|| ಹರೇರಾಮ ||
ಶತಮಾನಗಳ ಹಿಂದಿನ ಮಾತು..
ಇಂದೋರನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಮಹಾರಾಣಿ ಅಹಲ್ಯಾಬಾಯಿ ಹೋಳ್ಕರ್ ಭಾರತದ ಹೃದಯ ಪ್ರದೇಶವನ್ನು ಆಳುತ್ತಿದ್ದ ಕಾಲ..
ತನ್ನ ನಡೆ ನುಡಿಗಳಿಂದ ಆಕೆ ದೇವತುಲ್ಯಳಾಗಿದ್ದುದರಿಂದಲೋ ಏನೋ ಜನತೆ ಆಕೆಯನ್ನು ‘ದೇವಿ’ ಎಂದೇ ಸಂಬೋಧಿಸುತ್ತಿದ್ದಿತು..!
ಆಕೆ ಮಾಡಿದ ಸತ್ಕಾರ್ಯಗಳಿಗೆ ಲೆಖ್ಖವೇ ಇಲ್ಲ..!
ಮಾಲೋಜಿರಾವ್ ಆಕೆಯ ಏಕಮಾತ್ರ ಪುತ್ರ…
ಆದರೆ ಅವರೀರ್ವರ ಸ್ವಭಾವದಲ್ಲಿ ಭೂಮಿ ಆಕಾಶಗಳ ಅಂತರವಿದ್ದಿತು..!!
ನ್ಯಾಯ-ಧರ್ಮಗಳ ಮರ್ಯಾದೆ ಮೀರದ, ಶಿಸ್ತು – ಸಂಯಮಗಳ ವ್ಯಕ್ತಿತ್ವ ಅಹಲ್ಯಾಬಾಯಿಯದ್ದಾದರೆ..
ಹುಚ್ಚು ಹೊಳೆಯ ಹೋಲುವ ಪುಂಡಾಟಿಕೆ ಮಾಲೋಜಿಯಲ್ಲಿ ಬಾಲ್ಯದಿಂದಲೇ ಬೆಳೆದುಬಂದಿತ್ತು..
ಒಂದುದಿನ…
ಇಂದೋರಿನ ರಸ್ತೆಯೊಂದರಲ್ಲಿ ಮದವೇರಿದ ಮಾಲೋಜಿ ರಥವೇರಿ ಬರುತ್ತಿದ್ದ ಸಮಯ..
ಅಲ್ಲೊಂದು ಕಣ್ಸೆಳೆಯುವ ದೃಶ್ಯ..!
ಅಮ್ಮನಿತ್ತ ಅಮೃತವನ್ನು ಭರಪೂರ ಕುಡಿದು, ಆ ಸಂಭ್ರಮದಲ್ಲಿ ಮಾರ್ಗ ಮಧ್ಯೆ ಮನದಣಿಯೆ ಕುಣಿದು – ಕುಪ್ಪಳಿಸುತ್ತಿದ್ದ ಪುಟ್ಟ ಕರು..!!
ಮಾರ್ಗದ ಪಾಶ್ವ೯ದಲ್ಲಿ ನಿಂತು ಒಡಲಾಳದ ಮಮತೆಯ ಸಾಗರವನ್ನೇ ಹೊರಸೂಸುವಂತೆ ಪ್ರೇಮ – ಕಾಳಜಿಗಳು ತುಂಬಿದ ನೋಟದಿಂದ ಕರುವನ್ನೇ ದಿಟ್ಟಿಸುವ ತಾಯಿ ಹಸು..!
ಹೃದಯವಿದ್ದವರೆಲ್ಲವರೂ ಒಮ್ಮೆ ನಿಂತು ನೋಡಲೇಬೇಕಾದ ದೃಶ್ಯವದು..!!
ಕಣ್ಣಿದ್ದರೇನಾಯಿತು..? ಕಣ್ಣಲ್ಲಿ ಕರುಣೆಯಿರಬೇಕಲ್ಲವೇ..?
ಮದಾಂಧ ಮಾಲೋಜಿಯ ರಥ ಮುಗ್ಧಕರುವಿನ ಮೇಲೇರಿಹೋಯಿತು..!!!
ಜನ್ಮವಿತ್ತ ಜನನಿಯ ಕಣ್ಣೆದುರೇ ಎಳೆಯ ಜೀವವೊಂದರ ಜೀವನವೇ ನುಚ್ಚುನೂರಾಗಿಹೋಯಿತು..!!!!
ಹೃದಯವಿದ್ದವರೆಲ್ಲರೂ ಕರಗಿ ಕಣ್ಣೀರ್ಮಿಡಿಯುವ ದೃಶ್ಯವದು…!!!
ತನ್ನ ಕರುಳಕುಡಿಯ ಅವಶೇಷಗಳೆದುರು ಬಹುಕಾಲ ರೋದಿಸಿದ ಗೋವು ಮತ್ತೆ ಅರಮನೆಯೆಡೆಗೆ ಧಾವಿಸಿತು…!
ಅರಮನೆಯ ಹೆಬ್ಬಾಗಿಲಿನಲ್ಲಿ ತ್ವರಿತನ್ಯಾಯದಾನಕ್ಕಾಗಿ ದೊಡ್ಡಘಂಟೆಯೊಂದು ಕಟ್ಟಲ್ಪಟ್ಟಿತ್ತು..!
ಘಂಟೆಯ ನಾಲಗೆಯನ್ನು ಸುತ್ತಿದ ಸೂತ್ರವೊಂದು ನ್ಯಾಯಾಪೇಕ್ಷಿಗಳ ಸೌಕರ್ಯಕ್ಕಾಗಿ ನೆಲದವರೆಗೆ ಇಳಿಬಿಡಲ್ಪಟ್ಟಿತ್ತು…!!
ಪುತ್ರಶೋಕದಿಂದ ಸಂತಪ್ತಗೊಂಡಿದ್ದ, ಅರಮನೆಯಿಂದಲೇ ಆಗಿಹೋದ ಅನ್ಯಾಯದಿಂದ ಆಕ್ರೋಶಗೊಂಡಿದ್ದ ಗೋವು ಎಂದೆಂದೂ ಮಾತನಾಡದ ತನ್ನ ಬಾಯಿಯಿಂದಲೇ ಘಂಟೆಯ ಸೂತ್ರವನ್ನು ಕಚ್ಚಿಹಿಡಿದೆಳೆದು ಬಾರಿಸತೊಡಗಿತು.. !
