“ರಾಮಾಯಣವನ್ನು ಕೇಳುವುದರಿಂದ ಏನು ಪ್ರಯೋಜನವೆಂದರೆ, ಕಳೆದುಹೋದ ಅಮೂಲ್ಯವಾದ ಎಲ್ಲಾ ಸ್ವತ್ತಿನ ಪುನಃಪ್ರಾಪ್ತಿ. ರಾಮಾಯಣ ಕಥನ-ಶ್ರವಣದಿಂದ ಕಳೆದುಹೋದ ಅಮೂಲ್ಯ ಸ್ವತ್ತು ಪುನಃಪ್ರಾಪ್ತಿಯಾಗುತ್ತದೆ, ಅದಕ್ಕೆ ಉದಾಹರಣೆ ರಾಮನಿಗೆ ಲವಕುಶರು, ಸೀತೆ ಹಾಗೂ ರಾಜ್ಯದ ಪುನಃಪ್ರಾಪ್ತಿ – ಶ್ರೀಸೂಕ್ತಿ.
~~~~~
ರಾಮನು ಎಲ್ಲಿ ಅವತರಿಸಿದನು? ಎಂಬ ಪ್ರಶ್ನೆಗೆ ಉತ್ತರ ಇದು: ಈ ಭೂಮಂಡಲದ ಮೊದಲು ಯಾರದ್ದಾಗಿತ್ತೋ, ಕಶ್ಯಪ ಪರಂಪರೆಯಿಂದ ಪ್ರಾರಂಭವಾಗಿ, ಸೋಲಿನ ಸುಳಿವೇ ಇಲ್ಲದ, ಸಗರ ಎಂಬ ಚಕ್ರವರ್ತಿಯಿಂದ ಪ್ರಾರಂಭವಾದಂತಹ ವಂಶ, ಇಕ್ಷ್ವಾಕು ವಂಶದಲ್ಲಿ (ಸೂರ್ಯವಂಶದಲ್ಲಿ) ಹುಟ್ಟಿದವನು ಪ್ರಭು ಶ್ರೀ ರಾಮ.
~~~~~
ರಾಮಾಯಣದಲ್ಲಿ (ಕಾವ್ಯದಲ್ಲಿ) ಏನು ಇದೆ? ಎಂಬುದು ಮುಂದಿನ ಪ್ರಶ್ನೆ. ಇದಕ್ಕೆ ಉತ್ತರ: ಧರ್ಮ, ಅರ್ಥ, ಕಾಮ,ಮೋಕ್ಷ ಇವೆಲ್ಲವೂ ಇದೆ. ಮೋಕ್ಷವೇ ರಾಮ.
~~~~~
ಕೋಸಲ ರಾಜ್ಯವು ಹೇಗಿತ್ತು??
ಸಂತೋಷ, ಸಮೃದ್ಧಿ, ಧನಧಾನ್ಯವನ್ನೊಳಗೊಂಡಂತಹ ಸಂಪತ್ಭರಿತವಾದಂತಹ ರಾಜ್ಯ. ಇದರ ರಾಜಧಾನಿ ಅಯೋಧ್ಯಾ. ಮಾನವನಲ್ಲಿ ಮೊದಲಾದ ‘ಮನು’ವಿನಿಂದ ಆಡಳಿತಕ್ಕೊಳಪಟ್ಟ ರಾಜ್ಯವದು. ಮಹತ್ತರವಾದಂತಹ ರಾಜಮಾರ್ಗ, ಜಲಪುಷ್ಪಗಳಿಂದ ಅಲಂಕರಿಸಲ್ಪಟ್ಟ ರಾಜಮಾರ್ಗಗಳಿದ್ದವು. ಪ್ರಜೆಗಳ ಜೀವನವೂ ‘ಕುಸುಮಾಕಿರಣಭಾಗ್ಯ’ವೆಂಬಂತಿತ್ತು. “ಮಹಾ ರಾಷ್ಟ್ರ ವಿವರ್ಧನನಾದ ಧಶರಥ”(ರಾಜ ಧಶರಥನು) ಆಳುತ್ತಿದ್ದನು. ವ್ಯವಸ್ಥಿತವಾದ ಅಂಗಡಿಗಳಿಂದಲೂ,ಶಾಸ್ತ್ರಾಸ್ತ್ರಗಳಿಂದಲೂ, ಎತ್ತರಎತ್ತರವಾದಂತಹ ಮನೆಗಳಿಂದಲೂ, “ವಧು ನಾಟಕ ಸಂಘಯ್ಶ್ಚ” (ಸ್ತ್ರೀಯರ ಪ್ರಾಧಾನ್ಯತೆಯನ್ನೊಳಗೊಂಡ ರಾಜ್ಯವಾಗಿತ್ತು)

“ಸಹಬಾಳ್ವೆಯೇ ಸೃಷ್ಟಿಯ ನಿಯಮ” – ಶ್ರೀಸೂಕ್ತಿ

ಉದ್ಯಾನವನಗಳಿಂದಲೂ, ಸಾಮಂತರಾಜರ ಸಂಘಗಳಿಂದಲೂ, ರತ್ನಖಚಿತವಾದಂತಹ ಭವನಗಳಿಂದಲೂ, ಅಷ್ಟಾಪದಿ ಆಕೃತಿಯಿಂದಲೂ, ಉತ್ತಮವಾದಂತಹ ಅಕ್ಕಿಯಿಂದಲೂ, ಕಬ್ಬಿನಹಾಲನ್ನು ಹೋಲುವ ಸಿಹಿ ನೀರಿಂದಲೂ, ವಾದ್ಯಗಳ ವಾದನದಿಂದಲೂ, ನರೋತ್ತಮರಿಂದಲೂ ಕಂಗೊಳಿಸುತ್ತಿತ್ತು “ಅಯೋಧ್ಯೆ”.
ರಾಜ್ಯವು ಖುಷಿಯಿಂದ ಹಾಗೂ ಧರ್ಮದಿಂದ ಕೂಡಿತ್ತು. ತನ್ನ ಸ್ವತ್ತಿನಿಂದ ತುಂಬಾ ಸಂತುಷ್ಟರಾಗಿ, ತೃಪ್ತರಾಗಿದ್ದರು. ಬಡವರಾಗಲೀ, ಆಸೆ ಈಡೇರದವರಾಗಲೀ ಇರಲೇ ಇಲ್ಲ.
~~~~~~

