ಮಾನವನ ಭ್ರಮೆಗಳು ಅನಂತ..
ಅವುಗಳಲ್ಲಿ ಬಹುದೊಡ್ಡದು ‘ಪ್ರಕೃತಿಗೆ ಮಾತು ಬಾರದು’ ಎಂದುಕೊಳ್ಳುವುದು..
ಆದರೆ, ಪ್ರಕೃತಿ ಎ೦ದೂ ಮೂಕವಲ್ಲ..
ಯಾವಾಗಲೂ, ಎಲ್ಲೆಲ್ಲೂ, ಪ್ರಕೃತಿಯು ಆಡುತ್ತಲೇ ಇರುವ ಮಾತುಗಳನ್ನು ಕೇಳಿಸಿಕೊಳ್ಳದ ನಾವೇ ಕಿವುಡರು..!
ನಮ್ಮೊಳಗಿನ ಕೊರತೆಯನ್ನು ಪ್ರಕೃತಿಯಲ್ಲಿ ಕಾಣುವ ಕುದೃಷ್ಟಿ ನಮ್ಮದು..
‘ವಿಶ್ವ’ವನ್ನೇ ‘ಶತ್ರು’ವೆಂದು ಕಲ್ಪಿಸಿಕೊಂಡು ಎಲ್ಲರ ಮೇಲೂ ದಂಡೆತ್ತಿ ಹೋದ ರಾಜಾ ಕೌಶಿಕನು – ಜೈತ್ರಯಾತ್ರೆಯಲ್ಲಿ ಮುಂದುವರೆಯುತ್ತಾ…ಮುಂದುವರೆಯುತ್ತಾ ಋಷ್ಯಾಶ್ರಮದ ದಿವ್ಯಸ್ಥಳವೊಂದನ್ನು ಪ್ರವೇಶಿಸಿದಾಗ,
ಆತನ ಅಂತರಾತ್ಮದ ಅನುಭವಕ್ಕೆ ಬಂದಿತು ಈ ಸತ್ಯ..
ಸಲ್ಲದ ಆಸೆಯೊಂದು ಏನೆಲ್ಲ ಅನಾಹುತಗಳನ್ನು ಮಾಡಿಬಿಡಬಹುದು..!
ಸಲ್ಲದ ಆಸೆಯೊಂದು ಮನದಲ್ಲಿ ಮೂಡಿದರೆ, ಆ ವ್ಯಕ್ತಿ…
ಉಂಡ ಮನೆಗೆ ಎರಡೆಣಿಸಬಹುದು..!
ಮಮತೆಯ ಮಾತೆಯ ಮೇಲೆಯೇ ದುಂಡಾವೃತ್ತಿಗೆ ಮುಂದಾಗಬಹುದು..!
ಗೌರವದ ಗುರುವನ್ನೇ ಕೊಲ್ಲಲೆಳೆಸಬಹುದು..!
ರಕ್ಷಿಸಬೇಕಾದ ರಾಜನಾಗಿದ್ದರೂ ಚೋರನಂತೆ, ದರೋಡೆಕೋರನಂತೆ ವರ್ತಿಸಬಹುದು…!
ತಪೋಭೂಮಿಯನ್ನು ರಣಭೂಮಿಯನ್ನಾಗಿಸಬಹುದು..!
ಪ್ರೇಮದ ಗಂಗಾಧಾರೆ ಹರಿಯುವಲ್ಲಿ ದ್ವೇಷದ ವಿಷಜ್ವಾಲೆಯಾಗಿ ಉರಿಯಬಹುದು..!
ತನ್ನವರನ್ನೆಲ್ಲಾ ಸಾಲಾಗಿ ನಿಲ್ಲಿಸಿ ಬಲಿ ಕೊಡಬಹುದು.!!
ಬೇಕೇ ಈ ಕೆಲಸ ?
ನಿರಂತರ ಪರಿಭ್ರಮಣ..
ದಿನಕ್ಕೊಂದು ಊರು..
ಹೊತ್ತಿಗೊಂದು ಸೂರು..
ಹತ್ತಾರು ಬಗೆಯ ನೀರು..!