ಬುದ್ಧಿಜೀವಿಗಳೆಲ್ಲರೂ ಆಲಿಸಿ-ಕೇಳಿ ಎಚ್ಚೆತ್ತುಕೊಳ್ಳಬೇಕಾದ ಎಚ್ಚರಿಕೆಯ ಘಂಟೆಯದು.. !!!
ಘಂಟೆಯ ಸದ್ದುಕೇಳಿ ಹೊರಬಂದ ಅಹಲ್ಯಾಬಾಯಿ ತನ್ನ ಕಣ್ಣುಗಳನ್ನೇ ತಾನು ನಂಬಲಿಲ್ಲ.. !!
ನ್ಯಾಯ ಕೇಳಲು ಮಾತು ಬರುವ ಮನುಷ್ಯರಾರೂ ಬಂದಿರಲಿಲ್ಲ..
ಮಾತೇ ಬಾರದ ಗೋಮಾತೆ ಮಾತಿಗೆ ಮೀರಿದ ವೇದನೆಯನ್ನು ಘಂಟಾನಾದದ ರೂಪದಲ್ಲಿ ವ್ಯಕ್ತಪಡಿಸಿದ್ದಳು..!
ನೋವಿಗೆ ನಡುಗುವ ಒಡಲಿನ, ಮಿಡಿವ ಕಂಬನಿಯ ಕಣ್ಣುಗಳ ಕಾಮಧೇನುವನ್ನು ಕಂಡಾಗ ಮಹಾರಾಣಿಯ ಕರುಳು ಚುರ್ರೆಂದಿತು..!
ಕ್ಷಣಮಾತ್ರದಲ್ಲಿ ಗೋವಿನ ಮಾಲೀಕನಿಗೆ ಕರೆಹೋಯಿತು..!!
ಕೆಲಹೊತ್ತಿನಲ್ಲಿಯೇ ತನ್ನೆದುರು ಕೈಮುಗಿದು ನಿಂತ ಗೋಪಾಲಕನನ್ನು ರಾಣಿ ಪ್ರಶ್ನಿಸಿದಳು..
” ನಿನ್ನಗೋವು ನ್ಯಾಯದ ಘಂಟೆ ಬಡಿಯಲು ಕಾರಣವೇನು..?
ಕಾಲ – ಕಾಲಕ್ಕೆ ನೀನು ಹುಲ್ಲು-ನೀರುಗಳನ್ನು ಸರಿಯಾಗಿನೀಡುತ್ತಿಲ್ಲವೇನು ..? ”
” ದೇವಿ !
ಗೋಸೇವೆಯೇ ನನ್ನ ಬದುಕು..
ನಾನು ಉಪವಾಸವಿದ್ದೇನು..!
ಆದರೆ ನನ್ನ ಮತ್ತು ನನ್ನವರೆಲ್ಲರ ಹಸಿವು ಹಿಂಗಿಸುವ ಹಸುವು ಹಸಿದಿರುವ ಪ್ರಶ್ನೆಯೇ ಇಲ್ಲ..!
ಆದರೆ ಹಸುವಿಗೆ ಅನ್ಯಾಯವಾದದ್ದಂತೂ ನಿಜ..
ಅದು ಯಾರಿಂದ ಎಂದು ತಿಳಿಸಲು ನನಗೆ ಪ್ರಾಣಭಯವಿದೆ..”
ಮಹಾರಾಣಿ ನಿರ್ಭೀತಿಯಿಂದ – ನಿರ್ಭಿಡೆಯಿಂದ ಸತ್ಯವನ್ನು ಹೇಳೆಂದು ಅಭಯವಿತ್ತಾಗ ಗೋಪಾಲಕ ಸತ್ಯವನ್ನು ನುಡಿದ..!!
ಗೋವಿನ ಕರುಳಕುಡಿಯನ್ನು ಹೊಸಕಿ ಹಾಕಿದ್ದು ತನ್ನ ಕರುಳ ಕುಡಿಯೆಂಬುದನ್ನು ತಿಳಿದು ಖತಿಗೊಂಡಳು ಅಹಲ್ಯಾಬಾಯಿ…!!
ಕ್ಷಣಹೊತ್ತು ತನ್ನಲ್ಲೇ ಚಿಂತಿಸಿ…
ಮಾಲೋಜಿಯ ಮಡದಿಯರಿಬ್ಬರನ್ನೂ ಸಭಾಸ್ಥಾನಕ್ಕೆ ಕರೆಯಿಸಿ ಕೇಳಿದಳು..
” ನಿಷ್ಕಾರಣವಾಗಿ ಜೀವವೊಂದರ ನಿರ್ದಯ ಹತ್ಯೆಗೈದವನಿಗೆ ದಂಡವೇನು..? ”
ಸೊಸೆಯರು ಅತ್ತೆಯ ಸಂಸ್ಕಾರಕ್ಕೆ ತಕ್ಕ ಉತ್ತರವನ್ನೇ ಇತ್ತರು..!
” ಅಂಥವನಿಗೆ ಅದೇ ರೀತಿಯ ಮೃತ್ಯುವೇ ಯೋಗ್ಯ ಶಿಕ್ಷೆ ”
ಅಹಲ್ಯಾಬಾಯಿಯ ಅಂತರಂಗದ ಕಣ್ಣಮುಂದೆ ಜೀವನ ಮೌಲ್ಯಗಳ ತಕ್ಕಡಿ ತೂಗತೊಡಗಿತು..!!
ಒಂದೆಡೆಗೆ ಮಗ ಮಾಲೋಜಿ ಮತ್ತು ಮಾತೃವಾತ್ಸಲ್ಯ..!
ಇನ್ನೊಂದೆಡೆಗೆ ಗೋವಿಗಾದ ಅನ್ಯಾಯ ಮತ್ತು ಆ ಕುರಿತು ಸಿಂಹಾಸನದ ಕರ್ತವ್ಯ..!
ಮಾಲೋಜಿಯ ರಥಚಕ್ರದಡಿಯಲ್ಲಿ ಛಿದ್ರ ಛಿದ್ರವಾದ ಎಳೆಗರುವಿನ ರೂಪವನ್ನು ಕಲ್ಪಿಸಿಕೊಂಡಾಗ..
ಸರ್ವಲೋಕ ಶುಭಂಕರಿಯಾದ ಗೋಮಾತೆಯ ಕಂಬನಿಯ ಮುಖ ಕಣ್ಮುಂದೆ ಬಂದಾಗ ಅಹಲ್ಯಾಬಾಯಿಯ ಹೃದಯ ವಜ್ರಕಠೋರವಾಯಿತು..!
ಆಕೆಯ ಮುಖದಿಂದ ಆಜ್ಞೆಯೆಂಬ ಅಗ್ನಿಯ ಮಳೆ ಹೊರಹೊಮ್ಮಿತು..!!
