ಅವನತಿಯ ಅಂಚಿನಲ್ಲಿ ಇರುವಂಥ ದೇಸಿ ಗೋತಳಿ ಸಂವರ್ಧನೆಗೆ ಕೃತ್ರಿಮ ಮಾರ್ಗ ಅನುಸರಿಸುವುದು ಸರಿಯಲ್ಲ. ಪ್ರಕೃತಿ ಸಹಜ ರೀತಿಯಲ್ಲಿ ಗೋ ತಳಿ ಸಂವರ್ಧನೆ ಆಗಬೇಕು. ಅಂತಹ ಗೋವಂಶ ವೃದ್ಧಿಗೆ ಸಹಜ ವಾತಾವರಣವನ್ನು ಒದಗಿಸುವ ಕೆಲಸವನ್ನು ಗೋಪ್ರೇಮಿಗಳು ಮಾಡಬೇಕು. ಈ ಕಾರ್ಯದಲ್ಲಿ ಗೋಪ್ರೇಮಿಗಳು ಮಾಡಬಹುದಾದುದೇನು? ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ವಿವರಿಸಿದ್ದಾರೆ ಈ ಸಲದ ಕೌ ಸ್ಟೋರಿಯಲ್ಲಿ…

ಪ್ರಕಟಣೆ ಕೃಪೆ: ಗೋವಾಣಿ e-ವಾರಪತ್ರಿಕೆ ( www.gouvaani.in )

ಕೃತ್ರಿಮ ತಳಿ ಸಂವರ್ಧನೆ ಬೇಡ

1. ಗೋಸಂವರ್ಧನೆಯಲ್ಲಿ ಸಾಮಾನ್ಯ ಮನುಷ್ಯನ ಪಾತ್ರವೇನು? ಉತ್ತಮ ತಳಿಗಳನ್ನ ಆಯ್ದು ಬೆಳಸಿದರೆ, ಸಶಕ್ತವಲ್ಲದ ತಳಿಗಳ ಬಗೆಗಿನ ಗಮನ ಕಡಿಮೆ ನೀಡುವಂತಾಗುವುದಿಲ್ಲವೇ?

ಗೋಸಂವರ್ಧನೆಯಲ್ಲಿ ಸಾಮಾನ್ಯ ಮನುಷ್ಯನ ಪಾತ್ರ, ಆತ ಗವ್ಯೋತ್ಪನ್ನಗಳನ್ನು ಬಳಸಬೇಕು. ಹಾಗೇ ಗೋವಧೆಯಿಂದ ಬರತಕ್ಕಂತಹ ಉತ್ಪನ್ನಗಳನ್ನು ಬಳಸಬಾರದು. ಇದು ಕನಿಷ್ಠ,ಯಾರು ಬೇಕಾದರೂ ಮಾಡಲು ಸಾಧ್ಯವಿರುವಂತಹದು. ಹಾಗೇ ತನ್ನದಾಗಿರತಕ್ಕಂತಹ ಕೊಡುಗೆಯನ್ನು, ಕಾಣಿಕೆಯನ್ನು ಗೋಶಾಲೆಗಳಿಗೆ ಗೋಪಾಲನೆ ಮಾಡತಕ್ಕಂತಹ ರೈತರಿಗೆ ಆತ ಕೊಡಲು ಸಾಧ್ಯವಿದೆ. ಒಂದು ಹೆಜ್ಜೆ ಮುಂದೆ ಹೋದರೆ ಅವನು ಗೋಪಾಲನೆ ಮಾಡಬಹುದು. ಗೋಪಾಲನೆ ಮಾಡುವುದು ಅವನಿಗೂ ತುಂಬಾ ಕ್ಷೇಮ. ಗೋವಿನ ಸಹವಾಸ ಅಥವಾ ನೇರ ಗೋಉತ್ಪನ್ನ ಬಳಕೆ. ಅವನ ಜೀವನವನ್ನು ಬಂಗಾರ ಮಾಡುವುದರಿಂದ ಅವನು ಸ್ವತಃ ಗೋಪಾಲನೆ ಮಾಡುವುದು ತುಂಬಾ ಶ್ರೇಯಸ್ಸು. ಅವನಿಗೂ ಕ್ಷೇಮ.