ನಿನ್ನೆ ಇಲ್ಲಿರಲಿಲ್ಲ; ನಾಳೆ ಇನ್ನೆಲ್ಲಿಯೋ?….
ಇಂದು ಬಯಲುಸೀಮೆಯೆಡೆ..ನಾಳೆ ಮಲೆನಾಡ ಕಡೆ.
ಇಂದು ಆಗಸ ಹರಿದು ಬೀಳುವಂತೆ ಮಳೆ..ನಾಳೆ ಮೈಯೆಲ್ಲ ಬೆವರ ಹೊಳೆ..
ಮಾನವನ ಮೊದಲ ಬೇಕುಗಳು ಊಟ-ನಿದ್ರೆಗಳು..
ಊಟವೋ ಅದೃಷ್ಟದಾಟ..!
ಒಮ್ಮೊಮ್ಮೆ ಇಲ್ಲವೇ ಇಲ್ಲ..
ಇದ್ದರೂ ಬೇಕಾದಷ್ಟು ಇಲ್ಲದಿರಬಹುದು..
ಬೇಕಾದ ಬಗೆಯಲ್ಲಿ ಇಲ್ಲದಿರಬಹುದು..
ಇದ್ದರೂ ಪ್ರೀತಿಪೂರ್ವಕವಲ್ಲದಿರಬಹುದು..
ತಲುಪುವಾಗ ತಿನ್ನಲು ಸಮಯವೇ ಇಲ್ಲದಿರಬಹುದು..
ಇಂದು ಸೊಗಸಿಲ್ಲದ ಸಪ್ಪೆ..ನಾಳೆ ಕಿವಿಯಲ್ಲಿ ಹೊಗೆಯೇಳುವ ಖಾರ..!
ವಿಶ್ವಕುಟುಂಬಿಯ ಕುಟುಂಬದಲ್ಲಿಯೇ ಏರ್ಪಟ್ಟಿತು ಕೋಲಾಹಲ..
ಒಂದೇ ಚಕ್ರದ ರಥ ಚಲಿಸುವದಾದರೂ ಹೇಗೆ…?
ಒಂದೇ ರೆಕ್ಕೆಯ ಹಕ್ಕಿ ಹಾರುವದಾದರೂ ಹೇಗೆ..?
ಹಂಚಿಕೊಂಡಾಗ ದು:ಖ ಅರ್ಧವಾಗುವದು.. ಸುಖ ಇಮ್ಮಡಿಸುವದು..
ಸುಖ- ದು:ಖ ಸಮಭಾಗಿನಿಯೇ ದೂರಸರಿದರೆ ಬದುಕಿನಲ್ಲಿ ರಸವೆಲ್ಲಿ..?
ಲಕ್ಷ್ಮೀಯಿಲ್ಲದ ವೈಕುಂಠ ಲಕ್ಷ್ಮೀರಮಣನಿಗೆ ಸಪ್ಪೆ ಯೆನಿಸಿತು.. ಶೂನ್ಯವೆನಿಸಿತು…!!
ಲಕ್ಷ್ಮಿಯಿರುವ ಭೂಮಿಯೇ ಆಪ್ಯಾಯಮಾನವೆನಿಸಿತು…!