ಮಾಲೋಜಿಯ ಕೈ-ಕಾಲು ಕಟ್ಟಿ, ಕರುವಿನ ಪ್ರಾಣಹರಣವಾದ ಸ್ಥಳದಲ್ಲಿಯೇ ಕೆಡವಬೇಕೆಂಬುದಾಗಿಯೂ, ಯಾವ ರಥವೇರಿ
ಆ ಘೋರ ಕೃತ್ಯವನ್ನಾತ ನಡೆಸಿದ್ದನೋ ಅದೇ ರಥವನ್ನು ಆತನಮೇಲೆ ಹರಿಯಿಸಬೇಕೆಂಬುದಾಗಿಯೂ ಶಿಕ್ಷೆಯ ಸ್ವರೂಪವಾಗಿದ್ದಿತು..!
ಇದಿರಿಲ್ಲದ ಆದೇಶವದು….!!
ರಾಜಾಜ್ಞೆಯಂತೆ ಮಾಲೋಜಿಯ ಕೈ-ಕಾಲು ಕಟ್ಟಿ ಅದೇ ಸ್ಥಳದಲ್ಲಿ ಕೆಡವಲಾಯಿತು..!
ರಾಜರಥ ಮಾಲೋಜಿಯ ಮೇಲೇರಿ ಹೋಗಲು ಸಿದ್ಧವಾಗಿ ನಿಂತಿತು..!!
ಕರುವಿನ ಶರೀರಕ್ಕೇನಾಯಿತೋ ಅದು ಮಾಲೋಜಿಯ ಮನಸ್ಸಿಗಾಗತೊಡಗಿತು..!!!(?)
ಆದರೆ ಸಾರಥಿ ದೇವಿಯ ಕಾಲುಹಿಡಿದು – ಕೈ ಮುಗಿದು ಕಣ್ಣೀರಿಟ್ಟು ನಿವೇದಿಸಿಕೊಂಡ..
” ಇದು ನನ್ನಿಂದಾಗದು ಬೇಕಿದ್ದರೆ ನನಗೇ ಮೃತ್ಯುದಂಡವಾಗಲಿ, ರಾಜಕುಲದ ಏಕೈಕ ಕುಡಿಯನ್ನು ನನ್ನ ಕೈಯಿಂದ ನಾನು ಕಮರಿಸಲಾರೆ ”
ಕೊನೆಗೆ ಯಾರೂ ಆ ಕಾರ್ಯಕ್ಕೆ ಸಿದ್ಧರಾಗದಿದ್ದಾಗ ಸ್ವಯಂ ರಾಣಿಯೇ ರಥವೇರಿದಳು..!!!!!!!!!!!!!!!!!!!!!!!!
ಆ ಕ್ಷಣದಲ್ಲಿ ಆಕೆ ತಾಯಿಯಾಗಿರಲಿಲ್ಲ… ಮೈವೆತ್ತ ನ್ಯಾಯವಾಗಿದ್ದಳು..!
ಮಮತೆಯ ಕಣ್ಮುಚ್ಚಿ ಸತ್ಯದ ಕಣ್ತೆರೆದಿದ್ದಳು..!!
ತೊಟ್ಟಿಲು ತೂಗಿದ ಕೈಗಳಿಂದಲೇ ಮಗನಿಗೆ ಮಸಣವೀಯುವ ಕಡಿವಾಣಗಳನ್ನು ಹಿಡಿದಿದ್ದಳು..!!!
ಭೂಮಿಯೇ ಬಾಯ್ಬಿಡುವಂತೆ ಮೃತ್ಯುರಥ ಮಾಲೋಜಿಯೆಡೆಗೆ ಧಾವಿಸಿತು..!
ರಥ ಚಕ್ರಗಳ ಘೋಷ ಮಾಲೋಜಿಯ ಕಿವಿಗಳಿಗೆ ಮರಣ ಮೃದಂಗದಂತೆ ಕೇಳಿಸತೊಡಗಿತು..!
ಇನ್ನೇನು ಮಾಲೋಜಿ ಮೃತ್ಯುವಿನ ಮನೆ ಸೇರಬೇಕು…..
ಅಷ್ಟರಲ್ಲಿ ಅಘಟಿತ ಘಟನೆಯೊಂದು ಘಟಿಸಿತು..!
ಯಾವ ತಾಯಿಯ ಕರುವನ್ನು ಮಾಲೋಜಿ ನಿರ್ದಯವಾಗಿ ಹತ್ಯೆ ಗೈದಿದ್ದನೋ ಅದೇ ಗೋವು ರಾಜ ರಥಕ್ಕೆ ಅಡ್ಡವಾಗಿ ನಿಂತಿತ್ತು…!!
ರಥ ನಿಲ್ಲಿಸದೇ ದೇವಿಗೆ ಬೇರೆ ದಾರಿಯೇ ಇರಲಿಲ್ಲ..!
ಇದೊಂದು ಆಕಸ್ಮಿಕವಿರಬಹುದೆಂದು ಭಾವಿಸಿದ ರಾಣಿ ಗೋವನ್ನು ಪಕ್ಕಕ್ಕೆ ಸರಿಸಿ ಇನ್ನೊಮ್ಮೆ ರಥ ಓಡಿಸಿದಳು ಮಾಲೋಜಿಯೆಡೆಗೆ…!
ದೇವಿಯ ನ್ಯಾಯನೈಷ್ಠುರ್ಯವೆಷ್ಟು ದೊಡ್ಡದೋ ಅದಕ್ಕಿಂತ ಹಿರಿದಾದುದು ಗೋಮಾತೆಯ ಕಾರುಣ್ಯ…..!!
ಧಗಧಗಿಸಿ ಉರಿಯುವ ಕಾಳ್ಗಿಚ್ಚನ್ನು ತಣಿಸುವ ತಂಪುಮಳೆಯಂತೆ..
ಮಗು ಮಾರ್ಕಂಡೇಯನನ್ನುಳಿಸಲು ಮೃತ್ಯುವಿನೆದುರು ನಿಂತ ಮೃತ್ಯುಂಜಯನಂತೆ ..
ಮತ್ತೊಮ್ಮೆ ರಾಣಿಯ ರಥದ ಪಥದಲ್ಲಿ ನಿಂತು ಗೋಮಾತೆ ಮಾಲೋಜಿಯನ್ನು ರಕ್ಷಿಸಿದಳು..!!!
ಸೇರಿದವರ ಸಾವಿರಾರು ಕಂಠಗಳು ಗೋಮಾತೆಗೆ ಜಯಘೋಷ ಮಾಡಿದವು..!
