LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ರಾಮನ ಬಳಿಕದ ರಘುವಂಶ..

Author: ; Published On: ಸೋಮವಾರ, ದಶಂಬರ 20th, 2010;

Switch to language: ಕನ್ನಡ | English | हिंदी         Shortlink:

ಶ್ರೀರಾಮನ ನಂತರದ ಸೂರ್ಯವಂಶದ ಭವಿಷ್ಯದ ಕುರಿತು ಬಂದಿರುವ ಹಲವಾರು ಪ್ರಶ್ನೆಗಳಿಗೆ ಶ್ರೀ ಭಾಗವತದಲ್ಲಿ ಕಂಡುಬರುವ ಉತ್ತರವಿದು..

• ಪ್ರಭು ಶ್ರೀರಾಮಚಂದ್ರನಿಗೆ ಲವ-ಕುಶರೀರ್ವರು ಮಕ್ಕಳು..
• ಭರತನಿಗೆ ತಕ್ಷ-ಪುಷ್ಕಲರು..
• ಲಕ್ಷ್ಮಣನಿಗೆ ಅಂಗದ-ಚಂದ್ರಕೇತುಗಳು..
• ಶತ್ರುಘ್ನನಿಗೆ ಸುಬಾಹು-ಶತ್ರುಪಾತಿಗಳು..
• ಇವರಲ್ಲಿ ಹಿರಿಯವನಾದ ಕುಶನು ಕುಮುದ್ವತಿಯನ್ನು ವರಿಸಿ ಕುಶಾವತಿ ಅಥವಾ ಕುಶಸ್ಥಲಿಯಲ್ಲಿ ರಾಜ್ಯವಾಳುತ್ತಾನೆ..
• ಲವನು ಶ್ರಾವಸ್ತಿ ಅಥವಾ ಲವಸ್ಥಲಿಯಲ್ಲಿ, ತಕ್ಷನು ತಕ್ಷಶಿಲೆಯಲ್ಲಿ, ಪುಷ್ಕಲನು ಪುಷ್ಕಲಾವತದಲ್ಲಿ, ಅಂಗದನು ಕಾರುಪಥದಲ್ಲಿ,ಚಂದ್ರಕೇತುವು ಚಂದ್ರಕಾಂತದಲ್ಲಿ, ಸುಬಾಹು ಮಧುರಾನಗರಿಯಲ್ಲಿ, ಶತ್ರುಪಾತಿಯು ವಿದಿಶಾನಗರಿಯಲ್ಲಿ ರಾಜ್ಯವಾಳಿದರು..
• ಕುಶ-ಕುಮುದ್ವತೀ ದಂಪತಿಗಳಿಂದ ಅತಿಥಿ.
• ಅವನಿಂದ ನಿಷಧ
• ನಭ
• ಪುಂಡರೀಕ
• ಕ್ಷೇಮಧನ್ವಾ
• ದೇವಾನೀಕ
• ಅನೀಹ
• ಪಾರಿಯಾತ್ರ
• ಬಲಸ್ಥಲ
• ಇವನಿಗೆ ಸೂರ್ಯನ ಅಂಶವನ್ನು ಪಡೆದ ವಜ್ರನಾಭನು ಮಗನಾಗಿ ಹುಟ್ಟಿದ.
• ಇವನ ಮಗ ಖಗಣ
• ವಿಧೃತಿ
• ಹಿರಣ್ಯನಾಭ. ಇವನು ಮಹರ್ಷಿಜೈಮಿನಿಯ ಶಿಷ್ಯನಾಗಿ ಯೋಗಾಚಾರ್ಯನೆಂದು ಖ್ಯಾತನಾಗಿದ್ದ.ಕೋಸಲದೇಶದ ಯಾಜ್ಞವಲ್ಕ್ಯಮಹರ್ಷಿಯು ಹಿರಣ್ಯನಾಭನಿಂದ ಅಧ್ಯಾತ್ಮಶಿಕ್ಷಣವನ್ನು ಪಡೆದ.