ಆಯ್ದ ಉತ್ತಮ ತಳಿಗಳನ್ನು ಬೆಳೆಸಿ ಎಂದು ಹೇಳಿದೆ ಹೊರತು. ಎಲ್ಲಿಯೂ ಉಳಿದ ಗೋವುಗಳನ್ನು ಬೆಳೆಸ್ಬೇಡಿ ಉಳಿಸ್ಬೇಡಿ ಅವುಗಳನ್ನು ಕೊಲ್ಲಿ ಅಂತ ಹೇಳಿಲ್ಲ. ನಾವು ಬೇರೇನೂ ಮಾಡಬೇಕಾಗಿಲ್ಲ. ನಾವು ಯಾವ ತಾರತಮ್ಯವನ್ನೂ ಮಾಡಬೇಕಾಗಿಲ್ಲ. ಆಯ್ದ ತಳಿಗಳನ್ನು ಪ್ರತ್ಯೇಕ ಇಟ್ಟರೆ ಸಾಕು ಅಷ್ಟೇ ಅಂತ. ಅವುಗಳ ಮೂಲಕ ವಂಶಾಭಿವೃದ್ಧಿಯನ್ನು ಮಾಡಿದರೆ ಸಾಕು ಅಷ್ಟೇ ಹೊರತು ಅಲ್ಲಿ ನಾವು ಆಯ್ದ ತಳಿಗಳಿಗೆ ಮಾತ್ರ ಆಹಾರ ಕೊಟ್ಟು ಉಳಿದವುಗಳಿಗೆ ಆಹಾರ ಕೊಡಬಾರದು ಅಂತ ಹಾಗೇನೂ ಇಲ್ಲವೇ ಇಲ್ಲ.
ಕ್ರಮೇಣ ಎಲ್ಲವೂ ಉತ್ತಮ ತಳಿಗಳೇ ಆಗಿ ಬಿಡುತ್ತವೆ. ಸ್ವಲ್ಪ ಸ್ವಲ್ಪ ಸಮಯ ಕಳಿತಾ ಇದ್ದ ಹಾಗೇ. ಎಲ್ಲವೂ ಉತ್ತಮ ತಳಿಗಳೇ ಆಗ್ತವೆ. ಈಗ ಉತ್ತಮ ತಳಿಗಳನ್ನು ಬೆಳೆಸುವುದು ಎಂದರೇನು. ಯಾವುದು ಉತ್ತಮವಾಗಿದೆ ಅಂದರೆ ಹೆಚ್ಚು ಹಾಲು ಕೊಡುವ ಗೋವಿನ ಕರುವಾಗಿರತಕ್ಕಂತಹ ನಂದಿ ಇರ್ತದೋ ಅದನ್ನು, ಕಡಿಮೆ ಹಾಲು ಕೊಡುವ ಗೋವಿಗೆ ವಂಶಾಭಿವೃದ್ಧಿ ಮಾಡಿಸುವಂತಹದ್ದು. ಅಲ್ಲಿಗೆ ಉತ್ತಮಲ್ಲದೇ ಇರತಕ್ಕಂತಹ ತಳಿಯನ್ನು ಉತ್ತಮ ತಳಿಯ ಮೂಲಕ ಅಭಿವೃದ್ಧಿ ಮಾಡಬೇಕು. ಅಲ್ಲಿಗೆ ಎಲ್ಲಿ ನಾವು ಉತ್ತಮವಲ್ಲದ ತಳಿಯನ್ನು ಉಪೇಕ್ಷೆ ಮಾಡಿದಂತಾಯಿತು. ಆ ಪ್ರಶ್ನೆಯೇ ಇಲ್ಲ.

2. ದೇಸಿ ತಳಿಗಳು ನಶಿಸಿ ಹೋಗುತ್ತಿರುವ ಈ ಕಾಲಘಟ್ಟದಲ್ಲಿ ಗೋಸಂವರ್ಧನೆಯು ಯಾವ ಪರಿಣಾಮಗಳನ್ನು ಬೀರಬಲ್ಲದು ?