ಮಾಲೋಜಿಯ ಕಣ್ಣುಗಳು ಕಂಬನಿಗರೆದವು..!!
ಅಹಲ್ಯಾಬಾಯಿಯ ತಲೆ ಬಾಗಿತು..!!
ನ್ಯಾಯ ನೈಷ್ಠುರ್ಯ ಮತ್ತು ಪರಮ ಕಾರುಣ್ಯಗಳ ಪರಾಕಾಷ್ಠೆಯನ್ನು ಈ ಜಗತ್ತು ಕಂಡ ಕ್ಷಣಗಳವು..!!
ಅಂದಿನ ಆ ಅಮರ ಘಟನೆಯ ಕುರುಹಾಗಿ ಇಂದೋರಿನಲ್ಲಿ ಆ ಸ್ಥಳಕ್ಕೆ ಇಂದೂ ”ಆಡಾ” ಬಝಾರ್ ಎಂದೇ ಹೆಸರಿದೆ..
( ಕನ್ನಡದಲ್ಲಿ ನಾವು ಯಾವುದನ್ನು ಅಡ್ಡ ಎಂದು ಹೇಳುತ್ತೇವೆಯೋ ಅದೇ ಅರ್ಥದಲ್ಲಿ ಹಿಂದಿಯಲ್ಲಿ ಆಡಾ ಎಂಬ ಶಬ್ಧ ಬಳಕೆಯಲ್ಲಿದೆ )
ಗೋವು ಮಾಲೋಜಿಯನ್ನು ರಕ್ಷಿಸಲು ಅಡ್ಡನಿಂತ ಕಾರಣ ಆ ಸ್ಥಳಕ್ಕೆ ಆಡಾ ಬಝಾರ್ ಎಂದು ಹೆಸರಾಯಿತು..
ಓ ಅಹಲ್ಯಾಬಾಯಿಯ ಭಾರತದ ಇಂದಿನ ದೊರೆಗಳೇ…!
ಆಲಿಸಿರಿ….
ಕೇಳಿಸಲಿಲ್ಲವೇನು ಘಂಟಾನಾದ . . . ?
ಅಂದು ಒಬ್ಬಮಾಲೋಜಿ…
ಒಂದು ಕರು…
ಒಂದು ಹಸು…
ಒಂದು ಘಂಟಾನಾದ..
ಇಂದು………..???????????
ಲೆಖ್ಖವಿದೆಯೇ ನಿಮ್ಮದೇ ನಾಡಿನಲ್ಲಿ ನಿರ್ದಯವಾದ, ನಿಷ್ಕಾರಣವಾದ ಹತ್ಯೆಗೊಳಗಾಗುತ್ತಿರುವ ಮುಗ್ಧ, ನಿರಪರಾಧಿ ಗೋವು-ಕರುಗಳಿಗೆ..!!
ಅಂದು ಮಾಲೋಜಿಯಂದ ಹತ್ಯೆಗೀಡಾದ ಕರುವಿಗೆ ಕೊನೆಯ ಪಕ್ಷ ಹುಟ್ಟಲಾದರೂ ಅವಕಾಶವಿತ್ತು…
ಇಂದು…???
ಅಮಾಯಕ ಕರುವಿಗೆ ಅಮ್ಮನ ಹೊಟ್ಟೆಯಲ್ಲಿಯೇ ಚೂರಿಯ ದರ್ಶನ.. ಇದು ನಿಮಗೆ ಚೆನ್ನಾಗಿ ತಿಳಿದಿರಬೇಕಲ್ಲವೇ..?
”ರಾಜಾ ರಾಷ್ಟ್ರಗತಂ ಪಾಪಮ್”
ಪ್ರಜೆಗಳ ಸಂಪತ್ತಿನಲ್ಲಿ ಒಂದು ಪಾಲು ರಾಜನಿಗೆ ಸಲ್ಲಬೇಕು..ಇದು ಧರ್ಮ ನಿಯಮ..
ಜೊತೆ ಜೊತೆಯಲ್ಲಿ ರಾಜನ ಬೇಜವಾಬ್ದಾರಿಯಿಂದಾಗಿ ರಾಜ್ಯದಲ್ಲಿ ಯಾವ ಯಾವ ಪಾಪಗಳು ಘಟಿಸುತ್ತವೆಯೋ ಅವುಗಳಲ್ಲಿಯೂ ರಾಜನಿಗೆ ಪಾಲುಸಲ್ಲುತ್ತದೆ…!!!!
ನಿಮ್ಮ ಪಾಪವೆಷ್ಟಾಗಿರಬೇಕು…??
ಪಾಪದ ಕೊಡ ತುಂಬುವಮೊದಲು ಎಚ್ಚೆತ್ತುಕೊಳ್ಳಿ…
ಒಬ್ಬನೇ ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು..ಬೇಕಿದ್ದರೆ ನೂರು ಅಪರಾಧಿಗಳು ತಪ್ಪಿಸಿಕೊಳ್ಳಲಿ..ಕಾನೂನಿನ ಮೂಲ ತತ್ವವಿದು..
ಈಗ ಹೇಳಿ ನಮ್ಮ ಗೋವಿನ ಯಾವ ತಪ್ಪಿಗೆ ಈ ಶಿಕ್ಷೆ..?
ತಾಯಿಯ ಹಾಲು ಬತ್ತಿದಾಗ ನಮ್ಮ ಬದುಕಿನಲ್ಲಿ ಹಾಲಿನ ಹೊಳೆ ಹರಿಸಿದ್ದು ಗೋವಿನ ತಪ್ಪೇ..?
ತನ್ನ ಪಾದಸ್ಪರ್ಶದಿಂದ, ಗೋಮೂತ್ರ-ಗೋಮಯಗಳಿಂದ ಬರಡು ಭೂಮಿಯನ್ನು ನಗುವ ನಂದನವನಗಳನ್ನಾಗಿ ಮಾರ್ಪಡಿಸಿದ್ದು ಗೋವಿನ ತಪ್ಪೇ..?
ತ್ರಾಣವಿರುವವರೆಗೆ – ಅಲ್ಲಲ್ಲ – ಪ್ರಾಣವಿರುವ ವರೆಗೆ ದುಡಿ-ದುಡಿದು ಮಾನವಕೋಟಿಗೆ ಮಹೋಪಕಾರಗಳನ್ನು ಮಾಡಿದ್ದು ಗೋವಿನ ತಪ್ಪೇ..?
ಈ ಅತ್ಯಂತ ಘೋರ (ಅದನ್ನು ಹೇಳಲು ಶಬ್ಧಗಳೇ ಇಲ್ಲ) ಅನ್ಯಾಯಕ್ಕೆ ನೀವು ಹೊಣೆಗಾರರಲ್ಲವೇ..?
