ಶ್ರೀ ರಾಘವಂ ದಶರಥಾತ್ಮಜಂ ಅಪ್ರಮೇಯಂ | ಸೀತಾಪತಿಂ ರಘುಕುಲಾನ್ವಯ ರತ್ನದೀಪಂ ಆಜಾನುಬಾಹುಂ ಅರವಿಂದದಲಾಯತಾಕ್ಷಂ ರಾಮಂ ನಿಶಾಚರ ವಿನಾಶಕರಂ ನಮಾಮಿ || ಪೂಜ್ಯ ಶ್ರೀಗುರುಗಳ ಚರಣಾರವಿಂದಗಳಿಗೆ ಪ್ರಣಾಮಗಳು ಶ್ರೀಗುರುಗಳ ಅಂತರ್ಜಾಲ ತಾಣದ ಸಮ್ಮುಖ ಅಂಕಣದಲ್ಲಿ ಪ್ರತಿಯೊಬ್ಬ ಕಾರ್ಯಕರ್ತನೂ ಬರೆಯಬೇಕು. . . . ಆ ರೀತಿಯಿಂದ ಶ್ರೀಗುರುಗಳ ಸಮ್ಮುಖಕ್ಕೆ ಪ್ರತಿಯೊಬ್ಬನೂ ಬರಬೇಕು. . . . ಇದು… Continue Reading →
ಪರಮ ಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರನ್ನು ನಾನು ಮೊದಲಿಗೆ ನೋಡಿದ್ದು ಅವರ ಸಂನ್ಯಾಸಗ್ರಹಣದ ದಿನ ಬೆಂಗಳೂರಿನ ಗಿರಿನಗರದಲ್ಲಿ. ನಾನಾಗ ಮುಂಬೈಯಲ್ಲಿ ಉದ್ಯೋಗದಲ್ಲಿದ್ದೆ. ಬೆಂಗಳೂರಿಗೆ ಅಂದು ಬಂದಿದ್ದೆ. ಗಿರಿನಗರದ ಶಾಖಾಮಠದಲ್ಲಿ ಅಂದು ವಿಶೇಷ ಕಾರ್ಯಕ್ರಮಿರುವ ವಿಚಾರ ತಿಳಿದು ಸ್ವಲ್ಪ ಹೊತ್ತಿಗೆ ಅಲ್ಲಿಗೆ ಬಂದು ದೂರದಿಂದಲೇ ಅವರನ್ನು ನೋಡಿ, ಮನದಲ್ಲೇ ವಂದಿಸಿ, ಹಿಂತಿರುಗಿದ್ದೆ (ಬಹುಷಃ ಅಂದೇ ಮುಂಬೈಗೆ… Continue Reading →
ಹರೇ ರಾಮ………. ನಮಗೆ ಗುರುಗಳಿದ್ದಾರೆ, ನಮಗೆ ಗುರುಮಠವಿದೆ ಎಂಬ ಮಾತನ್ನು ಎಳೆವೆಯಲ್ಲಿದ್ದಾಗಲೇ ನನಗೆ ಕೇಳಿಸಿಕೊಂಡ ನೆನಪಿದೆ. ನನ್ನ ತವರು ಮನೆಯವರು ಗ್ರಾಮ ಗುರಿಕ್ಕಾರರ ಜವಾಬ್ದಾರಿಯುಳ್ಳವರಾಗಿದ್ದರು. ಅವರು ವರ್ಷಕ್ಕೊಂದು ಬಾರಿ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರಾಜೆಯ ಮಾಣಿ ಮಠಕ್ಕೆ ಹೋಗಿ ಬರುತ್ತಿದ್ದರು. ಈ ನೆಪದಲ್ಲಿ ಒಂದೆರಡು ಸಾರಿ ನಾನು ಮಾಣಿ ಮಠಕ್ಕೆ ಹಿರಿಯರ ಸಂಗಡ ಹೋಗಿದ್ದೆ…. Continue Reading →
