ಪೆರಾಜೆ-ಮಾಣಿ ಮಠಃ22.8.2013, ಗುರುವಾರ
ಕುಮಟಾ ಮಂಡಲದ ಕುಮಟಾ, ವಾಲಗಳ್ಳಿ, ಮೂರೂರು ಹಾಗೂ ಹೆಗಡೆ ವಲಯಗಳ ಗುರುಭಿಕ್ಷಾಸೇವೆ ನಡೆಯಿತು. ಶ್ರೀಗುರುಗಳ ಶ್ರೀರಾಮಾದಿ ದೇವರುಗಳ ಪೂಜೆಯ ನಂತರ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ವಲಯ ಸಭೆಯಲ್ಲಿ ವಲಯಗಳ ಕೆಲಸಕಾರ್ಯಗಳನ್ನು ಶ್ರೀಪೀಠದ ಮುಂದಿಟ್ಟರು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
~
ಯಾಗಶಾಲೆಯಿಂದಃ
ಆಂಜನೇಯ ಹವನ, ಗಣಪತಿ ಹವನ ನವಗ್ರಹ ಶಾಂತಿ ಬೃಹಸ್ಪತಿ ಶಾಂತಿ, ವಿದ್ಯಾಗಣಪತಿ ಹವನ, ಸುಂದರಕಾಂಡ ಪಾರಾಯಣ, ಸಂತಾನ ಗೋಪಾಲಕೃಷ್ಣ ಜಪ, ಆಂಜನೇಯನಿಗೆ ಸೀಯಾಳಾಭಿಷೇಕ, ಗೋಪೂಜೆಗಳು ನಡೆದವು.
ಪಾದಪೂಜೆಃ ಶ್ರೀ ಸುಬ್ರಾಯ ಕೇಶವ ಹೆಗಡೆ ಮೂರೂರು, ಶ್ರೀ ಕೃಷ್ಣಸೀತಾರಾಮ ಹೆಗಡೆ ಮೂರೂರು, ಶ್ರೀ ಕೃಷ್ಣಪ್ರಕಾಶ ಬಳ್ಳಂಬೆಟ್ಟು, ಡಾ. ಶ್ರೀಪಾದ ಹೆಗಡೆ ಬೆಂಗಳೂರು, ಶ್ರೀ ರವೀಂದ್ರಕೃಷ್ಣ ಭಟ್ ಸೂರಿ ಹೆಗಡೆ ವಲಯ, ಶ್ರೀ ವಿಠಲ ಶಾನುಭಾಗ ವಾಲಗಳ್ಳಿ.
~
ಸಾಂಸ್ಕೃತಿಕ ಕಾರ್ಯಕ್ರಮಃ
ಕು. ಸುಷ್ಮಿತಾ ರಿಂದ ಸುಗಮ ಸಂಗೀತ ಕಾರ್ಯಕ್ರಮ ಹಾಗೂ ಕು. ಶ್ರೀರಾಗ ಹೊಸಮೂಲೆ ಇವರಿಂದ ‘ವೀರ ಬಬ್ರುವಾಹನ’ ಏಕವ್ಯಕ್ತಿ ಯಕ್ಷಗಾನ ಪ್ರದರ್ಶನ ನಡೆಯಿತು. ಹಾಡುಗಾರಿಕೆಯಲ್ಲಿ ಶ್ರೀ ಗಣೇಶ್ ಭಟ್ ಹೊಸಮೂಲೆ, ಚೆಂಡೆಯಲ್ಲಿ ಶ್ರೀ ಪದ್ಯಾಣ ಶಂಕರನಾರಾಯಣ ಭಟ್, ಮದ್ದಳೆಯಲ್ಲಿ ಶ್ರೀ ಶಂಕರ ಭಟ್ ಕಲ್ಮಡ್ಕ ಸಹಕರಿಸಿದರು.
~
ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.
~*~
Leave a Reply