ಮೊಹರಂ’ನ ದಿನ ವಿಶ್ವಮಂಗಲ ಗೋಗ್ರಾಮಯಾತ್ರೆಯ ಕಾರ್ಯಕ್ರಮ ರಾಜಸ್ಥಾನದ ಕಿಶನ್ ಗಢದಲ್ಲಿ ನಿಶ್ಚಯವಾಗಿತ್ತು..ಆರಕ್ಷಕರು ಕಾರ್ಯಕ್ರಮಕ್ಕೆ ಅನುಮತಿ ನೀಡಲಿಲ್ಲ..
ಕಾರ್ಯಕ್ರಮ-ಸಂಘಟಕರು ಆರಕ್ಷಕರಿಗೆ ಹೇಳಿದ್ದು ‘ ನೀವು ಮುಸಲ್ಮಾನರನ್ನು ಕೇಳಿ ನಿರ್ಣಯ ಕೊಡಿ ‘ ಎಂಬುದಾಗಿ..ಹೃದಯ ತಟ್ಟುವ ಸಂಗತಿಯಂದರೆ ಕಾರ್ಯಕ್ರಮ ನಡೆಸಲು ಅವಕಾಶ ನೀಡಲೇಬೇಕೆಂದು ಮುಸಲ್ಮಾನರೇ ಆರಕ್ಷಕರನ್ನು ಆಗ್ರಹಿಸಿದರು..
ಈ ಪ್ರದೇಶದಲ್ಲಿ ಮುಸಲ್ಮಾನರ ಮನೆ-ಮನೆಗಳಲ್ಲಿ ಗೋವುಗಳಿವೆ..ಹಿಂದುಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮುಸಲ್ಮಾನರಲ್ಲಿಯೇ ಗೋಪಾಲಕರಿದ್ದಾರೆ..!
ವೇದಿಕೆಯ ಮೇಲೆ ಉಪಸ್ಥಿತನಿದ್ದ ಕೃಷಿಕ ‘ ರಹಮತುಲ್ಲಾ ‘ ಹೇಳಿದ ಮಾತು :
” ನಾವು ನಿಜವಾಗಿ ಹಿಂದುಗಳೇ….ಮುಸಲ್ಮಾನರಾಗಿ ಪರಿವರ್ತನೆಯಾದವರು..ನಮ್ಮ ಪೂರ್ವ ಸಂಸ್ಕಾರವನ್ನು ನಾವು ಮರೆತಿಲ್ಲ..ಮರೆಯುವ ಮನವೂ ಇಲ್ಲ…!! “
“ಮುಸ್ಲಿಮ್ ರಾಷ್ತ್ರೀಯ ವಿಚಾರ್ ಮಂಚ್” ಎಂಬ ಸಂಘಟನೆಯೊಂದು ಈ ಯಾತ್ರೆಗೆ ಸಹಯೋಗ ನೀಡುತ್ತಿದೆ..ಯಾತ್ರೆಯ ಪ್ರಥಮ ದಿನವೇ ಮುಸ್ಲಿಮ್ ರಾಷ್ತ್ರೀಯ ವಿಚಾರ್ ಮಂಚ್’ನ ಕಾರ್ಯಕರ್ತರು ಈ ಆಂದೋಲನವನ್ನು ಬೆಂಬಲಿಸುವ ಸುಮಾರು ಮೂರೂವರೆ ಲಕ್ಷದಷ್ಟು ಮುಸಲ್ಮಾನರ ಹಸ್ತಾಕ್ಷರಗಳನ್ನು ಸಮರ್ಪಿಸಿದರು.. ‘ಮೊಹಮ್ಮದ್ ಅಫ್ಜಲ್’ ಈ ಸಂಘಟನೆಯ ಮುಖ್ಯಸ್ಥ.. ಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ..
ಮುಸ್ಲಿಮ್ ಸಮುದಾಯದ ಐವರು ಪ್ರಧಾನ ನಾಯಕರು ಈವರೆಗೆ ಯಾತ್ರೆಯಲ್ಲಿ ಭಾಗವಹಿಸಿದ್ದಾರೆ..

Facebook Comments Box