ಗೋಕರ್ಣ.ಮಾ 10. ವ್ಯಕ್ತಿಯೋರ್ವನಿಗೆ ಮಹತ್ವ ಸಿಗುವುದು, ಆತ ಸಾಮಾಜಿಕವಾಗಿ ಪ್ರಸ್ತುತನಾಗುವುದು ಕೇವಲ ಶರೀರದಾಧಿಕ್ಯದಿಂದಲೋ, ಸಂಪತ್ತಿನಿಂದಲೋ ಅಲ್ಲ. ತನ್ನ ಸತತಪ್ರಯತ್ನದಿಂದ ಸಮಾಜದ ಜನರಿಗೆ ಹೆಚ್ಚುಸಂತೋಷವನ್ನು ಕೊಡುವವನೇ ನಿಜವಾದ ಅರ್ಥದಲ್ಲಿ ದೊಡ್ಡವ್ಯಕ್ತಿ ಯಾರು ತನ್ನ ಸ್ವಾರ್ಥಕ್ಕಾಗಿ ತನ್ನವರ ಸಂತೋಷವನ್ನು ಕಿತ್ತುಕೊಳ್ಳುತ್ತಾನೋ ಅವನಂತಹ ಅಲ್ಪಜೀವಿ ಬೇರೊಂದಿಲ್ಲ ಎಂದು ಪರಮಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ. ಇಂದು ಮಹಾಶಿವರಾತ್ರಿಯ ವಿಶೇಷಪರ್ವದಲ್ಲಿ… Continue Reading →
ಗೋಕರ್ಣ.ಮಾ೯. ಪತಿಯಾದ ಮಹರ್ಷಿಗೌತಮರ ಶಾಪಕ್ಕೊಳಗಾಗಿ ಯಾರಕಣ್ಣಿಗೂ ಬೀಳದೆ ಅದೃಶ್ಯವಾಗಿದ್ದ ಅಹಲ್ಯೆಯನ್ನು ಉದ್ಧರಿಸಿ ಮಹಾತಪಸ್ವಿನಿಯಾದ ಆಕೆಯ ಪಾದವನ್ನು ಸ್ಪರ್ಶಿಸುವ ಮೂಲಕ ಆಕೆ ಪರಮಪವಿತ್ರಳಾದವಳು, ಕಳಂಕಿತಳಲ್ಲ ಎಂಬುದನ್ನು ಲೋಕಕ್ಕೆ ತೋರಿಸಿದವನು ಪ್ರಭುಶ್ರೀರಾಮಚಂದ್ರ.ಅರಿತೋ ಅರಿಯದೆಯೋ ಬದುಕಿನಲ್ಲಿ ಪಾಪಗಳು ಘಟಿಸುವುದು ಸಹಜ. ಆದರೆ ಪಾಪವು ಪಶ್ಚಾತ್ತಾಪದಿಂದ ತಪಸ್ಸಿನಿಂದ ದೂರಾಗುತ್ತದೆ. ಆದ್ದರಿಂದ ಪಾಪವನ್ನು ದೂರಮಾಡಬೇಕೇ ಹೊರತು ಪಾಪಿಯನ್ನಲ್ಲ ಎಂಬ ಸಂದೇಶ ಈ ಪ್ರಕರಣದಲ್ಲಿ… Continue Reading →