ಗೋ ಶಬ್ದಕ್ಕೆ ಭೂಮಿ ಎಂತಲೂ ಅರ್ಥವಿದೆ.. ತಾತ್ವಿಕವಾಗಿ ಗೋವು ಬೇರೆಯಲ್ಲ – ಭೂಮಿಬೇರೆಯಲ್ಲ..
ಜೀವರಾಶಿಗಳ ಜನನಿ ಧರಣಿಯ ಜೀವವೇ ಗೋವು..
ಅನ್ಯಾಯಕ್ಕೊಳಗಾದ ಗೋವುಗಳು ಘಂಟಾನಾದಮಾಡುವ ಕಾಲ ಮುಗಿದುಹೋಗಿದೆ..!
ಏರುವ ತಾಪಮಾನದ ಮೂಲಕ..ಪ್ರಕೃತಿ ವಿಕೋಪಗಳ ಮೂಲಕ.. ವಿಷ – ವಿಷಮತೆಗಳ ಮೂಲಕ ಸಾಕ್ಷಾತ್ ಭೂಮಿಯೇ ಘಂಟಾನಾದ ಮಾಡುತ್ತಿದೆ..
ಆಲಿಸಿರಿ ದೊರೆಗಳೇ…. ಆಲಿಸಿರಿ…!!
ಈಗಲೂ ನೀವು ಆಲಿಸದಿದ್ದರೆ…..
ಆಲಿಸದಿದ್ದರೆ…
ಆಲಿಸದಿದ್ದರೆ…..
ನೀವೂ ಇಲ್ಲ..!!!!!!!!!!!
ನಾವೂ ಇಲ್ಲ…!!!!!!!!!!!!
ನಾಡೂ ಇಲ್ಲ…!!!!!!!!!!!!
March 8, 2010 at 1:22 PM
Hare Raama samsthana,
Aah!!,
I am actually feeling like witnessing the incident in person. Probably it was a way that nature has given us the message as to what extent Gau Mata can sacrifice for humanity & inturn to what extent should we human beings be grateful to her?
I pray that this article need to be published in front page of all major papers with colorful pictures, So that people feel what is their responsibility towards our Gau Mata.
Samsthana, these people are not Deaf. they are pretending to be deaf. We can cure a deaf person & can make them listen by operations. But what to do of people who behave as if they are deaf? How to bring such people & make them listen? Probably a big explosion can only awaken them.
March 8, 2010 at 1:59 PM
ಕಿವಿಯಿದ್ದೂ ಕೇಳದ ಜಾಣ ಕಿವುಡರಿಗೆ… ಘಂಟಾನಾದ ಕೇಳದು….
ಪಾಂಚಜನ್ಯವೇ ಮೊಳಗಬೇಕು….
ಯದಾ ಯದಾ ಹಿ ಧರ್ಮಸ್ಯ….
March 8, 2010 at 2:04 PM
ಕಿವುಡರಿಗೆ ಚಿಕಿತ್ಸೆ ಇದೆ… ಆದರೆ ಕಿವುರಂತೆ ನಟಿಸುವ ನಮ್ಮ ’ದೊರೆ’ಗಳಿಗೆ ಇಲ್ಲ…
ಗೋ ಮಾತೆಯದ್ದೊ ಭೂಮಾತೆಯದ್ದೋ ಕೂಗು ಅವರಿಗೆ ಕೇಳಲಾರದು, ಕೇಳುವುದು ಕಾಂಚಣದ ಝಣಝಣ ಮಾತ್ರ…
ಆದರೆ… ಕಿವುಡರಿಗೂ, ಕಿವುಡರಂತೆ ವರ್ತಿಸುವವರಿಗೂ ಕೇಳಿಸುವಂತಿದೆ ಈ ಬರಹ…
ಅಂತಃಕರಣವೊಂದಿದ್ದರೆ ಈ ಕೂಗು ಅವರಿಗೆ ಕೇಳಬೇಕು, ಅಷ್ಟ್ತು ಸಶಕ್ತವಾಗಿದೆ ಈ ಶೈಲಿ…
ಯೋಚನಾಶಕ್ತಿಯೊಂದಿದ್ದರೆ ಅರ್ಥವಾಗಲೇಬೆಕು ಅಷ್ಟು ಸ್ಪುಟವಾಗಿದೆ ಇದರ ನಿರೂಪಣೆ…
ಗುರುಗಳೆ, ಈ ಎಚ್ಚರಿಕೆಗೆ ಅನಂತ ಧನ್ಯವಾದಗಳು….
March 8, 2010 at 6:07 PM
ಹರೇ ರಾಮ. ಕಣ್ಣು ಹನಿಯಾಯಿತು.ಗಂಟಲು ಕಟ್ಟಿ ಬಂತು. ಆದರೆ ಸ್ವಾರ್ಥಿಗಳೇ ತುಂಬಿರುವ ರಾಜಕೀಯ ಕ್ಷೇತ್ರದಲ್ಲಿ ಎಲ್ಲಿಯ ಭಾವನೆ,ಎಲ್ಲಿಯ ಅನುಕಂಪ! ಅಧಿಕಾರ,ಅಧಿಕಾರ,ಅಧಿಕಾರ! ಬಾಕಿ ಎಲ್ಲವೂ ಅಂಧಕಾರ.ಗುರುಗಳು ಗೋಗ್ರಾಮ ಯಾತ್ರೆಯ ಸಂದರ್ಭದಲ್ಲಿ ಹೇಳುತ್ತಿದ್ದಂತೆ, ಪಾಪದ ಕೊಡ ತುಂಬಿದಾಗ, ಗೋ ಮಾತೆಯೇ ಶಿಕ್ಷೆ ನೀಡಬೇಕಶ್ಟೆ. ಹರೇ ರಾಂ.
ಸತ್ಯ.
March 8, 2010 at 9:13 PM
ಹೇಳಕ್ಕಾಗ್ದೆ ಇದ್ದಷ್ಟು ಚೆನ್ನಾಗಿದ್ದು ಸಂಸ್ಥಾನ..
March 9, 2010 at 10:42 AM
ಧನದಾಹಿಗಳಿಗೆ ದನಗಾಹಿಗಳ ನೋವು ಹೇಗೆ ಅರ್ಥ ಆಗಬೇಕು?
ಘೋರ್ಕಲ್ಲ ಮೇಲೆ ಮಳೆಸುರಿದಂತೆ..
March 9, 2010 at 12:58 PM
”……………………………………………….”
