Category Articles/Sammukha

ಕನಸುಗಳಿಗೆ ಕಂಕಣ ಕಟ್ಟುವ ಕಲಾಮೂರ್ತಿ.. – ಶ್ರೀ ಸುಶ್ರುತ ದೊಡ್ಡೇರಿ

ರಾಮಚಂದ್ರಾಪುರ ಮಠ ಅಥವಾ ಗುರುಗಳು ಎಂದರೆ ನನಗೆ ಮೊದಲು ನೆನಪಾಗುವುದು ಏನು? ಪೀಠಾರೋಹಣ ಸಮಾರಂಭದಲ್ಲಿ ಮೆರವಣಿಗೆಯಲ್ಲಿ ಕೆಂಪು ಮಡಿ ಹೊದ್ದು ಪುಟ್ಟ ದೇವರ ಮೂರ್ತಿಯಂತೆ ಕೂತಿದ್ದ, ‘ಅದೇ, ಅವ್ರೇ ಹೊಸಾ ಗುರುಗಳು’ ಅಂತ ಅಪ್ಪ ತೋರಿಸಿದ್ದ ಚಿತ್ರ? ಊರ ರಸ್ತೆಯಲ್ಲಿ ಧೂಳೆಬ್ಬಿಸುತ್ತ ಬಂದ ಹತ್ತಾರು ಕಾರುಗಳಲ್ಲೊಂದರಲ್ಲಿ ಕೂತಿದ್ದು, ನಮ್ಮನೆ ಎದುರಿಗೆ ನಿಂತಾಗ ಅಪ್ಪ ಹಿಡಿದು ನಿಂತಿದ್ದ… Continue Reading →

ಅಂತರಂಗದ ಬೆಳಕು – ಕೆ. ಜಿ. ಭಟ್

೧೯೯೯ ರಲ್ಲಿ ಪ್ರಥಮವಾಗಿ ನಾನು ನನ್ನ ಶ್ರೀಮತಿಯವರೊಡನೆ ಪೂಜ್ಯರನ್ನು ಕಾಣಲು ಗಿರಿನಗರ ಮಠಕ್ಕೆ ಬಂದಿದ್ದೆನು. ಆಗಿನ್ನೂ ಪೂಜ್ಯರು ಶ್ರೀಮಠದ ಉಸ್ತುವಾರಿಯನ್ನು ವಹಿಸಿಕೊಂಡು ಸ್ವಲ್ಪವೇ ದಿನ ಕಳೆದಿದ್ದು, ಪೂಜ್ಯರೊಡನೆ ಸುಮಾರು ಅರ್ಧ ಗಂಟೆಗೂ ಹೆಚ್ಚುಕಾಲ ಬೇರೆ ಬೇರೆ ವಿಚಾರಗಳ ಬಗ್ಗೆ ಚರ್ಚಿಸುತ್ತಿದ್ದಾಗ ನಾನು ಪೂಜ್ಯರಲ್ಲಿ ಒಂದು ವಿನಂತಿಯನ್ನು ಮಾಡಿಕೊಂಡೆ, ‘ತಾವು ಯಾರನ್ನೂ ಅತಿ ಸಮೀಪಕ್ಕೆ ಸೇರಿಸಬಾರದು’ ಎಂದು,… Continue Reading →

ಮಾತೃ ಸ್ವರೂಪಿಗೆ ಮನದ ನಮನಗಳು..! – ಶ್ರೀದೇವಿ ವಿಶ್ವನಾಥ್

ಮಾತೃ ಸ್ವರೂಪಿಗೆ ಮನದ ನಮನಗಳು… ಮಾತೃ ಸ್ವರೂಪಿ  ಶ್ರೀ ಗುರುಗಳ ಚರಣ ಕಮಲಗಳಲ್ಲಿ ಮನಸಾ ನಮನಗಳು. ಹರೇರಾಮದ ಸಮ್ಮುಖದಲ್ಲಿ, ಸಂಸ್ಥಾನದ ಸಮ್ಮುಖದಲ್ಲಿ, ಓದುವ ಸಮಸ್ತ ಬಾಂಧವರಿಗೆ ನನ್ನ ಪ್ರಣಾಮಗಳು. ಇಲ್ಲಿ ಬರೆಯಲು ಸಿಗುತ್ತಿರುವುದು ನನ್ನ ಪೂರ್ವಜನ್ಮ  ಸುಕೃತ ಎಂದು ನಾನು ತಿಳಿದಿದ್ದೇನೆ. ಇದು ನನ್ನ ಮನದ ನಮನಗಳು… ದಾರಿ ತೋರಿದ, ದಾರಿ ತೋರುತ್ತಿರುವ, ಸದಾ ಅನುಗ್ರಹಿಸುತ್ತಿರುವ… Continue Reading →

