ಕುಮಟಾ 29-Nov-2015:
“ಸಮಸ್ತ ಮುಕ್ರಿ ಸಮಾಜ ರಾಘವೇಶ್ವರ ಶ್ರೀಗಳ ಜೊತೆಗಿದ್ದು ಒಗ್ಗಟ್ಟಿನಿಂದ ಷಡ್ಯಂತ್ರವನ್ನು ಎದುರಿಸಲಾಗುವುದು” ಎಂದು ಉತ್ತರಕನ್ನಡ ಜಿಲ್ಲಾ ಹಿಂದೂ ಮುಕ್ರಿ ಬೃಹತ್ ಸಮಾವೇಶ ದಲ್ಲಿಂದು ಘೋಷಿಸಲಾಯಿತು. ಕುಮಟಾದ ಹಂದಿಗೋಣ ದಲ್ಲಿಂದು ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆ, ಗೋಪೂಜೆ, ಹಾಗೂ ಸಮಾವೇಶವನ್ನು ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ರಾಷ್ರೀಯ ಕಾರ್ಯದರ್ಶ ಶ್ರೀ ಸುಭಾಸ್ ಕಾನಡೆ ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಹಿಂದುಳಿದ ಮುಕ್ರಿ ಸಮಾಜವನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರೀಗಳವರು ಮಾಡಿದ ಪ್ರಯತ್ನ ಶ್ಲಾಘನೀಯ. ಯಾವುದೇ ಸಂಘಸಂಸ್ಥೆಗಳಿಂದಾಗದ್ದನ್ನು ರಾಘವೇಶ್ವರ ಶ್ರೀಗಳು ಮಾಡಿ ತೋರಿಸಿದ್ದಾರೆ, ಅಸ್ಪೃಶ್ಯತೆ ಹೋಗಲಾಡಿಸಲು ಅವರ ಕೊಡುಗೆ ಅಪಾರ ಎಂದರು.

ದಿಕ್ಸೂಚಿ ಮಾತನಾಡಿದ ಸಮಾಜಸಮಷ್ಟಿಯ ಪ್ರಮುಖರಾದ ಶ್ರೀ ಲಕ್ಮೀನಾರಾಯಣರವರು ಶ್ರೀಗಳ ಮೇಲೆ ಬಂದ ಆರೋಪದಿಂದ ಯಾರೂ ವಿಚಲಿತರಾಗಬೇಕಿಲ್ಲ. ಸತ್ಯ ಕ್ಕೆ ಎಂದೆಂದೂ ಜಯವಿದೆ. ಈ ಸಭೆಯನ್ನು ನೋಡಿದಾಗ ಈಗಲೇ ಜಯ ದೊರಕಿದ ಅನುಭವ ವಾಗುತ್ತಿದೆ. ನಿಮ್ಮ ನಿಷ್ಠೆ ಇತರರಿಗೆ ಪಾಠ ಎಂದರು.

ಉ.ಕ. ಜಿಲ್ಲಾ ಹಿಂದೂ ಮುಕ್ರಿ ಸಮಾಜ ಸಂಘ ಹಾಗೂ ಉ.ಕ. ಜಿಲ್ಲಾ ಪ.ಜಾತಿ ಪ.ಪಂಗಡ ಸಂಘ ಹೋರಾಟ ಸಮಿತಿಯ ಅಧ್ಯಕ್ಷರಾದ ಶ್ರೀ ಎನ್.ಆರ್.ಮುಕ್ರಿ ಹಾಗೂ ಸಮಾಜದ ಹಲವು ಮುಖಂಡರು ಭಾಗವಹಿಸಿದ್ದರು. ಸಮಾವೇಶದಲ್ಲಿ  ಸುಮಾರು ನಾಲ್ಕುಸಾವಿರ ಮುಕ್ರಿ ಸಮಾಜದ ಬಂಧುಗಳು ಭಾಗವಹಿಸಿ ರಾಘವೇಶ್ವರ ಶ್ರೀಗಳ ಜೊತೆ ನಾವಿದ್ದೇವೆ ಎಂಬ ಸಂದೇಶವನ್ನು ಸಾರಿದರು.

Facebook Comments