||ಹರೇರಾಮ || ಗಿಡವ ತಿದ್ದಲಿಕೆಂದು ಬುಡವ ಕೀಳ್ವುದು ಸರಿಯೆ….? ಅಸಂಖ್ಯಾತ ಸಮಯದಿಂದ ನಡೆದುಬಂದ ಸನಾತನ ವ್ಯವಸ್ಥೆಯಲ್ಲಿ ವ್ಯಕ್ತಿಗಳ ದೋಷದಿಂದಲೋ, ವ್ಯವಸ್ಠೆಯ ದೋಷದಿಂದಲೋ, ಅಥವಾ ನಮ್ಮ ದೃಷ್ಟಿದೋಷದಿಂದಲೋ, ಏರುಪೇರುಗಳಿವೆಯೆಂದೆನಿಸಿದರೆ.. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬಂತೆ ಪರಕೀಯ ವ್ಯವಸ್ಥೆ ಸೊಬಗೆನಿಸಿದರೆ.. ಆಗ ಮಾಡಬೇಕಾದುದೇನು…? ಎಂದೆಂದೂ ತನ್ನದಾದುದನ್ನು ತನ್ನದಲ್ಲವೆಂದು ಹೇಳಿ, ಇಂದಿನವರೆಗೆ ತನ್ನದಲ್ಲದುದನ್ನು ತನ್ನದೆನ್ನುವುದೆ..!? ಇಂದಿನಿಂದ ಮತಾಂತರದ ಬಗ್ಗೆ ಚರ್ಚಿಸೋಣ….. Continue Reading →
ರಾಜಧಾನಿಯ ರಾಜಮಾರ್ಗದಲ್ಲಿ, ಸಾವಿರಾರು ಜನರ ಸಂಭ್ರಮದ ಮಧ್ಯೆ ಗೆಲುವಿನ ಹೆಮ್ಮೆಯ ಹಮ್ಮಿನಲ್ಲಿ ಬೀಗುತ್ತಾ,
ಪಟ್ಟದಾನೆಯ ಮೇಲೆ ಕುಳಿತು ಸಿಂಹಾಸನದ ಕಡೆಗೆ ರಾಜ ಸಾಗುತ್ತಿದ್ದಾಗ..
ಇದ್ದಕ್ಕಿದ್ದಂತೆ ಮುದ್ರೆಯುಂಗುರ ಮತ್ತೊಮ್ಮೆ ಮಿಂಚಿತು..!
ಕಣ್ಣು ಕೋರೈಸುವ ಆ ಮಿಂಚಿನ ಬೆಳಕಿನಲ್ಲಿ ಮತ್ತೆಲ್ಲವೂ ಮರೆಯಾದವು.
ರಾಜ್ಯ-ರಾಜಧಾನಿ-ರಾಜಮಾರ್ಗಗಳು,
ಜನಗಳು-ಜಯಕಾರಗಳು,
ಆನೆ-ಅಂಬಾರಿಗಳು,
ಅರಮನೆ-ಸಿಂಹಾಸನಗಳು..
ಇವುಗಳೆಲ್ಲವೂ ಕರಗಿ…ಅಲ್ಲಿ
ಹಿಮಾಲಯದ ಗಾತ್ರದ ಅಕ್ಷರಗಳಲ್ಲಿ ಆ ಮೂರು ಪದಗಳು ಗೋಚರಿಸಿದವು…!!
“ಇದು ಹೀಗೇ ಇರದು”
ಸೋಮುವಿಗೆ ಆಕಸ್ಮಿಕವಾಗಿ ಯಮದೂತನ ಪರಿಚಯವಾಯಿತು,
ಮಾತನಾಡಿ ಮಾತನಾಡಿ ಅವರೀರ್ವರಲ್ಲಿ ಗಾಢವಾದ ಸ್ನೇಹ ಬೆಳೆಯಿತು..
ಬೀಳ್ಕೊಡುವ ಹೊತ್ತು ಬಂದಾಗ ಯಮದೂತ ಸೋಮುವಿಗೆ ಹೇಳಿದ..
‘ಗೆಳೆಯಾ,ನನ್ನಿಂದ ಏನಾದರೂ ಸಹಾಯವಾಗಬೇಕಿದ್ದರೆ ಹೇಳು’..
“ನನಗೆ ಸಾವೇ ಇಲ್ಲದಂತೆ ಮಾಡುವೆಯಾ?” – ಸೋಮು ಕೇಳಿದ..!
“ಅದಾಗದು,ನನ್ನ ಕೈಮೀರಿದ ವಿಷಯವದು. ಬೇರೇನಾದರೂ ಕೇಳು”.
“ಹಾಗಿದ್ದರೆ ಕೊನೆಯಪಕ್ಷ ವರುಷಗಳ ಮೊದಲೇ ಸಾವಿನ ಮುನ್ಸೂಚನೆಯನ್ನಾದರೂ ನನಗೆ ನೀನು ಕೊಡಬೇಕು; ಮತ್ತು ಕರೆದುಕೊಂಡು ಹೋಗಲು ನೀನೇ ಬರಬೇಕು…!!!”
