ಅವಿಚ್ಛಿನ್ನ ಪರಂಪರೆ :

ಶ್ರೀಗುರುಪೀಠದ ಆಚಾರ್ಯ ಪರಂಪರೆಯು ಗುರುವಿನಿಂದ ಶಿಷ್ಯನಿಗೆ ದಿವ್ಯಸನ್ಯಾಸಮಂತ್ರೋಪದೇಶ ನೀಡುವುದರ ಮೂಲಕ ಭಿನ್ನವಾಗದೇ ಮುಂದುವರಿದು ಬರಬೇಕಾದುದು ನಿಯಮ.
ಅದರಂತೆ ಶ್ರೀಗುರುಗಳು ಸಮಾಧಿ ಹೊಂದುವ ಮುನ್ನ ತಮ್ಮ ಉತ್ತರಾಧಿಕಾರಿಯಾಗಿ ಶಿಷ್ಯನನ್ನು ಸ್ವೀಕರಿಸಿ ಮಂತ್ರೋಪದೇಶ ನೀಡಿ ಗುರುಪರಂಪರೆಯನ್ನು ಬೆಳೆಸುತ್ತಾರೆ.
ಶ್ರೀಗುರುಗಳು ಶಿಷ್ಯಸ್ವೀಕಾರವಾಗುವ ಮೊದಲೇ ಸಮಾಧಿ ಆದರೆ ಆ ಪೀಠದಲ್ಲಿ ಆದಿಗುರುಪರಂಪರೆಯ ಮಹಾಶಕ್ತಿ ಪ್ರವಾಹ ಕುಂಠಿತವಾಗುತ್ತದೆ. ಹೀಗೆ ಶ್ರೀಗುರುಪೀಠದಲ್ಲಿ ಗುರು-ಶಿಷ್ಯ ಪರಂಪರೆ ಕುಂಠಿತವಾಗದೇ ಮುಂದುವರಿದು ಸಾಗುವುದನ್ನು ಅವಿಚ್ಛಿನ್ನ ಪರಂಪರೆ ಎನ್ನುವುದಾಗಿದೆ.
ಶ್ರೀಮದ್ರಾಮಚಂದ್ರಾಪುರಮಠದ ಗುರುಪೀಠದ ಸಂಪ್ರದಾಯವು ಶ್ರೀ ಜಗದ್ಗುರು ಶಂಕರಭಗವತ್ಪಾದಾಚಾರ್ಯರಿಂದ ಪ್ರಾರಂಭಿಸಲ್ಪಟ್ಟು ಅಂದಿನಿಂದ ಇಂದಿನ ತನಕ ಕುಂಠಿತವಾಗದೇ ಸಾಗಿ ಬಂದಿದೆ ಎಂಬುದು ಇಲ್ಲಿ ಸ್ಮರಣೀಯ.

– ಆತ್ಮವಿದ್ಯಾ ಆಖ್ಯಾಯಿಕಾ
(ಪರಮಪೂಜ್ಯ ಪರಮಹಂಸಪರಿವ್ರಾಜಕಾಚಾರ್ಯ ಜಗದ್ಗುರು ಶ್ರೀಶಂಕರಾಚಾರ್ಯ ಶ್ರೀರಾಘವೇಂದ್ರಭಾರತೀಸ್ವಾಮೀನಾಂ ‘ಆತ್ಮವಿದ್ಯಾ ಆಖ್ಯಾಯಿಕಾ’)

~

Sri Guru Parampara

ವಿಶ್ವಕ್ಕೊಡೆಯ ಒಬ್ಬನೇ – ರಾಮ.
ವಿಶ್ವಕ್ಕೊಂದೇ ಅವಿಚ್ಛಿನ್ನ ಪರಂಪರೆ- ಶ್ರೀರಾಮಚಂದ್ರಾಪುರಮಠದ ಗುರುಪರಂಪರೆ.
ಮರ್ಯಾದಾಪುರುಷೋತ್ತಮನಾದ, ಆದರ್ಶ ರಾಜ್ಯಪಾಲನಾದ ಶ್ರೀರಾಮ ತನ್ನ ಪರಿವಾರದೊಡನೆ ಪೂಜೆಗೊಳ್ಳುತ್ತಿರುವುದು ನಮ್ಮ ಮಠದ ಶ್ರೀಗುರುಗಳ ಕರಗಳಲ್ಲಿ.
ಶ್ರೀಶಂಕರಾಚಾರ್ಯರಾದಿಯಾಗಿ ಪೀಠದಲ್ಲಿ ವಿರಾಜಮಾನರಾದ ಎಲ್ಲಾ ಗುರುಗಳು ಅಂದಿನಿಂದ ಇಂದಿನವರೆಗೂ ನಿತ್ಯವೂ ಪೂಜಿಸುತ್ತಿದ್ದಾರೆ.
ಶ್ರೀರಾಮಾನುಗ್ರಹದ ಈ ಗುರುಪೀಠದ ಎಲ್ಲಾ ಗುರುಗಳ ಹೆಸರುಗಳು ಸ್ತೋತ್ರರೂಪದಲ್ಲಿ ಈ ಕೆಳಗೆ ಕೊಟ್ಟಿದೆ.