ದೇಶೀ ತಳಿಗಳು ನಶಿಸಿ ಹೋಗುತ್ತಿರುವಂತ ಈ ಕಾಲ. ಈ ಸಂದರ್ಭದಲ್ಲಿ ಗೋಸಂವರ್ಧನೆ ಊಹಾತೀತ ಪರಿಣಾಮಗಳನ್ನು ಬೀರಬಲ್ಲದು. ಇಂದೊಂತರ ಸಂಕ್ರಮಣ ಕಾಲ. ಗೋವುಗಳು ಚೆನ್ನಾಗಿದ್ದಾಗ ನೀವು ಗೋಸಂವರ್ಧನೆ ಮಾಡಿದರೆ ದೊಡ್ಡ ವಿಷಯವೇನೂ ಇಲ್ಲ. ಸಹಜ ಅಷ್ಟೆ. ಆದರೆ ಈ ಕಾಲದಲ್ಲಿ ಮಾಡಿದಾಗ ದೊಡ್ಡ ಕೊಡುಗೆಯನ್ನು ಕೊಟ್ಟಂತೆ ಆಗತ್ತೆ. ನಾವು ಒಂದುವೇಳೆ ಗೋಸಂವರ್ಧನೆ ಮಾಡದೆ ಇದ್ದರೆ ಈ ಕಾಲದಲ್ಲಿ ಮಂದಿನ ಪೀಳಿಗೆಗೆ ಗೋವು ಇರುವುದೇ ಇಲ್ಲ. ಮಾಡಿದರೆ ಮುಂದಿನ ಪೀಳಿಗೆಗೆ ಗೋವು ಇರ್ತದೆ. ಅಷ್ಟು ದೊಡ್ಡ ಪರಿಣಾಮ ಇದೆ ಅಂತ, ಹಾಗೆ ಮಾಡದಿದ್ರೆ ನಮ್ಮ ಬದುಕು ಬರಡಾಗುತ್ತದೆ. ಮಾಡಿದರೆ ಬದುಕು ಬಂಗಾರ ಆಗ್ತದೆ. ಇಷ್ಟು ದೊಡ್ಡ ಪರಿಣಾಮ ಇದೆ.

3. ತಳಿ ಸಂವರ್ಧನೆ ವಿಚಾರದಲ್ಲಿ ಮಖ್ಯವಾಗಿ ಗಮನಿಸಬೇಕಾದ ವಿಚಾರಗಳೇನು? ಇದರಿಂದ ಗೋವಿಗೆ ಕೃತಕತೆಯ ಲೇಪವಾಗುವುದಿಲ್ಲವೇ?

ಕೃತಕತೆಯ ಪ್ರಶ್ನೆಯೇ ಬರೋದಿಲ್ಲ. ನಾವಿಲ್ಲಿ ತಳಿ ಸಂವರ್ಧನೆ ಮಾಡಬೇಕಾದರೆ ಯಂತ್ರಗಳನ್ನು ಬಳಸೋದಿಲ್ಲ. ಅಥವಾ ಕೃತಕ ವಿಧಾನಗಳನ್ನು ಬಳಸೋದಿಲ್ಲ. ಸಹಜವಾಗಿ ನಂದಿ ಸಹಜವಾಗಿರ್ತಕ್ಕಂತ ಗೋವಿನ ಮೂಲಕವಾಗಿ ಸಹಜವಾದ ವಂಶಾಭಿವೃದ್ಧಿಯನ್ನು ಮಾಡುತ್ತದೆ. ಅಲ್ಲಿ ಕೃತಕತೆಯ ಪ್ರಶ್ನೆ ಎಲ್ಲಿ ಬಂತು. ಇಲ್ಲವೇ ಇಲ್ಲ. ಅದೇ ಕೆಲವರು ಏನು ಹೇಳುತ್ತಾರೆ ಎಂದರೆ ಭಾರತೀಯ ತಳಿಗಳನ್ನೇ ಕೃತ್ರಿಮವಾಗಿ ಆರ್ಟಿಫಿಶಿಯಲ್ ಇನ್ಸಾಮಿನೇಶನ್ ಮೂಲಕವಾಗಿ ವಂಶಾಭಿವೃದ್ಧಿ ಮಾಡುತ್ತಾರೆ. ಅದನ್ನು ಕೂಡಾ ಖಂಡಿಸುತ್ತೇವೆ ನಾವು. ಯಾಕಂದರೆ ದೈವ ಸೃಷ್ಟಿಗೂ ಮನುಷ್ಯನ ಸೃಷ್ಟಿಗೂ ಅಂತರವಿದ್ದೇ ಇದೆ. ಹಾಗಾಗಿ ಮನುಷ್ಯ ಸೃಷ್ಟಿ ಮಾಡಿದರೆ ಅದು ಸಹಜವಾಗಿರಲು ಸಾಧ್ಯವೇ ಇಲ್ಲ. ಹಾಗಾಗಿ ಉತ್ತಮ ನಂದಿಯನ್ನು ಬಳಸಿ ಸಾಮಾನ್ಯ ಹಸುವಿನ ಮೂಲಕವಾಗಿ ಉತ್ತಮ ತಳಿ ತೆಗೆದುಕೊಳ್ಳಬೇಕು.