ಗೋಕರ್ಣ.ಮಾ೮. ಎಲ್ಲರನ್ನೂ ತನ್ನ ಸುತ್ತಮುತ್ತಲಿನದೆಲ್ಲವನ್ನೂ ಪ್ರೀತಿಯಿಂದ, ವಿಶ್ವಾಸದಿಂದ ನೋಡಿ ಆ ಎಲ್ಲದರ ಜೊತೆ ಆತ್ಮೀಯವಾದ ಸಂಬಂಧವನ್ನು ಬೆಳೆಸಿಕೊಳ್ಳಬೇಕು. ಆಗ ಅಷ್ಟೂ ಜೀವಗಳ ಪ್ರೀತಿ, ವಾತ್ಸಲ್ಯ ನಮ್ಮದಾಗುತ್ತದೆ. ಆ ಪ್ರೀತಿಯನ್ನು ನಮ್ಮ ಕುಟುಂಬಕ್ಕೆ ಮಾತ್ರ ಸೀಮಿತಗೊಳಿಸಿಕೊಂಡರೆ ಸೀಮಿತವಾದ ಸುಖ ಮಾತ್ರ ದೊರೆಯಬಹುದು. ಮಹಾತ್ಮರು ಲೋಕವನ್ನೇ ತಮ್ಮದಾಗಿಸಿಕೊಳ್ಳುವ ಮೂಲಕ ಆತ್ಮವಿಸ್ತರಣೆಯ ಮಾರ್ಗವನ್ನು ಅನುಸರಿಸುತ್ತಾರೆ. ಪ್ರಭು ಶ್ರೀರಾಮಚಂದ್ರನ ಮಾರ್ಗವದು. ಆತ… Continue Reading →
ಗೋಕರ್ಣ.ಮಾ೭. ವ್ಯಕ್ತಿಯಿಂದ ರೂಪುಗೊಂಡದ್ದು ಸಮಾಜ.ಅದರ ಘಟಕವಾದ ವ್ಯಕ್ತಿಯ ಸ್ವಭಾವವೇ ಸಮುದಾಯದಲ್ಲಿ ಪ್ರತಿಫಲಿಸುತ್ತದೆ. ವ್ಯಕ್ತಿಯ ಆಂತರ್ಯ ಕೆಟ್ಟದಾಗಿದ್ದರೆ ಅದರ ದುಷ್ಟಪರಿಣಾಮ ಸುತ್ತಲಿನ ಪರಿಸರದ ಮೇಲೂ ಆಗುತ್ತದೆ. ಆಂತರ್ಯ ಒಳ್ಳೆಯದಾಗಿದ್ದರೆ ಆಗಲೂ ಅದರ ಒಳಿತಿನಿಂದಾಗಿ ಸಮಾಜವೂ ಸುಖಿಯಾಗುತ್ತದೆ.ಆದ್ದರಿಂದಲೇ ಮಹಾತ್ಮರನ್ನು ತಪಸ್ವಿಗಳನ್ನು ಸಂತರನ್ನು ಸಂದರ್ಶಿಸಿ ಅವರ ಅನುಗ್ರಹವನ್ನು ಪಡೆಯಬೇಕೆಂಬ ಕ್ರಮ ರೂಢಿಯಲ್ಲಿದೆ. ಊರಿನ ಮುಖ್ಯಸ್ಥ ಸರಿಯಾಗಿದ್ದಾರೆ ಊರಿನ ಜನರೂ ಸರಿದಾರಿಯಲ್ಲಿರುತ್ತಾರೆ…. Continue Reading →
ಗೋಕರ್ಣ. ಮಾ.೬. ಬದುಕಿನಲ್ಲಿ ಸೌಂದರ್ಯ ಹಾಗೂ ಅದನ್ನು ಸರಿಯಾದ ರೀತಿಯಲ್ಲಿ ಕಾಣುವ ಕಣ್ಣು ಎರಡೂ ಅಗತ್ಯ. ರೂಪ, ಆಕಾರ, ಮೊದಲಾದವುಗಳಿಂದ ನಮ್ಮ ಬಾಹ್ಯಶರೀರದ ಚೆಲುವು ವೃದ್ಧಿಗೊಳ್ಳುತ್ತದೆ. ಶೀಲ, ಸದ್ಗುಣಗಳಿಂದ ಅಂತಃಸ್ಸೌಂದರ್ಯ ಹೆಚ್ಚುತ್ತದೆ.ಜೀವನದ ಸಾರ್ಥಕತೆಗೆ ಇವೆರಡೂ ಬೇಕು.ಕೇವಲಬಾಹ್ಯಸೌಂದರ್ಯದಲ್ಲಿ ಥಳಕು ಮಾತ್ರ ವ್ಯಕ್ತ. ಅಂತಸ್ಸೌಂದರ್ಯದಿಂದ ನಮ್ಮ ಅಂತರಂಗ ಅರಳುತ್ತದೆ. ಈ ಎರಡರ ಹಿತವಾದ ಸಂಯೋಜನೆಯೇ ಬದುಕಿನಲ್ಲಿ ಉನ್ನತವಾದ ಧ್ಯೇಯವಾಗಬೇಕು.ರಾಕ್ಷಸರೆಂದರೆ… Continue Reading →
