ಪೆರ್ಲ : ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿಗ್ದರ್ಶನದಲ್ಲಿರುವ ಬಜಕೂಡ್ಲು ಅಮೃತಧಾರಾ ಗೋಶಾಲೆಗೆ ಉತ್ತರಪ್ರದೇಶ ವಾರಣಾಸಿಯ ಖ್ಯಾತ ಗೋಕಥಾಕಾರ ಮುಹಮ್ಮದ್ ಫೈಝ್ ಖಾನ್ ಅವರು ಸೋಮವಾರ ಭೇಟಿಯಿತ್ತು ಗೋಶಾಲೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಶ್ರೀ ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳವರ ಆಶ್ರಯದಲ್ಲಿರುವ ಮುಳ್ಳೇರ್ಯ ಮಂಡಲ ಗುಂಪೇ ವಲಯ ಸಭೆಯು 03.01.2016 ಆದಿತ್ಯವಾರ ಸುಬ್ರಹ್ಮಣ್ಯ ಭಟ್ ಕೊಂದಲಕಾಡು ಇವರ ನಿವಾಸದಲ್ಲಿ ನಡೆಯಿತು.
ದಿಕ್ಸೂಚಿ ಮಾತನಾಡಿದ ಸಮಾಜಸಮಷ್ಟಿಯ ಪ್ರಮುಖರಾದ ಶ್ರೀ ಲಕ್ಮೀನಾರಾಯಣರವರು ಶ್ರೀಗಳ ಮೇಲೆ ಬಂದ ಆರೋಪದಿಂದ ಯಾರೂ ವಿಚಲಿತರಾಗಬೇಕಿಲ್ಲ. ಸತ್ಯ ಕ್ಕೆ ಎಂದೆಂದೂ ಜಯವಿದೆ. ಈ ಸಭೆಯನ್ನು ನೋಡಿದಾಗ ಈಗಲೇ ಜಯ ದೊರಕಿದ ಅನುಭವ ವಾಗುತ್ತಿದೆ. ನಿಮ್ಮ ನಿಷ್ಠೆ ಇತರರಿಗೆ ಪಾಠ ಎಂದರು.
ಸರ್ವ ಸಮಾಜ ಈ ಸಂಚನ್ನು ಎದುರಿಸಲು ಯಾವ ತ್ಯಾಗಕ್ಕೂ ಸಿದ್ಧ, ನಮ್ಮೆಲ್ಲರ ಶ್ರದ್ಧೆ, ನಿಷ್ಟೆ, ಬದ್ಧತೆಗಳು ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತಿಮಹಾಸ್ವಾಮಿಗಳೊಂದಿಗೆ ಎಂಬ ಬದ್ಧತಾ ಪ್ರತಿಜ್ಞೆ ಸ್ವೀಕರಿಸಲಾಯಿತು.