ಮುಂಬಯಿ.ಫೆ೧೭. ನಮಗೆ ಬದುಕನ್ನಿತ್ತ ಭಗಂತನಿಗೆ ನಾವೆಲ್ಲರೂ ಋಣಿಗಳು.ಇದರಲ್ಲಿ ಆಶ್ಚರ್ಯವೇನಿಲ್ಲ. ಆದರೆ ಅಂತಹ ಭಗವಂತನ ಬಾಯಿಂದಲೇ ತಾನು ನಿನಗೆ ಋಣಿ ಎಂಬ ಮಾತನ್ನು ಆಡಿಸಿದ ಭಕ್ತನೋರ್ವ ಲೋಕದಲ್ಲಿದ್ದರೆ ಆತ ಆಂಜನೇಯ ಮಾತ್ರ. ರಾವಣನಿಂದ ಅಪಹೃತಳಾಗಿದ್ದ ಲೋಕಮಾತೆಯಾದ ಜನಕನಂದಿನಿಯನ್ನು ಕನಕಮಯಲಂಕೆಯಲ್ಲಿ ಕಂಡು ಅವಳಿಗೆ ರಾಮಮುದ್ರಿಕೆಯನ್ನಿತ್ತು ಅವಳಿಂದ ಅಭಿಜ್ಞಾನವನ್ನು ಪಡೆದು ಅದನ್ನು ಪ್ರಭು ಶ್ರೀರಾಮಚಂದ್ರನಲ್ಲಿ ನಿವೇದಿಸಿಕೊಂದಾಗ ಸ್ವತಹ ಶ್ರೀರಾಮನೆ ಆಂಜನೇಯನಿಗೆ… Continue Reading →
ಮಂಗಳೂರು. ಹೊಸನಗರ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರಿಂದ ಕೈರಂಗಳದ ಅಮೃತಧಾರಾ ಗೋಶಾಲೆಯ ಆವರಣದಲ್ಲಿ ಶ್ರೀರಾಮಕಥಾ ಆಯೋಜನೆಗೊಂಡಿದ್ದು, ದಿನಾಂಕ 5 ರಿಂದ ಪ್ರಾರಂಭಗೊಂಡು 9 ರ ವರೆಗೆ ನಡೆಯಲಿದೆ. ಪೂಜನ,ಪ್ರವಚನ.ಗಾಯನ, ವಾದನ, ಯಕ್ಷಗಾನ, ಚಿತ್ರಕಲೆ, ರೂಪಕಗಳ ಅದ್ಭುತ ದೃಶ್ಯ ವೈಭವಗಳೊಂದಿಗೆ ಪ್ರಸ್ತುತಗೋಳ್ಳಲಿದ್ದು,ಶಂಕರನಾರಾಯಣ ಕೊರಗಿಯವರ ರೂಪಕದಲ್ಲಿ ರಾವಣ, ಕುಂಭಕರ್ಣ ವಿಭೀಷಣ ಜನ್ಮ ವೃತ್ತಾಂತ ಮೇಳೈಸಲಿದೆ. ಖ್ಯಾತ… Continue Reading →
ಗೋಕರ್ಣ. ಐತಿಹಾಸಿಕ ಯಾತ್ರಾಸ್ಥಳವಾದ ಗೋಕರ್ಣದ ಶ್ರೀ ಸಾರ್ವಭೌಮ ಮಹಾಬಲೇಶ್ವರ ದೇವರ ನಂದನಸಂವತ್ಸರದ ಸಾಂಪ್ರದಾಯಿಕವಾದ ತ್ರಿಪುರಾಖ್ಯ ದೀಪೋತ್ಸವವು ೨೮ ಬುಧವಾರದಂದು ಅತ್ಯಂತ ವೈಭವದಿಂದ ಸಂಪನ್ನವಾಯಿತು.ಪರಮಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ ನಡೆದ ಈ ಇತಿಹಾಸಪ್ರಸಿದ್ಧ ಉತ್ಸವದಲ್ಲಿ ನೆರೆಯಜಿಲ್ಲೆಗಳ ಭಕ್ತರೂ ಸೇರಿದಂತೆ ಸಹಸ್ರಾರು ಸಂಖ್ಯೆಯ ಭಕ್ತರು ಶ್ರದ್ಧಾಭಕ್ತಿಗಳಿಂದ ದೀಪವನ್ನು ಹಚ್ಚುವ ಮೂಲಕ ಪಾಲ್ಗೊಂಡರು. ಇದೇ ಸಂದರ್ಭದಲ್ಲಿ ಪೂಜ್ಯಶ್ರೀಗಳು… Continue Reading →
ಗೋಕರ್ಣ. ಗೋಕರ್ಣಪರಿಸರದಲ್ಲಿರುವ ಕುಡ್ಲೆ ಸಾಗರತೀರದ ಬಳಿಯಿರುವ ಆಂಜನೇಯಜನ್ಮಭೂಮಿಯಲ್ಲಿ ಶ್ರೀರಾಮ ಹಾಗು ಆಂಜನೇಯ ದೇವಾಲಯಗಳ ನೂತನನಿರ್ಮಾಣಕ್ಕೆ ಇಂದು ವಿಧ್ಯುಕ್ತವಾಗಿ ಶಿಲಾನ್ಯಾಸವು ನೆರವೇರಿತು.ಪರಮಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳವರ ದಿವ್ಯಸಾನ್ನಿಧ್ಯದಲ್ಲಿ ಇಂದು ಗುರುವಾರ ಮಧ್ಯಾಹ್ನ ಸಂಪನ್ನವಾದ ಈಕಾರ್ಯಕ್ರಮದಲ್ಲಿ ಕೊಲ್ಕತಾದ ಉದ್ಯಮಿ ಶ್ರೀ ರಾಧೇಶ್ಯಾಂ ಗೋಯೆಂಕಾ ದಂಪತಿಗಳು ಹಾಗೂ ಶ್ರೀಮತಿ ಉಷಾ ಅಗರವಾಲ್ ಉಪಸ್ಥಿತರಿದ್ದು ಪೂಜಾದಿಕೈಂಕರ್ಯಗಳನ್ನು ನೆರವೇರಿಸಿದರು. ಹನುಮನುದಿಸಿದ ಭೂಮಿಯೆಂದು… Continue Reading →
ಬೆಳಕಿನ ಪ್ರಭುವಿನ, ಬೆಳಕಿನ ರಾಜ್ಯದ, ಬೆಳಕಿನ ಪ್ರಜೆಗಳಿಗೆ ಬೆಳಕಿನ ಹಬ್ಬದ ಬೆಳಗಿನಲ್ಲಿ, ಬೆಳಕಿನ ಬದುಕನ್ನು ಹಾರೈಸುವುದು ಬೆಳಕಿನಿಂದ, ಬೆಳಕಿಗಾಗಿ, ಬೆಳಕಿನಲ್ಲಿ, ಬೆಳಕಾಗಿ, ಬೆಳಕೀಯಲೆಂದೇ ಉಸಿರಾಡುವ ಪರಂಪರೆ ಶ್ರೀರಾಮಚಂದ್ರಾಪುರ ಮಠದ್ದು. ಅಂತಹ ಪರಂಪರೆಯ ಪೀಠದಿಂದ ಬೆಳಕಿನ ಹಬ್ಬದ ಶುಭಹಾರೈಕೆಗಳನ್ನು ದೀಪಾವಳಿಯ ಸಂದರ್ಭದಲ್ಲಿ ಹೊಸನಗರ ಶ್ರೀರಾಮಚಂದ್ರಾಪುರಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಮಾಣಿಯ ಶಾಖಾಮಠದಲ್ಲಿ ನೀಡಿದರು. ಇದೇ… Continue Reading →