ಮುಳ್ಳೇರ್ಯ ಮಂಡಲ, ಕಾಸರಗೋಡು:
ಸಮಕಾಲೀನ ಸಂಸ್ಕೃತ ಜಗತ್ತಿನ ಪರಿಚಯ, ಭಾರತೀ ಕಾಲಗಣನೆಯ ವೈಶಿಷ್ಟ್ಯ, ಭಾಷಾಭ್ಯಾಸ, ಸುಬಾಷಿತ ಮತ್ತು ಶ್ಲೋಕಗಳ ಅರಿವನ್ನು ಹೆಚ್ಚಿಸುವ ಉದ್ದೇಶಕ್ಕಾಗಿ ಇದೇ ಬರುವ ಜನವರಿ 19ರಂದು ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ಒಂದು ದಿನದ “ಸಂಸ್ಕೃತ ವಾಗ್ವರ್ಧನ ಕಾರ್ಯಾಗಾರ”ವನ್ನು ಏರ್ಪಡಿಸಲಾಗಿದೆ. ಶಿಬಿರವು ಬೆಳಗ್ಗೆ 9:00ಗಂಟೆಗೆ ಆರಂಭವಾಗಿ ಸಾಯಂಕಾಲ 5:00ಘಂಟೆಯ ವರೆಗೆ ಇರುತ್ತದೆ. ಸಂಸ್ಕೃತ ಹಾಗೂ ಸಂಸ್ಕೃತಿ ಅಭಿಮಾನಿಗಳಾದ ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ಹಿರಿಯ ವೈದಿಕ ವಿದ್ವಾಂಸರುಗಳಾದ ವೇದಮೂರ್ತಿ ಕೋಣಮ್ಮೆ ಶ್ರೀ ಮಹಾದೇವ ಭಟ್ಟರು ಉದ್ಘಾಟಿಸಲಿದ್ದಾರೆ, ವೇದಮೂರ್ತಿ ಶ್ರೀ ಪಳ್ಳತ್ತಡ್ಕ ಪರಮೇಶ್ವರ ಭಟ್ಟರು ಸಮಾರೋಪ ಭಾಷಣವನ್ನು ಮಾಡಲಿದ್ದಾರೆ.

ಮುಂಬಯಿ IIT ಯ ಸಂಶೋಧನಾ ವಿಜ್ಞಾನಿಯಾದ ಡಾ. ಮಹೇಶ ಕೂಳಕ್ಕೂಡ್ಳು, ಪೆರ್ಲದ ನಿವೃತ್ತ ಸಂಸ್ಕೃತ ಅಧ್ಯಾಪಕರಾದ ಡಾ. ಸದಾಶಿವ ಭಟ್, ಧರ್ಮಭಾರತೀ ಪತ್ರಿಕೆಯ ಸಹಸಂಪಾದಕರಾದ ಶ್ರೀ ಲೋಹಿತಶರ್ಮಾ – ಇವರುಗಳು ಸಂಪನ್ಮೂಲವ್ಯಕ್ತಿಗಳಾಗಿ ಶಿಬಿರವನ್ನು ನಡೆಸಿಕೊಡಲಿದ್ದಾರೆ. ರಾಮಚಂದ್ರಾಪುರ ಮಠದ ಮುಳ್ಳೇರ್ಯ ಹವ್ಯಕ ಮಂಡಲದ ಧರ್ಮವಿಭಾಗವು ಹವ್ಯಕ ಸಾಹಿತ್ಯ ವೇದಿಕೆಯಾದ ಒಪ್ಪಣ್ಣ ಬಳಗದ ಸಹಯೋಗದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಿದೆ.
ಆಸಕ್ತರು ಮುಳ್ಳೇರ್ಯಾ ಮಂಡಲ ಧರ್ಮ ಪ್ರಧಾನರಾದ ವೇ.ಮೂ. ಕೇಶವ ಪ್ರಸಾದ ಕೂಟೇಲು (+91 9480159191) ಅಥವಾ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ವೈದಿಕ ವಿಭಾಗ ಸಂಚಾಲಕರಾದ ವೇ.ಮೂ ಗಣೇಶ ಭಟ್ಟ ಮಾಡಾವು (+91 9448254469) ಇವರನ್ನು ಸಂಪರ್ಕಿಸಬಹುದು.

ಆಮಂತ್ರಣ ಲಗತ್ತಿಸಿದೆ:

ಸಂಸ್ಕೃತ ವಾಗ್ವರ್ಧನಾ ಕಾರ್ಯಾಗಾರ - ಮುಜುಂಗಾವು 19-Jan-2016

ಸಂಸ್ಕೃತ ವಾಗ್ವರ್ಧನಾ ಕಾರ್ಯಾಗಾರ – ಮುಜುಂಗಾವು 19-Jan-2016

Facebook Comments