಿ ಒಬ್ಬರಾದ ನಮ್ಮ ಗುರುಗಳ ಮೇಲಿನ ಷಡ್ಯಂತ್ರ ಗಳಿಗೆ, ಕೀಳು ಅಭಿರುಚಿ ಯ ಬರಹಗಳಿಗೆ ಘಟ್ಟಿಯಾಗಿ ಒಂದು ದಿಕ್ಕಾರ ಹಾಕಿ – ಕೆಕ್ಕಾರಿನಲ್ಲಿ ಅದೊಂದು ಶುಕ್ರವಾರ ಮದ್ಯ ರಾತ್ರಿ ತಾವೇ ತಾವಾಗಿ ಸಾವಿರಾರು ಸಂಖ್ಯೆ ಯಲ್ಲಿ ಬಂದು ಗುರುಗಳ ಜೊತೆ “ನಾವಿದ್ದೇವೆ” ಎಂದು ಇಡೀ ಪ್ರಪಂಚಕ್ಕೆ ತೋರಿಸಿಕೊಟ್ಟ ನನ್ನ ಆತ್ಮೀಯ ಬಂಧುಗಳೇ, ನಮ್ಮೆಲ್ಲರೊಂದಿಗೆ ಇರುವ ಶ್ರೀ ಗುರುಗಳ ಬಂಧ ಈ ತಾಯಿ ಮಗಳು, ಈ ಪೀತ ಪತ್ರಿಕೆಗಳು ಈ ಟಿ ಆರ್ ಪಿ ಗಾಗಿ ಹೊಡೆದಾಡುವ ಟಿ ವಿ ಮಾಧ್ಯಮಗಳು, ಕೇವಲ ಕಾಮೆಂಟ್ ಹಾಕುವ ಉದ್ದೇಶದಿಂದಲೇ ಫೇಸ್ಬುಕ್ ಗಳಲ್ಲಿ ಶ್ರೀ ಮಠದ ಮೇಲೆ ಅಪಾದನೆ ಮಾಡುವ ಚಿಲ್ಲರೆ ಬರಹಗಳು ಇವೆಲ್ಲವನ್ನೂ ಮೀರಿ ಬೆಳೆದದ್ದು ಎಂದು ಅದೇ ಪ್ರಪಂಚಕ್ಕೆ ತೋರಿಸಿಕೊಡಿ!
ಹರೇ ರಾಮ
September 18, 2014 at 9:22 AM
Hareraama,
What a beautiful talk.
It seems media just writing without proper study, very sad it is. I feel some one must be there to make understand to the media
Dattu,
Dombivli
September 18, 2014 at 9:33 AM
Yes, I too agree your thoughts entirely. Ours is the real Shankara peetha propagating the Adwaitha (non dualism) philosophy of Sri Sri Adi Shankaracharya. This philosophy is ‘all inclusive’. We can not exclude someone on any ground. I think some 18 communities are the traditional followers of this Math including Havyakas. This number is increasing day by day. I was told, in this Chaturmasya at Kekkar, about 33 communities had participated in the Ram Taraka Havana and had received the blessings of Sri Sri Swameeji. A ‘Jagad Guru’ (Guru of the World or Spiritual Master) can not confine or limit himself to a particular community excluding others ! He is the spiritual asset of all !!
