7-ಜುಲೈ-2016 : ಪುತ್ತೂರಿನ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಇಂದು ಐತಿಹಾಸಿಕ ಗೋವು-ಸಂತ ಸಮ್ಮೇಳನವು ಯಶಸ್ವಿಯಾಗಿ ನಡೆಯಿತು. ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು, ನಾಡಿನ ಪ್ರಮುಖ ಸಂತರು ಹಾಗೂ ಸ್ವತಃ ಗೋಮಾತೆಯು ವೇದಿಕೆಯನ್ನು ಅಲಂಕರಿಸಿದರು.

ಇಂದಿನ ಪ್ರಸಕ್ತ ವಿದ್ಯಮಾನಗಳ ಕುರಿತು ಸಮಾವೇಶವು ಚರ್ಚಿಸಿತು.
ಗೋವುಗಳ ಹಾಗೂ ಸಂತರ ಮೇಲಿನ ಆಕ್ರಮಣಗಳನ್ನು ಒಕ್ಕೊರಲಿನಿಂದ ಖಂಡಿಸಿತು.

ಸಚಿತ್ರ ವರದಿ: ಶಿಶಿರ ಹೆಗಡೆ, ಕೆ.ಎನ್.ಭಟ್
07-ಜುಲೈ-2016: ಶ್ರೀ ಶ್ರೀ ಆಶೀರ್ವಚನ – #ಅಕ್ಷರರೂಪ
@ ಪುತ್ತೂರು | #ಸುರಭಿ_ಸಂತ_ಸಂಗಮ
〰〰

● ಮೊದಲು ಸಂತರು, ಗೋವುಗಳು ಉಪಸ್ಥಿತರರಿರುವ ಈ ವೇದಿಕೆಗೆ ನಮನಗಳು
● ಈ ವೇದಿಕೆ *ಯಜ್ಞ ವೇದಿಕೆ*, ಹವಿಸ್ಸೆಲ್ಲವೂ ಯಾವ ಗೋ ಮಾತೆಯಿಂದ ಬರುತ್ತದೆಯೋ – ಅಂತಹ ಗೋ ಮಾತೆ ವಿರಾಜಮಾನಳಾಗಿದ್ದಾಳೆ
● ಹವಿಸ್ಸಿನ ಜೊತೆ ಮಂತ್ರ ಇದ್ದರೆ ಯಜ್ಞ, ಸಂತರು ಅಂದರೆ ಮಂತ್ರ.
● ಯಜ್ಞ ಪೂರ್ಣವಾಗಲು ಅಗ್ನಿ ಬೇಕು. *ಗೋ ಮಾತೆಯನ್ನು ರಕ್ಷಿಸಬೇಕೆಂಬ ಕಿಚ್ಚು* – ಅದೇ ಅಗ್ನಿಯಾಗಲಿ
● ಅಗ್ನಿಯನ್ನು ತಮ್ಮಲ್ಲಿ ಪ್ರಜ್ವಲಿಸಿಕೊಂಡವರು ಭಾರತರು. ಆ ಅಗ್ನಿಯನ್ನು ಪ್ರಜ್ವಲಿಸಿಕೊಂಡ್ರೆ *ಭಾರತ ಬೆಳಗುವುದು* ನಿಸ್ಸಂಶಯ.
● ಮರ ತನಗಾಗಿ ಹಣ್ಣು ಕೊಡುವುದಿಲ್ಲ, ಪ್ರಾಣಿಗಳಿಗಾಗಿ; ನದಿ ತನಗಾಗಿ ಹರಿಯುವುದಿಲ್ಲ, ತಂಪಾಗಲಿ ಎಂದು.
● ಹಣ್ಣು ಬಿಟ್ಟ ಮರಕ್ಕೇ ಕಲ್ಲನ್ನು ಎಸೆಯುವುದು, ಕಲ್ಲು ಬಿದ್ದ ಮೇಲೂ ಅದು ಕೊಡುವುದು ಹಣ್ಣನ್ನೇ.
● ಮನುಷ್ಯನಿಂದಾಗಿ ಇಂದು ನದಿ ಒಣಗಿದೆ, ಮಲಿನಗೊಂಡಿದೆ
● ಗೋವು ಹಾಲು ಕೊಡುವುದು ಕೇವಲ ತನ್ನ ಕರುವಿಗಾಗಿ ಅಲ್ಲ, ಮನುಜರಿಗೂ. ಆದರೆ *ಗೋವಿನ ಸ್ಥಿತಿ ಇಂದು ಚಿಂತಾಜನಕವಾಗಿದೆ*
● *ಸ್ವಂತದ ಒತ್ತನ್ನು ತೆಗೆದರೆ ಸಂತ*, ಸಮಾಜಕ್ಕೊಸ್ಕರ ಬದುಕುವವನು
● ಸಂತರಿಗೆ ಸಮಾನ ತೂಕದ್ದು (ಬೆಲೆಯುಳ್ಳದ್ದು) ಅಂದ್ರೆ ಅದು ಗೋಮಾತೆ ಮಾತ್ರ. ಎರಡು ಪರೋಪಕಾರಕ್ಕಾಗಿ ಬದುಕುತ್ತವೆ
● *ಗೋವು ಹಾಲು ಕೊಟ್ಟರೆ, ಸಂತರು ಜ್ಞಾನ ಕೊಡುತ್ತಾರೆ*, ಇವತ್ತು ಎರಡನ್ನು ಸಂಕಟಕ್ಕೆ ದೂಡಿದ್ದೇವೆ ನಾವು..
● ಗೋವು ಬದುಕಿ ಹಾಲು ಕೊಡ್ತೇನೆ , ಅಮೃತ ಕೊಡ್ತೇನೆ ಅಂದರೆ – ನಾವು ಅದರ ರಕ್ತ ಕೇಳ್ತೇವೆ, ಮಾಂಸ ಕೇಳ್ತೇವೆ!