ಯಾವ ಮಹಾಮಹಿಮನ ಕೃಪೆಯು ನನ್ನ ಬದುಕಿನ ಎಲ್ಲ ಅಂಗಗಳಲ್ಲಿ ವ್ಯಾಪಿಸಿದೆಯೋ, ಯಾವ ಮಮತಾಮಯಿಯ ಕರುಣೆಯು ವಿಧಿಯಾಟದ ಸುಳಿಯಲ್ಲಿ ಕಳೆದು ಹೋಗುತ್ತಿದ್ದ ಬದುಕನ್ನು ಮೇಲೆತ್ತಿ, ಉದಾತ್ತವಾದುದನ್ನು ಕಿಂಚಿತ್ತಾದರೂ ಅರ್ಥೈಸಿಕೊಳ್ಳಲು ನನ್ನನ್ನು ಪ್ರೇರಿಸಿದೆಯೋ,ಅಂತಹ ಮಹಾತ್ಮನ ಕುರಿತಾಗಿ ನನ್ನ ಕೆಲವು ಭಾವನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತಿದ್ದೇನೆ. ಕುರುಡನು ಆನೆಯ ಬಗ್ಗೆ ವರ್ಣಿಸ ಹೊರಟಂತೆ ನಾನೆಷ್ಟೇ ಹೇಳಿದರೂ ಅದು ಆ ವಿರಾಟ್ ವ್ಯಕ್ತಿತ್ವದ ಕಿಂಚಿನ್ಮಾತ್ರವನ್ನೂ ಹೇಳಿದಂತಾಗದೆಂದು ನನಗೆ… Continue Reading →
ನಮ್ಮ ತಂದೆಯವರು ತುಂಬಾ ಬಡತನದಿಂದ ಜೀವನ ಸಾಗಿಸುತ್ತಿದ್ದರು. ಅಮ್ಮನ ಅಕ್ಕನ ಗಂಡ ಆಗಿರುವ ದಿ. ಬಲೇಗಲ್ಲ್ ಚಿದಂಬರಯ್ಯನವರು ನಮ್ಮ ತಂದೆಯವರನ್ನು ಶ್ರೀಮಠದ ಅಂದಿನ ವ್ಯವಸ್ಥಾಪಕರಾದ ಶ್ರೀ ಎ. ಎಸ್. ರಾಮಪ್ಪನವರ ಮುಖಾಂತರ ಜಗದ್ಗುರು ಶಂಕಾರಾಚಾರ್ಯ ಶ್ರೀಮದ್ ರಾಘವೇಂದ್ರಭಾರತೀ ಮಹಾಸ್ವಾಮಿಗಳ ಅಪ್ಪಣೆ ಪಡೆದು ಶ್ರೀರಾಮಚಂದ್ರಾಪುರಮಠಕ್ಕೆ ಕರೆತಂದು ಬಿಟ್ಟರು. ತೀರ್ಥರೂಪರು ಹೊಸನಗರದ ಶ್ರೀರಾಮಚಂದ್ರಾಪುರಮಠದಲ್ಲಿ 1981 ರಿಂದ 1997 ಮೇ… Continue Reading →
ಓಂ ಶ್ರೀ ಗುರುಭ್ಯೋ ನಮಃ ಹರಿಃ ಓಂ. ಶ್ರೀ ಮಹಾ ಗಣಪತಿಯು ಕೋಟಿ ಸೂರ್ಯರ ಪ್ರಭೆ ಹೊಂದಿದ್ದಾನಂತೆ. ೧೨ ಜನ ಸೂರ್ಯರಲ್ಲಿ ತಾನು ವಿಷ್ಣು ಎಂದು ಶ್ರೀಮನ್ನಾರಾಯಣನೇ ಹೇಳಿಕೊಂಡಿದ್ದಾನೆ. ವಿಶ್ವಾದಿ ಮೂಲನಾದ ಆ ಮಾಯಾಲೋಲ ವಿಷ್ಣು ಎಂಬ ವಿಚಿತ್ರಕೆ ನಮಿಸಲು ಡಿ.ವಿ. ಗುಂಡಪ್ಪನವರ ಆದೇಶ. ಸೂರ್ಯನನ್ನು ಬಚ್ಚಿಡವುದಕ್ಕಾಗಲೀ, ಮುಚ್ಚಿಡುವುದಕ್ಕಾಗಲೀ ಅಥವಾ ಯಾವುದೇ ರೀತಿಯಿಂದ ಮರೆ ಮಾಚುವುದಕ್ಕಾಗಲೀ… Continue Reading →
ರಾಮಚಂದ್ರಾಪುರ ಮಠ ಅಥವಾ ಗುರುಗಳು ಎಂದರೆ ನನಗೆ ಮೊದಲು ನೆನಪಾಗುವುದು ಏನು? ಪೀಠಾರೋಹಣ ಸಮಾರಂಭದಲ್ಲಿ ಮೆರವಣಿಗೆಯಲ್ಲಿ ಕೆಂಪು ಮಡಿ ಹೊದ್ದು ಪುಟ್ಟ ದೇವರ ಮೂರ್ತಿಯಂತೆ ಕೂತಿದ್ದ, ‘ಅದೇ, ಅವ್ರೇ ಹೊಸಾ ಗುರುಗಳು’ ಅಂತ ಅಪ್ಪ ತೋರಿಸಿದ್ದ ಚಿತ್ರ? ಊರ ರಸ್ತೆಯಲ್ಲಿ ಧೂಳೆಬ್ಬಿಸುತ್ತ ಬಂದ ಹತ್ತಾರು ಕಾರುಗಳಲ್ಲೊಂದರಲ್ಲಿ ಕೂತಿದ್ದು, ನಮ್ಮನೆ ಎದುರಿಗೆ ನಿಂತಾಗ ಅಪ್ಪ ಹಿಡಿದು ನಿಂತಿದ್ದ… Continue Reading →
