21-06-2015 , ಶ್ರೀರಾಮಾಶ್ರಮ : ವಿಶ್ವಯೋಗ ದಿನ ವರದಿ

ಯೋಗ ಬದುಕಿಗೆ ಒಳ್ಳೆಯ ಯೋಗ ತಂದು ಕೊಡಬಲ್ಲದು, ಮನಸ್ಸಿಗೆ ವಿಶ್ರಾಂತಿ ಹಾಗು ದೇಹಕ್ಕೆ ಕ್ರಮಬದ್ಧತೆ ಯೋಗದಿಂದ ಲಭ್ಯವಾಗುತ್ತದೆ ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು ಹೇಳಿದರು.

ವಿಶ್ವಯೋಗ ದಿನದ ಅಂಗವಾಗಿ ಶ್ರೀ ರಾಮಾಶ್ರಮದಲ್ಲಿ ನೆಡದ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿದ್ದ ಶ್ರೀಗಳು ಎಲ್ಲಾ ವಿಷಯಗಳಿಗೂ ಮನಸ್ಸೇ ಮೂಲವಾಗಿದೆ, ಉಸಿರಾಟ ಮತ್ತು ಮನಸ್ಸು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಸರಿಯಾದ ಕ್ರಮದಲ್ಲಿ ಉಸಿರಾಡುವ ಮೂಲಕ ಮನಸ್ಸನ್ನು ನಿಯಂತ್ರಿಸಬಹುದು. ಮನಸ್ಸು ನಿಯಂತ್ರಿಸಲು ಸಾಧ್ಯವಾದರೇ ಪ್ರಪಂಚವನ್ನೇ ಗೆಲ್ಲಬಹುದು ಎಂದು ತಿಳಿಸಿದರು.

ಓಡುವ ಮನಸ್ಸನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯುವುದು , ಹಾಗು ಸರಿಯಾದ ಕ್ರಮದಲ್ಲಿ ಉಸಿರಾಡುವುದು, ಹೀಗೆ ತಪ್ಪನ್ನು ಸರಿ ಪಡಿಸುವುದು ಯೋಗವಾಗಿದ್ದು, ಕೇವಲ ಶಾರೀರಿಕ ವ್ಯಾಯಾಮ ಮಾತ್ರ ಯೋಗವಲ್ಲ, ಮನಸ್ಸು ಹಾಗು ಶರೀರದ ಮೇಲೆ ಒಟ್ಟಿಗೆ ಪ್ರಭಾವಭೀರಿ, ಮನಸ್ಸಿಗೆ ಸಮಾಧಾನ ಮತ್ತು ಶರೀರಕ್ಕೆ ಹಿತ ಯೋಗದಿಂದ ಲಭಿಸುತ್ತದೆ. ಯೋಗ ಜೀವನಕ್ಕೆ ಹತ್ತಿರದ ವಿಷಯವಾಗಿದ್ದು, ಭಾರತೀಯ ಆಚಾರ ವಿಚಾರಗಳಲ್ಲಿ ಯೋಗವು ಸಹಜವಾಗಿಯೇ ಇದೆ. ಆದುನಿಕ ಜೀವನ ಪದ್ಧತಿಯಿಂದಾಗಿ ಅದು ದೂರವಾಗುತ್ತಿದೆ. ಯೋಗವನ್ನು ಪ್ರತಿನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಶ್ರೀಗಳು ಕರೆನೀಡಿದರು.

Facebook Comments Box