ಶ್ರೀಕ್ಷೇತ್ರ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಂಡ ವಿಕೃತಿ ಸಂವತ್ಸರ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಶಂಕರಾಚಾರ್ಯ ಕೃತ ಶಿವಾನಂದ ಲಹರಿ ಪ್ರವಚನ ಮಾಲಿಕೆ
Audio:
Facebook Comments Box
ಶ್ರೀಕ್ಷೇತ್ರ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಂಡ ವಿಕೃತಿ ಸಂವತ್ಸರ ಚಾತುರ್ಮಾಸ್ಯದ ಶುಭಾವಸರದಲ್ಲಿ, ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ವಚನಾಮೃತಧಾರೆಯಲ್ಲಿ ಹರಿದು ಬಂದ ಶಂಕರಾಚಾರ್ಯ ಕೃತ ಶಿವಾನಂದ ಲಹರಿ ಪ್ರವಚನ ಮಾಲಿಕೆ
Audio:
December 22, 2010 at 10:27 AM
file not found ಅಂತ ಬರುತ್ತಿದೆ. ದಯವಿಟ್ಟು, ಸರಿಪಡಿಸಿ ಕೊದುತ್ತೀರಾ? ಕೇಳಬೇಕೆಂಬ ಆಶೆ ಆಗುತ್ತಿದೆ.
December 29, 2010 at 7:15 PM
ಕೇಳಿದೆ. ಖುಶಿಯಾಯ್ತು.
ಧನ್ಯವಾದ 🙂
August 21, 2011 at 6:51 PM
ಬಯಸುವೆವು ಶಿವನನ್ನು, ಧರಿಸಿರುವೆವು ರುದ್ರಾಕ್ಷಿಯನ್ನು, ನಮ್ಮ ಅಕ್ಷಿಯಿ೦ದ ಬೇರ್ಪಟ್ಟ ಬಿ೦ದುಗಳು ಶಿವನೇ ನೀ ಹಿಡಿದಿರುವ ಯೋಗಮುದ್ರೆಯ ಮೇಲೆ ಬೀಳಲಿ, ಬೇರ್ಪಡದಿರಲಿ. ನಿನ್ನ ಮಾನಸ ನನ್ನೊಳು ಇರಲಿ, ನನ್ನ ಮಾನಸ ನಿನ್ನೊಳಿರಲಿ. ಉಮೆ ನಿನ್ನ ಮೇಲಿಟ್ಟಿರುವ ಪ್ರೇಮ, ಉಮಾಮಹೇಶ್ವರ ನೀ ಉಮೆಗೆ ತೋರುವ ಪ್ರೇಮ, ಎರಡು ನಮ್ಮ ಮಾನಸದೊಳಾಗಲಿ, ಎ೦ದೂ ಅಗಲಿಕೆ ಕಾಣದಿರಲಿ, ಅದ್ವೈತವಾಗಲಿ, ಅಳುವ ಅಕ್ಷಿಗಳಲ್ಲ, ಆನ೦ದ ರುದ್ರನ ಅಕ್ಷಿಯ ಧಾರಣವಾಗಲಿ.
.
.
ಸರಸ್ವತಿ ನಿನಗೊ೦ದನೆ, ನೀನಿಲ್ಲಿದೆ ಜ್ಞಾನವೆಲ್ಲಿ, ಜ್ಞಾನವಿಲ್ಲದೆ ಮೋಕ್ಷವೆಲ್ಲಿ, ಮೋಕ್ಷವಿಲ್ಲದ ಈ ಲೋಕವನ್ನು ಮಾಯೆಯೆ೦ಬರು, ಮೋಕ್ಷವಿರುವ ಇದೇ ಲೋಕವನ್ನು ಶಿವನ ಆನ೦ದ ಎ೦ಬರು, ಉಮೆಯ ಪ್ರೇಮ ಎ೦ಬರು, ಗಿರಿಜಾ ಕಲ್ಯಾಣವೆ೦ಬರು, ಜಗದ ಕಲ್ಯಾಣವೆ೦ದರು. ಗಿರಿಜಾ ಕಲ್ಯಾಣವನ್ನು ಗಿರಿಜೆ ನಿನ್ನ ನೇತ್ರತ್ವದಲೆ ನೋಡ ಬಯುಸುವೆವು, ಕರುಣಿಸು.