March 9, 2010 at 3:29 PM
ಅಮಾಯಕ ಕರುಗಳ ಹತ್ಯೆಯ ಚಿತ್ರಗಳನ್ನೂ ಹಾಕ್ಕಿದ್ದರೆ ಚೆನ್ನಾಗಿತ್ತು .
March 9, 2010 at 3:56 PM
ಭಾವವೇ ಇಲ್ಲದ ನಮ್ಮನ್ನು ಜೀವಿ ಎನ್ನಲು ಸಾಧ್ಯವೆ?
ಜೀವಭಾವವನ್ನೆ ಮರೆತ ಸಾಧು ರೂಪದ ಗೋವು ಒ೦ದೆಡೆ, ಜೀವಭಾವವನ್ನೆ ಮರೆತು ರಾಕ್ಷಸರಾಗುತ್ತಿರುವ ಮನುಜ ಒ೦ದೆಡೆ, ನಡುವೆ ದೊಡ್ಡ ಕ೦ದಕದ ಸೃಷ್ಠಿ,
ಕ೦ದಕದ ಉದ್ದ-ಅಗಲ-ಆಳ ಬೆಳೆಯುತ್ತಲೇ ಇದೆ, ಅಗ್ನಿಜ್ವಾಲೆ ಉಕ್ಕೇರಿ ಬರುತ್ತಿದೆ..
.
ಮಾಲೋಜಿ ಅ೦ತವರು ಬೆರಳನಿಕೆಯಷ್ಟು ಇದ್ದರೆ ಗೋವು ತಡೆಯಬಹುದಿತ್ತು….
ಬೆರಳನಿಕೆಯಷ್ಟೂ ಅಹಲ್ಯಾಬಾಯಿ ಇಲ್ಲದ ಈ ಕಾಲದಲ್ಲಿ ಗೋಮಾತೆಯು ಮೂಕವಾಗಿ ನಿ೦ತು ಈ ಮನುಜ ರಾಕ್ಷಸರನ್ನು ಕಾಲ-ರಾಕ್ಷಸ ಕೊಚ್ಚಿ ಕೊಚ್ಚಿ ಕೊಲ್ಲುತ್ತಿರುವ ದೃಶ್ಯವನ್ನು ನೋಡಬೇಕು….
.
ಸಮಾನತೆ ಸಮಾನತೆ ಎ೦ದು ಎಗರಾಡುವ ಜನರೆಲ್ಲಿ?
ಜಾತಿಯಲ್ಲಿ ಸಮಾನತೆ, ಮಹಿಳೆಯರಿಗೆ ಸಮಾನತೆ ಎ೦ದು ಕುಣಿಯುವ ನಾವು, ಪ್ರಾಣಿ ಪಕ್ಷಿ ನಿಸರ್ಗಕ್ಕೆ ಸಮಾನತೆ ನೀಡಿದ್ದೇವೆಯೆ????
————————————————————————————————————————————————-
.
ಬುದ್ಧಿಜೀವಿಯೆ೦ದುಕೊ೦ಡು ಲದ್ದಿಯಲಿ ಬಿದ್ದು ವದ್ದಾಡಿ ಗೆದ್ದೆನೆ೦ದೆನಬೇಡ ಗಿಡ್ಡಬುದ್ಧಿಗಳೆ
.
ನರಿ ಹೊಟ್ಟೆ ತು೦ಬಿದ ಮೇಲೆ ಹೋಗಿ ಮಲಗೀತು, ನರನ ಮೈಮನ ಪೂರ್ತಿ ಹೊಟ್ಟೆಯಾಗಿರಬೇಕಾದರೆ ನಿದ್ರೆ ಎಲ್ಲಿ ನಮಗೆ, ನಮ್ಮಿ೦ದ ನಿದ್ರೆ ಎಲ್ಲಿ ಬೇರೆ….
.
ಕೋಟಿ ಕೋಟಿ ಕಾಲಯಮರನ್ನು ಸೃಷ್ಠಿಸಿ, ಅವರ ಕಾಲ್ತುಳಿಕ್ಕೆ ಸಿಕ್ಕು ನರಳುವ ಸ್ವಾರ್ಥಿಗಳನ್ನು ಕ೦ಡು ಕೇಕೇ ಹಾಕಿ ನಗುವ ಕಾಲಪುರುಷನ ಕಾಲ ಸನ್ನಿಹಿತವಾಗುತ್ತಿದೆ, ಕಾಲಪುರುಷ ಎದ್ದು ಸಿದ್ಧನಾಗುತ್ತಿದ್ದಾನೆ. ಕಲಿಯುಗ ಪ್ರಥಮ ಪಾದ..
.
.
……
daivi svastirastu naha
svastir maanushebhyaha
urdhvam jigatu bheshajam
sham no astu dvipade
sham chatushpade
Om shantih shantih shantihi
May all medicinal herbs grow in potency so that all diseases may be cured. May the gods rain peace on us. May all the two-legged creatures be happy, and may all the four-legged creatures also be happy. May there be peace in the hearts of all beings in all realms
March 9, 2010 at 7:10 PM
¸Áé«ÄÃf,
UÉÆë£À EA¢£À ¥Àj¹ÜwUÉ £ÀªÀÄä PÉÆqÀÄUÉAiÀÄÆ §ºÀ¼À¹ÖzÉ.
C£ÁxÀgÁV¹zÀªÀgÀÄ £ÁªÉ C®èªÉ?
¥Á¥À ¥ÀæeÉß £ÀªÀÄä£ÀÄß PÁqÀÄwÛzÉ.
£ÀªÀÄä,£ÀªÀÄä ªÀÄ£ÉUÀ½AzÀ UÉÆë£À gÀPÀëuÉUÉ PÁAiÀÄPÀ ±ÀÄgÀĪÁUÀ ¨ÉÃQzÉ.
¤ªÀÄä F WÀAmÁ£ÁzÀPÁÌzÀgÀÆ, F ¨sÀgÀvÀ ªÀµÀð JZÉÑvÀÄÛ UÉƼÀî°.
eÉÊ UÉÆêÀiÁvÉ, eÉÊ UÉÆøÁé«Ä ||
March 10, 2010 at 7:57 AM
Unable to view this.
Others also have problem with this I feel.
.
Ravindra, can you please re-post this with different format.
March 15, 2010 at 11:17 PM
ಅವಶ್ಯಕತೆಯೇ ಅವಿಷ್ಕಾರದ ಮೂಲ,
ಅರಿವಿಗಿಂತ ದೊರೆಯಿಲ್ಲ,
ನಿಮ್ಮ ಸಲಹೆಯಂತೆ, ಮೇಲಿನ ಆಫ್ರಿಕನ್ ಭಾಷೆಯ
ಕನ್ನಡೀಕರಣ ಮಾಡುವುದನ್ನ ಕಲಿತೆ,
ಗುರುವಿಗೆ ನಮನಗಳು.