ಯಾವುದು ಸಾರ್ಥಕ ಬದುಕು – ಸುನಿಲ್ ಕುಲಕರ್ಣಿ

ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು, ಅವಕಾಶಕ್ಕಾಗಿ ವಂದಿಸುವೆ.. ಹೀಗೊಂದು ಘಟನೆ.. ವೇಗದೂತ ರೈಲೊಂದು ಅತ್ಯಂತ ವೇಗದಲ್ಲಿ  ಸಾಗುತ್ತಿತ್ತು.  ವೇಗದೂತ ರೈಲು ಆದ್ದರಿಂದ ಮದ್ಯದಲ್ಲಿ ಒಂದು ನಿಲ್ದಾಣಕ್ಕೆ ನಿಲುಗಡೆ ಇರಲಿಲ್ಲ. ನಿಲುಗಡೆ ಇಲ್ಲದ ನಿಲ್ದಾಣ ಸಮೀಪಿಸುತ್ತಿದ್ದಂತೆ ಚಾಲಕನಿಗೆ ಆ ನಿಲ್ದಾಣದಲ್ಲಿ ಅದೇ ಕಂಬಿಗಳ ಮೇಲೆಯೇ ಇನ್ನೊಂದು ರೈಲು ನಿಂತಿರುವುದು ಕಾಣಿಸಿತು! ಮುಂದೆ ಆಗುವ ಅನಾಹುತ ಒಂದು ಬಾರಿ ಅವನ… Continue Reading →

ನಾಗರಿಕ ಸಮಾಜದಲ್ಲಿ ಗುರುಗಳ ಪಾತ್ರ – ಈಶ್ವರ ಭಟ್ ಎಳ್ಯಡ್ಕ

ನಾಗರಿಕತೆಯ ಬೆಳವಣಿಗೆಯಲ್ಲಿ “ಗುರು”ಗಳ ಪಾತ್ರ ಗಣನೀಯ. ಆಳವಾದ ಅಭ್ಯಾಸ, ಚಿಂತನ, ಸಾಧನೆಗಳ ಮೂಲಕ ತಾವು ಕಂಡುಕೊಂಡ ಸತ್ಯ, ಜ್ಞಾನ, ಕೌಶಲ್ಯಗಳನ್ನು ಯೋಗ್ಯ- ಸತ್ಪಾತ್ರ ಶಿಷ್ಯರ ಮೂಲಕ ಸಮಾಜಕ್ಕೆ ಉಪಯುಕ್ತವಾಗುವಂತೆ ಮಾಡಿ ಮಾನವ ಸಮಾಜವನ್ನು ಪ್ರಗತಿಯ ಹಾದಿಯಲ್ಲಿ ಒಯ್ಯುವಲ್ಲಿ ಗುರುಸಮೂಹದ ಪಾತ್ರ ಮಹತ್ವದ್ದು. ನೂರಾರು ಋಷಿಮುನಿಗಳು ತಮ್ಮ ಸಾಧನೆಗಳ ಮೂಲಕ ಕಂಡುಕೊಂಡ ಸಿದ್ಧಾಂತಗಳನ್ನು ಗೌರವಿಸಿ ಆ ಹಾದಿಯಲ್ಲಿ… Continue Reading →

ತಸ್ಮೈ ಶ್ರೀಗುರುವೆ ನಮಃ – ಪ್ರಸನ್ನ ಮಾವಿನಕುಳಿ

ಶ್ರೀರಾಮರಾಮೇತಿ ರಮೇ ರಾಮೇ ಮನೋರಮೇ | ಸಹಸ್ರನಾಮತತ್ತುಲ್ಯಂ ರಾಮನಾಮ ವರಾನನೇ || ಶ್ರೀ ನಾರಾಯಣ ನ ನಾಮವನ್ನು ಒಮ್ಮೆ ಜಪಿಸುವದರಿಂದ ಕೋಟಿ ಜನ್ಮ ದ ಪಾಪಗಳು ನಿಶ್ಯೇಷ ಆಗುತ್ತವೆ ಎನ್ನುವ ವಿಷಯ ನಮ್ಮೆಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಮಹೇಶ್ವರ ತನ್ನ ಸತಿ ಮಹಾಸತಿ ಪಾರ್ವತಿಗೆ ಹೇಳುವ ಪ್ರಕಾರ, ಅಂತಹ ಸಾವಿರ ವಿಷ್ಣು ನಾಮಗಳನ್ನ ಹೇಳಿದ ಪುಣ್ಯ… Continue Reading →