4. ತಳಿ ಸಂವರ್ಧನೆಯಲ್ಲಿ ಪಾರಂಪರಿಕ ವಿಧಾನಕ್ಕೆ ಒತ್ತು ಕೊಡಬೇಕೇ? ಅಥವಾ ಆಧುನಿಕ ವಿಧಾನಗಳನ್ನು ಬಳಸಬೇಕೇ ? 

ಯಾವುದೇ ಕಾರಣಕ್ಕೂ ಕೃತ್ರಿಮ ವಿಧಾನ ಬಳಸಬಾರದು. ಅದರಿಂದ ಕೃತ್ರಿಮ ಹಸುಗಳೇ ಹುಟ್ಟುತ್ತವೆ , ಮತ್ತೆ ಗೋವಿನ ಹಕ್ಕನ್ನ ನಾವು ಉಲ್ಲಂಘನೆ ಮಾಡಿದಂತೆ ಆಗ್ತದೆ. ಗೋವಿನ ಸಹಜತೆಗೆ ಭಂಗ ತಂದಂತೆ ಆಗ್ತದೆ. ಹಾಗಾಗಿ ಕೃತ್ರಿಮ ವಿಧಾನ ಬಳಸಕೂಡದು. ಸಹಜ ವಿಧಾನದಲ್ಲಿ ನಂದಿಯಿಂದ ಹಸುವಿನ ಗರ್ಭಧಾರಣೆ ನಡೆಯಬೇಕು.

5. ಗೋವನ್ನು ಸ್ವತಃ ಸಾಕಲಾಗದಿದ್ದಾಗ ಜನರು ತಳಿ ಸಂವರ್ಧನೆಯಲ್ಲಿ ವೈಯಕ್ತಿಕವಾಗಿ ಹೇಗೆ ಭಾಗಿಯಾಗಬಹುದು?

ಸ್ವತಃ ಗೋವನ್ನು ಪಾಲನೆ ಮಾಡ್ಲಿಕ್ಕೆ ಆಗದೇ ಇದ್ರೆ ಅವನು ಬೇರೆ ಬೇರೆ ರೀತಿಯಿಂದ ಗೋಸೇವೆಯನ್ನು ಮಾಡಬಹುದು. ನಾವು ಆಗಲೇ ಹೇಳಿದ ಹಾಗೆ ಗವ್ಯೋತ್ಪನ್ನಗಳನ್ನು ಬಳಸುವುದು. ಗೋವಧೆಜನ್ಯ ವಸ್ತುಗಳನ್ನು ತ್ಯಾಗ ಮಾಡುವುದು. ಹಾಗೆಯೇ ಹುಂಡಿ ಇಟ್ಟು ಹುಂಡಿ ಮೂಲಕ ಎಷ್ಟು ಸಾಧ್ಯವೋ ಅಷ್ಟು ದ್ರವ್ಯವನ್ನ ಗೋಶಾಲೆಗಳಿಗೆ ಕೊಡುವುದು. ಗೋವುಗಳನ್ನು ಸಾಕತಕ್ಕಂತ ರೈತನಿಗೆ ಕೊಡುವುದು. ಅಥವಾ ನೇರವಾಗಿ ಗೋವುಗಳನ್ನು ದತ್ತು ತೆಗೊಳ್ಳುವಂತದ್ದು ಈ ಯಾವುದಾದರೂ ರೂಪದಿಂದ ಅವನು ಸಹಾಯ ಮಾಡಬಹುದು. ಗೋಕಾರ್ಯವನ್ನು ಪ್ರಸಾರ ಮಾಡುವಂತದ್ದೂ ಇವೆಲ್ಲವೂ ಸಾಧ್ಯ. ಅವನು ಖರ್ಚು ಮಾಡಿಯೂ ಮಾಡಬಹುದು ಮಾಡದೆನೂ ಮಾಡಬಹುದು. ಬಡವನೂ ಮಾಡಬಹುದು ಶ್ರೀಮಂತನೂ ಮಾಡಬಹುದು. ವಿಫುಲವಾದ ಗೋಸೇವೆಯ ಅವಕಾಶಗಳು ಇದಾವೆ.

 

Read Gouvaani E-Magazine: www.gouvaani.in 

 

Facebook Comments Box