ಮಾಣಿ ಮಠ, ದ.ಕ: 01-ಜನವರಿ-2015:
ಮಾಣಿ ಶಾಖಾ ಮಠದಲ್ಲಿ ಗುರುವಾರ ಸಂಜೆ ಶಿಷ್ಯಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿದ ಶ್ರೀ ಶ್ರೀ ರಾಘವೇಶ್ವರಶ್ರೀಗಳು, ಪೂರ್ವಕ್ಕೆ ಹೋಗಬೇಕಾದರೆ ಪಶ್ಚಿಮವನ್ನು ಒದೆಯಬೇಕಾಗಿಲ್ಲ – ಸೀದಾ ಪೂರ್ವಕ್ಕೆ ಹೋದರಾಯಿತು. ಹೀಗಿರುವಾಗ ಸದಾ ಒಳ್ಳೆಯದನ್ನೇ ಚಿಂತಿಸುತ್ತಾ ನಾವು ಸಾಗಬೇಕು. ಯಾರನ್ನೋ ತುಳಿದು ಮುಂದೆ ಸಾಗಬೇಕಾಗಿಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಸಾಗರ, ಕರ್ನಾಟಕ: ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆದ ಗುರು-ಭಕ್ತ ಸಮಾವೇಶದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಶ್ರೀ ಗುರುಗಳ ಹಾಗೂ ಶ್ರೀಮಠದ ಅಭಿಮಾನಿಗಳು, ಗುರುಭಕ್ತರು ಹಾಗೂ ಹಿಂದೂ ಸಮಾಜದ ರಕ್ಷಕರು ಭಾಗವಹಿಸಿ ಇಂದಿನ ದಿನ ಶ್ರೀಮಠದ ಮೇಲೆ ನಡೆಯುತ್ತಿರುವ ಷಡ್ಯಂತ್ರದ ವಿರುದ್ಧ ಹೋರಾಡಿ ಸಮಾಜವನ್ನು ರಕ್ಷಿಸುವ ಸಂಕಲ್ಪವನ್ನು ಕೈಗೊಂಡರು.
ಯುವ ಚಿಂತಕ, ಭಾಷಣಕಾರ ಶ್ರೀ ಚಕ್ರವರ್ತಿ ಸೂಲಿಬೆಲೆಯವರ ವಿದ್ಯುದಾವೇಶಪೂರಿತ ಭಾಷಣ ನೆರೆದ ಸಭೆಯನ್ನು ಉತ್ತೇಜಿಸಿತು.
ನಿನ್ನೆ ಕೆಕ್ಕಾರಿನ ರಘೂತ್ತಮ ಮಠದಲ್ಲಿ ಇನ್ನೊಮ್ಮೆ ಚಾತುರ್ಮಾಸದ ಕಳೆ. ಗುರುವಿನ ಭರವಸೆಯ ನುಡಿಗಳಿಗಾಗಿ ನಗುಮೊಗದ ದರುಶನಕಾಗಿ ಪ್ರಭು ಶ್ರೀರಾಮನಿಗಾಗಿ.. ಮಾಸದ್ವಯಗಳಿಂದ ಪ್ರತೀಕ್ಷೆಯಲ್ಲಿದ್ದ ಶಿಷ್ಯ ಭಕ್ತರ ಭಾವಗಳಿಗೊಂದು ಸ್ಪಂದನ ದೊರೆಯಿತು..ಸದಾ ಗುರು ಚರಣಗಳಿಗರ್ಪಿತವಾದ ಸುಮನಗಳ ಸಮ್ಮಿಳನವಾಯಿತು.. ಅಷ್ಟಕ್ಕೂ ಕೆಕ್ಕಾರಿನಲ್ಲಿ ಯಾವುದೇ ವಿಶೇಷ ಕಾರ್ಯಕ್ರಮವಿರಲಿಲ್ಲ..ಎಂದಿನಂತೆ ಗುರುಗಳ ಆಶೀರ್ವಚನ ಮಂತ್ರಾಕ್ಷತೆಯ ಕಾರ್ಯಕ್ರಮವಿದ್ದಿದ್ದು..ಗುರುಗಳು ಬರುತ್ತಾರೆಂಬ ಆಮಂತ್ರಣವನ್ನು ಯಾರಿಗೂ ನೀಡಿರಲಿಲ್ಲ… ಆದರೆ ಗುರುವಿನ… Continue Reading →
ಬೆಂಗಳೂರು ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರಮಠದ ಶಾಖೆ ಶ್ರೀ ರಾಮಾಶ್ರಮದಲ್ಲಿ ಇಂದು ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ೨೦೧೫ರ ಪಂಚಾಂಗ ಸಹಿತ ದಿನದರ್ಶಿಕೆಯನ್ನು (ಕ್ಯಾಲೆಂಡರ್) ಲೋಕಾರ್ಪಣೆಗೊಳಿಸಿದರು. ಶ್ರೀಮಠದ ಶ್ರೀಭಾರತೀಪ್ರಕಾಶನ ಹೊರತಂದಿರುವ ಈ ದಿನದರ್ಶಿಕೆಯ ಲೋಕಾರ್ಪಣೆಯ ಈ ಸಂದರ್ಭದಲ್ಲಿ ಶ್ರೀಮಠದ ಸಮ್ಮುಖ ಸರ್ವಾಧಿಕಾರಿ ಶ್ರೀ ಟಿ. ಮಡಿಯಾಳ್, ಶ್ರೀಭಾರತೀಪ್ರಕಾಶನದ ಕಾರ್ಯದರ್ಶಿ ವಿದ್ವಾನ್ ಜಗದೀಶಶರ್ಮಾ, ಶ್ರೀಕಾರ್ಯದರ್ಶಿಗಳಾದ ಶ್ರೀ ಮೋಹನ ಹೆಗಡೆ ಹೆರವಟ್ಟ, ಮುಖ್ಯಕಾರ್ಯನಿರ್ವಾಹಣಾಧಿಕಾರಿ ಶ್ರೀ… Continue Reading →
ಮನದ ಮಲಿನವ ತೊಳೆವ, ಭವದ ಬಾಧೆ ಕಳೆವ,ಭಾವಭರಿತ ಮನದಲಿ ರಾಮನ ಕಾಂಬ..ಕಂಡು ಪೂಜಿಪ.. ಸುಯೋಗವಿನ್ನೊಮ್ಮೆ.. ಹೌದು ಬಂಧುಗಳೇ.. ಮಂಗಳವಾರ ದಿನಾಂಕ 23-12-2014 ರಂದು ರಾತ್ರಿ 8.೦೦ ರಿಂದ 9.೦೦ ಗಂಟೆಯವರೆಗೆ ಬೆಂಗಳೂರಿನ ಗಿರಿನಗರದ ರಾಮಾಶ್ರಮದಲ್ಲಿ ಭಾವಪೂಜೆಯ ಭಾಗ್ಯವನ್ನು ಇನ್ನೊಮ್ಮೆ ಕರುಣಿಸಿರುವರು ನಮ್ಮ ಪ್ರೀತಿಯ ಪೂಜ್ಯರು.. ಎಷ್ಟು ಭಾವಿಸಿದರೂ ಕಡಿಮೆಯೇ.. ಬನ್ನಿ ಭಾವಜಲವನ್ನು ಇನ್ನಷ್ಟು ತುಂಬಿಸಿಕೊಳ್ಳೋಣ… ಯಾರೂ ಅವಕಾಶವಂಚಿತರಲ್ಲ…. Continue Reading →