ನಾನು, ಏನು ಹೇಳ ಹೊರೆಟೆನೆಂದರೆ,
” ಗುರೂಜೀ,
ಇದರಲ್ಲಿ ನಮ್ಮ ಕೊಡೂಗೆಯೂ ಬಹಳವಿದೆ,
ನಮ್ಮ ತಪ್ಪುಗಳಿಂದ, ನಮ್ಮಮ್ಮ ಬೀದಿಗೆ ಬಂದಿದ್ದಾಳೆ.
ಈ ತಪ್ಪಿಗೆ ಶಿಕ್ಷೆ, ಗೋಸೇವೆಯಲ್ಲಿ ಪ್ರತ್ಯಕ್ಷವಾಗಿ,ಪರೋಕ್ಷವಾಗಿ
ತೊಡಗಿಸಿ ಕೊಳ್ಳುವುದೇ ಅಲ್ಲವೆ?”
ಶ್ರೀ ಗುರುಬ್ಯೋನಮಃ||
March 9, 2010 at 10:27 PM
ಇದೆಂತಹ ಸ್ಥಿತಿ ನಮ್ಮ ನಾಡಿನಲ್ಲಿ ನಮ್ಮ ತಾಇಗೇ ರಕ್ಷಣೆ ಇಲ್ಲವಲ್ಲ.ಸದಾ ಹಣದ,ಕುರ್ಚಿಯ ಹಿಂದೆ ಹೋಗುವ ಇವರು doregalo ಅಥವಾ ರಾಕ್ಷಸರೋ.
March 10, 2010 at 12:24 PM
ಒಂದು ಕ್ಷಣ ಉಸಿರೇ ನಿಂದು ಹೋದ ಭಾವ!!!
ಹೇ ದೇವಾ..ಮೃತ್ಯು ಜೊತೆಗೆ ನೋವು…
ಮೃತ್ಯು ಒಬ್ಬರಿಗಾದರೆ..
ನೋವು ಹಲವರಿಗೆ!!!!
ಯಾಕೆ ದೇವಾ ಯಾಕೆ ನೀನು
ನೋವಿಲ್ಲದ ಮೃತ್ಯುವನ್ನೇ ಕೊಡಬಾರದು???!!!!!
March 12, 2010 at 11:30 AM
ಕಣ್ಣಲ್ಲಿ ನೀರೂರಿತು. ಆದರೆ ನಾವೂ ಕೂಡ ಕೈ ಚಲ್ಲಿ ಕೂತಿದ್ದೇವೆ ಅನ್ನಿಸುತ್ತದೆ. ಸರಕಾರದ ಕಿವಿಗೆ ಬೀಳಬೇಕದರೆ ಮ್ಯುಟಿನಿ ನಡೀಬೇಕು ಅನ್ನಿಸುತ್ತದೆ.
March 13, 2010 at 3:54 PM
ಕಣ್ಣೀರು ಬ೦ತು…ಈಗ ಅ೦ತಹ ತಾಯ೦ದಿರು ಇರುತ್ತಿದ್ದರೆ? ಬಹುಷಃ ಗೋಸ೦ರಕ್ಶಣೆಗೆ ಮಾತೆಯರೂ ಹೋರಾಡಬೇಕಲ್ಲವೇ….
March 15, 2010 at 11:53 AM
ಈ ಲೇಖನ ಅದ್ಭುತಗಳಲೊ೦ದು.
ಕಲ್ಲು ಹೃದಯದವರನ್ನು ಕರಗಿಸುತ್ತದೆ, ಆದರೆ ಕಲ್ಲು ನಿಜವಾಗಲು ಕರಗುತ್ತದೆಯೆ? ಹೃದಯವೇ ಇಲ್ಲದಿದ್ದರೆ ಕರಗುವುದಾದರು ಏನು?
.
ಈ ಹೂವಿನ೦ತ ಲೇಖನದಲಿ, ವಜ್ರದ೦ತ ಸ೦ದೇಶವಿದೆ. ಹೂವಿನ೦ತ, ಮಗುವಿನ೦ತ ಗೋವಿನ ಸ೦ಸ್ಕೃತಿ ನಶಿಸಿ ಹೋದರೆ, ತಾಪಮಾನ ಹೆಚ್ಚಾಗಿ – ಬೆಳಗುವ ಅಗ್ನಿ ಭುಗಿಲೆದ್ದು ಯುಗದ ಅ೦ತ್ಯದ ನಾ೦ದಿಗೆ ಶ೦ಕನಾದ ಮೊಳಗೀತು..
.
ಅದೇಷ್ಟು ಸ್ವಾರ್ಥ ನಮ್ಮೆಲ್ಲರಲ್ಲೂ.. ಹ೦ಚಿ ತಿನ್ನುವ ಬುದ್ಧಿ ಹ೦ಚಿ ಹ೦ಚಿ ಹೋಗಿದೆ, ನಾನು ಎ೦ದರೆ ನನ್ನ ದೇಹ, ನನ್ನ ಆಸೆ, ನನ್ನ ಸುಖ ಮಾತ್ರ….
ನಾನು ಎ೦ದರೆ ಕನಿಷ್ಟ ನನ್ನ ಕುಟು೦ಬವೂ ಅಲ್ಲ.. ನಾನು “ವಿಶ್ವ” ಎ೦ದು ಹೇಳುವುದು ಯಾವಗ..?
ನನ್ನ ಸುತ್ತ-ಮುತ್ತ, ನನ್ನ ಪರಿಸರ ಸರಿ ಇರದಿದ್ದರೆ, ಕೇವಲ ನನ್ನ ದೇಹದಿ೦ದ – ನನ್ನ ಆಸೆಯಿ೦ದ ಸುಖ ಸಿಗಲು ಸಾಧ್ಯವೆ? ನಾವೆಲ್ಲಾ “ಸುಖ” ಎ೦ದು ಪಡುತ್ತಿರುವ ದುಃಖವೆ ಇದಕ್ಕೆ ಸಾಕ್ಷಿ.
ಕೇವಲ ನನ್ನ ದೇಹದಿ೦ದ – ನನ್ನ ಆಸೆಯಿ೦ದ ಸುಖ ಸಿಗಲು ಸಾಧ್ಯವೆ?????????????????????????
