LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಬದುಕೆಲ್ಲ-ಜಗವೆಲ್ಲ ದೀಪಾವಳಿಯೇ ಆಗಲಿ…

Author: ; Published On: ರವಿವಾರ, ನವೆಂಬರ 7th, 2010;

Switch to language: ಕನ್ನಡ | English | हिंदी         Shortlink:

|| ಹರೇರಾಮ ||

ಭಾರತರೆಲ್ಲರಿಗೆ ‘ಪ್ರಭಾದಿನ’ದ ಮಂಗಲಕಾಮನೆಗಳು…

ಆಗಸದಲ್ಲಿ ರವಿ-ಶಶಿ-ತಾರೆಗಳೆಂಬ ಮಹಾದೀಪಗಳನ್ನು ಬೆಳಗಿ ಜಗದೀಶ್ವರನು ನಿತ್ಯದೀಪಾವಳಿಯನ್ನಾಚರಿಸುವನು..
ಆತನ ಮಕ್ಕಳಾದುದಕ್ಕೆ ವರುಷಕ್ಕೊಮ್ಮೆಯಾದರೂ ಹಣತೆಗಳ ಹಬ್ಬವನ್ನಾಚರಿಸಿ ಸಂಭ್ರಮಿಸೋಣ..

‘ಆತ’ ಹಚ್ಚುವ ದೀಪಗಳು ಅವನಿರುವ ತಾವೆಲ್ಲವನ್ನೂ-ವಿಶ್ವವೆಲ್ಲವನ್ನೂ ಬೆಳಗಿದರೆ ನಾವು ಹಚ್ಚುವ ದೀಪಗಳು ನಾವಿರುವ ತಾವುಗಳನ್ನು-ನಮ್ಮ ಪರಿಸರವನ್ನು ಬೆಳಗಲಿ..

ಬೀದಿಯಲಿ ಬೆಳಕೆಷ್ಟಿದ್ದರೇನು ಫಲ ಮನೆಯೊಳಗೆ ಕತ್ತಲಿದ್ದರೆ..!?
ಬದುಕಿನ ಬಹಿರಂಗವು ಬೆಳಗಿದರೆ ಸಾಕೇನು..ಅಂತರಂಗವು ಅಜ್ಞಾನದಲ್ಲಿಯೇ ಮುಳುಗಿದ್ದರೆ..?
ಈ ದೀಪಾವಳಿಯು ನಮ್ಮ ಮನೆ ಬೆಳಗುವಲ್ಲಿ ನಿಲ್ಲದೆ ಮನ ಬೆಳಗುವವರೆಗೆ ವಿಸ್ತರಿಸಲೆಂದು ಹಾರೈಸುವೆವು…

ಸಿದ್ಧಮುಹೂರ್ತವಿದು ದೀಪಾವಳಿ…
ಶುಭಕಾರ್ಯಗಳನ್ನಾರಂಭಿಸಲು ಪರಮಪ್ರಶಸ್ತದಿನ…
ಜ್ಞಾನಸಂಕ್ರಮಣಕ್ಕಿಂತ, ಭಾವಸಂಗಮನಕ್ಕಿಂತ ಶುಭಕಾರ್ಯ ಬೇರುಂಟೇ…?
ಶರೀರದಲ್ಲಿ ಮುಖವಲ್ಲವೇ ಆ ಕಾರ್ಯವನ್ನು ಮಾಡುವುದು..?
ನಮಗೂ ನಿಮಗೂ ಸೇರಿ ಒಂದೇ ಶರೀರ…!
ಅದೇ ‘ಹರೇರಾಮ’
‘ಹರೇರಾಮ’ವು ಜನ್ಮ ತಾಳಿದ ಈ ಶುಭದಿನವಿದು..
ಇಂದಿಗೆ ಒಂದು ವರುಷವಾಯಿತು ಈ ಜ್ಞಾನಶಿಶುವಿಗೆ…
‘ಮೂಕಂ ಕರೋತಿ ವಾಚಾಲಂ’ ಮಕ್ಕಳಲ್ಲಿ ಪ್ರಕಟಗೊಳ್ಳುವ ವಯಸ್ಸದು..

