ರಾಮ ಕೊಟ್ಟ ಭವನದೊಳಗೆ ನಾವಿರುವುದು. ಅದೇ ರೀತಿ ನಮ್ಮೊಳಗಿನ ಭವನದೊಳಗೆ ರಾಮನಿರಲಿ. ಶಿಷ್ಯಕೋಟಿಯು ಅತ್ಯಂತ ಪ್ರೀತಿಯಿಂದ ಶ್ರೀಮಠಕ್ಕರ್ಪಿಸಿದ ಸಭಾಭವನಕ್ಕೆ “ಜನಭವನ”ವೆಂದೇ ನಾಮಕರಣ ಮಾಡುತ್ತಿದ್ದು ಇದು ಸಾವಿರಾರು ಜನರ ಭಾವನೆಯ ಕೇಂದ್ರವಾಗಿದೆ ಎಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ವ್ಯಾಖ್ಯಾನಿಸಿದರು. ಅವರು ಮಂಗಳವಾರ ಮಾಣಿ ಪೆರಾಜೆ ಶ್ರೀ ರಾಮಚಂದ್ರಾಪುರ ಮಠದ ವಠಾರದಲ್ಲಿ… Continue Reading →
ಗೋಕರ್ಣ.ಮಾ 10. ವ್ಯಕ್ತಿಯೋರ್ವನಿಗೆ ಮಹತ್ವ ಸಿಗುವುದು, ಆತ ಸಾಮಾಜಿಕವಾಗಿ ಪ್ರಸ್ತುತನಾಗುವುದು ಕೇವಲ ಶರೀರದಾಧಿಕ್ಯದಿಂದಲೋ, ಸಂಪತ್ತಿನಿಂದಲೋ ಅಲ್ಲ. ತನ್ನ ಸತತಪ್ರಯತ್ನದಿಂದ ಸಮಾಜದ ಜನರಿಗೆ ಹೆಚ್ಚುಸಂತೋಷವನ್ನು ಕೊಡುವವನೇ ನಿಜವಾದ ಅರ್ಥದಲ್ಲಿ ದೊಡ್ಡವ್ಯಕ್ತಿ ಯಾರು ತನ್ನ ಸ್ವಾರ್ಥಕ್ಕಾಗಿ ತನ್ನವರ ಸಂತೋಷವನ್ನು ಕಿತ್ತುಕೊಳ್ಳುತ್ತಾನೋ ಅವನಂತಹ ಅಲ್ಪಜೀವಿ ಬೇರೊಂದಿಲ್ಲ ಎಂದು ಪರಮಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ. ಇಂದು ಮಹಾಶಿವರಾತ್ರಿಯ ವಿಶೇಷಪರ್ವದಲ್ಲಿ… Continue Reading →
ಗೋಕರ್ಣ.ಮಾ೯. ಪತಿಯಾದ ಮಹರ್ಷಿಗೌತಮರ ಶಾಪಕ್ಕೊಳಗಾಗಿ ಯಾರಕಣ್ಣಿಗೂ ಬೀಳದೆ ಅದೃಶ್ಯವಾಗಿದ್ದ ಅಹಲ್ಯೆಯನ್ನು ಉದ್ಧರಿಸಿ ಮಹಾತಪಸ್ವಿನಿಯಾದ ಆಕೆಯ ಪಾದವನ್ನು ಸ್ಪರ್ಶಿಸುವ ಮೂಲಕ ಆಕೆ ಪರಮಪವಿತ್ರಳಾದವಳು, ಕಳಂಕಿತಳಲ್ಲ ಎಂಬುದನ್ನು ಲೋಕಕ್ಕೆ ತೋರಿಸಿದವನು ಪ್ರಭುಶ್ರೀರಾಮಚಂದ್ರ.ಅರಿತೋ ಅರಿಯದೆಯೋ ಬದುಕಿನಲ್ಲಿ ಪಾಪಗಳು ಘಟಿಸುವುದು ಸಹಜ. ಆದರೆ ಪಾಪವು ಪಶ್ಚಾತ್ತಾಪದಿಂದ ತಪಸ್ಸಿನಿಂದ ದೂರಾಗುತ್ತದೆ. ಆದ್ದರಿಂದ ಪಾಪವನ್ನು ದೂರಮಾಡಬೇಕೇ ಹೊರತು ಪಾಪಿಯನ್ನಲ್ಲ ಎಂಬ ಸಂದೇಶ ಈ ಪ್ರಕರಣದಲ್ಲಿ… Continue Reading →