ಇಂದು ಅಪರಾಹ್ನ ಅಶೋಕೆಯ ಗುರುನಿವಾಸದಲ್ಲಿ ಶ್ರೀಗಳು ಗೋಕರ್ಣಶ್ರೀ ಎಂಬ
ಖಾಸಗೀ ಪ್ರಸಾರದ ಮಾಸಪತ್ರಿಕೆಯನ್ನು ಬಿಡುಗಡೆ ಗೊಳಿಸಿದರು..
ಶ್ರೀ ಕ್ಷೇತ್ರದ ಸಮಸ್ತ ಕಾರ್ಯಗಳನ್ನು ಜನತೆಗೆ ತಲುಪಿಸುವ ಸಲುವಾಗಿ ಈ ಪತ್ರಿಕೆಯನ್ನು ಆರಂಭಿಸುತ್ತಿದ್ದು ಪತ್ರಿಕೆ ದೇವರು – ಭಕ್ತರ ನಡುವೆ ಸೇತುವಾಗಲಿ..
ಗೋಕರ್ಣದ ಸಂಪತ್ತನ್ನು ಸಮಾಜಕ್ಕೆ ತೋರಲಿಕ್ಕಿರುವ ಪತ್ರಿಕೆ ಇದು..
ಎಂದು ಶ್ರೀಗಳು ತಮ್ಮ ಆಶೀರ್ವಚನದಲ್ಲಿ ನುಡಿದರು..
ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಹೊರನಾಡಿನ ಧರ್ಮಕರ್ತರಾದ ಭೀಮೇಶ್ವರ ಜೋಶಿ, ಮಹಾಬಲೇಶ್ವರ ದೇವಸ್ಥಾನದ ಆಡಳಿತ ಕಾರ್ಯದರ್ಶಿಗಳಾದ ಶ್ರೀ ಜಿ.ಕೆ.ಹೆಗಡೆ ಗೋಳಗೋಡ್, ಅಧ್ಯಾಪಕರಾದ ಪತ್ರಕರ್ತ ಅರ್.ಎಸ್. ಹಬ್ಬೂ ಮುಂತಾದವರು ಭಾಗವಹಿಸಿದ್ದರು..
ಭೀಮೇಶ್ವರ ಜೋಶಿ ಹಾಗೂ ಆರ್.ಎಸ್.ಹಬ್ಬೂರವರು ಪತ್ರಿಕೆಗೆ ಶುಭವಾಗಲಿ ಎಂದು ಹಾರೈಸಿದರು..
March 22, 2010 at 12:04 PM
ನಿಜ, ಪತ್ರಿಕಾ ಮಾಧ್ಯಮ ಒಳ್ಳೆಯದನ್ನು ಬೆಸೆಯುವ, ಕೆಟ್ಟದನ್ನು ಬಸಿಯುವ ಕೆಲಸ ಮಾಡಲಿ.
.
ಗೋಕರ್ಣ ಶ್ರೀ ಇ೦ದ ಶುಭವಾಗಲಿ..