ಇಂದಿನಿಂದ ‘ಹರೇರಾಮ’ದ ಶ್ರೀ-ಮುಖವು ಭಾವ ಬಿಚ್ಚಿ ಮಾತನಾಡತೊಡಗಲಿ…

ಕೇಳಲು ಮೈಯೆಲ್ಲ ಕಿವಿಯಾಗಲಿ…
ನೋಡಲು ಮೈಯೆಲ್ಲ ಕಣ್ಣಾಗಲಿ…
ಭಾವಿಸಲು ಮೈಯೆಲ್ಲ ಮನವಾಗಲಿ…

ಬದುಕೆಲ್ಲ-ಜಗವೆಲ್ಲ ದೀಪಾವಳಿಯೇ ಆಗಲಿ…

|| ಹರೇರಾಮ ||

57 Responses to ಬದುಕೆಲ್ಲ-ಜಗವೆಲ್ಲ ದೀಪಾವಳಿಯೇ ಆಗಲಿ…

 1. Rama Ajjakana

  ಹರೇ ರಾಮ

  [Reply]

  Sri Samsthana Reply:

  ಹರೇ ‘ರಾಮ’

  [Reply]

 2. Raghavendra Narayana

  ಶ್ರೀಮುಖ – ಬಹಿರ೦ಗದಲ್ಲಿ ದೀಪದ ಸಾಲು ಸಾಲಗಳ ಕಾಣುತ್ತಿರುವೆವು ಈ ಎರಡು ದಿನ, ಮೂರನೆ ದಿನ ಅ೦ತರ೦ಗದಲ್ಲಿ ಇರುವ ದೀಪಗಳೂ ಗೋಚರಿಸಲು ಶುರುವಾಗಲಿ…
  ಶ್ರೀಮುಖ ಭವದುಖಃ ಕಡಿಮೆಯಾಗಿಸಲಿ, ನಮ್ಮೆಳ ಬೆಳಕು ಭೂರ್ಭುವಸ್ವಃ ಲೋಕಗಳ ಕಾ೦ತಿಯಲಿ ಮುಳಗಿಸಲಿ, ಶಾ೦ತಿ ಒಳ ಎದೆ೦ದೂ ನೆಲೆಸಿರುವುದು ಎ೦ದು ನಮ್ಮ ಪ್ರಪ೦ಚಕ್ಕೆ ಅರಿವಾಗಿಸಲಿ.
  .
  ಹರೇರಾಮ ವೆಬ್ ಸೈಟ್ ಹುಟ್ಟುಹಬ್ಬದ ಮತ್ತು ದೀಪಾವಳಿಯ ಶುಭಾಶಯಗಳು, ಸಮಸ್ತರಿಗು, ನಿತ್ಯ ಆಡುವವರಿಗು, ನಿತ್ಯ ನೋಡುವವರಿಗು, ನಿತ್ಯ ಸೇವಿಸುವವರಿಗು, ಈ ಸತ್ಸ೦ಗ ಗುಡಿಯ ಮು೦ದೆ ಸುಮ್ಮನೆ ಹಾದುಹೋದವರಿಗು, ಎಲ್ಲರಿಗೂ ಶುಭಾಶಾಯಗಳು..
  ಹರೇರಾಮದಲ್ಲಿ ಆದ್ಯಾತ್ಮ ಒ೦ದು ಸು೦ದರ ಲೋಕವಾಗಿ ತೋರಲಿ, ನಗುವ ಗುರುಕುಲ, ನಗುವ ಗುರು, ನಗುವ ಸಹಪಾಠಿಗಳು, ನಗುವ ನಾದದಲೆಗಳು ಸದಾ ಏಕಾಗ್ರತೆ ಸಾಧಿಸಲು ಸಹಕರಿಸಲಿ.. ಮಗುವಿನ ನಗು ನಿತ್ಯವಾಗಲಿ, ಸ೦ಗವಾಗಲಿ, ಸತ್ಸ೦ಗವಾಗಲಿ, ಅ೦ಗವಾಗಲಿ, ಜೀವದ೦ಗವಾಗಲಿ..
  .
  ಶ್ರೀ ಗುರುಭ್ಯೋ ನಮಃ

  [Reply]

  Sri Samsthana Reply:

  ನೋಟಕರಿದ್ದರೆ ಆಟಕರು…!

  [Reply]

 3. Ganesh Bhat Madavu

  ಸಂಸ್ಥಾನ,ಕತ್ತಲೆಯ ಪುಟಗಳಲ್ಲಿ ಬೆಳಕಿನ ಅಕ್ಷರಗಳು ಸದಾ ಅರಳುತ್ತಿರಲಿ. ಹರೇ ರಾಮ

  [Reply]

  Sri Samsthana Reply:

  ಹೌದು..

  ಇವು ಬಿಳಿಹಾಳೆಯ ಮೇಲಿನ ಕರಿ ಅಕ್ಷರಗಳಲ್ಲ…

  ಕರಿಹಾಳೆಯ ಮೇಲಿನ ಬಿಳಿ ಅಕ್ಷರಗಳು…!!

  [Reply]

 4. sriharsha.jois

  ಹರೇರಾಮ..

