ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ನಿರ್ದೇಶನದಲ್ಲಿರುವ ಮುಳ್ಳೇರಿಯ ಮಂಡಲ ಎಣ್ಮಕಜೆ ವಲಯ ಸಭೆಯು ದಿನಾಂಕ 07.02.2016, ಭಾನುವಾರದಂದು ಪರ್ತಜೆ ಶಿವಪ್ರಸಾದ ವರ್ಮುಡಿ ಇವರ ಮನೆಯಲ್ಲಿ ಬಹು ವಿಶಿಷ್ಟವಾಗಿ ಜರುಗಿತು.
ಬೆಳಗ್ಗೆ 09.45 ರಿಂದ ಧ್ವಜಾರೋಹಣ, ಶಂಖನಾದ, ಗುರುವಂದನೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.
ಮಂಡಲ ಧರ್ಮವಿಭಾಗದ ಪ್ರಮುಖರಾದ ವೇ| ಮೂ| ಕೇಶವ ಪ್ರಸಾದ ಕೂಟೇಲು ಇವರ ಮಾರ್ಗದರ್ಶನದಲ್ಲಿ ಕಾಸರಗೋಡು ಗಿಡ್ಡ ತಳಿಯ ಗೋಪೂಜೆಯನ್ನು ಮನೆಯ ಯಜಮಾನರು ನೆರವೇರಿಸಿದರು ಹಾಗೂ ಸೇರಿದ ಎಲ್ಲ ವಲಯ ಸದಸ್ಯರು ಗೋವಿಗೆ ಆರತಿಯನ್ನು ಬೆಳಗುವದರ ಜೊತೆಯಲ್ಲಿ ಗೋಗ್ರಾಸವನ್ನು ನೀಡಲಾಯಿತು.

ಶಿವಪ್ರಸಾದ ವರ್ಮುಡಿ ಇವರಿಂದ ಸ್ವಾಗತ ಪ್ರಸ್ತಾವನೆಯೊಂದಿಗೆ ಪ್ರಾರಂಭಗೊಂಡ ಸಭೆಯಲ್ಲಿ “ಕೃಷಿಯಲ್ಲಿ ಆರ್ಥಿಕ ನಿರ್ವಹಣೆಯ” ಬಗ್ಗೆ ಪ್ರಗತಿಪರ ಕೃಷಿಕರಾದ ಎ.ಪಿ.ಸದಾಶಿವ ಮರಿಕೆ ಇವರು ಸಭಾಸದರಿಗೆ ಅತ್ಯುಪಯುಕ್ತ ಮಾಹಿತಿಯನ್ನು ನೀಡಿದರು ಹಾಗೂ ಕೃಷಿಯಲ್ಲಿ ಯಾಂತ್ರೀಕರಣದ ಅಗತ್ಯತೆಯ ಬಗ್ಗೆ ಸಂವಾದವು ನಡೆಯಿತು.
ನಂತರ “ಪ್ರಸ್ತುತ ಸನ್ನಿವೇಶದಲ್ಲಿ ಆರೋಗ್ಯಕರ ಜೀವನಶೈಲಿಯ” ಬಗ್ಗೆ ಶ್ರೀಶ ಪರ್ತಜೆ ಅವರಿಂದ ನಡೆದ ಕಮ್ಮಟದ ಜೊತೆಯಲ್ಲಿ ಸಾಮಾನ್ಯ ಕಾಯಿಲೆಗಳ ನಿಯಂತ್ರಣಗಳ ಬಗ್ಗೆ ಸಂವಾದ ನಡೆಯಿತು.
ಸಭಾಧ್ಯಕ್ಷರಾಗಿ ಮುಳ್ಳೇರಿಯ ಮಂಡಲಾಧ್ಯಕ್ಷರಾದ ಬಿ.ಜಿ.ರಾಮಭಟ್ಟ ಹಾಗೂ ಮುಖ್ಯ ಅತಿಥಿಗಳಾಗಿ ಮಂಡಲ ಕಾರ್ಯದರ್ಶಿ ಮೊಗ್ರ ಸತ್ಯನಾರಾಯಣ ಭಟ್ಟರು ಉಪಸ್ಥಿತರಿದ್ದರು. ಶಂಕರಪ್ರಸಾದ ಕುಂಚಿನಡ್ಕ ಇವರು ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ಗಣೇಶಕುಮಾರರು ವಂದಿಸಿದರು.
ಸಮಾರಂಭದಂಗವಾಗಿ ಮಾತೃವಿಭಾಗದವರಿಂದ ಕುಂಕುಮಾರ್ಚನೆ ಹಾಗೂ ಮಹನೀಯರಿಂದ ಹಲಸಿನತೋಟದ ವೀಕ್ಷಣೆ ನಡೆಯಿತು. ಬಳಿಕ ಮಂಗಳಾರತಿ, ಸಾಮೂಹಿಕ ಪ್ರಾರ್ಥನೆ ನಡೆಯಿತು.

