ಗಿರಿನಗರ, ಶ್ರೀ ರಾಮಾಶ್ರಮ:
ಇಂದು ಶ್ರೀ ರಾಮಾಶ್ರಮದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮೂವರು ಶ್ರೀಶಿಷ್ಯರನ್ನು ಶ್ರೀಗುರುಗಳು ಸನ್ಮಾನಿಸಲಿದ್ದಾರೆ.
  • ಅಕ್ರಮವಾಗಿ ಸಾಗಿಸುತ್ತಿದ್ದ ಗೋವುಗಳನ್ನು ದಿಟ್ಟತನದಿಂದ ತಡೆದು, ಗೋವುಗಳನ್ನು ರಕ್ಷಿಸಿದ ರಿತಿಕಾ ಗೋಯಲ್ ಎಂಬವರನ್ನು
  • ರಾಮಾಯಣ ಪರೀಕ್ಷೆಯಲ್ಲಿ ಪ್ರಥಮ ಸ್ಥಾನಪಡೆದ ಫಾತಿಮತ್ ರಾಹಿಲ್ ಎಂಬ ವಿದ್ಯಾರ್ಥಿನಿಯನ್ನು
  • ಶ್ರೀಸಂಸ್ಥಾನದವರ ಅಧಿಕೃತ ಜಾಲಪುಟದಲ್ಲಿ ಉತ್ತಮ ಶೀರ್ಷಿಕೆ ಕೊಡುವ ಸ್ಪರ್ಧೆಯಲ್ಲಿ ಆಕರ್ಷಕ ಶೀರ್ಷಿಕೆಯನ್ನು ನೀಡಿದ ರಘು ವೆಂಕಟಾಚಲಯ್ಯ ಅವರನ್ನು
ಪೂಜ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಇಂದು ಸನ್ಮಾನಿಸಿ ಆಶೀರ್ವದಿಸಲಿದ್ದಾರೆ.
ಗಿರಿನಗರದ ಶ್ರೀರಾಮಾಶ್ರಮದಲ್ಲಿ ಇಂದು ಮಧ್ಯಾಹ್ನ 12.30 ಕ್ಕೆ ನೆಡೆಯುವ ಈ ಕಾರ್ಯಕ್ರಮದಲ್ಲಿ ನಡೆಯಲಿರುವ ವಿಶಿಷ್ಟವಾದ ಸಾಧನೆಮಾಡಿದವರನ್ನು ಗುರುತಿಸಿ ಸನ್ಮಾನಿಸುತ್ತಿರುವ ಈ ವಿಶೇಷ ಕಾರ್ಯಕ್ರಮದಲ್ಲಿ ತಮ್ಮೆಲ್ಲರ ಉಪಸ್ಥಿತಿಯನ್ನು ಕೋರುತ್ತೇವೆ.
Facebook Comments Box