೧೯೯೯ ರಲ್ಲಿ ಪ್ರಥಮವಾಗಿ ನಾನು ನನ್ನ ಶ್ರೀಮತಿಯವರೊಡನೆ ಪೂಜ್ಯರನ್ನು ಕಾಣಲು ಗಿರಿನಗರ ಮಠಕ್ಕೆ ಬಂದಿದ್ದೆನು. ಆಗಿನ್ನೂ ಪೂಜ್ಯರು ಶ್ರೀಮಠದ ಉಸ್ತುವಾರಿಯನ್ನು ವಹಿಸಿಕೊಂಡು ಸ್ವಲ್ಪವೇ ದಿನ ಕಳೆದಿದ್ದು, ಪೂಜ್ಯರೊಡನೆ ಸುಮಾರು ಅರ್ಧ ಗಂಟೆಗೂ ಹೆಚ್ಚುಕಾಲ ಬೇರೆ ಬೇರೆ ವಿಚಾರಗಳ ಬಗ್ಗೆ ಚರ್ಚಿಸುತ್ತಿದ್ದಾಗ ನಾನು ಪೂಜ್ಯರಲ್ಲಿ ಒಂದು ವಿನಂತಿಯನ್ನು ಮಾಡಿಕೊಂಡೆ, ‘ತಾವು ಯಾರನ್ನೂ ಅತಿ ಸಮೀಪಕ್ಕೆ ಸೇರಿಸಬಾರದು’ ಎಂದು,… Continue Reading →
ಮಾತೃ ಸ್ವರೂಪಿಗೆ ಮನದ ನಮನಗಳು… ಮಾತೃ ಸ್ವರೂಪಿ ಶ್ರೀ ಗುರುಗಳ ಚರಣ ಕಮಲಗಳಲ್ಲಿ ಮನಸಾ ನಮನಗಳು. ಹರೇರಾಮದ ಸಮ್ಮುಖದಲ್ಲಿ, ಸಂಸ್ಥಾನದ ಸಮ್ಮುಖದಲ್ಲಿ, ಓದುವ ಸಮಸ್ತ ಬಾಂಧವರಿಗೆ ನನ್ನ ಪ್ರಣಾಮಗಳು. ಇಲ್ಲಿ ಬರೆಯಲು ಸಿಗುತ್ತಿರುವುದು ನನ್ನ ಪೂರ್ವಜನ್ಮ ಸುಕೃತ ಎಂದು ನಾನು ತಿಳಿದಿದ್ದೇನೆ. ಇದು ನನ್ನ ಮನದ ನಮನಗಳು… ದಾರಿ ತೋರಿದ, ದಾರಿ ತೋರುತ್ತಿರುವ, ಸದಾ ಅನುಗ್ರಹಿಸುತ್ತಿರುವ… Continue Reading →
ಶ್ರೀ ಆರ್. ಎಸ್. ಅಗರವಾಲ್ ಇಮಾಮಿ ಲಿಮಿಟೆಡ್ ಅಧ್ಯಕ್ಷರು ಅಲೌಕಿಕ ಶಕ್ತಿಯೊಂದನ್ನು ವರ್ಣಿಸುವುದಾಗಲೀ, ಆ ಶಕ್ತಿಸ್ವರೂಪವನ್ನು ಶಬ್ದಗಳಲ್ಲಿ ಕಟ್ಟುವುದಾಗಲೀ ಸರಳವಲ್ಲ. ಅವರ ಸಾಮೀಪ್ಯದಲ್ಲಿ ಕುಳಿತು ನಾವೇನನ್ನು ಪಡೆದಿದ್ದೇವೆ ಎನ್ನುವುದು ವರ್ಣನೆಗೆ ಮೀರಿದ ಸಂಗತಿ. ಅವರ ರೋಮ ರೊಮಗಳಲ್ಲಿ ಜ್ಞಾನ, ಶಾಂತಿ, ಶಕ್ತಿ, ಪ್ರಕಾಶಗಳು ತುಂಬಿದೆಯೆಂದರೆ; ಅವರಿಂದ ಆನಂದದ ಪ್ರವಾಹವೇ ಹರಿದು ಬರುತ್ತದೆಯೆಂದರೆ; ಆ ಆನಂದ ನಿಮ್ಮನ್ನು… Continue Reading →