ಸತತವಾಗಿ ಹನ್ನೆರಡು ವರ್ಷಗಳ ಕಾಲ ವಲಯದಲ್ಲಿ ಅನೇಕ ಮಂದಿಗೆ ರುದ್ರಾಧ್ಯಯನದ ಪಾಠ ಮಾಡಿದ ವೇ| ಮೂ| ಚವರ್ಕಾಡು ಗೋವಿಂದ ಜೋಯಿಸರಿಗೆ ಮಂಡಲ ಪ್ರಮುಖರು ಶಾಲುಹೊದೆಸಿ, ಸ್ಮರಣಿಕೆ ನೀಡಿ ಗೌರವಿಸಿದರು ಹಾಗೂ ಶಿಷ್ಯವೃಂದದಿಂದ ಫಲ ತಾಂಬೂಲ ಸಹಿತ ಗುರುದಕ್ಷಿಣೆಯನ್ನು ನೀಡಲಾಯಿತು.
ರಕ್ತದಾನಿಗಳಾದ ವೆಂಕಟರಮಣ ಭಟ್ಟ ಕೋಡುಮಾಡು ಹಾಗೂ ಕಡಪ್ಪು ಮುರಳೀಕೃಷ್ಣ ಇವರನ್ನು ಸಭೆಯಲ್ಲಿ ಗೌರವಿಸಲಾಯಿತು. ಮೊಗ್ರ ಸತ್ಯನಾರಾಯಣ ಭಟ್ಟರು ಶ್ರೀಗುರುಸೇವೆಯಲ್ಲಿ ತೊಡಗಿ ಸತ್ಕಾರ್ಯಗಳಲ್ಲಿ ನಡೆಯುವಂತೆ ಸಲಹೆಯನ್ನಿತ್ತರು. ಮಂಡಲಾಧ್ಯಕ್ಷರಾದ ಬಿ ಜಿ ರಾಮಭಟ್ಟರು ಮೂಲಮಠದ ಮಾಹಿತಿಯಿತ್ತು ವಲಯಗಳೆಲ್ಲ ಇನ್ನಷ್ಟು ಸೇವಾನಿರತರಾಗಬೇಕೆಂದು ಅಪೇಕ್ಷಿಸಿದರು. ಕಾರ್ಯದರ್ಶಿಗಳಾದ ಶಂಕರ ಪ್ರಸಾದ ಕುಂಚಿನಡ್ಕ ಇವರು ಧನ್ಯವಾದವನ್ನಿತ್ತರು.
ರಾಮತಾರಕ, ಶಾಂತಿಮಂತ್ರ, ಧ್ವಜ ಅವರೋಹಣ, ಶಂಖನಾದದೊಂದಿಗೆ ಸಭೆ ಮುಕ್ತಾಯಗೊಂಡಿತು.

ಸಚಿತ್ರ ವರದಿ:
ಗೋವಿಂದ ಭಟ್ ಬಳ್ಳಮೂಲೆ, ಪ್ರಸಾರ ಪ್ರಧಾನರು – ಮುಳ್ಳೇರ್ಯ ಮಂಡಲ

Facebook Comments