  ಹೋಯ್..ಓದಿದ್ರಾ ಶುಭಸಂದೇಶವನ್ನ..?
  ನಮ್ಮಂಥ ತಮೋಪ್ರಿಯ ಶಿಷ್ಯರಿಗೆ ಅಂತರಂಗವನ್ನೆಲ್ಲ ಬೆಳಗಿಸಿ ಬದುಕನ್ನೇ ಬಂಗಾರವಾಗಿಸಲು, ನಮ್ಮೆಲ್ಲರನ್ನೂ ಪ್ರೀತಿಸುವ ಗುರುವೊಬ್ಬನಿದ್ದಾನೆ ಎಂಬುದು ಈಗಲಾದರೂ ಮನಸ್ಸಿನೊಳಗಿಳಿಯಿತಾ..?
  ಇನ್ನೆಲ್ಲಿ ಸಿಕ್ಕೀತು ಇಂತಹ ಅವಕಾಶ.?

  ಸೇರಿಕೊಳ್ಳೋಣ ವಾಹಿನಿಗೆ..
  ತ್ವರೆ ಮಾಡಿ ಬಂಧುಗಳೇ…
  ಪರಿಪರಿಯಾಗಿ ವಿನಂತಿಸುವೆ…

  [Reply]

  Sri Samsthana Reply:

  ಹರ್ಷಾ…

  ಹೃದಯಜೀವಿಯೇ..!

  [Reply]

  Raghava Hegde Reply:

  ಹರೇರಾಮ

  ಪ್ರಣಾಮಗಳು

  ನಿಜವಾಗಲು ಹರ್ಷ ಹ್ರದಯ ಜೀವಿ.

  [Reply]

  Raghava Hegde Reply:

  ಹರೇರಾಮ.

  ನೀನೇ ಧನ್ಫ್ಯನು ಶ್ರೀಗುರುವಿನ ಅನುಗ್ರಹ ಸದಾ ಇರಲಿ ಎಂದು ಹಾರೈಸುವೆ.

  [Reply]

 5. ಮಂಗ್ಳೂರ ಮಾಣಿ...

  ಮೈ ಮನವೆಲ್ಲ ಕಣ್ಣಾಗಿ, ಕಿವಿಯಾಗಿ ತೆರೆದಿದೆ, ಶ್ರೀಮುಖ ವಾಣಿಗೆ..

  [Reply]

  Sri Samsthana Reply:

  ಶ್ರೀವಾಣಿಗೆ ತೆರೆದುಕೊಂಡನು ಮಾಣಿ..!

  [Reply]

  ಮಂಗ್ಳೂರ ಮಾಣಿ... Reply:

  “ಧನ್ಯತೆ” ಎನ್ದರೆ ಏನು ಅನ್ತ ಈಗ ಅನುಭವಕ್ಕೆ ಬನ್ತು.
  ವನ್ದೇ.

  [Reply]

 6. seetharama bhat

  ಹರೇರಾಮ್,

  ಬಹಿರ೦ಗ,ಅ೦ತರ೦ಗ ಬೆಳಗಲಿ
  ಹರೇರಾಮ ಎ೦ಬ ಈ ಗುರು

  [Reply]

 7. maruvala narayana

  ಆದಿ ಶಂಕರರು ಆ ಕಾಲದಲ್ಫ್ಲಿ ಅರತದಾದ್ಯಂತ ಓಡಾಡಿ ಅಷ್ಫ್ತೂ ಕೆಲಸಗಳನ್ಫ್ನು ಮಾಡಿರುವುದು ಸತ್ಫ್ಯವೇ ಎಂಬ ಸಂದೇಹ ಕೆಲವೊಮ್ಫ್ಮೆ ಮನಸ್ಫ್ಸಿನಲ್ಫ್ಲಿ ಮೂಡುತ್ಫ್ತಿತ್ಫ್ತು. ಈ ಶಂಕರರು ಮಾಡುತ್ಫ್ತಿರುವ ಕೆಲಸಗಳನ್ಫ್ನು ಕಂಡಾಗ ಆ ಸಂದೇಹ ದೂರವಾಗುತ್ಫ್ತಿದೆ. ಪ್ಫ್ರಾಯಶಃ ಮುಂದಿನ ಜನಾಂಗಕ್ಫ್ಕೆ ಇಷ್ಫ್ತೂ ಕಾಯ೯ಗಳನ್ಫ್ನು ಒಬ್ಫ್ಬರೇ ಮಾಡಿರುವರೇ ಎಂಬ ಸಂದೇಹ ಬರಲೂ ಬಹುದು. e ಬಳಸಿಕೊಳ್ಫ್ಳುವ ರೀತಿಯಂತೂ ಎಲ್ಫ್ಲರಿಗೆ ಮಾದರಿ. hareraama.in ಹುಟ್ಫ್ತು ಹಬ್ಫ್ಬದ ಶುಭಾಶಯಗಳು. ( ಅನೇಕರಿಗೆ ಬರೆಯಬೇಕೆಂಬ ಬಯಕೆ ಇದ್ಫ್ದರೂ ಒಂದು ತರಹದ ಭಯ. ಏನು ಬರೆಯಬೇಕೆಂದು ತೋಚದಿರುವುದು ಅಲ್ಫ್ಲದೆ ಅತ್ಫ್ಯಂತ ಶ್ಫ್ರೇಷ್ಫ್ಟವಾದ ಲೇಖನಕ್ಫ್ಕೆ ನಮ್ಫ್ಮ ಪ್ಫ್ರತಿಕ್ಫ್ರೀಯೆ ಸಮಂಜಸವೇ ಎಂಬ ಸಂದೇಹ)

