ಮಾಣಿ, 31-ಡಿಸೆಂಬರ್-2014: ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರಿಂದ ಅನುಗ್ರಹಿಸಲ್ಪಡುವ ಅತ್ಯಪೂರ್ವ ಕಾರ್ಯಕ್ರಮ “ಭಾವಪೂಜೆ”ಯು ಇಂದು ಸಹಸ್ರಾರು ಶಿಷ್ಯರ ಆಗಮಿಸುವಿಕೆಯಿಂದ ಅಭೂತಪೂರ್ವ ಯಶಸ್ಸು ಕಂಡಿದೆ. ಶ್ರೀ ರಾಮಚಂದ್ರಾಪುರ ಮಠ ಪೆರಾಜೆ – ಮಾಣಿಯ ಜನಭವನದ ಆವರಣದಲ್ಲಿ ತುಂಬಿ ತುಳುಕಿದ ಶಿಷ್ಯಸ್ತೋಮದ ಹೃನ್ಮನವು ಆನಂದದಿಂದ ತುಂಬಿ ತುಳುಕಿದ್ದು ಎದ್ದು ಕಾಣುತ್ತಿತ್ತು.

ಸಂಗೀತದ ಮಾಧುರ್ಯ, ಗುರುವಾಣಿಯ ಗಾಂಭೀರ್ಯ ಎರಡೂ ಮೇಳೈಸಿದ ಕಾರ್ಯಕ್ರಮದಲ್ಲಿ ರಾಮ-ಹನುಮರು ಭಾವಪೂರ್ವಕ ಪೂಜೆಯನ್ನು ಸ್ವೀಕರಿಸಿದರು.

ಸುಮಾರು ಐದು ಸಾವಿರಕ್ಕೂ ಮಿಕ್ಕಿದ ಶಿಷ್ಯಸ್ತೋಮವು ಸೇರಿತ್ತು. http://hareraama.in/ ಹರೇರಾಮ ವೆಬ್-ಸೈಟ್ ನಲ್ಲಿ ನೇರಪ್ರಸಾರದ ವ್ಯವಸ್ಥೆಯಿತ್ತು, ನೂರಾರು ಕುಟುಂಬವು ಅಂತರ್ಜಾಲದಲ್ಲೇ ನೇರಪ್ರಸಾರದಲ್ಲಿ ಕಾರ್ಯಕ್ರಮವನ್ನು ವೀಕ್ಷಿಸಿ ಆನಂದಿಸಿತು.

Facebook Comments