06.12. 2015 ಮುಳ್ಳೇರ್ಯ :
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಕೃಪಾಶ್ರಯದಲ್ಲಿರುವ ಮುಳ್ಳೇರ್ಯ ಹವ್ಯಕ ಮಂಡಲ ಪಳ್ಳತ್ತಡ್ಕ ವಲಯ ಸಭೆಯು ಚುಳ್ಳಿಕ್ಕಾನ ಕೃಷ್ಣ ಭಟ್ಟರ ನಿವಾಸದಲ್ಲಿ ಜರಗಿತು. ಧ್ವಜಾರೋಹಣ, ಶಂಖನಾದ, ಗುರುವಂದನೆಯೊಂದಿಗೆ ಸಭೆ ಪ್ರಾರಂಭವಾಯಿತು. ವಲಯ ಅದ್ಯಕ್ಷ ಗುಣಾಜೆ ರಾಮಕೃಷ್ಣ ಭಟ್ ಪ್ರಾಸ್ಥಾವಿಕ ಮಾತುಗಳನ್ನಾಡಿದರು.
ಕಾರ್ಯದರ್ಶಿ ಕೇಶವ ಭಟ್ ಕೊರಿಕ್ಕಾರು ಅವರು ಗತ ಸಭೆಯ ವರದಿನೀಡಿ ತಿಂಗಳಿನಲ್ಲಿ ನಡೆಯಲಿರುವ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿಗಳನ್ನಿತ್ತರು.
ಸಭೆಯಲ್ಲಿ ಶ್ರೀ ರಾಘವೇಶ್ವರಭಾರತಿ ಮಹಾಸ್ವಾಮಿಗಳ ನಕಲಿ ಸಿ.ಡಿ.ಪ್ರಕರಣವನ್ನು ಹಿಂಪಡೆದ ರಾಜ್ಯ ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ಖಂಡಿಸಿ ಸರ್ವಾನುಮತದಿಂದ ಠರಾವನ್ನು ಮಂಜೂರು ಮಾಡಲಾಯಿತು.
ಮಂಡಲ ಸೇವಾ ಪ್ರತಿನಿಧಿ ಶ್ರೀ ಚೆಂದ್ರ ಶೇಖರ ಪಳ್ಳತ್ತಡ್ಕ ಪದಾಧಿಕಾರಿಗಳು, ಗುರಿಕ್ಕಾರರುಗಳು ಉಪಸ್ಥಿತರಿದ್ದರು.
ಸಾಂಘಿಕ ರಾಮನಾಮಸ್ಮರಣೆ, ಶಾಂತಿ ಮಂತ್ರ, ಶಂಖನಾದ, ಧ್ವಜಾವತರಣದೊಂದಿಗೆ ಸಭೆ ಮುಕ್ತಾಯಗೊಂಡಿತು.

(ಸಚಿತ್ರ ವರದಿ: ಗೋವಿಂದ ಬಳ್ಳಮೂಲೆ – ಪ್ರಸಾರ ಪ್ರಧಾನರು, ಮುಳ್ಳೇರ್ಯ ಮಂಡಲ)

Pallathadka Valaya Sabha

Pallathadka Valaya Sabha

Facebook Comments