  [Reply]

  Sri Samsthana Reply:

  ನಮ್ಮೊಳಗಿನ ಧ್ವನಿ ನಿಮ್ಮೊಳಗೆ ಪ್ರತಿಧ್ವನಿಸಲೆಂದು ಬಯಸುವೆವು…

  [Reply]

 8. Shridevi Vishwanath

  ಹರೇರಾಮ ಸಂಸ್ಥಾನ.
  ಹರೇರಾಮ ಜನ್ಮತಾಳಿದ ಈ ಶುಭ ದಿನದ ಸಂಭ್ರಮವೂ ಸೇರಿ ಎಲ್ಲಾ ದೀಪಾವಳಿ ಹಬ್ಬದ ಸಂಭ್ರಮ ಯಾವತ್ತೂ ಹೆಚ್ಚಾಗುತ್ತಿರಲಿ.
  ಮಾತು ಕಲಿತು, ನಡೆದು, ಓಡಿ, ಆಡಿ ಸಂಭ್ರಮಿಸುವ ಮಗುವಿನ ಬೆಳವಣಿಗೆಯಂತೆ ಹರೇರಾಮ ಬೆಳೆಯಲಿ…
  ಹರೇರಾಮದ ಒಡಲು ನಮ್ಮ ಜ್ಞಾನ ವಿಕಾಸದ, ಗುರು ಪ್ರೀತಿಯ, ರಾಮಾನುಗ್ರಹದ ಪ್ರಾಪ್ತಿಗೆ ವೇದಿಕೆಯಾಗಿ ನಮ್ಮನ್ನು ಬೆಳೆಸುತ್ತಿರಲಿ…
  ಶ್ರೀಮುಖದಲ್ಲಿ ಶ್ರೀ ಗುರುಗಳ ಶ್ರೀ ವಾಣಿ ನಮ್ಮ ಮನದ ಪ್ರಶ್ನೆಗಳಿಗೆ ಉತ್ತರವಾಗಿ.. ನಮ್ಮ ಮನಸ್ಸಿನ ಭಾವನೆಗೆ, ಮುಂದಿನ ದಾರಿಗೆ ಪ್ರಚೋದನೆಯಾಗಲಿ..
  ಧನ್ಯವಾದ ಸಂಸ್ಥಾನ. ನಮ್ಮ ಬದುಕಿನಲ್ಲಿ ನಿತ್ಯ ದೀಪಾವಳಿಯ ಬೆಳಕಿನ ಪ್ರಭೆ ಸದಾ ನಿಮ್ಮ ಆಶೀರ್ವಾದದೊಂದಿಗೆ ಬೆಳಗುತ್ತಿರಲಿ.
  ಹರೇರಾಮ.

  [Reply]

  Sri Samsthana Reply:

  ಶುಭಮನವು ಶುಭವನ್ನೇ ಹಾರೈಸುತ್ತದೆ…

  ಶುಭಹಾರೈಕೆಯು ಶುಭಫಲವನ್ನೇ ಕೊಡುತ್ತದೆ..

  [Reply]

 9. shrinivas hegde

  hare raama,

  gurugale,

  neemmaashirvada dinda ellar manasinalli jnana deepa sada belagali heli bedkatte…

  [Reply]

  Sri Samsthana Reply:

  ನಾವೆಲ್ಲ ದೀಪಗಳಾಗೋಣ..
  ವಿಶ್ವವೇ ದೀಪಾವಳಿಯಾಗಲಿ..

  [Reply]

  shrinivas hegde Reply:

  hare raama,

  gurugale,

  neemma sankalppadage aagtu heli nambidde…

  guruvina sankalppa, shriraaman shakti seridre vishwavee deepavali aaple tumba dina beda heli nanna nambike..

