ಶ್ರೀ ಸಂಸ್ಥಾನ ಗೋಕರ್ಣ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ದಿನಚರಿ:
ವಸತಿ:
ಶ್ರೀ ದೇವಶ್ರವ ಶರ್ಮ, ಅಶೋಕೆ, ಗೋಕರ್ಣ
ಶ್ರೀಭಿಕ್ಷೆ ; ರಾಘವೇಂದ್ರ ಬನದಕೊಪ್ಪ
ದಿನವಿಶೇಷ:
- ಸೂರ್ಯೋದಯಕ್ಕೆ ಸರಿಯಾಗಿ ಗೋಕರ್ಣದ ಶ್ರೀಮಹಾಗಣಪತಿಗೆ ಶ್ರೀಕರಗಳಿಂದ ಪೂಜೆ..
- ಶ್ರೀ ಆತ್ಮಲಿಂಗಕ್ಕೆ ರುದ್ರಾಭಿಷೇಕಪೂರ್ವಕ ಪೂಜೆ..
- ಶ್ರೀ ತಾಮ್ರಗೌರಿಯ ಪೂಜೆ..
- ಶ್ರೀ ಕೋಟಿತೀರ್ಥದ ಉತ್ತರ ತೀರದಲ್ಲಿ ಶೋಭಿಸುವ ಶ್ರೀ ರಘೂತ್ತಮ ಮಠದಲ್ಲಿ ಸೀತಾ-ಲಕ್ಷ್ಮಣ-ಹನುಮತ್ಸಮೇತನಾದ ಶ್ರೀ ರಾಮಚಂದ್ರನ ಅರ್ಚನೆ – ಮೊದಲ ಬಾರಿಗೆ ಶ್ರೀಕರಗಳಿಂದ..
- ಶ್ರೀ ರಾಮಚಂದ್ರಾಪುರ ಮಠದ ಅವಿಚ್ಛಿನ್ನ ಪರಂಪರೆಯ 33ನೆಯ ಗುರುವರ್ಯ ಜಗದ್ಗುರು ಶಂಕರಾಚಾರ್ಯ ಬ್ರಹ್ಮಲೀನ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಗುರುಮೂರ್ತಿಗೆ (ಸಮಾಧಿ)ಶ್ರೀಕರಗಳಿಂದ ಮೊದಲ ಬಾರಿಗೆ ಅರ್ಚನೆ..
- ಶ್ರೀ ಭದ್ರಕಾಳಿಯ ಪೂಜೆ..
- ಎಂದಿನಂತೆ ಶ್ರೀರಾಮಾರ್ಚನೆ..
- ದರ್ಶನ ಪಡೆದವರು:
ಬೆಂಗಳೂರಿನ ಭಕ್ತವೃಂದ
ಬೆಳ್ಳಾರೆಯ ಭಕ್ತವೃಂದ
ರಷಿಯಾದ ಮೂವರು ಭಕ್ತರಿಂದ ಸಂದರ್ಶನ..
ಸವದತ್ತಿಯ ಮಾಜಿ ಶಾಸಕ ರಾಜಣ್ಣ ಮಾಮನಿ
ಮುನವಳ್ಳಿಯ ಸುಬ್ರಾಯ ಭಂಡಾರಿ - ಹವ್ಯಕರ ಮೂಲಕ್ಷೇತ್ರ ‘ಅಹಿಚ್ಚತ್ರ ‘ದಿಂದ ಪುರಾತನ ಸ್ಮಾರಕ ಇಟ್ಟಿಗೆ’ಯ ಆಗಮನ..
- ಶ್ರೀ ಮಹಾಬಲೇಶ್ವರ ದೇವರು ವರ್ಷಕ್ಕೊಮ್ಮೆ ಉತ್ಸವ ಹೋಗುವ ಭೀಮನಕೊಂಡಕ್ಕೆ ಭೇಟಿ..
ಅಲ್ಲಿಯ ವಿಷ್ಣುಮೂರ್ತಿ ದೇವಸ್ತಾನದ ಕಾಮಗಾರಿ ವೀಕ್ಷಣೆ..
ಹಿಂದಿರುಗುವ ಮಾರ್ಗದಲ್ಲಿ ಸಂಪೂರ್ಣ ಪಾಳು ಬಿದ್ದ ಭೀಮೇಶ್ವರ ದೇವಸ್ಥಾನದ ವೀಕ್ಷಣೆ..ಜೀರ್ಣೋದ್ಧಾರದ ಚಿಂತನೆ..
ಚದರವಳ್ಳಿ ವಿದ್ಯಾಸಂಸ್ಥೆಯ ಪ್ರತಿನಿಧಿಗಳೊಂದಿಗೆ ಸಮಾಲೋಚನೆ..
Facebook Comments Box
October 30, 2009 at 12:48 PM
ALSO ATTACH CAMPS PHONE NUMBER PLEASE………..