ಮಂಗಳೂರು. ಹೊಸನಗರ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರಿಂದ ಕೈರಂಗಳದ ಅಮೃತಧಾರಾ ಗೋಶಾಲೆಯ ಆವರಣದಲ್ಲಿ  ಶ್ರೀರಾಮಕಥಾ ಆಯೋಜನೆಗೊಂಡಿದ್ದು, ದಿನಾಂಕ 5 ರಿಂದ ಪ್ರಾರಂಭಗೊಂಡು 9 ರ ವರೆಗೆ ನಡೆಯಲಿದೆ.

DSC_0415

ಪೂಜನ,ಪ್ರವಚನ.ಗಾಯನ, ವಾದನ, ಯಕ್ಷಗಾನ, ಚಿತ್ರಕಲೆ, ರೂಪಕಗಳ ಅದ್ಭುತ ದೃಶ್ಯ ವೈಭವಗಳೊಂದಿಗೆ ಪ್ರಸ್ತುತಗೋಳ್ಳಲಿದ್ದು,ಶಂಕರನಾರಾಯಣ ಕೊರಗಿಯವರ ರೂಪಕದಲ್ಲಿ ರಾವಣ, ಕುಂಭಕರ್ಣ ವಿಭೀಷಣ ಜನ್ಮ ವೃತ್ತಾಂತ ಮೇಳೈಸಲಿದೆ.

ಖ್ಯಾತ ಸಂಗೀತ ಗಾಯಕಿ ರತ್ನಮಾಲ ಪ್ರಕಾಶ್, ಪ್ರೇಮಲತಾ ದಿವಾಕರ್, ಶ್ರೀಪಾದಹೆಗಡೆ, ವೆಂಕಟಗಿರಿ, ಕೃಷ್ಣ ಉಡುಪ, ತಬಲಾದಲ್ಲಿ ಪ್ರದ್ಯುಮ್ನ, ಗಣೇಶ್ ಕೊಳಲು,  ವ್ಯಂಗ್ಯ ಚಿತ್ರಕಾರ ನೀರ್ನಲ್ಲಿ ಗಣಪತಿಯವರ ಚಿತ್ರ ಮತ್ತು ರಾಘವೇಂದ್ರ ಕಡ್ನಮನೆಯವರ ಮರಳು ಚಿತ್ರ ಕಾರ್ಯಕ್ರಮಕ್ಕೆ ಮೆರಗನ್ನು ನೀಡಲಿದೆ.

Facebook Comments