  [Reply]

 10. Dr J Thirumala Prasad

  ದೀಪಾವಳಿಯ ದೀಪವು ಪ್ರಪಂಚವನ್ನು ಬೆಳಗುವಂತೆ, ಗುರು ಕರುಣೆ, ಗುರು ಅನುಗ್ರಹಗಳಿಂದ ಅಂತರಂಗವು ತುಂಬಿ ಬೆಳಗಲಿ. ಗುರು ಹಚ್ಚುವ ಅಂತರಂಗದ ಹಣತೆಯು ಪೂರ್ಣರೂಪದಿಂದ ಪ್ರಜ್ವಲಿಸಲಿ.
  ಹರೇರಾಮದಲ್ಲಿ ಶ್ರೀಮುಖದಿಂದ ಹರಿದುಬರುವ ಜ್ಞಾನ ದೀಪವು ಎಲ್ಲರ ಒಳಗಿನ ಹಣತೆಯನ್ನು ಬೆಳಗಿಸಲಿ, ಅದಕ್ಕೆ ನಮ್ಮಲ್ಲಿರುವ ಶ್ರದ್ಧೆ, ಏಕಾಗ್ರತೆ, ಗುರು ಭಕ್ತಿಗಳು ನಿರಂತರವಾದ ತೈಲ ಧಾರೆಗಳಾಗಲಿ.
  ಎಲ್ಲರಿಗೂ ದೀಪಾವಳಿಯ ಶುಭಾಶಯ

  [Reply]

  Sri Samsthana Reply:

  ತೈಲಧಾರೆಯ ತೆರದಿ……..

  [Reply]

 11. DR.RAVISHANKAR YELKANA

  ಹರೇರಾಮ, ಶ್ರೀ-ಮುಖವು ಭಾವ ಬಿಚ್ಚಿ ಮಾತಾಡಿದರೆ ಸಮ್ಮಖದಲ್ಲಿ ನಾವಿರುತ್ತೇವೆ ಗುರುಗಳೇ.

  [Reply]

  Sri Samsthana Reply:

  ನೀವು ಸಮ್ಮುಖಕ್ಕೆ ಬರುತ್ತಿದ್ದಂತೆ ನಮ್ಮ ಭಾವಗಳು ಶ್ರೀಮುಖದ ಮುಖೇನ ತೆರೆದುಕೊೞುತ್ತವೆ..!

  [Reply]

 12. Anuradha Parvathi

  ಹರೆರಾಮ ಜನ್ಮ ತಾಳಿದ ದಿನ – ನನ್ನ ಬದುಕಿನ ಅತ್ಯಂತ ಸಂತೊಷದ ದಿನಗಳಲ್ಲಿ ಒಂದು. ನೂರಾರು ಮೈಲಿ ದೂರವಿದ್ದರೂ ಗುರುಗಳ ಉಪಸ್ತಿತಿಯ ಅನುಭವ ಕೊಡುವ, ಗುರುಗಳ ಆಶೀರ್ವಾದಗಳನ್ನು ಹೊತ್ತು ತರುವ, virtual ಆಗಿ ಗುರುಗಳ ಸಾನಿಧ್ಯದ ಅನುಭವ ಕೊಡುವ ’ಹರೆರಾಮ’ ಕ್ಕೆ ತಲೆ ಬಾಗುವೆ. ಇದನ್ನು ಸಾಕಾರಗೊಳಿಸಿದ ಎಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು.

  ಶ್ರೀಮುಖದ, ಶ್ರೀವಾಣಿಗೆ ನನ್ನ ಕಿವಿ, ಮನಸ್ಸು ಕಾತುರದಿಂದ ಕಾಯುತ್ತಿದೆ.

  [Reply]

  Sri Samsthana Reply:

  ಸೇತುವಿದು ‘ಹರೇರಾಮ’

  [Reply]

 13. Sharada Jayagovind

  mane mana sadaa theredide belakigagi ,guruvemba belakina aagamanakkagi
  hareraama samsthana

  [Reply]

  Sri Samsthana Reply:

  ಇದೊಂದು ಬಗೆಯ ‘ತೆರೆದ ಹೃದಯದ ಶಾಸ್ತ್ರ-ಚಿಕಿತ್ಸೆ’…!

  [Reply]

  Shreekant Hegde Reply:

  ಆಹಾ !! ಶಾರದಕ್ಕನ ಫೋಟೋ ಬಯ್ಯಂದು !!

  [Reply]

 14. Vidya Ravishankar

  ನಮ್ಮ ಮನೆ-ಮನಗಳನ್ನು ಸದಾ ಬೆಳಗುತ್ತಿರುವ “ಶ್ರೀಗುರು”ವೆಂಬ ದಿವ್ಯಜ್ಯೋತಿಗೆ ನಮ್ಮ ನಮನಗಳು.

  [Reply]

  Sri Samsthana Reply:

  ಅಸ್ಮದತ್ಯಂತಪ್ರಿಯಶಿಷ್ಯರಿಗೆ ಆರದ ಆಶೀರ್ವಾದಗಳು..

  [Reply]

 15. ಜಗದೀಶ್ ಬಿ. ಆರ್.

  ಗುರು ಲಿಖಿತ ಪರಿಪಕ್ವ ವಿಚಾರಗಳೆಲ್ಲವೂ ಸದಾ ಹೃದಯಸ್ಪರ್ಶಿ, ದಿವ್ಯದರ್ಶಿ!!
  ಈ ವಿಚಾರಗಳ ಪ್ರಚಾರಕರಾಗಿ, ಆಚರಿಸಿ ಗುರುಕೃಪೆಗೆ ಭಾಜನರಾಗೋಣ,
  ಭಾ ಜನರಾಗೋಣ!

