ಇಂದಿನ ಮಾತು : ‘ನೀನು ಕೇಳಿದ್ದನ್ನು ಕೊಡುವೆ!’ ನಾಳೆಯ ಮಾತು :‘ನಾನು ಹಾಗೆ ಹೇಳಿಯೇ ಇಲ್ಲ!’ ಸಾಮಾನ್ಯ ಪ್ರಜೆಯು ಹೀಗೆ ಮಾಡಿದರೆ ಅವನ ಬದುಕು ಬರಡಾದೀತು; ನಾಡೇ ಮನೆಯಾದ ದೊರೆಯ ನುಡಿಯು ಎರಡಾದರೆ ನಾಡಿಗೆ ನಾಡೇ ಬರಡಾದೀತು! ಅಂಗರಾಜ್ಯದ ದೊರೆ ರೋಮಪಾದನಿಗೆ ಇದು ಅರ್ಥವಾಗುವಾಗ ಅನರ್ಥವಾಗಿತ್ತು! ತಪಸ್ವೀ ವಿಪ್ರನೋರ್ವನಿಗೆ ಕೇಳಿದ್ದನ್ನು ಕೊಡುವೆನೆಂದು ನುಡಿದ ಅಂಗರಾಜ, ಕೇಳಿದಾಗ… Continue Reading →
Dasharatha’s plight is like someone who searched his necklace all over the place only to realize that it was always sitting in his neck! In his quest for a son he searched for a solution all over the universe, but… Continue Reading →
ನಮಸ್ತೇ ಶಾರದಾ ದೇವಿ ಕಾಶ್ಮೀರಪುರವಾಸಿನಿ | ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾದಾನಂ ಚ ದೇಹಿ ಮೇ || ಕಾಶ್ಮೀರವೆಲ್ಲಿ? ಕರ್ನಾಟಕವೆಲ್ಲಿ? ಆದರೆ ಕಾಶ್ಮೀರಪುರವಾಸಿನಿಯಾದ ಶಾರದಾ ದೇವಿಯನ್ನು ಅಭಿನಮಿಸುವ ಈ ಶ್ಲೋಕವನ್ನು ಬಾಲ್ಯದಲ್ಲಿ ನಾವು ಕರ್ನಾಟಕದ ಯಾವುದೋ ಮೂಲೆಯಲ್ಲಿರುವ ಒಂದು ಪುಟ್ಟ ಹಳ್ಳಿಯಲ್ಲಿ ಕುಳಿತು ನಿತ್ಯ ಪಠಿಸುತ್ತಿದ್ದೆವು! ನಾವೆಂದರೇನು, ಪ್ರತಿಯೊಬ್ಬ ಸನಾತನ ಭಾರತೀಯನೂ ಈ ಶ್ಲೋಕವನ್ನು ಪಠಿಸಿದವನೇ!… Continue Reading →
Once married, wife cannot be changed for life in the same way one cannot change his mother once born! This is Dharma! This is custom! This is bonding of hearts! If this becomes bonding by law too, life can become ‘advaita’, the philosophy of nonduality!
Nonduality of jiva (being) and deva (God) is mukti (liberation); nonduality of a being and another being is life!
ಸೂರ್ಯನ ಬೆಳಕಿನಲ್ಲಿ ಯಾರಿಗೆಲ್ಲ ಹಕ್ಕಿದೆಯೋ, ನೀರಿನ ತಂಪಿನಲ್ಲಿ ಯಾರಿಗೆಲ್ಲ ಹಕ್ಕಿದೆಯೋ, ಭೂಮಿಯ ಬದುಕಿನಲ್ಲಿ ಯಾರಿಗೆಲ್ಲ ಹಕ್ಕಿದೆಯೋ ಅವರೆಲ್ಲರಿಗೂ ಸನಾತನ ಸಂಸ್ಕೃತಿಯಲ್ಲಿ ಹಕ್ಕಿದೆ. ಉದಾಹರಣೆಯಾಗಿ ಬಂದವಳು ಭಾರತೀಯರೆಲ್ಲರ ಭಗಿನಿ ನಿವೇದಿತಾ!