July 4, 2010 at 3:30 PM
ಇಲ್ಲಿ ಯಾರನ್ನೂ ನಿಂದಿಸಲಾರದು, ಹೌದು..ಒಂದಲ್ಲ ಒಂದು ರೀತಿಯಲ್ಲಿ ನಾವೆಲ್ಲರೂ ತಪ್ಪಿತಸ್ಥರು. ಗೋಮಾತೆಯ ರಕ್ಷಣೆಯ ಬಗ್ಗೆ ತುಂಬಾ ಕಾಳಜಿ ಇರುವ ನಾನು, ಯಾಕೆ at least ಒಂದು ಹಸುವನ್ನು ಸಾಕಬಾರದು? ಆದರೆ ಇಲ್ಲ, ಅನಿವಾರ್ಯತೆ, ಅಗತ್ಯತೆಗಳು ನಮಗೆ ಮುಖ್ಯ. ಕರುಣೆ ನಮ್ಮೆಲ್ಲರಿಗೂ ಇದೆ, ಆದರೆ ಅದನ್ನು ಯಾರು ಕಾರ್ಯರೂಪಕ್ಕೆ ತರಲು ಧೈರ್ಯ ಮಾಡ್ತೀವಿ? ಹಸು ಮನೆಗೆ ತಂದರೆ ಆಗುವ ಖರ್ಚು, ಕೆಲಸ ಇತ್ಯಾದಿ ಲೆಖ್ಖ ಹಾಕಿ ಸುಮ್ಮನಾಗ್ತೀವಿ. ನಮ್ಮ ಜೀವ ಜೀವನ ಎಲ್ಲವನ್ನೂ ಗೋಮಾತೆಯ ರಕ್ಷಣೆಗೇ ಎಂದು ಜೀವಿಸುವ ಮನಸ್ಥಿತಿ ಇರುವವರು ಎಷ್ಟು ಜನ? ನನ್ನನ್ನೂ ಸೇರಿಸಿ. ಇದಕ್ಕೆ ಯಾರನ್ನೂ blame ಮಾಡಲು ಸಾಧ್ಯ ಇಲ್ಲ. ಹಿಂದೆ ಸತ್ಯ, ಧರ್ಮ, ಜೀವನದ ಮೌಲ್ಯಗಳಿಗೆ ಎಲ್ಲಕ್ಕಿಂತ ಹೆಚ್ಚಿನ ಬೆಲೆ ಇತ್ತು. ಇಂದು? ಪಕ್ಕದ ವ್ಯಕ್ತಿ ರಸ್ತೆಯಲ್ಲಿ ಕುಸಿದು ಬಿದ್ದರೆ ನೆರವಾಗುವವರು ಎಷ್ಟು ಜನ? ಇನ್ನು ಗೋಮಾತೆ? ತಾನಾಯಿತು, ತನ್ನ ಉದ್ಯೋಗ, ಮನೆ, ಸಂಸಾರ. ಇಷ್ಟೇ ನಮ್ಮ ಪ್ರಪಂಚ!!! ನಮ್ಮ ಮಕ್ಕಳನ್ನೂ ನಾವು ಹೀಗೇ ಬೆಳೆಸ್ತೀವಿ…ultimately ನಮ್ಮ ಗುರಿ ಒಂದಷ್ಟು ಹಣ, ಮನೆ, ವಾಹನ, name & fame.
The day when we all realize our responsibilities towards the truth, morals, our Nation/world & ಗೋಮಾತೆ…..we r surely going to win !! I hope that day is not so far.
October 12, 2010 at 12:17 PM
ನಾವು ಹಸುಗಳನ್ನು ಸಾಕುವ ಅಗತ್ಯವಿಲ್ಲ. ಭಗವ೦ತ ಜೀವಿಗಳನ್ನು ಸ್ರುಸ್ಟಿದಾಗ ಪತಿಯೊ೦ದು ಜೀವಿಗೂ ಅದರ ಆಹಾರ ಹುಡುಕಿಕೊಳ್ಲುವ, ಅದರ ರಕ್ಶ್ನೆ ಮಾಡಿಕೊಳ್ಲುವ, ಅದರ ಜೀವನ ನಿವ೯ಹಿಸುವ ಬುದ್ದಿ & ಶಕ್ತಿ ಅದಕ್ಕಿ ಕೊಟ್ಟಿರುತ್ತಾನೆ. ಹಸುವನ್ನು ಸಾಕಲು ಆಗದಿದ್ದರೆ ಅವನ್ನು ಕಾಡಿನಲ್ಲಿ ಬಿಡಬಹುದು. ಪ್ರಪ೦ಚದಲ್ಲಿ ಯಾವ ಪ್ರಾಣಿಯೂ ಮನುಶ್ಯನನ್ನು ನ೦ಬಿಕೊ೦ಡು ಭೂಮಿಗೆ ಬ೦ದಿಲ್ಲ.
ಈನಡುವೆ ಕುರಿಯ ಮಾ೦ಸಕ್ಕೆ ಬದಲಾಗಿ ಕರುವಿನ ಮಾ೦ಸವನ್ನು ಉಪಯೊಗಿಸುತ್ತಿದ್ದಾರೆ.ಮೊದಲು ಅದನ್ನು ತಡೆಯಬೇಕಾಗಿದೆ. ಅದನ್ನು ಕ೦ಡು ಸುಮ್ಮನಿರುವ ಗುಣ ಬಿಡಬೇಕಾಗಿದೆ. ಇ೦ತ ಪ್ರಸ೦ಗಗಳು ಬ೦ದಾಗ ಯಾರ ನೆರವನ್ನು ಪಡೆದು ಅವುಗಳನ್ನು ಸ೦ಕ್ಶಿಸಬಹುದೊ, ಅವರ ಪೊನ್ ನ೦. ಇತ್ಯಾದಿ ಮಾಹಿತಿಗಳನ್ನು ಎಲ್ಲಾ ಕಡೆಗಳಲ್ಲಿಯೂ ಸಾವ೯ಜನಿಕರ ಗಮನಕ್ಕೆ ಬರುವ೦ತೆ ನಿಬ೯ಯದಿ೦ದ ಹಾಕಬೆಕಿದೆ.
December 4, 2010 at 6:11 PM
ಈಗಲೂ ಆಲಿಸುವವರಿಲ್ಲ.
ಅ’ರಾಜ’ಕತೆಯ ನಡುವೆ ರಾಮರಾಜ್ಯ ಎಂದು ಕಾಣುವೆವೋ?
ಒಬ್ಬ ಇನ್ನೊಬ್ಬನ ಕಾಲೆಳೆಯುವ ಕೆಲಸ ಎಂದು ನಿಲ್ಲುವುದೋ?
ಹರೇರಾಮ