.
ಶ್ರೀ ಗುರುಭ್ಯೋ ನಮಃ
August 22, 2011 at 6:46 AM
ಹೊರ ಇ೦ದ್ರಿಯಗಳಿಗೆ ಗೋಚರಿಸುವ ಶಿವ ನೀ ಕ್ಷೀಣವಾಗುತ್ತಿರುವೆ..
ಒಳ ಮಾನಸದಲಿ ತೋರು, ಚಿತ್ತ ಅತ್ತಿತ್ತ ಹರಡಿದರಲಿ, ಬಿತ್ತು ತತ್ತ್ವದ ಬೀಜಗಳ, ನೀರೆರೆ, ಫಲವ ನಿನಗೆ ಸಮರ್ಪಿಸಿಕೊ, ನೀನೆ ಫೋಷಿಸಿ ಬೆಳೆಸಿ ಸಸಿಯ ಪಕ್ವವಾಗಿಸು, ಸುಗ೦ಧ ಹರಡಲಿ ಚಿತ್ತ ನಿನ್ನತ್ತವೇ ನಿನ್ನಲ್ಲಿ.. ಕರುಣಿಸು, ಕಡೆಗಾಣಿಸದಿರು, ನೆಲೆ ಸೇರಿಸು.
.
ಶ್ರೀ ಗುರುಭ್ಯೋ ನಮಃ
September 3, 2011 at 3:01 PM
ಹರಿಯುವ ನದಿಯ ತಡೆವವರ್ ಯಾರ್, ಸೆಲೆ ಇದ್ದರೆ ನೆಲೆ ಕಾಣ್ವುದು.
ಶಿವನ ಆನ೦ದ ಹರಿಯುತಿದೆ ಎ೦ದಾದೊಡೆ, ಮುಟ್ಟಲೇಬೇಕು ಎನ್ನನ್ನು, ಸಿಕ್ಕಲೇಬೇಕು ಶಿವ, ಮುಟ್ಟಬೇಕು ಮಾನಸಕೈಲಾಸ ತುದಿಯ ನಿನ್ನೊ೦ದಿಗೆ ಶಿವನೆ,, ನೀ ಇರದ ಜಗ ಬೇಡ, ಇರು ನೀ ಎಲ್ಲಾದರು ಬರುವೇ ಓಡಿ ಬರುವೆ ಹಾರಿ, ಬೀಳ್ವ ಪ್ರತಿ ಹನಿಯು ಬಿಲ್ವವಾಗಲಿ ಪುಷ್ಪವಾಗಲಿ, ನಾ ಬರುವ ಮೊದಲೆ ನಿನ್ನ ಸೇರಲಿ.
.
ಶ್ರೀ ಗುರುಭ್ಯೋ ನಮಃ
September 10, 2011 at 10:39 PM
“ಶ೦ಭು” – ರೋಮಾ೦ಚನ, ಮನದಾಳದಿ೦ದ ಭಾವದಾಳದಿ೦ದ ಪ್ರೇಮಭಕ್ತಿಯಾಳದಿ೦ದ ಉದ್ಭವಿಸಿದ “ಶ೦ಭು” “ಶ೦ಭೋ” ಎ೦ಬ ನಾದ ಶಿವ ಎಮ್ಮಾಳದಲಿ ನೆಲೆಸಲಿ ಸದಾ ಎಮ್ಮನಾಳುತಿರಲಿ.
.
ಶಿವನೆ೦ಬ ನಿಜವಲ್ಲದೆ ಮತ್ತೇನು ಇಲ್ಲ.
.
“ಶಿವೋಹ೦ ಶಿವೋಹ೦”
ನಾನೇ ಎಲ್ಲ ನಾನೇ ಎಲ್ಲ ಎ೦ಬ ಜಗದೀಶನ ನೋಡಲೆ, ಇದು ನಾನಲ್ಲ ಇದು ನಾನಲ್ಲ ಎ೦ಬ ಸ್ಥಾಣುವನ್ನು ಹುಡುಕಲೆ….
.
ಶ್ರೀ ಗುರುಭ್ಯೋ ನಮಃ