● ಯಾವುದೇ ತಪ್ಪನ್ನು ಮಾಡದ ಗೋವುಗಳನ್ನು ಯಾಕೆ ಶಿಕ್ಷಿಸುತ್ತೀರಿ ಎಂಬ ಪ್ರಶ್ನೆಗೆ ಇಂದು ಸರಕಾರದ ಬಳಿಯಾಗಲಿ, ವಿಜ್ಞಾನಿಗಳ ಬಳಿ ಉತ್ತರ ಇಲ್ಲ
● ಎಷ್ಟೋ ಗೋವುಗಳು, ಒಂದಷ್ಟು ಸಂತರ ಹತ್ಯೆ ಆಯಿತು
● ಸಂತರು ಪೀಸ್ (ಶಾಂತಿ) ಕೊಡ್ತಾರೆ.. ಆದರೆ ನಾವು ರುಪೀಸ್ (ಹಣ) ಕೇಳ್ತೇವೆ!
● ವ್ಯವಸ್ಥೆಯೂ ಕುತಂತ್ರಕ್ಕೆ ಕೈಜೋಡಿಸುವುದು ದುರದೃಷ್ಟಕರ! ಬದುಕಲಿಕ್ಕೆ ಸಾಧ್ಯವಿಲ್ಲದ ಸನ್ನಿವೇಶ ಸಂತರಿಗೆ
● *ಕೇವಲ ಅನ್ಯ ಮತೀಯರು ಆಕ್ರಮಣ ಮಾಡಲ್ಲ, ಅನ್ಯ ಮಠೀಯರೂ ಮಾಡ್ತಾರೆ*
● ನಾವು ನಮ್ಮ ದೇಶ, ಧರ್ಮ, ಸಂಸ್ಕೃತಿಗೆ ಸೇರಿದವರು ಎಂದಿಗೂ ಒಟ್ಟಾಗಿ ಇರಬೇಕು, ನಮ್ಮನ್ನು ನಾವು ಬಿಟ್ಟುಕೊಡಬಾರದು
● ಹೊರಗಿನ ಆಕ್ರಮಣದಿಂದ ಏನು ಮಾಡಲು ಸಾಧ್ಯವಿಲ್ಲ, *ನಮ್ಮವರು ಸೇರಿಕೊಂಡಾಗ ಮಾತ್ರ ಅನ್ಯಾಯ* ಘಟಿಸಲು ಸಾಧ್ಯ
● ನಮ್ಮ ಮನೆಗೆ ನಾವೇ ಬೆಂಕಿ ಹಚ್ಚಿಕೊಂಡ ಹಾಗೆ
● ನಿಮ್ಮನ್ನು ನೀವು ಮಾರಿಕೊಳ್ಳಬೇಡಿ, ನಿಮ್ಮನ್ನು ದೇವರು ಎಂದಿಗೂ ಕ್ಷಮಿಸುವುದಿಲ್ಲ
● ಒಬ್ಬೊಬ್ಬ ಸಂತರೂ ಹಿಂದೂ ಧರ್ಮದ ಕೋಟೆಯ ಕಲ್ಲುಗಳು, ಕಲ್ಲು ಸರಿಯಬಾರದು.. ಒಟ್ಟಿಗೆ ಇರಬೇಕು
● *ಕಲ್ಲು ಸರಿದರೆ ಆ ಕಲ್ಲಿಗೂ ಆಪತ್ತು; ಕೋಟೆಗೂ ಆಪತ್ತು*
● ಸಂತ ಶಕ್ತಿ ಜಯಿಸಲಿ; ಎಲ್ಲರಿಗೂ ಒಳಿತಾಗಲಿ
ಹರೇರಾಮ

