|| ಹರೇರಾಮ || ಅದ್ಭುತಾಕಾರದ ಅಗ್ನಿಗೋಳಗಳು..! ಅನಂತ ಅಂತರಾಳಗಳು..! ಬೆಳಕ ಬೀರುವ ತಾರೆಗಳು..! ಬೆಳಕ ಹೀರುವ ಗ್ರಹಗಳು..! ಒಂದನ್ನೊಂದು ಬಿಡದಂತೆ ಹಿಡಿದಿಡುವ ಆಶ್ಚರ್ಯಕರ ಸೆಳೆತ..! ಕ್ಷಣಮಾತ್ರವೂ ನಿಲ್ಲದ ಅವಿಶ್ರಾಂತ ಗತಿ..! ಒಂದರ ಸುತ್ತ ಇನ್ನೊಂದು ಸುತ್ತುವ ಅನಿರ್ವಚನೀಯ ಪ್ರೀತಿ..! ಮಾನವ ಮತಿಯ ಸಕಲ ಕಲ್ಪನೆಗಳಿಗೂ ಮೀರಿದ ವಿಸ್ತಾರದ ಅನಂತಕೋಟಿ ಬ್ರಹ್ಮಾಂಡ ಮಂಡಲಗಳ ಮಧ್ಯದಲ್ಲೊಂದು ಪುಟ್ಟ ಭೂಮಂಡಲ..!
|| ಹರೇರಾಮ || ಆಹಾ ! ಎಂಥಾ ದೃಶ್ಯವದು…! ತನ್ನ ಸಾವಿರಾರು ಪ್ರಜೆಗಳನ್ನು ಕೇವಲ ಕಂಠಸಿರಿಯ ಬಲದಿಂದಲೇ ಸೆಳೆಯುವ – ಆಳುವ ಅವಳಿ ಮಕ್ಕಳು ರಾಜಮಾರ್ಗವನ್ನು ಶೋಭಾಯಮಾನಗೊಳಿಸುತ್ತಿದ್ದಾರೆ…! ಶ್ರವಣ-ನಯನ-ಮನಗಳ ಸಂಯುಕ್ತ ಹಬ್ಬವದು..! ಕಣ್ತಣಿಸುವ ರೂಪ..ಕಿವಿಗಿಂಪಾದ ಗಾನ..ಮನ ಬೆಳಗುವ ಸಾಹಿತ್ಯಗಳ ತ್ರಿವೇಣೀಸಂಗಮ… ಅಚ್ಚರಿಯ ಮೇಲಚ್ಚರಿಯಾಯಿತು ಅಯೋಧ್ಯೆಯರಸನಿಗೆ… ರೂಪ ತನ್ನದೇ..! ಸ್ವರ ತನ್ನದೇ..! ಕೊನೆಗೆ ಗಮನಿಸಿ ಕೇಳಿದರೆ ಕುಮಾರರು… Continue Reading →
|| ಹರೇರಾಮ || ಸೋಮರಸ ಒಳಸೇರಿದರೆ ಸುಮ್ಮನಿರಗೊಡುವುದೇ…? ಈ ಲೋಕವನ್ನು ಮರೆಸಿ ಇನ್ನಾವುದೋ ಲೋಕದಲ್ಲಿ ವಿಹರಿಸುವಂತೆ ಮಾಡದೇ ಅದು…? ರಾಮರಸ ಒಳಸೇರಿದಾಗ ಕುಶಲವರ ಸ್ಥಿತಿಯೂ ಹಾಗೆಯೇ ಆಯಿತು… ಬಿಂದುವಿನೊಳು ಸಿಂಧು ಹಿಡಿಸುವುದೇ…? ವಿಶ್ವಂಭರನ ಚರಿತೆಯ ವಿಶ್ವಕಾವ್ಯವು ಪುಟಾಣಿಮಕ್ಕಳ ಪುಟ್ಟಹೃದಯದೊಳಗೆ ಅದು ಹೇಗೆ ಹಿಡಿಸಿತೋ..? ಹಿಡಿಸಲಾರದೇ ಹೊರಹೊಮ್ಮಿ ಹುಚ್ಚು ಹೊಳೆಯಾಗಿ ಹರಿದಿರಬೇಕು…! ಕೈಯಲ್ಲಿ ತಂಬೂರಿ… ಕಣ್ತುಂಬ ರಾಮ…… Continue Reading →
ದ್ವಾರವನ್ನು ದಾಟದೆ ದೇವರನ್ನು ತಲುಪಲುಂಟೇ..?!
ತನ್ನನ್ನು ತಲುಪಲಾರದೇ ಬಳಲುವ ಜೀವಗಳನ್ನು ಕಂಡು ಕನಿಕರಿಸಿದ ಕರುಣಾಸಿಂಧುವು ಸರ್ವಕಾಲಗಳಲ್ಲಿಯೂ ಸರ್ವದೇಶಗಳಲ್ಲಿಯೂ ಸಂತರ ರೂಪದಲ್ಲಿ ತನ್ನ ದ್ವಾರಗಳನ್ನು ತೆರೆದಿಟ್ಟನಲ್ಲವೇ…!
ಮೊದಲು ಸಂತ..
ಮತ್ತೆ ಭಗವಂತ..!
ಆದುದರಿಂದಲೇ ಇರಬೇಕು..
ರಾಮಾಯಣದ ಪ್ರಸ್ತುತಿಯು ರಾಮನ ಮುಂದಾಗುವುದಕ್ಕೆ ಮುನ್ನ ಋಷಿಸಮೂಹದ ಸಮ್ಮುಖದಲ್ಲಿ ಆಯಿತು..