ಗೋಕರ್ಣ.ಮಾ5. ನಮ್ಮ ಶರೀರಕ್ಕೆ ರೋಗಾಣುಗಳ ಪ್ರವೇಶವಾದರೆ ಅದರಿಂದ ರೋಗದ ಉತ್ಪತ್ತಿ. ಅದರ ಪರಿಹಾರಕ್ಕಾಗಿ ನಾವು ವೈದ್ಯರ ಮೊರೆ ಹೋಗುತ್ತೇವೆ. ಚಿಕಿತ್ಸೆಯನ್ನು ಪಡೆದುಸ್ವಸ್ಥರಾಗುತ್ತೇವೆ. ಹಾಗೆಯೇ ಈ ಭೂಮಿತಾಯಿಯ ದೇಹಕ್ಕೆ ಅತ್ಯಂತ ಭಯಂಕರವಾದ ರಾವಣನೆಂಬ ರೋಗಾಣುವಿನ ಪ್ರವೇಶವಾಗಿ ವ್ಯಾಧಿಯು ಜಾಸ್ತಿಯಾಗಿ ಲೋಕದ ಸ್ವಾಸ್ಥ್ಯವು ಹದಗೆಟ್ಟಾಗ ಜನರು ಆಕ್ರಂದನ ಮಾಡತೊಡಗಿದಾಗ ಆಗಿದ್ದು ರಾಮಾವತಾರ. ಲೋಕಕ್ಕೆ ತೊಂದರೆ ಬಂದಾಗ ಗತಿ… “ವೈದ್ಯೋ… Continue Reading →
ಗೋಕರ್ಣ.ಮಾ 4. ಗೋಕರ್ಣದ ಸಾಗರತೀರದ ಸಣ್ಣ ಬೇಲೆಯಲ್ಲಿ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ವಿದ್ಯಾನಂದಾಚಾರ್ಯರು ಹಾಗೂ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಚಿದ್ಬೋಧ ಭಾರತೀ ಮಹಾಸ್ವಾಮಿಗಳ ಗುರುಮೂರ್ತಿಗಳ ಪುನಃಪ್ರತಿಷ್ಠಾಮಹೋತ್ಸವವು ಇಂದು ಪ್ರಾತಃಕಾಲ ಅತ್ಯಂತ ವೈಭವದಿಂದ ಸಂಪನ್ನಗೊಂಡಿತು. ಶ್ರೀಮದ್ರಾಮಚಂದ್ರಾಪುರಮಠದ ಪ್ರಥಮಪೀಠಾಧೀಶರೂ ಶ್ರೀಮದಾಚಾರ್ಯ ಶಂಕರ ಭಗವತ್ಪಾದರ ಪ್ರಶಿಷ್ಯರೂ ಆಗಿದ್ದ ಶ್ರೀ ಶ್ರೀಮದ್ವಿದ್ಯಾನಂದಾಚಾರ್ಯರ ಹಾಗೂ ಅವರ ಶಿಷ್ಯರೂ ಶ್ರೀಪೀಠದ ದ್ವಿತೀಯ ಪೀಠಾಧೀಶರೂ… Continue Reading →