September 18, 2014 at 1:03 PM
ಹರೇ ರಾಮ
ನಾನು ಈಗ ಸುಮಾರು ೪ ವರ್ಷಗಳ ಹಿಂದೆ ಒಬ್ಬ ತಾಯಿ ,ಚಿಕ್ಕ ಮಗನನ್ನು ಗುರುಗಳ ಬಳಿ ಕರೆದುಕೊಂಡು ಹೋಗಿದ್ದೆ ,ಅವರ ಜಾತಿ ಗೊತ್ತಿಲ್ಲ (,ಬ್ರಾಹ್ಮಣ ರಂತೂ ಅಲ್ಲ) ,ಮಗುವಿಗೆ ಕ್ಯಾನ್ಸರ್ ಆಗಿತ್ತು ,ಡಾಕ್ಟರ ೬ ತಿಂಗಳು ಮಾತ್ರ ಬದುಕುವುದು ಎಂದು ಹೇಳಿದ್ದರಂತೆ ,ಅವರು ಅಳುತ್ತ ನನ್ನ ಹತ್ತಿರ ಬಂದಿದ್ದರು ,ನಮ್ಮ ಗುರುಗಳ ಆಶೀರ್ವಾದ ಬಯಸಿದ್ದರು ,ಗುರುಗಳು ಅವರನ್ನು ನೋಡಿ (ಮಗುವನ್ನು )ಈ ಚಿಕ್ಕ ಬಾಲಕನಿಗೆ ಹೀಗೆ ಆಗುವುದು ಸಾದ್ಯನೇ ಇಲ್ಲ ,ಇವನಿಗೆ ಎನೂ ಆಗುವುದಿಲ್ಲ ,ಎಂದು ಹೇಳಿ ಮಂತ್ರಾಕ್ಷತೆ ಕೊಟ್ಟು ಆಶೀರ್ವದಿಸಿದರು ,ಇಂದೂ ಕೂಡ ಆ ಹುಡುಗ ಆರಾಮಾಗಿ ಓಡಾಡಿ ಕೊಂಡಿದ್ದಾನೆ
September 18, 2014 at 1:53 PM
Yes, i to agree about your thoughts, my self also closely associated with math & guruji since 2003, we will seen guruji in Rajasthan,mumbai, karnataka, how the people are joining for Sri gurujis pravachan & Ram Katha, day to day people are increasing in all over india, they asking us when again Sri Guruji is comming, were is your Math, we have to visit and join to Math also to take Sri Gurujis blessing every year. last week karnataka Malla news paper in mumbai printed some articles about Sri Guruji, my self written letter to karnataka Malla editor in mumbai. dont write about Sri Guruji untill knowing Sri Guruji closely, we know how Sri Guruji is doing afford for people and nation.
September 18, 2014 at 3:10 PM
ಗುರುವಿನ ಗುರುತ್ವ ಸಾರುವ ಲೇಖನ….
ಹರೇರಾಮ…
September 18, 2014 at 5:05 PM
Hare Raama. Idu Satya….Navella Prasannaragabekide. Would like somebody to take Guru Janara feed back & publish…as early as possible.
Hare Raama
September 18, 2014 at 5:10 PM
Hare Raama.
September 18, 2014 at 5:26 PM
Hareraama…
September 18, 2014 at 6:05 PM
It is a great loss to those people who do not understand our Swamiji.Off course , there are examples of some people opposing even Lord Rama and Lord Krishna during their times. Hare Rama.
September 19, 2014 at 5:25 AM
Harerama..
September 19, 2014 at 8:01 AM
Gurudeva endendu navu nimma jote….nimma charanakkido koti pranama.
September 19, 2014 at 12:07 PM
Hare raam
They are writing without understing .
