ಬೆಂಗಳೂರು ಮಂಡಲ ವ್ಯಾಪ್ತಿಯ ಮಾತೃ ವಿಭಾಗದಿಂದ “ವಾತ್ಸಲ್ಯ ಅಭಿಯಾನ” 

 

ಶ್ರೀರಾಮಚಂದ್ರಾಪುರಮಠದ ಬೆಂಗಳೂರ ಹವ್ಯಕ ಮಂಡಲ ವ್ಯಾಪ್ತಿಯ ಮಾತೃ ಮಂಡಲದಿಂದ “ವಾತ್ಸಲ್ಯ ಅಭಿಯಾನ” ಕಾರ್ಯಕ್ರಮವನ್ನು ಗಿರಿನಗರದ ರಾಮಾಶ್ರಮದಲ್ಲಿ ನಡೆಸಲಾಯಿತು. ದೀಪ ಬೆಳಗಿಸಿ ಗುರುವಂದನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ “ಬತ್ತಿ-ಭಜನಾ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮಹಿಳೆಯರು ಮಕ್ಕಳು ಸೇರಿದಂತೆ ಪ್ರತಿಯೊಬ್ಬರೂ ಗಣಪತಿಯ,ಗುರುವಿನ,ದೇವಿಯ, ಕೇಶವನ, ಶ್ರೀರಾಮನ, ಭೂತಾಯಿಯ ಕುರಿತಾದ ಭಜನೆಯನ್ನು ಮಾಡುತ್ತಾ ದೀಪದ ಬತ್ತಿಯನ್ನು ತಯಾರಿಸಿದರು.

ಟೆರೇಸ್ ಗಾರ್ಡನ್: ಈ ಸಂದರ್ಭದಲ್ಲಿ ವೆಂಕಟೇಶ ಭಟ್ ಹೊಡಬಟ್ಟೆ ಅವರು ತಾರಸಿ ಮೇಲೆ ಕೈತೋಟ (ಟೆರೇಸ್ ಗಾರ್ಡನ್) ಮಾಡುವಲ್ಲಿಯ ತಮ್ಮ ಅನುಭವವನ್ನು ವಿವರಿಸಿ ಸಾಧನೆಯನ್ನು ದೃಶ್ಯ ಮಾಧ್ಯಮದ ಮೂಲಕ ಪ್ರಚುರಪಡಿಸಿದರು. ಉಪನ್ಯಾಸಕಿ ಶ್ರೀಮತಿ ಮಾಲತಿ ಅವರು ಹಸಿ ತರಕಾರಿ ಸಿಪ್ಪೆ, ಕೊಳೆತ ತರಕಾರಿ, ಎಲೆಗಳಿಂದ ಗೊಬ್ಬರ ತಯಾರಿಕೆಯ ಅನುಭವವನ್ನು ವಿವರವಾಗಿ ತಿಳಿಸಿ ಕಸದಿಂದ ರಸ ತೆಗೆಯುವ ವಿಧಾನವನ್ನು ಮನವರಿಕೆ ಮಾಡಿದರು.

ಬನಶಂಕರಿ, ಸರ್ವಜ್ಞ, ಕೋರಮಂಗಲ, ಗಿರಿನಗರ, ರಾಜಮಲ್ಲೇಶ್ವರಂ,ಯಲಹಂಕ,ಸರ್ವಧಾರಿ ಸೇರಿದಂತೆ ಬೆಂಗಳೂರ ಮಂಡಲದ ವಿವಿಧ ವಲಯಗಳ ಮಾತೃವಿಭಾಗದವರು ಪಾಲ್ಗೊಂಡಿದ್ದರು.  ಆರೋಗ್ಯ ಪ್ರಧಾನ ಶ್ಯಾಮಪ್ರಸಾದ, ಮಂಡಲ ಪದಾಧಿಕಾರಿಗಳಾದ ವೀಣಾ ಗೋಪಾಲಕೃಷ್ಣ, ಶ್ರೀಮತಿ ನಾಗರತ್ನಕ್ಕ ಮುಂತಾದವರು ನಿರ್ವಹಿಸಿದರು.

ವರದಿ : ಕೆಕ್ಕಾರ ನಾಗರಾಜ ಭಟ್

 

vatsalya-3 vatsalya-1 vatsalya-2

Facebook Comments Box