• ಹಿರಣ್ಯನಾಭನ ಮಗ ಪುಷ್ಯ
• ಧ್ರುವಸಂಧಿ
• ಸುದರ್ಶನ
• ಅಗ್ನಿವರ್ಣ
• ಶೀಘ್ರ
• ಮರು.ಈ ಮರುವು ಯೋಗಸಮಾಧಿಯಲ್ಲಿ ಸಿದ್ಧಿಯನ್ನು ಪಡೆದಿದ್ದ.ಈಗಲೂ ಈ ಮರುಮಹಾರಾಜನು ಕಲಾಪವೆಂಬ ಗ್ರಾಮದಲ್ಲಿವಾಸಿಸುತ್ತಿದ್ದಾನೆ.ಕಲಿಯುಗದ ಅಂತ್ಯದಲ್ಲಿ ಸೂರ್ಯವಂಶವು ನಷ್ಟವಾದಾಗ ಇವನು ಪುನರಪಿ ಸೂರ್ಯವಂಶವನ್ನು ಬೆಳೆಸುತ್ತಾನೆ.
• ಮರುವಿನ ಮಗ ಪ್ರಸುಶ್ರುತ
• ಸಂಧಿ
• ಅಮರ್ಷಣ
• ಮಹಸ್ವಂತ
• ವಿಶ್ವಸಾಹ್ವ
• ಪ್ರಸೇನಜಿತ್
• ತಕ್ಷಕ
• ಬೃಹದ್ಬಲ-ಈ ಬೃಹದ್ಬಲನನ್ನು ಕುರುಕ್ಷೇತ್ರಯುದ್ಧದಲ್ಲಿ ಅಭಿಮನ್ಯುವು ಸಂಹರಿಸಿದ.
• ಬೃಹದ್ಬಲನ ಮಗ ಬೃಹದ್ರಣ
• ಉರುಕ್ರಿ
• ವತ್ಸವೃದ್ಧ
• ಪ್ರತಿವ್ಯೋಮ
• ಭಾನು
• ದಿವಾಕ
• ಸಹದೇವ
• ಬೃಹದಶ್ವ
• ಭಾನುಮಂತ
• ಪ್ರತೀಕಾಶ್ವ
• ಸುಪ್ರತೀಕ
• ಮರುದೇವ
• ಸುನಕ್ಷತ್ರ
• ಪುಷ್ಕರ
• ಅಂತರಿಕ್ಷ
• ಸುತಪಸ
• ಅಮಿತ್ರಜಿತ್
• ಬೃಹದ್ರಾಜ
• ಬರ್ಹಿ
• ಕೃತಂಜಯ
• ರಣಂಜಯ
• ಸಂಜಯ
• ಶಾಕ್ಯ
• ಶುದ್ಧೋದ
• ಲಾಂಗಲ
• ಪ್ರಸೇನಜಿತ್
• ಕ್ಷುದ್ರಕ
• ರಣಕ
• ಸುರಥ..
ಈ ಸುರಥನಿಗೆ ಸೂರ್ಯವಂಶದ ಕೊನೆಯ ರಾಜನಾದ ಸುಮಿತ್ರನು ಮಗನಾಗಿ ಹುಟ್ಟಿದನು.
ಇವರೆಲ್ಲರೂ ಇಕ್ಷ್ವಾಕು ವಂಶಸಂಭೂತರು.
ಸುಮಿತ್ರನ ನಂತರ ಕಲಿಯುಗದಲ್ಲಿ ಈ ವಂಶವು ಮರೆಯಾಯಿತು.
ಅಂದ ಮಾತ್ರಕ್ಕೆ ಸೂರ್ಯವಂಶವು ನಾಶವಾಗಿಹೋಯಿತೆಂದೇನಲ್ಲ..!
ಸೂರ್ಯ ಹೇಗೆ ಶಾಶ್ವತನೋ ಸೂರ್ಯವಂಶವೂ ಅಂತೆಯೇ ಶಾಶ್ವತವಾದುದು..
ಈ ಹಿಂದೆ ಪ್ರಸ್ತಾಪಿಸಿದಂತೆ ಈಗಲೂ ಕಲಾಪವೆಂಬ ಗ್ರಾಮದಲ್ಲಿ ಅಂತರ್ಹಿತನಾದ ಮರುಮಹಾರಾಜನು ಪುನಃ ಈ ಯುಗದ ಅಂತ್ಯದಲ್ಲಿ ಸೂರ್ಯವಂಶವನ್ನು ಉದ್ಧರಿಸುತ್ತಾನೆ.