“ಯುದ್ಧದಿಂದ ಗೆಲ್ಲಲಾಗದ್ದು ಅಯೋಧ್ಯೆ, ಅದು ಹೆಸರಿಗೆ ತಕ್ಕಂತೆಯೆ ಇತ್ತು” – ಶ್ರಿಸೂಕ್ತಿ

ಇದನ್ನು ಹೀಗೆಯೂ ಹೇಳಬಹುದು: ಅ~(ನಾರಾಯಣ)+ಯ(ಬ್ರಹ್ಮ)+ಉ(ರುದ್ರ)+ಧ್ಯಾ(ಸ್ಮರಣೆ).ತ್ರಿಮೂರ್ತಿಗಳು ಸ್ಮರಣೆ ಮಾಡುತ್ತಿದ್ದ ಕೇಂದ್ರವದು.ಅಷ್ಟಮಂತ್ರಿಗಳಿಂದಲೂ, ಮಹಾಪುರೋಹಿತ ದ್ವಯರಿಂದಲೂ ಕೂಡಿತ್ತು ಅಯೋಧ್ಯೆ.
ಎರಡು ಸರ್ಗಗಳು ರಾಜ್ಯದ ವರ್ಣನೆಯನ್ನು ಮಾಡುವುದರಿಂದ ಕೊನೆಗೊಳ್ಳುತ್ತದೆ.
ಇಷ್ಟೆಲ್ಲಾ ಇತ್ತು ಈ ರಾಜ್ಯದಲ್ಲಿ.

ಪ್ರವಚನವನ್ನು ಇಲ್ಲಿ ಕೇಳಿರಿ : Dhara~Ramayana-Day5

ಪ್ರವಚನವನ್ನು ನೋಡಲು :

Facebook Comments Box