  [Reply]

  Sri Samsthana Reply:

  ವಿಚಾರಗಳು ಆಚಾರಕ್ಕೆ ಬರಲೆಂದು ಹಾರೈಸುವೆವು…

  [Reply]

 16. gopalakrishna pakalakunja

  ಹರೇ ರಾಮ ಗೆ ಹುಟ್ಟುಹಬ್ಬದ ಹಾಗೂ ದೀಪಾವಳಿಯ ಶುಭಾಶಯಗಳು.
  ದೀಪಾವಳಿ ಯಲ್ಲಿ ಬಲಿ ಯನ್ನೇ ಬಲಿ ಪಡೆದ ತ್ರಿವಿಕ್ರಮನ ವಿಕ್ರಮದ ಹೆಜ್ಜೆಯನ್ನಿರಿಸಿ
  ಶಿಷ್ಯ ಭಕ್ತ ಜನಮನದ ಅಜ್ನಾನಾಂದಕಾರ ಕಳೆದು ಸುಜ್ನಾನ ದೀಪದ
  ಬೆಳಕನ್ನು ಬೆಳಗಿಸುತ್ತಾ ಬೆಳೆದ ಪರಿ ಹುಬ್ಬೇರಿಸಿ ಕಣ್ಣು ತೆರೆಸುವಂತಹದು.

  ಶ್ರೀ ಸಂಸ್ಥಾನದ ಬರಹಕ್ಕಾಗಿ ‘ಶ್ರೀರಾಮನ ಬರವನ್ನೇ ಕಾಯುತ್ತಿದ್ದ ಶಬರಿಯಂತೆ’ ಕಾಯುತ್ತಿರುವವರ ಸಂಖ್ಯೆ ಅಸಂಖ್ಯ.
  ಪ್ರತಿಕ್ರಿಯೆ ಯೊಂದಿಗೆ ಸ್ಪಂದಿಸಲು ಪ್ರಯತ್ನಿಸವ ನಮ್ಮ ಬಾಲಿಶ ಪ್ರಯತ್ನಕ್ಕೆ
  ಶ್ರೀ ಶ್ರೀ ಗಳು ಉತ್ತರಿಸುವ ಅನುಗ್ರಹ ತೋರಿದರೆ ಸ್ವರ್ಗಕ್ಕೆ ಮೂರೇ ಗೇಣು ನಮಗೆಲ್ಲಾ.

  ಶ್ರೀ ಮುಖ ನಂದಾದೀಪ ಜ್ಯೋತಿಯಿಂದ ನಮ್ಮೆಲ್ಲರ ಹಣತೆ ಗಳನ್ನು ಬೆಗಿಸಿ ಅನುಗ್ರಹಿಸುವಿರಾ ಗುರುದೇವಾ ?

  [Reply]

  Sri Samsthana Reply:

  ನಮ್ಮೊಳಗೆ ದೀಪ ಹಚ್ಚುವನಾರೋ ಅವನೇ ನಿಮ್ಮೊಳಗೂ ಬಂದು ದೀಪ ಹಚ್ಚುವನು…

  [Reply]

 17. Raghavendra Narayana

  ಗುರುಗಳೇ, ಪ್ರಶ್ನೆಗಳಿವೆ, ಶ್ರೀಮುಖದಲ್ಲಿ ವಿವರಿಸಬೇಕೆ೦ದು ಸಾಸ್ಠಾ೦ಗ ಪ್ರಾಣಾಮಗಳೊ೦ದಿಗೆ ಕೇಳಿಕೊಳ್ಳುತ್ತಿದ್ದೇವೆ.
  ಜಗತ್ತನ್ನು ಸಾಕ್ಷಿಭಾವದಿ೦ದ ನೋಡುವುದು ಎ೦ದರೆ ಏನು ಮತ್ತು ಹೇಗೆ?
  ಸಾಕ್ಷಿಭಾವದಿ೦ದ ನೋಡುವುದಾದರೆ ದ್ವೈತ ಭಾವ ಮೂಡುವುದಿಲ್ಲವೆ, ಅದ್ವೈತ ಸಾಧನೆ ಹೇಗೆ ಇದರಲ್ಲಿ?
  .
  ಶ್ರಿಮುಖದ ಮೂಲಕ ಗುರುಗಳ ಬಳಿ ಪ್ರಶ್ನೆಗಳನ್ನು ಕೇಳಲು ಒ೦ದು feature ಒದಗಿಸಿದರೆ ಉತ್ತಮ, ಪ್ರಶ್ನೆಗಳು ಎಲ್ಲರೂ ನೋಡುವ೦ತಿದ್ದರೆ, ಬೇರೆಯವರ ಅವರ ಪ್ರಶ್ನೆಗಳನ್ನು ಸೇರಿಸಬಹುದು… ಎ೦ದು ಅನಿಸಿಕೆ….
  .
  ಶ್ರೀ ಗುರುಭ್ಯೋ ನಮಃ

  [Reply]

  Sri Samsthana Reply:

  ಮುಂದಿನ ಶ್ರೀಮುಖ ನೊಡಿ..