~*~

ಶ್ರೀಮದ್ರಾಮಚಂದ್ರಾಪುರಮಠೀಯ ಗುರುಪರಂಪರಾ ಸ್ತೋತ್ರಮ್:

ಶ್ರೀಮಠದ ಗುರುಪರಂಪರಾ ಸ್ತೋತ್ರದ ಶಬ್ಧರೂಪದ ಮೂಲ –
ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರ ಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ  “ಶ್ರೀ ಗುರು ಭಾರತೀ”

ನಾರಾಯಣಂ ಪದ್ಮಭವಂ ವಸಿಷ್ಠಂ
ಶಕ್ತಿಂ ಚ ತತ್ಪುತ್ರಪರಾಶರಂ ಚ |
ವ್ಯಾಸಂ ಶುಕಂ ಗೌಡಪದಂ ಮಹಾಂತಂ
ಗೋವಿಂದಯೋಗೀಂದ್ರಮಥಾsಸ್ಯ ಶಿಷ್ಯಂ ||1||

ಶ್ರೀಶಂಕರಾಚಾರ್ಯಮಥಾsಸ್ಯ ಪದ್ಮ-
ಪಾದಂ ಚ ಹಸ್ತಾಮಲಕಂ ಚ ಶಿಷ್ಯಂ |
ತಂ ತ್ರೋಟಕಂ ವಾರ್ತಿಕಕಾರಮನ್ಯಾ-
ನಸ್ಮದ್ಗುರೂನ್ ಸಂತತಮಾನತೋsಸ್ಮಿ ||2||

ನಮಾಮ್ಯಸ್ಮದ್ಗುರುಂ ನಿತ್ಯಂ ಗೋವಿಂದಂ ಭಗವದ್ಗುರುಂ |
ಶಂಕರಾಚಾರ್ಯವರ್ಯಂ ಚ ಜಗದ್ವಿಖ್ಯಾತಸ್ವಾಮಿನಂ ||3||

ತಸ್ಯ ಶಿಷ್ಯಂ ಸುರಶ್ರೇಷ್ಠಂ ವಿದ್ಯಾನಂದಂ ಜಗದ್ಗುರುಂ |
ಚಿದ್ಬೋಧೇಂದ್ರಂ ಚ ಸದ್ರೂಪಂ ನಿತ್ಯಾನಂದಂ ಮಹಾಮುನಿಂ ||4||

ನಿತ್ಯಬೋಧಘನೇಂದ್ರಾಯ ಜಗದ್ವಿಖ್ಯಾತಮೂರ್ತಯೇ |
ಭಾರತೀಸಚ್ಚಿದಾನಂದತೀರ್ಥಾಯ ಗುರವೇ ನಮಃ ||5||

ಚಿದ್ಘನೇಂದ್ರಾಯ ಗುರವೇ ಸೀತಾರಾಮೇಂದುಮೂರ್ತಯೇ |
ಚಿದ್ಬೋಧಾಯ ಪ್ರಶಾಂತಾಯ ರಾಘವೇಶ್ವರಮೂರ್ತಯೇ ||6||

ರಾಮಚಂದ್ರಾಯ ಗುರವೇ ರಾಘವೇಶ್ವರಮೂರ್ತಯೇ |
ರಾಮಯೋಗೀಂದ್ರಗುರವೇ ನೃಸಿಂಹಾಯ ನಮೋ ನಮಃ ||7||

ಅನಂತೇಂದ್ರಾಯ ಶಾಂತಾಯ ರಾಮಭದ್ರಾಯ ಯೋಗಿನೇ |
ರಾಘವೇಶ್ವರದೇವಾಯ ಯತೀಂದ್ರಾಯ ನಮೋ ನಮಃ ||8||

ವಿದ್ಯಾಧನೇಂದ್ರಗುರವೇ ರಘುನಾಥಾಯ ತೇ ನಮಃ |
ರಾಮಚಂದ್ರಾಯ ಗುರವೇ ಸರ್ವವಿದ್ಯಾಸ್ವರೂಪಿಣೀ ||9||

ರಘೂತ್ತಮಾಯ ದೇವಾಯ ಪರಮೇಶ್ವರಮೂರ್ತಯೇ |
ರಾಘವೇಶ್ವರದೇವಾಯ ಭಾರತೀಪದಯೋಗಿನೇ ||10||

ರಘೂತ್ತಮಾಯ ದೇವಾಯ ಭಾರತೀಪದಯೋಗಿನೇ |
ಇಮ್ಮಡಿಪ್ರೌಢದೇವಾಯ ಶ್ರೀರಘೂತ್ತಮಮೂರ್ತಯೇ ||11||

ರಾಘವೇಶ್ವರದೇವಾಯ ಗುರವೇ ತೇ ನಮೋ ನಮಃ |
ಇಮ್ಮಡಿಪ್ರೌಢಗುರವೇ ರಾಘವೇಶ್ವರಮೂರ್ತಯೇ ||12||

ತಸ್ಯ ಶಿಷ್ಯಾಯ ದೇವಾಯ ರಾಮಚಂದ್ರಾಯ ತೇ ನಮಃ |
ತಸ್ಯ ಶಿಷ್ಯಾಯ ಗುರವೇ ರಾಘವೇಂದ್ರಾಯ ತೇ ನಮಃ ||13||

ಸರ್ವಶಾಸ್ತ್ರಪ್ರಬೋಧಾಯ ರಾಘವೇಶ್ವರಮೂರ್ತಯೇ |
ರಾಮಚಂದ್ರಾಯ ದೇವಾಯ ಗುರವೇ ತೇ ನಮೋ ನಮಃ ||14||

ತಪಸ್ವಿನೇ ಬ್ರಹ್ಮವಿದೇ ನಿಗಮಾಗಮಬೋಧಿನೇ |
ಗುರವೇ ರಾಘವೇಂದ್ರಾಯ ಮಹತೇ ಯೋಗಿನೇ ನಮಃ ||15||

~*~*~
Facebook Comments Box