ಹರೇ ರಾಮ ವಿಶ್ವದ ವಿರಾಟ್ ಪುರುಷ, ನಮ್ಮ ದೇಹದಲ್ಲಿ ಸ್ವರಾಟ್ ಪುರುಷನಾಗಿ ವಿಹರಿಸುವ ರಾಮ… ಇತ್ತ ದೇವರುಗಳು, ಅತ್ತ ಜೀವರುಗಳು… ಇತ್ತ ಪರಮಾತ್ಮ, ಅತ್ತ ಸಂಸಾರ… ಮಧ್ಯೆ ನಾವು..! ನಿನ್ನೆಬೆಳಗ್ಗೆ ನಡೆದದ್ದು ೯೯೯೯ ನೆಯ ಪೂಜೆ. ಅದರಲ್ಲಿನ ಅಂಕೆಗಳನ್ನು ಕೂಡಿದರೆ ೩೬ ಬರುವುದು. ನಾವು ಮೂವತ್ತಾರನೆಯ ಪೀಠಾಧಿಪತಿಗಳು…! ಹಾಗೆಯೇ ನಾವು ೯ನೆಯ ರಾಘವೇಶ್ವರರು…! ಈ ಎರಡು… Continue Reading →
Isn’t it amazing that George Carlin – comedian of the 70’s and 80’s – could write something so very eloquent…and so very appropriate. A Message by George Carlin: The paradox of our time in history is that we have taller… Continue Reading →
ಕಣ್ಣು- ಕಿವಿಗಳಿಗೆ ಆರಂಗುಲವೇ ಅಂತರ.. ಆದರೆ ಕಾರ್ಯವಿಧಾನದಲ್ಲಿ ಮಹದಂತರ..! ಕಣ್ಣುಗಳು ಸಮಕಾಲದಲ್ಲಿ ನಮ್ಮೆದುರು ನಡೆಯುತ್ತಿರುವುದನ್ನು ಮಾತ್ರವೇ ಕಾಣಬಲ್ಲವು.. ಕಿವಿಗಳು ?? ಎಂದೋ , ಎಲ್ಲಿಯೋ ನಡೆದದ್ದನ್ನು ಮತ್ತೆಂದೋ, ಮತ್ತೆಲ್ಲಿಯೋ ಕಾಣಬಲ್ಲವು !! ಮುಂದೆಂದೋ ನಡೆಯುವುದನ್ನು ಇಂದೇ ನೋಡಬಲ್ಲವು !! ಕಣ್ಣಿಗೆ ಒಂದು ಘಂಟೆಯ ಘಟನೆಯನ್ನು ಕಾಣಲು ಒಂದು ಘಂಟೆಯೇ ಬೇಕು.. ಕಿವಿಗೆ ಒಂದು ಜೀವನವಿಡೀ ನಡೆದ… Continue Reading →
||ಹರೇ ರಾಮ||
ರಾಜನೆಂದರೆ ರಾಜ್ಯದ ಆತ್ಮ..
ಮಂತ್ರಿಯೆಂದರೆ ರಾಜ್ಯದ ಬುದ್ಧಿ..
ಯಾವುದರ ಪರಿವೆ ಇಲ್ಲದೆಯೂ ಆತ್ಮವು ಇರಬಹುದು…ಆದರೆ ಬುದ್ಧಿಯು ಸದಾ ಎಚ್ಚರವಾಗಿರಲೇಬೇಕು…ಶರೀರದ, ಮನಸ್ಸಿನ,ಇಂದ್ರಿಯಗಳ,ಹೆಚ್ಚೇಕೆ ಬದುಕಿನ ಸಮಸ್ತ ಆಗು-ಹೋಗುಗಳನ್ನು ಗಮನಿಸುವ-ನಿಯಂತ್ರಿಸುವ ಹೊಣೆಗಾರಿಕೆ ಅದರದ್ದೇ ಅಲ್ಲವೇ..?
ಮನನವೆಂದರೆ ಅರಿಯುವುದು..
ತ್ರಾಣವೆಂದರೆ ಪೊರೆಯುವುದು…
ಮನನ-ತ್ರಾಣಗಳೆರಡೂ ಹುದುಗಿವೆ ಮಂತ್ರದಲ್ಲಿ..
ಮಂತ್ರವುಳ್ಳವನು ಮಂತ್ರಿಯೆಂದಾದಮೇಲೆ ಆತನಿಗೆ ಎರಡೇ ಮುಖ್ಯಕಾರ್ಯಗಳು..
ಅರಿಯುವುದು ಮತ್ತು ಪೊರೆಯುವುದು…
ಎಲ್ಲವನ್ನೂ ಅರಿಯುವ, ತನ್ಮೂಲಕ ಎಲ್ಲರನ್ನೂ ಪೊರೆಯುವ ಕರ್ತವ್ಯವವನದ್ದು..
ಅರಿವು ಪೊರೆಯುವಂತೆ ಮತ್ಯಾವುದು ತಾನೇ ಪೊರೆಯಲು ಸಾಧ್ಯ..?