  [Reply]

 18. nandaja haregoppa

  ಹರೇ ರಾಮ

  ಹರೇ ರಾಮವೆ೦ಬ ಆಗಸದಲ್ಲಿ

  ಜಗದೀಶ್ವರನಾದ ರಾಘವೇಶ್ವರರು ಆಚರಿಸುತ್ತಿರುವ

  ನಿತ್ಯ ದೀಪಾವಳಿಯಲ್ಲಿ

  ನಾವೆಲ್ಲ ಪುಟ್ಟ ಪುಟ್ಟ ಹಣತೆಗಳಾಗಿ

  ” ದೀಪವು ನಿನ್ನದೆ ಗಾಳಿಯು ನಿನ್ನದೆ … ಎನ್ನುತ್ತಾ

  ‘ ಜ್ಯೋತಿ ಬೆಳಗುತ ಸಾಗುವಾ

  ಮನದ ಕತ್ತಲೆ ಕಳೆಯುವಾ’

  ಹರೇ ರಾಮ

  [Reply]

  Sri Samsthana Reply:

  ನೀವಿದ್ದರೆ ಮಾತ್ರ ಉಂಟು ನಮ್ಮ ಆಟ…!

  [Reply]

 19. Ganapati

  Hare Raama,

  ಧನ್ಯ. Hareraama.in ಎಮ್ಬ ನನ್ದಾದೀಪ ನಮ್ಮೆಲ್ಲರಿಗು ಸದಾ ಜ್ನಾನದ ಬೆಲಕನ್ನು ತೊಒರುತ್ತಿರಲಿ.

  ಶ್ರೀ ಗುರುಭ್ಯೊ ನಮಃ

  [Reply]

  Sri Samsthana Reply:

  ಹರೇ..!
  ರಾಮ..!

  ನಡೆಸಿಕೊಡು ಹಾಗೆ…

  [Reply]

 20. chs bhat

  ಹರೇರಾಮ.ದಿವ್ಯ ಪ್ರಭೆಯನ್ನು ನೋಡಿದಾಗ ಮೂಕವಾಗುತ್ತೇವೆ.ಹಾಗೇ ಗುರುಗಳ ಲೇಖನ ಓದಿದಾಗಲೂ ಏನು ಹೇಳಬೇಕೆಂದೂ ತೋಚುವುದಿಲ್ಲ. ಻ಷ್ಟೊಂದು ಖುಶಿ, ಅಚ್ಚರಿ ಎಲ್ಲವೂ ಒಟ್ಟಿಗೇ ಅನುಭವಕ್ಕೆ ಬರುತ್ತದೆ. “ಹರೇರಾಮ” ನಮ್ಮನ್ನು ಗುರುಗಳ ಸಮೀಪಕ್ಕೆ ಕರೆತರುವುದಕ್ಕಾಗಿ ಹರೇರಾಮಕ್ಕೆ ಧನ್ಯವಾದಗಳು. ದೀಪಾವಳಿಯ ಸಂದರ್ಭದಲ್ಲಿ ಗುರುಗಳಿಗೆ ಮನಸಾ ನಮನಗಳು. ಸಂಸನಾಭ

  [Reply]

  shrinivas hegde Reply:

  hare raama,

  neja…

  [Reply]

  Sri Samsthana Reply:

  ಸೀ,ಎಚ್,ಎಸ್…

  ನಿನ್ನ ಈ ಪ್ರತಿಕ್ರಿಯೆಯೂ ನಮ್ಮನ್ನು ಪ್ರತಿವಚನವಿಲ್ಲದಂತೆ ಮಾಡುತ್ತಿದೆ…

  [Reply]

 21. mamata hegde

  Hare Rama

  jnana shishuvu antarangada andhakaravannu kaledu jnanada deepavannu belagali spoortiya chilumeyada HARERAAMA ninage koti koti vandanegalu…

  [Reply]

  Sri Samsthana Reply:

  ನೀ ದೀಪರೂಪಿಣಿ..!

  [Reply]

 22. Raghava Hegde

  Hareraama

  ಸಾಗೋಣ ಬೆಳಕಿನೆಡೆಗೆ,ಬೆಳಕಿನ ಪಥದಲ್ಲಿ hareraama.in.ವಂದನೆಗಳು.

  [Reply]

  Sri Samsthana Reply:

  ಒಡಗೂಡಿ ಸಾಗೋಣ ಬೆಳಕಿನೆಡೆಗೆ..