“ತಥಾಸ್ತು…”
ಯಮದೂತ ತನ್ನ ಲೋಕಕ್ಕೆ ಪ್ರಯಾಣ ಬೆಳೆಸಿದ. . .
ಉತ್ತರ ಕನ್ನಡದ ಒಂದು ಹಳ್ಳಿ..
ಆ ರಾತ್ರಿ ಯಕ್ಷಗಾನ ನಡೆಯಬೇಕಿತ್ತಲ್ಲಿ..
ಪ್ರಸಂಗ ಗದಾಯುದ್ಧ….
ಒಂಭತ್ತೂವರೆಗೆ ಪ್ರಾರಂಭವಾಗಬೇಕಿದ್ದ ಆಟ ಹನ್ನೆರಡಾದರೂ ಪ್ರಾರಂಭವಾಗಲಿಲ್ಲ..!!
ಕಾರಣ – ಐವರು ಕಲಾವಿದರು ದುರ್ಯೋಧನನ ವೇಷ ಧರಿಸಿ ಕುಳಿತದ್ದು..!!
ಆ ಪ್ರಸಂಗದಲ್ಲಿ ದುರ್ಯೋಧನ,ಕೃಷ್ಣ,ಭೀಮ, ಸಂಜಯ ಮೊದಲಾದ ಹಲವಾರು ಪಾತ್ರಗಳಿವೆ..
ಅದರಲ್ಲಿ ದುರ್ಯೋಧನನ ಪಾತ್ರವೇ ಮುಖ್ಯ ಪಾತ್ರ, ಅದನ್ನು ಮಾಡಬೇಕಾದವನು ನಾನೇ ಎಂಬ ಭ್ರಮೆ ಅವರನ್ನಾವರಿಸಿತ್ತು…!
ಎಲ್ಲಕಲಾವಿದರೂ ಒಂದೇ ಪಾತ್ರವನ್ನು ಮಾಡಹೊರಟರೆ ಆಟ ನಡೆಯುವುದಾದರೂ ಹೇಗೆ..?
ಎಲ್ಲ ಶಿಲೆಗಳೂ ಪೂಜೆಗೊಳ್ಳುವ ಆಧಾರಶಿಲೆಯೇ ಆಗ ಹೊರಟರೆ ಕಟ್ಟಡ ಕಟ್ಟುವುದೆಲ್ಲಿಂದ..?
ವಿಕೃತಿ ಸಂವತ್ಸರದ ನಿಜವೈಶಾಖ ಶುದ್ಧ ಅಷ್ಟಮಿ-ನವಮಿ ೨೦೧೦ ಮೇ ತಿಂಗಳ ೨೧, ೨೨..
ಶಿರೂರಿನ ಸಮೀಪದ ಗೋಳಿಗುಂಡಿಯ ಅಮೃತಧಾರಾ ಗೋಶಾಲೆಯಲ್ಲಿ ವಸತಿ ಮಾಡಿದ್ದೆವು.
ರಾತ್ರಿ ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. . .
ಪಕ್ಕದಲ್ಲಿಯೇ ಸಂಕದಗುಂಡಿ ಹೊಳೆಯೂ ಹರಿಯುತ್ತಿತ್ತು . .
ಮಳೆ-ಹೊಳೆಗಳನ್ನು ಕಂಡಾಗ ಅದೇಕೋ ಮನುಷ್ಯ ಸಮೂಹದ ನೆನಪಾಯಿತು..
ಮಳೆಯಲ್ಲಿ ಅಸಂಖ್ಯ ಜಲಬಿಂದುಗಳು ಒಮ್ಮೆಲೇ ಧರೆಗಿಳಿಯುವವಲ್ಲವೇ. . ?
ಹೊಳೆಯಲ್ಲಿ ಅಸಂಖ್ಯ ಜಲಬಿಂದುಗಳು ಜೊತೆಗೂಡಿ ಹರಿಯುವವಲ್ಲವೇ. . ?