ಶ್ರೀಗಳ ಪರಿಶ್ರಮ ನಮಗೆಲ್ಲ ದಾರಿದೀಪವಾಗಲಿ

ಹರೇ ರಾಮ.. ಭಾರತದ ಸಂಸ್ಕೃತಿಯನ್ನು ಜಗತ್ತಿಗೆ, ಅದರಲ್ಲೂ ಭಾರತೀಯರಿಗೆ ಸಾರಿ ಹೇಳಿದ ಆಚಾರ್ಯ ತ್ರಯರಲ್ಲಿ ಶಂಕರಾಚಾರ್ಯರು ಮೊದಲಿಗರು. ಅಲ್ಪಾವಧಿಯಲ್ಲಿಯೇ ದೇಶದ ಮೂಲೆ ಮೂಲೆಗಳಿಗೆ ಸಂಚರಿಸಿ “ಅದ್ವೈತ” ತತ್ವವನ್ನು ಪ್ರತಿಪಾದಿಸುತ್ತ ಜಗತ್ತಿಗೆ ಸಾರಿ, ಹಲವಾರು ಮತಗಳಿಂದ ದಾಳಿಗೊಳಗಾಗುತ್ತಿದ್ದ ಸನಾತನ ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿದರು. ಭಾರತದಲ್ಲಿ ಪುನಃಚೈತನ್ಯವನ್ನು ತುಂಬಿದರು. ಸೂರ್ಯ, ಗಣಪತಿ, ದುರ್ಗಾ, ಶಿವ, ವಿಷ್ಣು – ಮತಗಳನ್ನು… Continue Reading →

ಎಂತು ಬಣ್ಣಿಸಲಿ.. ಜೀವಲೋಕದ ಬೆಳದಿಂಗಳ. . !

ಯಜ್ಞೇಶ್ – ಜೀವನವನ್ನು ಸಾದ್ಯವಾದಷ್ಟು ಸಮ ಪ್ರಮಾಣದಲ್ಲಿ ನೋಡುವ ಆಸೆ ಹೊತ್ತ ವ್ಯಕ್ತಿ.
ಮಲೆನಾಡಿನ ಚದರವಳ್ಳಿಯಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ಬೆಳೆದು ಕೆಲವು ವರ್ಷಗಳಿಂದ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ.
ಕಲೆ, ಸಾಹಿತ್ಯ, ಸಂಗೀತ ಮತ್ತು ಸಂಘಟನೆಯಲ್ಲಿ ಆಸಕ್ತಿ. ಶ್ರೀಮಠಕ್ಕೆ ಅಳಿಲು ಸೇವೆ ಮಾಡುತ್ತಿರುವ ಶಿಷ್ಯ.

ಶ್ರೀ ಸಮ್ಮುಖದಲ್ಲಿ ಸದಾಶಿಷ್ಯನ ಸ್ವಗತಗಳು..

ಹರೇರಾಮ ಓದುಗರೇ.. ರಾಮಚಂದ್ರಾಪುರ ಶ್ರೀ ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಈ-ಸಮ್ಮುಖದಲ್ಲಿ ಬರೆಯುವ ಅವಕಾಶಕ್ಕಾಗಿ ಸಾಷ್ಟಾಂಗ ವಂದಿಸುತ್ತೇನೆ. ಶ್ರೀ ಶಿಷ್ಯರ ಅಂಕಣವಾಗಿರುವ ಸಮ್ಮುಖದಲ್ಲಿ ಆರಂಭಿಕ ಲೇಖವನವಾಗಿ ನಿಮ್ಮೆದುರು ಇಡುತ್ತಿದ್ದೇನೆ. ಸುಮಾರು ಹದಿನೈದು ಶತಮಾನಗಳಷ್ಟು ಹಿಂದೆ ಶ್ರೀ ಆದಿ ಶಂಕರಾಚಾರ್ಯರು ಅವತರಿಸಿದಾಗ.. ಭಾರತದ ಉದ್ದಗಲಕ್ಕೂ ಅಧರ್ಮ ತಾಂಡವವಾಡುತ್ತಿತ್ತು. ಯವನ, ಮ್ಲೇಚ್ಛ ಧರ್ಮಗಳ ಆಗಮನದಿಂದಾಗಿ ಸುಂದರ… Continue Reading →

ಶ್ರೀ ಸಮ್ಮುಖದಲ್ಲಿ “ಇ-ಸಮ್ಮುಖ”

ಹರೇ ರಾಮ ಓದುಗರೇ. ಶ್ರೀ ರಾಮಚಂದ್ರಾಪುರ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಅಂತರಜಾಲತಾಣವಾದ ಹರೇರಾಮ.ಇನ್ ನಲ್ಲಿ ಓದುಗರಿಗಾಗಿ ಮತ್ತೊಂದು ಸದವಕಾಶ! ಸಹಸ್ರಾರು ಓದುಗರ ಅಕ್ಷರದಾಹವನ್ನು ತಣಿಸುವುದಕ್ಕಾಗಿ ವೈಶಿಷ್ಟ್ಯಪೂರ್ಣ ಅಂಕಣಗಳನ್ನು ಹರೇರಾಮ.ಇನ್ ಹೊರತರುವುತ್ತಿರುವುದು ನಮಗೆಲ್ಲರಿಗೂ ಗೊತ್ತಿರುವ ವಿಷಯವೇ! ಈಗಾಗಲೇ ಶ್ರೀಗಳ ಮುಖವಾಣಿಯಾದ ಬ್ಲಾಗ್ ಎರಡು ವಿಭಿನ್ನ ದೃಷ್ಟಿಕೋನದಿಂದ ಹರಿದು ಬರುತ್ತಿದೆ. ಆಧ್ಯಾತ್ಮಿಕ ವಿಚಾರಗಳ… Continue Reading →

Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