Ravi Bhat
Dombivali
September 19, 2014 at 5:37 PM
ಹರೇ ರಾಮ ,
ಸಮಾಜದ ಸ್ವಾಸ್ಥ್ಯ ಕೆಡಿಸುವ ಕೆಲವು ಪೀತ ಪತ್ರಿಕೆಗಳು, ಟಿ.ಆರ್.ಪಿ ಹೆಚ್ಚಿಸಿಕೊಳ್ಳಲು ಪರದಾಡುತ್ತಿರುವ ಮೂಲೆಗೆ ಬಿದ್ದಿರುವ ಟಿ.ವಿ. ಚಾನೆಲ್ ಗಳು ಈ ಸಂಧರ್ಭವನ್ನು ಸ್ವಾರ್ಥಕ್ಕೆ ಬಳಸಿಕೊಳ್ಳಲು ಹಾತೊರೆಯುತ್ತಿರುತ್ತಾರೆ. ಸಮಾಜಮುಖಿಯಾಗದೆ ಸಮಾಜದ ವಿರುದ್ಧ ಈಜುವ, ಈ ಜನ, ನಾಯಿ ಮನುಷ್ಯನನ್ನು ಕಚ್ಚುವುದು ಸಾಮಾನ್ಯು ವಿಚಾರ ಆದರೆ ಮನುಷ್ಯ ನಾಯಿಯನ್ನು ಕಚ್ಚಿ ಸುದ್ದಿ ಮಾಡುವಂತೆ ಕೆಲವು ಅತಿ ಬುದ್ದಿವಂತರು, ಸಮಾಜದಲ್ಲಿ ತಮ್ಮ ಅಸ್ಥಿತ್ವವನ್ನು ತೋರಿಸುವುದಕ್ಕಾಗಿ ಹೇಳಿಕೆಯನ್ನು ಕೊಡಲು ಇಂತಹ ಸಂಧರ್ಭಗಳನ್ನು ಸಹಜವಾಗಿ ಬಳಸಿಕೊಳ್ಳುತ್ತಾರೆ. ಆದರೆ ಸಮಾಜಕ್ಕೆ ಅಧಿಕಾರಿಗಳಿಗೆ ಸರ್ಕಾರಕ್ಕೆ ಎಲ್ಲರಿಗೂ ಗೊತ್ತಿದೆ ಯಾರು ಹೇಗೆಂದು, ಯಾವುದನ್ನು ನಂಬಬೇಕೆಂದು ಜನರಿಗೆ ಗೊತ್ತಿದೆ. ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತದೆಯೆ?
ಶ್ರೀ ಸಂಸ್ಥಾನದ ವಿರುದ್ಧ ಮಾತನಾಡುತ್ತಿರುವವರಿಗೆ ತಕ್ಕ ಉತ್ತರ ಕೊಡುವ ಕಾಲ ಶೀಘ್ರದಲ್ಲೇ ಬರಲಿದೆ ಆಗ ಬಯಲಾಗಲಿದೆ ದುಷ್ಕರ್ಮಿಗಳ ಬಣ್ಣ.
ಹರೇ ರಾಮ.
ಮಂಜುನಾಥ್, ರಾಜಲಕ್ಷ್ಮಿ, ತುಮಕೂರು
September 19, 2014 at 10:33 PM
The work-talk-activity-thinking of our Samstan itself speaks about our Samstan. Gold by look itself speaks the quality. The more we be in touch with Samstan, the more bliss we get. The more we think on line with our some wested interested channels, the more headache we get. To know our Samstan, we do not need any certificate from our so called Specialists of some Channels.
Hare Rama
September 20, 2014 at 8:57 AM
HareeRaama
September 20, 2014 at 7:55 PM
Hare raama
September 20, 2014 at 8:27 PM
Hare Ram.
All should Pray Shree Rama, to Protect our Poojya Guruji Shree Shree Raghaweshwara Swamiji and Our Holy Mutt and punish those who are trying to spoil the reputation of both. I believe that Poojya Guruji has the strength and power to protect him and the Mutt and this is only a test for devotees, to assess their strength.
Hare Ram, Hare Ram, Hare Ram……………
September 22, 2014 at 7:57 AM
hareraama.
shrigurugala yojanegalanna poornagolisalu, mathu samajada yella vargadavarannu melakkethalu shishya bhakthra apara sankhye avshyavagide.gurugalalli nambike ettu yarella barutharo avarannu yeradu kaigalinda swagatisona.shrigurugala bagge ajnanadinda matanaduva teekhe maduva mandige dhikkara yennona.
hareraama.
October 31, 2014 at 9:11 PM
ಗುರುಜನರ ಜೊತೆಗೆ ಶ್ರೀಗಳವರನ್ನು ಭೇಟಿಯಾದವನು ನಾನು ಅವರು ತೋರಿಸಿದ ಪ್ರೀತಿಅದು ಅನುಭವಿಸಿದವರಿಗೇ ಗೊತ್ತು
November 1, 2014 at 10:27 AM
hare rama
nuru nurararu janmaku ivare namma gurugalagali, iduve namma guriyagali