ಮುಳ್ಳೇರ್ಯ, 26.07.2015.

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ದಿಗ್ದರ್ಶನದಲ್ಲಿರುವ ಮುಳ್ಳೇರ್ಯ ಹವ್ಯಕ ಮಂಡಲ ಸಭೆಯು ಮಂಡಲಾಧ್ಯಕ್ಷ ಗೋಳಿತ್ತಡ್ಕ ಶ್ರೀ ಬಿ. ಜಿ. ರಾಮ್ ಭಟ್ ಅವರ ನಿವಾಸದಲ್ಲಿ ಜರಗಿತು. ಧ್ವಜಾರೋಹಣ, ಶಂಖನಾದ, ಗುರುವಂದನೆಯೊಂದಿಗೆ ಸಭೆ ಪ್ರಾರಂಭವಾಯಿತು. ಕಾರ್ಯದರ್ಶಿ ಸತ್ಯನಾರಾಯಣ ಭಟ್ ಮೊಗ್ರ ಅವರು ಗತಸಭಾವರದಿವಾಚನ ಮಾಡಿದರು. ಆಯಾ ವಲಯಗಳ ಪದಾಧಿಕಾರಿಗಳು ಮಾಸಿಕ ಕಾರ್ಯಕಲಾಪಗಳ ವರದಿಗಳನ್ನಿತ್ತರು. ಮಂಡಲದ ವಿವಿಧ ವಿಭಾಗಗಳ ಸಂಚಾಲಕರು ಆಯಾ ವಿಭಾಗಳ ಸಮಕಾಲೀನ ಚಟುವಟಿಕೆಗಳನ್ನು ಪ್ರಸ್ತುತಪಡಿಸಿದರು . ಮಂಡಲ ಮಾತೃ ಪ್ರಧಾನೆ ಶ್ರೀಮತಿ ದೇವಕಿ ಪನ್ನೇ ಅವರು “ಹನುಮಾನ್ ಚಾಲೀಸಾ” ಅನುಸಂಧಾನ ಮತ್ತು ಉಪಾಸನೆಯ ಪ್ರಯುಕ್ತ ಪ್ರತೀ ವಲಯಗಳಲ್ಲಿ ಅಭ್ಯಾಸ ತರಗತಿಗಳನ್ನು ನಡೆಸುವ ಕುರಿತು ವಿವರಣೆಯಿತ್ತರು. ಸೇವಾ ವಿಭಾಗ ಸಂಚಾಲಕರಾದ ಚಂದ್ರಶೇಖರ ಭಟ್ ಪಳ್ಳತ್ತಡ್ಕ ಅವರು ಸೇವಾಯಜ್ನವನ್ನು ಪ್ರತೀ ತಿಂಗಳುಗಳಲ್ಲಿ ನಡೆಸುವರೆ ಮಾಹಿತಿಗಳನ್ನಿತ್ತರು. ಸರ್ಪಮಲೆ ಬಾಲಸುಬ್ರಹ್ಮಣ್ಯ ಭಟ್ ಅವರು ಪೆರ್ಲ ಅಮೃತಧಾರಾ ಗೋಶಾಲೆಯ ” ಸುರಭಿ ಸಮರ್ಪಣ್ ” ಸಮಾರಂಭದ ಆಯವ್ಯಯ ಮಂಡನೆ ಮಾಡಿದರು. ಮಂಡಲದ ಪ್ರತೀ ವಲಯಗಳಿಗೆ ಉಸ್ತುವಾರೀ ಸಚಿವರನ್ನು ನೇಮಕಾತಿ ಗೊಳಿಸಲಾಯಿತು. ಸಭೆಯಲ್ಲಿ ಪಿ ಯು ಸಿ ಯಲ್ಲಿ ಉನ್ನತ ಅಂಕಗಳನ್ನು ಗಳಿಸಿದ ವಿದ್ಯಾರ್ಥಿ ರಜತ್ ಭಟ್ ಗೋಳಿತ್ತಡ್ಕ ಮತ್ತು ಬಿ ಎ ಯಮ್ ಯಸ್ ಆಯುರ್ವೇದ ವಿದ್ಯಾರ್ಥಿ ಶಂಕರ ಪ್ರಸಾದ್ ಕಡಪ್ಪು ಅವರನ್ನು ಸ್ಮರಣಿಕೆಗಳನ್ನಿತ್ತು ಪುರಸ್ಕರಿಸಲಾಯಿತು. ಸಾಂಘಿಕ ರಾಮನಾಮಸ್ಮರಣೆ, ಶಾಂತಿ ಮಂತ್ರ, ಧ್ವಜಾವತರಣ, ಶಂಖನಾದದೊಂದಿಗೆ ಸಭೆ ಮುಕ್ತಾಯಗೊಂಡಿತು.

ವರದಿ:
Govinda Ballamoole,
Prasaara, Mullerya Mandala

Facebook Comments