ಪೆರಾಜೆ-ಮಾಣಿಮಠಃ 27-7-2013, ಶನಿವಾರ
ವೇಣೂರು, ಉಜಿರೆ ಮತ್ತು ಉರುವಾಲು ವಲಯಗಳ ಗುರುಭಿಕ್ಷಾಸೇವಾ ಕಾರ್ಯಕ್ರಮ ವಿಜಯ ಚಾತುರ್ಮಾಸ್ಯದ ಈ ಪುಣ್ಯಸಮಯದಲ್ಲಿ ನಡೆಯಿತು. ಶ್ರೀಕರಾರ್ಚಿತ ದೇವರುಗಳ ಪೂಜೆಯ ನಂತರ ಮಹಿಳೆಯರಿಂದ ಕುಂಕುಮಾರ್ಚನೆ ನಡೆಯಿತು. ನಂತರ ನಡೆದ ಮೂರು ವಲಯಗಳ “ವಲಯ ಸಭೆ”ಯಲ್ಲಿ ವಿಷಯಗಳನ್ನು ಶ್ರೀಪೀಠದೆದುರು ಮಂಡಿಸಿದರು. ನಂತರ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಮಹಾಸಭೆಯಲ್ಲಿ ವಲಯಗಳ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಶ್ರೀಗುರುಗಳು ಅನುಗ್ರಹಿಸಿದರು. ಶ್ರೀ ಪ್ರಕಾಶ್ ಸೇಠ್, ವಿಕಾಸ್ ರೈ, ಶ್ರೀಮಠದ ಸರ್ವ ಪದಾಧಿಕಾರಿಗಳು, ಶಿಷ್ಯರು ಈ ಸಭೆಯಲ್ಲಿ ಉಪಸ್ಥಿತರಿದ್ದರು.
~
ಆಶೀರ್ವಚನಃ
ಯಾಗಶಾಲೆಯಿಂದಃ
ಆಂಜನೇಯನಿಗೆ ಸೀಯಾಳಾಭಿಷೇಕ, ಆಂಜನೇಯ ಹವನಗಳು, ಗೋತುಲಾಭಾರ, ಗೋಪೂಜೆ, ಶ್ರೀರಾಮಪೂಜೆ, ಶ್ರೀರಾಮತಾರಕ ಯಜ್ಞ, ಸ್ವಯಂವರಪಾರ್ವತಿ ಹವನ ಸಹಿತ ಪೂಜೆಗಳು ನಡೆದವು.
ಸೂಃ ರಾಮತಾರಕ ಜಪವನ್ನು ಮಾಡಿ ಯಜ್ಞವೇದಿಕೆಯ ಬಳಿಯ ಕಾರ್ಯಾಲಯದಲ್ಲಿ ಸಂಖ್ಯಾನೋಂದಣಿ ಮಾಡಬೇಕೆಂದು ಯಾಗಶಾಲೆಯ ಸಮಿತಿಯಿಂದ ಹೇಳಿಕೆ ಕೊಟ್ಟಿರುತ್ತಾರೆ.
(ಒಂದು ಕಡೆ ಕುಳಿತು ಮಾಡಿದ ಜಪದ ಸಂಖ್ಯೆಗಳನ್ನಷ್ಟೇ ಕೊಡಬೇಕು)
~
ಸಾಂಸ್ಕೃತಿಕ ಕಾರ್ಯಕ್ರಮಃ
ಸಂಗೀತ ಸಿಂಚನ ಕಾರ್ಯಕ್ರಮದಲ್ಲಿ ವಿದುಷಿ ವೀಣಾರಾಘವೇಂದ್ರ(ಗಾನಸರಸ್ವತಿ ಸಂಗೀತ ಕಲಾಶಾಲೆ, ನೆಹರೂ ನಗರ, ಕಬಕ-ಪುತ್ತೂರು) ಇವರ ಶಿಷ್ಯೆಯರಿಂದ ಹಾಡುಗಾರಿಕೆಯಿತ್ತು. ನಂತರ ಈಶ್ವರ ಸಂದೇಶ ಸಿ ಎಂ ಕೆದಿಲ ಇವರಿಂದ ಕರ್ನಾಟಕ ಸಂಗೀತ ಕಾರ್ಯಕ್ರಮ ಹಾಗೂ ವಯಲಿನ್ ತರಂಗ ಕಾರ್ಯಕ್ರಮದಲ್ಲಿ ಕು. ಅತ್ರೇಯೀಕೃಷ್ಣಾ ಕೆ.ಕನ್ಯಾಡಿ ಇವರಿಂದ ವಯಲಿನ್ ವಾದನವಿತ್ತು.
~
ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.
~