ಇದು ಶ್ರೀಮದ್ಭಾಗವತದಲ್ಲಿ ಶುಕಮಹರ್ಷಿಗಳು ಪರೀಕ್ಷಿತ ಮಹಾರಾಜನಿಗೆ ಹೇಳಿದ ರಘುಂಶದ ವರ್ಣನೆ.

10 Responses to ರಾಮನ ಬಳಿಕದ ರಘುವಂಶ..

 1. govindaraj korikkar

  Adbhutham !

  [Reply]

 2. gopalakrishna pakalakunja

  ಹರೇ ರಾಮ !!
  ಎಷ್ಟೊಂದು ಸುಂದರ ವಂಶ ವೃಕ್ಷ ದ ವಿವರಣೆ .
  ಆದರೆ….ಸಂಸ್ಥಾನ …
  ಶ್ರೀ ರಾಮ ರಾಜ್ಯ ಎಂಟು ವಿಭಾಗ ವಾಗಿಇತ್ತೇ ?
  ಯಾರೆಲ್ಲ ಕೋಸಲದಲ್ಲಿ ಚಕ್ರಾಧಿಪತಿಗಳಾಗಿದ್ದರು ?
  ಮತ್ತು ಹೇಗಿದ್ದರು..?

  [Reply]

  Sri Samsthana Reply:

  ಶ್ರೀರಾಮನ ನಂತರ ಅಯೋಧ್ಯೆಯು ನಿರ್ಜನವಾಯಿತು..

  [Reply]

 3. Raghavendra Narayana

  Fantastic.
  .
  This is very good and important information, I am sure many others would be intested to know. Definately, few typical people are only interested to know such things.
  .
  We need to take Hareraama to many other people/forums of like minded.
  Without doubt Hareraama website is providing many good and unique things.
  .
  What is our target for next Deepavali time?
  .
  Shri Gurubhyo Namaha

  [Reply]

 4. nandaja haregoppa

  ಹರೇ ರಾಮ

  ಆದರೆ ಅಯೊದ್ಯೆಯ ಈಗಿನ ಸ್ತಿತಿಗೆ ಕಾರಣ ? ಬೇರೆಲ್ಲ ಕ್ಶೇತ್ರಗಳನ್ನು ಗಮನಿಸಿದಾಗ ಅಯೋದ್ಯೆ ದಿವ್ಯ ನಿರ್ಲಕ್ಶ್ಯಕ್ಕೆ ಒಳ

  ಗಾದದ್ದು ಎದ್ದು ಕಾಣುತ್ತದೆ , ಮರು ಮಹರಾಜರಿ೦ದ ಮತ್ತೆ ಹಿ೦ದಿನ ವೈಭವ ಮರಳಿ ಬ೦ದೀತೆ?

  ಕಲಾಪ ಗ್ರಾಮ ಎಲ್ಲಿದೆ?

  ಹರೇ ರಾಮ

  [Reply]

 5. VISHNU NANDANA

  Hodadthe gurugale.

  Yennadondu sanna kauthuka. Illi “Bruhadbala” na “Abhimanyu” kurukshethralli samhara madida heli iddu.

  “Bruhadbala” iddadu threthayugalli allada? “Abhimanyu” dwapara yugalli allda?

  Yuga badalavane appaga “Pralaya” avutthu alda.

