ಪ್ರತಿಭೆ ಹೊರಬರಲು ಹಣ ಅಡ್ಡಿಯಾಗಬಾರದು- ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಕೆಲವರಲ್ಲಿ ಪ್ರತಿಭೆಗಳಿರತ್ತೆ, ಆದರೆ ಸಾಧನೆ ಮಾಡಲು ಹಣವಿರಲ್ಲ,ಪ್ರತಿಭೆ ಹೊರಬರಲು ಹಣ ಅಡ್ಡಿಯಾಗಬಾರದು ಎನ್ನುವ ಕಾರಣದಿಂದ ವಿದ್ಯಾನಿಧಿಯ ಕಲ್ಪನೆ ಮಾಡಲಾಗಿದೆ ಎಂದು ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ನುಡಿದರು. ಅವರು ಇಂದು ಗಿರಿನಗರದ ಶ್ರೀರಾಮಾಶ್ರಮದಲ್ಲಿ ನಡೆದ “ಮುಕ್ರಿ ಸಮಾಜದ ಬಡ ವಿದ್ಯಾರ್ಥಿಗಳಿಗೆ ವಿದ್ಯಾ ಸಹಾಯಧನ ವಿತರಣಾ ಕಾರ್ಯಕ್ರಮ’ದಲ್ಲಿ ದಿವ್ಯಸಾನ್ನಿಧ್ಯ ವಹಿಸಿ… Continue Reading →
ಹರೇ ರಾಮ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಮಹಾಸಂಸ್ಥಾನಮ್ – ಶ್ರೀರಾಮಚಂದ್ರಾಪುರಮಠ ವಿದ್ಯಾ ವಿಭಾಗ ಗಿರಿನಗರದ ಶ್ರೀರಾಮಾಶ್ರಮದಲ್ಲಿ ಮಾರ್ಚ್ 20, 2016 ಭಾನುವಾರದಂದು ಮಧ್ಯಾಹ್ನ 12.30 ಗಂಟೆಗೆ ಪೂಜ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ದಿವ್ಯಸಾನ್ನಿಧ್ಯದಲ್ಲಿ ಹಿಂದುಳಿದ ಪರಿಶಿಷ್ಠ ಜಾತಿಗೆ ಸೇರಿದ ಮುಕ್ರಿ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮುಕ್ರಿ ಸಮಾಜವು ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರಮುಖವಾಗಿ ವಾಸವಾಗಿರುವ ಅತ್ಯಂತ ಹಿಂದುಳಿದ ಸಮಾಜವಾಗಿದ್ದು, ಮುಕ್ರಿ ಸಮಾಜದ ವಿದ್ಯಾರ್ಥಿಗಳ… Continue Reading →
ಶ್ರೀಕ್ಷೇತ್ರ ಗೋಕರ್ಣ – ಶಿವರಾತ್ರಿ ಮಹೋತ್ಸವ ಪುರಾಣ ಪ್ರಸಿದ್ದ ಶ್ರೀಕ್ಷೇತ್ರ ಗೋಕರ್ಣದ ಸಾರ್ವಭೌಮ ಮಹಾಬಲೇಶ್ವರ ದೇವಾಲಯದಲ್ಲಿ ಶಿವರಾತ್ರಿ ಮಹೋತ್ಸವದ ಪ್ರಯುಕ್ತ ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ದಿವ್ಯ ಮಾರ್ಗದರ್ಶನದಲ್ಲಿ ದಿನಾಂಕ 02/03/2016 ರಿಂದ 09/03/2016ವರೆಗೆ ಹಲವಾರು ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ತಳಿಲುತೋರಣ – ವಿದ್ಯುದ್ದೀಪಾಲಂಕಾರಗಳಿಂದ ದೇವಾಲಯದ ಪರಿಸರವನ್ನು ಶೃಂಗರಿಸಲಾಗಿದೆ. ದಿನಾಂಕ 07/03/2016 ಸೋಮವಾರ ಶಿವರಾತ್ರಿಯ ಶಿವಯೋಗದ ಶುಭಪರ್ವದಂದು… Continue Reading →
ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ರಾಜನಂದಿಯಾಗಿ ತನ್ನ ಗಾಂಭೀರ್ಯದಿಂದ ಎಲ್ಲರ ಗಮನ ಸೆಳೆದು ಪ್ರೀತಿ ಗಳಿಸಿದ್ದ ‘ರಾಜನಂದಿ’ ಇಂದು ಬೆಳಿಗ್ಗೆ ಇಹಲೋಕ ತೊರೆದು ಶಿವನ ಪಾದ ಸೇರಿತು. ತುಂಬಾ ಸಾಧುವಾಗಿದ್ದ ಈ ನಂದಿ, ದಿನವೂ ಶ್ರೀ ಮಹಾಬಲೇಶ್ವರ ದೇವರ ಉತ್ಸವದ ಜೊತೆ ಪ್ರದಕ್ಷಿಣೆ ಬರುತ್ತಿತ್ತು . ತನ್ನ ಸಾಧು ನಡವಳಿಕೆಯಿಂದ, ಸದಾ ಜೀವ … Continue Reading →
ಅರಿವು, ಭಾವ ಹಾಗೂ ಸಾಹಸಕ್ಕೆ ಶ್ರೀರಾಮಚಂದ್ರಾಪುರಮಠದ ಸನ್ಮಾನ ಕಾಲ: 27/02/2016 ದೇಶ: ಶ್ರೀರಾಮಾಶ್ರಮ,ಬೆಂಗಳೂರು ನಮ್ಮ ಕಣ್ಣಮುಂದೆ ಅನ್ಯಾಯವಾಗುತ್ತಿದ್ದಾಗ ಸುಮ್ಮನೇ ಇರಬಾರದು, ಅನ್ಯಾಯವನ್ನು ತಡೆಯಬೇಕು, ಈ ದಿಶೆಯಲ್ಲಿ ಅಕ್ರಮವಾಗಿ ಸಾಗಾಟಮಾಡಲಾಗುತ್ತಿದ್ದ ಗೋವುಗಳನ್ನು ದಿಟ್ಟತನದಿಂದ ಸಂರಕ್ಷಿಸಿದ ರಿತಿಕಾಳ ಹೋರಾಟ ಸಮಾಜಕ್ಕೆ ಮಾದರಿ, ಹಾಗೆಯೇ ನಮ್ಮ ಸಂಸ್ಕತಿಯನ್ನು ಮರೆಯುತ್ತಿರುವ ಕಾಲಗಟ್ಟದಲ್ಲಿ ಇಸ್ಲಾಂ ಮತದ ಫಾತಿಮತ್ ರಾಮಾಯಣ ಪರೀಕ್ಷೆಯಲ್ಲಿ ಪ್ರಥಮ ಸ್ಥಾನಪಡೆದಿರುವುದು… Continue Reading →