“ತಾಯಿಗೂ ಶ್ರೀಪೀಠಕ್ಕೂ ಪರ್ಯಾಯ ಎಂಬುದಿಲ್ಲ ” – ಶ್ರೀಸಂಸ್ಥಾನ

‘ಈ ಜಗತ್ತಿನಲ್ಲಿ ತಾಯಿ ಕೊಡುವುದನ್ನು ಬೇರೆ ಯಾರಿಂದಲೂ ಹೇಗೆ ಕೊಡುವುದು ಸಾಧ್ಯವೇ ಇಲ್ಲವೋ ಅದೇ ರೀತಿ ಶ್ರೀ ಪೀಠ, ಶ್ರೀ ಮಠ ಗಳು ಸಮಾಜಕ್ಕೆ ಮಾಡುವ ಸೇವೆಗೆ ಪರ್ಯಾಯ ಎಂಬುದೇ ಇಲ್ಲ .. ಬೆಳಗುತ್ತಿರುವ ಜ್ಯೋತಿಗೆ ಕಾರಣವಾದ ತೈಲದ ಪಾತ್ರವನ್ನು ಶ್ರೀ ಪೀಠ ಎಂದಿಗೂ ನಿರ್ವಹಿಸುತ್ತದೆ’ ಎಂದು ದಿನಾಂಕ 7 ಜೂನ್ ರಂದು ನಡೆದ ನಂದಿನಿ ವಲಯದ ವಲಯೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ  ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳು ಅಭಿಪ್ರಾಯ ಪಟ್ಟರು.
ಈ ಮನುಕುಲ ಕಂಡ ಮಹಾನ್ ಮಾನವತಾವಾದಿ ಶ್ರೀರಾಮ .. ಅಂತಹ ಶ್ರೀರಾಮ ಈ ಪೀಠಕ್ಕೆ ಪೀಠವೇರಿದ ಎಲ್ಲಾ ಗುರುಗಳಿಗೂ ಆದರ್ಶ .. ಅದೇ ರೀತಿ ಯಲ್ಲಿ ತಾವು ಶ್ರೀರಾಮ ತೋರಿಸಿದ ದಾರಿಯಲ್ಲಿ ಮುನ್ನಡೆಯುತ್ತಿದ್ದೇವೆ .. ಶ್ರೀ ಮಠದ ಮುಖ್ಯ ಉದ್ದೇಶವೇ  ಸಮಾಜದಲ್ಲಿ ಇನ್ನೊಬ್ಬರ ಸುಖ ದುಃಖಗಳ ಬಗೆಗೆ ಯೋಚಿಸುವಂತೆಯೂ ಅದರ ಬಗೆಗೆ ಪ್ರತಿ ಸ್ಪಂದನೆ ಕೊಡುವಂತೆಯೂ ಮಾಡುವುದು .. ಹಾಗೆ ಇನ್ನೊಬ್ಬರ ಕಷ್ಟ ಸುಖ ಗಳನ್ನು ತಮ್ಮದಾಗಿ ಆಲೋಚಿಸಿದಾಗ ಮನುಷ್ಯ ತನ್ನ ಮನುಷ್ಯತ್ವದಿಂದ ದೈವತ್ವದ ಕಡೆಗೆ ಏರಲು ಸಹಾಯಕ ವಾಗುತ್ತದೆ … ಆದರೆ ಒಬ್ಬ ಮನುಷ್ಯ ಕೇವಲ ಸ್ವಾರ್ಥಿ ಆದರೆ ಆತ ದಾನವತ್ವದ ಕಡೆಗೆ ಇಳಿಯುತ್ತಾನೆ .. ಹೀಗೆ ಸಮಾಜದಲ್ಲಿ ಇರುವ ವ್ಯಕ್ತಿ ಗಳನ್ನು , ಇನ್ನೊಬ್ಬರ , ಸಮಾಜದ ಒಳಿತು ಕೆಡುಕುಗಳ ಬಗೆಗೆ ಯೋಚಿಸುವಂತೆಯೂ ಪ್ರತಿ ಸ್ಪಂದನೆ ಮಾಡುವಂತೆಯೂ ಮಾಡುವಲ್ಲಿ ಈ ವಲಯೋತ್ಸವ ಗಳು ವಿಶೇಷ ಪಾತ್ರ ವಹಿಸುತ್ತವೆ ಮತ್ತು ಅವೇ ಅವುಗಳ ಮುಖ್ಯ ಉದ್ದೇಶ ಎಂಬ ಸಂದೇಶವನ್ನು ವಲಯೋತ್ಸವಕ್ಕೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತಾದಿಗಳಿಗೆ ನೀಡಿದರು.
ಸ್ಥಳೀಯ ಮಕ್ಕಳಿಂದ ತೆಂಕುತಿಟ್ಟಿನ ‘ಪುಣ್ಯ ಕೋಟಿ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು. ಶ್ರೀಸಂಸ್ಥಾನದವರು ದಿವ್ಯಸಾನಿಧ್ಯವನ್ನು ವಹಿಸಿ ಮಕ್ಕಳಿಗೆ ಆಶೀರ್ವದಿಸಿದರು. ಈ ಸಂದರ್ಭದಲ್ಲಿ . ಯೋಗಗುರು ಉಮಾಮಹೇಶ್ವರ , ಮಹಾಮಂಡಲದ ಅಧ್ಯಕ್ಧರಾದ ಡಾ. ವೈ ವಿ ಕೃಷ್ಣಮೂರ್ತಿ , ಮಹಾಮಂಡಲದ ಉಪಾಧ್ಯಕ್ಷ ಡಾ. ಸೀತಾರಾಮ ಪ್ರಸಾದ , ಉದ್ಯಮಿ ಮಹಾವೀರ ಸೋನಿಕಾ , ಮಂಡಲ ಉಪಾಧ್ಯಕ್ಷ ಯು ಎಸ್ ವಿ ಭಟ್, ವಲಯ ಅಧ್ಯಕ್ಷ ಎಂ ಜಿ ಭಾಗವತ್ , ಕಾರ್ಯದರ್ಶಿ ಅರ್ ಕೆ ಬೆಳ್ಳಾರೆ , ಶ್ರೀ ಕಾರ್ಯದರ್ಶಿ  ಶ್ರೀ ಪ್ರಕಾಶ ಮಳಲಗದ್ದೆ  ವೇದಿಕೆ ಯಲ್ಲಿ ಉಪಸ್ತಿತರಿದ್ದರು . ಇದೇ ಸಂದರ್ಭದಲ್ಲಿ ನಂದಿನಿ ಎಂಬ ಕಿರುಮಾಹಿತಿ ಪುಸ್ತಕ ಲೋಕಾರ್ಪಣಗೊಂಡಿತು  ಉದಯಕೃಷ್ಣ ಕಾರ್ಯಕ್ರಮದ ನಿರೂಪಣೆ ಮಾಡಿದರು.

‘ಪುಣ್ಯ ಕೋಟಿ’ ಯಕ್ಷಗಾನವನ್ನು ವೀಕ್ಷಿಸುತ್ತಿರುವ ಶ್ರೀಸಂಸ್ಥಾನ:

Facebook Comments