  Hangagi “Bruhadbala” Mahabharathada varege iddadu henge?

  Khanditha idu kauthukada prashne ashte. Yenthadadru thappiddalli kshame kelthe.

  Harerama…

  [Reply]

 6. Anuradha Parvathi

  ಅದ್ಭುತ information. ಸಂಸ್ಥಾನ ಕೆಲವು ಪ್ರಶ್ನೆಗೊ. ಸುರಥ, ಮಾರ್ಕಡೇಯ ಪುರಾಣಲ್ಲಿ ಬಪ್ಪ ಸುರಥನೇಯ? ಕಲಾಪ ಗ್ರಾಮ ಎಲ್ಲಿ ಇದ್ದು? ಬೃಹದ್ಬಲ ಕೌರವನೊಟ್ಟಿಂಗೆ ಹೇಂಗೆ ಸೇರಿಗೊಂಡ?

  [Reply]

  Sri Samsthana Reply:

  “ಕಲಾಪ” ಗ್ರಾಮ ಎಲ್ಲಿದೆ?
  ಇಂತಹ ಪ್ರಶ್ನೆ ಬರಬಹುದೆಂಬ ನಿರೀಕ್ಷೆಯಿತ್ತು.
  ಕಲಾಪವು ಹಿಮವತ್ಪರ್ವತದ ಉತ್ತರದಲ್ಲಿದೆ.”ಶ್ರೀಕೃಷ್ಣನ ಮಹಿಷಿಯರಾದ ಸತ್ಯಭಾಮಾ ಮತ್ತಿತರರು ಆತನ ನಿರ್ಯಾಣದ ನಂತರ ಕಂದಮೂಲಫಲಾಶಿಗಳಾಗಿ ಹರಿಧ್ಯಾನೈಕ ಪರಾಯಣರಾಗಿ ಹಿಮವತ್ಪರ್ವತವನ್ನು ದಾಟಿ ಕಲಾಪಗ್ರಾಮವನ್ನು ಪ್ರವೇಶಿಸಿದರು.”
  ಇದು ಮಹಾಭಾರತದ ಮೌಸಲ ಪರ್ವದಲ್ಲಿನ ವಿಷಯ.
  “ಸತ್ಯಭಾಮಾ ತಥೈವಾನ್ಯಾ ದೇವ್ಯಃ ಕೃಷ್ಣಸ್ಯ ಸಂಮತಾಃ .| ವನಂ ಪ್ರವಿವಿಶೂ ರಾಜನ್ ತಪಸೇ ಕೃತನಿಶ್ಚಯಾ: |
  ಫಲಮೂಲಾದಿಬೋಜಿನ್ಯೋ ಹರಿಧ್ಯಾನೈಕ ತತ್ಪರಾಃ |ಹಿಮವನ್ತಮತಿಕ್ರಮ್ಯ ಕಲಾಪಗ್ರಾಮಮಾವಿಶನ್ ||”

  [Reply]

 7. Govida Bhat

  ” HARE RAMA,
  ” VAMSHA VRIKSHA ” noduvaga romanchanavaayithu

  [Reply]

 8. Venkateshwara KT Nooji

  ಹರೇ ರಾಮ ಆಶೀರ್ವಾದ ಬೇಡುತ್ತಾ,
  ಸೂರ್ಯವಂಶವನ್ನು ಈ ರೀತಿಯಾಗಿ ನೋಡಿದಾಗ ಅದ್ಭುತವೆನಿಸುತ್ತದೆ. ನಮ್ಮ ಸಾಮಾನ್ಯರ ವಂಶವೃಕ್ಷ ಕೂಡಾ ಹೀಗೆ ಮಾಡಬಹುದಲ್ಲವೇ? ಅಲ್ಲದೇ ಮರು ಮಹಾರಾಜನು ಸಾವೇ ಇಲ್ಲದವನಾ?

  [Reply]

Leave a Reply

Highslide for Wordpress Plugin