ವಿಜಯನಗರ ವಲಯದ “ವಲಯೋತ್ಸವ “

ವಿಜಯನಗರ : 4-1-2015

ದಿನಾಂಕ 4-1-2015 ರಂದು ಭಾನುವಾರ  ಶ್ರೀ ರಾಮಚಂದ್ರಾಪುರ ಮಠ, ಬೆಂಗಳೂರು ಮಂಡಲದ  ವಿಜಯನಗರ ವಲಯದ “ವಲಯೋತ್ಸವ “ ಕಾರ್ಯಕ್ರಮ ವಿಜಯನಗರ ಭಾರತೀ ವಿದ್ಯಾಲಯದ ಸಭಾಂಗಣ ದಲ್ಲಿ ಜರುಗಿತು. ಶ್ರೀ ಶ್ರ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ದಿವ್ಯಸಾನ್ನಿಧ್ಯ ನೀಡಿ ಆಶೀರ್ವಚನ ನೀಡಿದರು.

ಶ್ರೀಗಳು,” ಶ್ರೀ ರಾಮ ರಾವಣನ ಸಂಹಾರ ಮಾಡಲು ಹೊರಟು ನಿಂತಾಗ ಕಪಿಗಳು ಸಾಲು ಸಾಲಾಗಿ ನಿಂತಿದ್ದನ್ನು ನೋಡಿದನು. ಜೇನಿನ ಬಣ್ಣದ ಕಪಿಗಳು ರಾಮನಿಗೆ ಜೀನಿನ ನದಿಯ೦ತೆ ಕಾಣಿಸಿತು. ಕಪಿಗಳೆಲ್ಲರೂ ರಾಮನನ್ನು ನೋಡಿ ಕೈ ಮುಗಿದರು. ಅದು ರಾಮನಿಗೆ ಜೀನಿನ ನದಿಯಲ್ಲಿ ಕಮಲದ ಮೊಗ್ಗುಗಳಂತೆ ಕಾಣಿಸಿತು. ನಮಗೂ ಭಕ್ತ ಸಮೂಹವನ್ನು ನೋಡಿದಾಗ ಇದು ನೆನಪಾಯಿತು. ಒಂದು ಕೆಟ್ಟ ದೃಷ್ಟಿ ಏನೆಲ್ಲಾ ಅವಾಂತರ ಮಾಡಬಹುದು ಎನ್ನುವುದಕ್ಕೆ ಮಂಥರೆ ಉದಾಹರಣೆ. ಅವಳ ಒಂದು ಕೆಟ್ಟ ದೃಷ್ಟಿ ಅಯೋಧ್ಯೆಯ  ದಶರಥ ನನ್ನು ನಾಶ ಮಾಡಿತು, ನಂತರ ವಾನರ ರಾಜ ವಾಲಿ ಯನ್ನು ನಾಶ ಮಾಡಿತು. ಕೊನೆಗೆ ಲಂಕೆ ಯ ರಾವಣನನ್ನು ನಾಶ ಮಾಡಿತು. ಹೀಗೆ ಮೂರು ಮಕುಟಗಳು ಉರುಳಿದವು. ಆದರೆ ಎಂಥಾ ಕೆಟ್ಟ ದೃಷ್ಟಿ ಇದ್ದರೂ ಗುರುದೃಷ್ಟಿ ಒಂದು ಸಾಕು ನಮ್ಮನ್ನು ರಕ್ಷಿಸಲು. ಜಾತಕದಲ್ಲಿ ಶನಿ ಕೆಟ್ಟ ಸ್ಥಾನದಲ್ಲಿ ಇದ್ದರೂ ಅದಕ್ಕೆ ಗುರು ದೃಷ್ಟಿ ಇದ್ದರೆ ಅವನಿಗೆ ಶನಿಯಿಂದ ಉಂಟಾಗಬಹುದಾದ ಕೆಟ್ಟ ಫಲಗಳನ್ನು ಗುರು ತಡೆಯುತ್ತಾನೆ. ಆದರಿಂದ ಗುರುವಿನ ದೃಷ್ಟಿ ಬದ್ಕಿಗೆ ಅವಶ್ಯ.  ವಲಯೋತ್ಸವ  ನಿಮ್ಮ ನಿಮ್ಮ ಮತ್ತು ನಮ್ಮ ನಿಮ್ಮ ನಡುವಿನ ಭಾಂದವ್ಯದ  ಬೆಸುಗೆ ಗಟ್ಟಿಗೊಳಿಸುತ್ತದೆ ಇಂಥಾ  ಕಾರ್ಯಕ್ರಮಗಳಿಂದ ಸಂಘಟನೆ ಬಲಿಷ್ಠವಾಗುತ್ತದೆ.” ಎಂದರು.

  ಕಾರ್ಯಕ್ರಮದಲ್ಲಿ  ಶ್ರೀ ಕಾರ್ಯದರ್ಶಿ ಮೋಹನ ಭಾಸ್ಕರ ಹೆಗಡೆ  ಪ್ರಾಸ್ತಾವಿಕವಾಗಿ ಮಾತನಾಡಿದರು. ವಲಯದ ಅಧ್ಯಕ್ಷ ಜಿ. ಸ್. ಹೆಗಡೆ ಸಭಾಪೂಜೆ ನಡೆಸಿದರು. ವಲಯ ಕಾರ್ಯದರ್ಶಿ ಕೃಷ್ಣ ಹೆಗಡೆ ವಲಯದ ಒಂದು ವರ್ಷದ ವರದಿ ನೀಡಿದರು. ಮಠದ ಮಹಾ ವಿತ್ತ ಕಾರ್ಯದರ್ಶಿ ಎಮ್. ಎನ್. ಭಟ್  ಮದ್ಗುಣಿ, ಮಹಾಮಂಡಲದ ಕಾರ್ಯದರ್ಶಿ ಪ್ರಮೋದ್ ಪಂಡಿತ್, ಬೆಂಗಳೂರು ಮಂಡಲದ ಅಧ್ಯಕ್ಷ ಕೇಶವ ಕುಮಾರ್, ಉಪಾಧ್ಯಕ್ಷ ಯು. ಎಸ್. ಜಿ. ಭಟ್ , ಕಾರ್ಯದರ್ಶಿ ಜಿ. ಜಿ .ಹೆಗಡೆ. ಹಾಜರಿದ್ದರು.

~*~

ಶ್ರೀಶ್ರೀ ಆಶೀರ್ವಚನ

ಶ್ರೀಶ್ರೀ ಆಶೀರ್ವಚನ

ಶ್ರೀಶ್ರೀ

ಶ್ರೀಶ್ರೀ..

Facebook Comments Box