ಆಶ್ರಮದ ದಿವ್ಯಪರಿಸರವದು…
ಕುಶ-ಲವರನ್ನು ಕಣ್ದಣಿಯೆ ನೋಡಿದರು ಆದಿಕವಿಗಳು..
ಭೂಮಂಡಲಾಧೀಶ್ವರನ ಮಕ್ಕಳು ಮುನಿವೇಷದಲ್ಲಿ,ಅನಾಥರಂತೆ ಆಶ್ರಮವಾಸಿಗಳಾಗಿರುವುದನ್ನು ಕಂಡು ಕರಗಿ ಮರುಗಿತು ಅವರ ಹೃದಯ..
ಅನರ್ಘ್ಯವಾದ ಈ ಜೋಡಿಮುತ್ತುಗಳು ಆಶ್ರಮಕ್ಕಿಂತ ಅರಮನೆಯಲ್ಲಿ ಭೂಷಣವಲ್ಲವೇ..? ಎಂದು ಕೇಳಿತು ಅವರ ಮನಸ್ಸು..
ಕುಶ-ಲವರನ್ನು ಲೋಕಕ್ಕೆ ತಂದ, ಲೋಕದ ತಂದೆಯೊಡನೆ ಪುನರಪಿ ಬೆಸೆಯುವ ಬಗೆ ಯಾವುದೆಂದು ಚಿಂತಿಸತೊಡಗಿದ ಮುನಿಗಳಿಗೆ ಉತ್ತರ ರೂಪದಲ್ಲಿ ಹೊಳೆದಿದ್ದು ರಾಮಾಯಣವೇ..!
ತಾಯಿಯಿಂದ ತಂದೆಯೆಡೆಗೆ…
ಗುರುವಿನಿಂದ ಪ್ರಭುವಿನೆಡೆಗೆ..
ಆಶ್ರಮದಿಂದ ಅರಮನೆಯೆಡೆಗೆ.. ಈ ಮಕ್ಕಳನ್ನು ರಾಮಾಯಣವೇ ಕರೆದೊಯ್ಯಬಹುದಲ್ಲವೇ..?
ಬದುಕಿನ ಸಕಲ ಸಂಗತಿಗಳೂ ಮೊದಲು ಅಂತರಂಗದಲ್ಲಿ ನಿರ್ಮಾಣವಾಗುತ್ತವೆ..
ಆಮೇಲೆ ಬಹಿರಂಗದಲ್ಲಿ ಆಕಾರ ತಾಳಿ ಪ್ರಕಟಗೊಳ್ಳುತ್ತವೆ..
ಎಲ್ಲೆಡೆ ಎದ್ದು ಕಾಣುವ ತಥ್ಯವಿದು..
ಮನದಲ್ಲಿ ಮೊದಲು ಮೂಡಿದ ಭಾವಗಳಲ್ಲವೇ ಮತ್ತೆ ಮುಖದಲ್ಲಿ ಮಾತಾಗಿ ವ್ಯಕ್ತವಾಗುವುದು..!?
ಮಹಾಮಾನವರ ಮಸ್ತಿಷ್ಕದ ಮನೆಯಲ್ಲಿ ಮೂಡಿಬರುವ ಯೋಜನೆಗಳಲ್ಲವೆ,
ಮಹತ್ಕೃತಿಗಳಾಗಿ ಈ ಜಗದಲ್ಲಿ ತೋರಿ ಬರುವುದು..!?
ಕದನಗಳು ಮೊದಲಾಗುವುದು ಮನಸಿನಲ್ಲಿ ..
ಪತನಗಳು ಮೊದಲಾಗುವುದು ಮನಸಿನಲ್ಲಿ..
|| ಹರೇರಾಮ || ಅಮೃತಬಿಂದುವೊಂದು ಸಿಕ್ಕರೂ ತೃಪ್ತರಾಗುವವರು ಹಲವರು.. ಬಿಂದುಲಾಭದ ನಂತರ ಸಿಂಧುವಿಗಾಗಿ ಹುಡುಕುವವರು ಕೆಲವರು.. ನಾರದರೊರೆದ ರಾಮಕಥಾ ಸಂಕ್ಷೇಪವನ್ನು ಕಿವಿದೆರೆದು ಕೇಳಿದ ವಾಲ್ಮೀಕಿಗಳು, ಅದರ ವಿಸ್ತಾರವನ್ನು ಕಣ್ಮುಚ್ಚಿ ಹುಡುಕತೊಡಗಿದರು.. ಅತ್ಮೋದ್ಧಾರಕ್ಕೆ ಬಿಂದು ಸಾಕು..ಜಗದುದ್ಧಾರಕ್ಕೆ ಸಿಂಧುವೇ ಬೇಕಲ್ಲವೇ..? ಕಣ್ಮುಚ್ಚಿ ಹುಡುಕಿದರೆಂದೆವಲ್ಲವೇ..? ನಿಜದ ನಿಜವಾದ ರಾಜಧಾನಿ ನಮ್ಮ ಹೃದಯವೇ ಆಗಿರುವಾಗ ಹೊರಗೆಲ್ಲಿ ಹುಡುಕುವುದು..!? ಇತಿಹಾಸವನ್ನು ಹರಿದ ತಾಳೆಗರಿಗಳಲ್ಲಿಯೋ, ಮುರಿದ… Continue Reading →