“ಒಡಹುಟ್ಟಿದ ಅಣ್ಣನಾದರೇನು, ಧರ್ಮದ್ರೋಹಿಯಾದ ಮೇಲೆ ಅವನು ಶತ್ರುವೇ; ಶತ್ರುವಾಗಿ ದೇಶವನ್ನು ಮುತ್ತಿದರೇನು, ಧರ್ಮಾತ್ಮನಾದ ರಾಮನು ಜೀವಬಂಧುವೇ” ಎಂದ ವಿಭೀಷಣನ ಕಣ್ಣಲ್ಲಿ ನೋಡಿದರೆ ನಿಜಕ್ಕೂ ನಿವೇದಿತೆ ಭಗಿನಿಯೆನಿಸುತ್ತಾಳೆ!! ಮುಂದೆ ಓದಿ >>
ಜೀವರಾಶಿಗಳ ಒಡಲು ತಂಪಾಗಿ, ಲೋಕವು ತೃಪ್ತಿಯಲ್ಲಿ ನಕ್ಕು ನಲಿಯುವುದೊ, ಅವರೇ ಕ್ಷಾಮ ನೀಗಿ, ಕ್ಷೇಮ ನೀಡುವ ತಂಪಿನ ಸಂತ ಋಷ್ಯಶೃಂಗರು! ವಿಭಾಂಡಕ ಮಹಾಮುನಿಯ ಸುಪುತ್ರ. ನಿನ್ನ ಮಿತ್ರನಾದ ಅಂಗರಾಜ ರೋಮಪಾದನ ಜಾಮಾತಾ. ಅಂಗರಾಜನ ಸುತೆಗೆ ವರನಾದವರು. ಅಷ್ಟೇ ಅಲ್ಲ, ಬಹುಕಾಲದ ಬರ ನೀಗಿ ಅಂಗರಾಜ್ಯಕ್ಕೇ ವರವಾದವರು! ದೊರೆಯೇ, ನಿನ್ನ ಬದುಕಿನ ಬರ ನೀಗಿ ಸಂತಾನದ ವರವು ಬರಬೇಕಾದರೆ ಅಯೋಧ್ಯೆಗೆ ಋಷ್ಯಶೃಂಗರು ಬರಬೇಕು.”
ಒಳ್ಳೆಯತನಕ್ಕೇ ನೇರ ವಿರುದ್ಧವಾದುದು ಬ್ಲೂವೇಲ್ ಗೇಮ್. ಕೆಡುಕು ಮಾಡದಿರುವುದು ಒಳ್ಳೆಯತನ. ಒಳಿತು ಮಾಡುವುದು ಒಳ್ಳೆಯತನ. ಅದರಲ್ಲಿಯೂ ದುರ್ಬಲರಿಗೆ, ದುಃಖಿತರಿಗೆ ಒಳಿತು ಮಾಡುವುದು ಒಳ್ಳೆಯತನದಲ್ಲಿಯೂ ಒಳ್ಳೆಯತನ. ದುರ್ಬಲರು, ದುಃಖಿತರನ್ನು ಹುಡುಕಿ ಹುಡುಕಿ, ಮತ್ತಷ್ಟು ಹಿಂಸಿಸಿ ಕೊಲ್ಲೆನ್ನುವುದು ಕೆಟ್ಟತನದಲ್ಲಿಯೂ ಕೆಟ್ಟತನವಲ್ಲವೇ!?
ದುರ್ಬಲಮಾನಸರು, ಬದುಕಿನಲ್ಲಿ ಎಲ್ಲಿಯೋ ಸೋತವರು ಬುಡೆಕಿನ್ ತಿಳಿದಂತೆ ನಿಷ್ಪ್ರಯೋಜಕರಲ್ಲ, ಜೀವಂತ ಕಸವಲ್ಲ. ಅವರೊಳಗೆ ಹುದುಗಿ ಮರೆಯಾಗಿರುವ ಶಕ್ತಿಯನ್ನು ಗುರುತಿಸಿ, ಅರಳಿಸಬಲ್ಲ ಯೋಜಕನೋರ್ವ ದೊರೆತರೆ ಅವರೂ ಸಮಾಜಕ್ಕೆ ಮಹೋಪಯೋಗಿಗಳೇ ಆಗಬಹುದು. ಈ ಕುರಿತು ಅಭಿಯುಕ್ತರ ಉಕ್ತಿಯನ್ನು ಗಮನಿಸಿ. ಮುಂದೆ ಓದಿ >>