ಕಲ್ಲಡ್ಕ ಪ್ರಭಾಕರ್ ಭಟ್ ಅವರಿಂದ ಘರ್ಜನೆ..

ಹಿಂದೂ ಸಂಸ್ಕೃತಿ, ಗೋವು, ಸಂತರ ಮೇಲಿನ ಆಕ್ರಮಣಕ್ಕೆ ತೀವ್ರ ಖಂಡನೆ.. ದಾಳಿ ಮಾಡುತ್ತಿರುವವರು ಅನ್ಯಮತೀಯರಲ್ಲ.. ಹಿಂದೂ ಧರ್ಮ ರಕ್ಷಕರು ಎಂದು ಹೇಳಿಕೊಳ್ಳುವ ಬುದ್ಧಿಜೀವಿಗಳು…

ಸಂತರು ತಪ್ಪು ಮಾಡಲು ಸಾಧ್ಯವೇ ಇಲ್ಲ.. ಎಲ್ಲ ರೀತಿಯಲ್ಲಿಯೂ ಪರೀಕ್ಷೆಗೆ ಒಳಪಟ್ಟು ಆ ಶ್ರೇಷ್ಠ ಸ್ಥಾನಕ್ಕೆ ಏರಿರುತ್ತಾರೆ.. ಅವರ ಮೇಲೆ ಆಕ್ರಮಣ ಆದಾಗ ನಾವು ಅವರೊಂದಿಗೆ ನಿಲ್ಲುತ್ತೇವೊ ಅಥವ ಸುಮ್ಮನೆ ಕುಳಿತುಕೊಳ್ಳುತ್ತೇವೊ ಎನ್ನುವುದು ನಮ್ಮ ಶೃದ್ಧೆಯ ವಿಚಾರ..

ಸರ್ವೇ ಭವಂತು ಸುಖಿನಃ, ಪ್ರಪಂಚದ ಸರ್ವರೂ ಸುಖವಾಗಿರಲಿ ಎಂದು ಹಾರೈಸುವವರು ಯಾರಾದರೂ ಇದ್ದರೆ ಅದು ಹಿಂದೂ ಧರ್ಮದ ಸಂತರು ಮಾತ್ರ. ಬೇರೆ ಯಾವ ಧರ್ಮದಲ್ಲೂ ಹೀಗೆ ಹೇಳುವುದಿಲ್ಲ.. ಎಂಥವರ ಬಗ್ಗೆ ಮಾತಾಡ್ತೀರಿ ನೀವು?