  [Reply]

 23. Sri Samsthana

  ಮೂರು ಬಾರಿ ಹೇಳುವುದೆಂದರೆ ದೃಢತೆಯ ಪರಾಕಾಷ್ಠೆ..!

  [Reply]

 24. Sri Samsthana

  ಈ ಧನ್ಯವಾದ ಮೊದಲು ‘ಶ್ರೀ – ರಾಮ’ನಿಗೆ ಮತ್ತೆ ಸ್ವಲ್ಪ ನಮಗೆ ಸಲ್ಲಬೇಕು..

  [Reply]

 25. vinootha B

  Peace, Love, Faith, Hope ನಾಲ್ಕು ಹಣತೆಗಳು. ಐದನೆಯ ಹಣತೆ ಯಾವುದು ಸಂಸ್ಠಾನ ? ಗುರುಜ್ಯೋತಿ ? ಕ್ಷಮಿಸಿ ಐದನೆಯದಲ್ಲ ಮೊದಲನೆಯದು.

  [Reply]

 26. ಸುಬ್ರಮಣ್ಯ ಶರ್ಮಾ ಪೊಸವಣಿಕೆ

  || ಜೈ ಶ್ರೀ ರಾಮ್ – ಜೈ ಹನುಮಾನ್ ||

  [Reply]

 27. Krishnamurthy Hegde

  ಪಾಶ್ಚಾತ್ಯರ ‘ಸಿಂಡ್ರೆಲ್ಲಾ’ ಕಥೆಯ ತರಹವೇ ರಾಮಾಯಣವೂ ಒಂದು ಸ್ವಾರಸ್ಯಕರ ‘ಮಕ್ಕಳ ಕಥೆ’ಯಷ್ಟೇ ಅಂತ ಭಾವಿಸಿ ಬೆಳೆದು ಬಂದವನು ನಾನು. ಹಾಗಾಗಿ ರಾಮಾಯಣದ ಹಾಗು ಅದರಲ್ಲಿ ಬರುವ ಪಾತ್ರಗಳ ಒಂದು ಸ್ಥೂಲ ಪರಿಚಯ ಮಾತ್ರ ಇತ್ತು.

  ಆದರೆ ರಾಮನ ಹಾಗು ರಾಮಾಯಣದ ಅಗಾಧತೆಯ ಒಂದು ‘ಝಲಕ್’ ತೋರಿಸಿದ್ದು ಗುರುಗಳ ರಾಮಾಯಣ ಪ್ರವಚನಗಳು ಹಾಗು ಈಗ ‘ಹರೇರಾಮ’. ರಾಮಾಯಣ ಮಕ್ಕಳಿಗಿಂತ ಪ್ರಬುದ್ಧರಿಗೇ ಹೆಚ್ಚು ಆವಶ್ಯಕ ಎಂಬ ಅರಿವು ಬರುತ್ತಿರುವುದೇ ಇದರಿಂದ. ‘ಹರೇರಾಮ’ದ ರಾಮಾಯಣವು ನಮ್ಮನ್ನು ನಮ್ಮರಿವಿಲ್ಲದೆಯೇ ವಿಶಾಲಹೃದಯಿಗಳನ್ನಾಗಿ ಮಾಡುತ್ತಿರುವುದರಲ್ಲಿ ಯಾವ ಸಂಶಯವೂ ಇಲ್ಲ.

  ಆದ್ದರಿಂದ ರಾಮನೆಡೆಗೆ ನಮ್ಮನ್ನು ಮುನ್ನೆಡೆಸುತ್ತಿರುವ ರಾಮಾಂಶಸಂಭೂತರಾದ ಗುರುಗಳಿಗೆ ಹಾಗು ಅವರ ‘ಹರೇರಾಮ’ಕ್ಕೆ ಹೃತ್ಪೂರ್ವಕ ನಮನಗಳು ಶುಭಾಶಯಗಳು.

  ಹರೇ ರಾಮ.

  [Reply]

 28. sudarshan

  hare raama

  [Reply]

 29. ಶಿವಕುಮಾರ, ಮೈಸೂರು

  ಹರೇ ರಾಮ!
  ಬೇಗ ಬೆಳಕು ಹರಿಯಲೆಂದು ಕಾಯುತಿಹೆವು ನಾವು ಇಂದು.

  [Reply]

 30. sadanand

  Hare Raam

  gurugala bage apparwadha bhakti namaguntu, dipavalia deepadhante gurugalu puna belakagi bandhu, ennu kelawe dinadalli navellaru puna dipavaliyanu vijrambaneyinda acharisuwa dina baralikuntu, dusta shaktigala mele praharawanu madi sishya shakti ge balawannu koduwa dina baralidhe. jai sriram jai sriram.

  [Reply]

Leave a Reply

Highslide for Wordpress Plugin