ಕಾಳಹಸ್ತಿ ಶ್ರೀಗಳು:

ಪಕ್ಕದ ಮನೆಯಲ್ಲಿ ಬೆಂಕಿ ಬಿದ್ದರೆ ಚಳಿ ಕಾಯಿಸುವ ಕೆಲಸವನ್ನು ಯಾರೂ ಮಾಡಬಾರದು.. ಹೀಗೆ ಯಾವ ಸಂತರೂ ಮಾಡಬಾರದು. ಸಂತರು ಒಟ್ಟಾದರೆ ಯಾವ ಸಂಕಷ್ಟವನ್ನಾದರೂ ಎದುರಿಸಬಹುದು..
ಸಂತ ಎಲ್ಲೆಲ್ಲಿ ಹೋಗ್ತಾನೋ ಅಲ್ಲಿ ವಸಂತ ಬಂದಹಾಗೆ.. ಎಲ್ಲೆಲ್ಲೂ ಉತ್ಸಾಹ ಸಂತೋಷ,
ತನ್ನೊಟ್ಟಿಗೆ ಬರುವವರನ್ನು ಯಾವುದೇ ಅಪೇಕ್ಷೆ ರಹಿತ ಭವಸಾಗರವನ್ನು ದಾಟಿಸುವವರೇ ಸಂತರು..

ಸಂತರಿಗೆ ಸಮಾಜದ ರಕ್ಷಣೆ ಬೇಡ, ಸಮಾಜಕ್ಕೆ ಒಳ್ಳೇಯ ದಾರಿಯಲ್ಲಿ ಸಾಗಬೇಕಾದರೆ, ಸಮಾಜಕ್ಕೆ ಸಂತರ ರಕ್ಷಣೆ ಬೇಕು

ವಜ್ರದೇಹಿ ಮಠದ ಶ್ರೀಶ್ರೀರಾಜಶೇಖರಾನಂದ ಸ್ವಾಮಿಗಳು:

ನೀರೊಳಗಿನ ಮೀನು ನೀರನ್ನು ಶುದ್ಧಿಗೊಳಿಸುವ ಹಾಗೆ ಸಮಾಜದಲ್ಲಿ ಸಂತರು..

ಕಳೆದ. ಪುತ್ತೂರು ಸಮಾವೇಶದಲ್ಲಿ ಧಾರಾಕಾರ ವರ್ಷಧಾರೆ ಇತ್ತು, ಆದರೂ ನೀವೆಲ್ಲ ಅಚಲರಾಗಿ ಇದ್ದಿರಿ.. ಆದರೆ ಆವತ್ತು ಶ್ರೀಗಳು ಇರಲಿಲ್ಲ..
ಇವತ್ತು ಮಳೆ ಇಲ್ಲ, ಗುಡುಗು ಸಿಡಿಲು ಇಲ್ಲ , ಯಾವುದೇ ಭೀತಿ ಇಲ್ಲ, ಯಾಕಂದ್ರೆ ಇವತ್ತು ನಮ್ಮ ಜೊತೆ ಶ್ರೀಗಳು ಇದ್ದಾರೆ.. ಯಾವುದೇ ಸಮಸ್ಯೆ ಇಲ್ಲ.. ಇವತ್ತು ದಿಗ್ವಿಜಯದಲ್ಲಿ ಸಾಗುತ್ತಿದ್ದೇವೆ..

ಸಂತ ಸಮಾಜದಲ್ಲಿ ನಮ್ಮೊಂದಿಗೆ ರಾಘವೇಶ್ವರರಂತವರು ಇದ್ದಾಗ ಸಂತರಿಗೆ ಯಾವುದೇ ಸಮಸ್ಯೆ ಬರಲು ಸಾಧ್ಯವಿಲ್ಲ ಎಂದು ಹೇಳಬಯಸುತ್ತೇನೆ..

ನಮ್ಮ ಪಾಪವನ್ನು ಪರಿಹರಿಸುವವಳು ಗೋಮಾತೆ, ನಮ್ಮನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವವಳು ಗೋಮಾತೆ..

ಸಂತರು, ಗೋವು ಹಾಗೂ ಸಮಾಜ ಒಬ್ಬರಿಗೊಬ್ಬರು ಪೂರಕವಾಗಿ ಕೆಲಸ ಮಾಡುತ್ತಾ ವ್ಯವಸ್ಥೆಗಳನ್ನು ಗಟ್ಟಿಗೊಳಿಸೋಣ..

 

Facebook Comments Box