ಲೇಖಕರಾದ ಶ್ರೀಯುತ ಮಂಜುನಾಥ್ ಆರ್ ಇವರು ತುಮಕೂರಿನವರು. ಪ್ರಸ್ತುತ ಖಾಸಗಿ ಕಂಪೆನಿಯೊಂದರಲ್ಲಿ ಮಾನವ ಸಂಪನ್ಮೂಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶ್ರೀಶ್ರೀ ಗುರುಗಳವರ ಗೋಸಂರಕ್ಷಣೆ ಹಾಗೂ ಧಾರ್ಮಿಕ ಕಾರ್ಯಗಳಿಂದ ಶ್ರೀಪೀಠದೆಡೆಗೆ ಆಕರ್ಷಿತರಾದ ಅಸಂಖ್ಯಾತ ಭಕ್ತರಲ್ಲೊಬ್ಬರು. ತಮ್ಮ ಮನದಾಳದ ಪ್ರೀತಿಯನ್ನು ಈ ಲೇಖನದ ಮೂಲಕ ಪ್ರಕಟಪಡಿಸುತ್ತಿದ್ದಾರೆ.
ಶ್ರೀಯುತರಿಗೆ ಗುರು-ದೇವರು ಶುಭ-ಸಮೃದ್ಧಿಯನ್ನು ಸದಾಕಾಲ ಅನುಗ್ರಹಿಸಲಿ – ಎಂಬುದು ನಮ್ಮ ಹಾರೈಕೆ.
~
ಸಂ.

ಗುಕಾರೋಂಧಕಾರಾಸ್ತು ರುಕಾರಸ್ತನ್ನಿವರ್ತಕಃ
ಅಂಧಕಾರ ನಿವತ್ಸಾರ್ತು ಗುರುರಿತ್ಯಭಿಧೀಯತೇ ||
’ಗು’ ಎಂದರೆ ಅಂಧಕಾರ, ’ರು’ ಎಂದರೆ ಹೋಗಲಾಡಿಸುವವನು, ಯಾರು ಅಂಧಕಾರವೆಂಬ ಅಜ್ಞಾನವನ್ನು ಹೋಗಲಾಡಿಸುತ್ತಾನೋ ಆತನೇ ಗುರು

ಬಂಧುಗಳಾದರೋ ಬಂದುಂಡು ಹೋಗುವವರು
ಬಂಧನವ ಕಳೆಯರು | ಗುರುವು ತಾ ಬಂದು
ಬಂಧನವ ಕಳೆದ ಸರ್ವಜ್ಞ ||

ಗುರು ಮಹಿಮೆಯನ್ನು, ಶಾಸ್ತ್ರಗಳೂ, ಪುರಾಣಗಳೂ ಉಪನಿಷತ್ತುಗಳು ಅನಾದಿಕಾಲದಿಂದಲೂ ಸಾರುತ್ತಲಿವೆ.
ಆದರೆ ಗುರುವಿನ ಪ್ರಾಮುಖ್ಯತೆಯನ್ನು ಅರಿಯದೆ ಕೇವಲ ಹಣದಾಸೆಗೋ, ದ್ವೇಷಕ್ಕೋ, ಇನ್ಯಾರದೋ ಪ್ರೇರಣೆಯಿಂದಲೋ, ತಮ್ಮದೇ ಗ್ರಹಚಾರದಿಂದಲೋ ಅಥವಾ ಕೇವಲ ಅಜ್ಞಾನದಿಂದಲೋ
ಶ್ರೀ ಸಂಸ್ಥಾನದವರ ಮೇಲೆ ನೀವು ಮಾಡಿರುವ ಆರೋಪದ ಗಂಭೀರತೆ ನಿಮಗಿದ್ದಂತಿಲ್ಲ.

ಸಾವಿರ ವರ್ಷಗಳ ಕತ್ತಲೆಯಿರಲಿ, ಚಿಕ್ಕದೀಪವನ್ನು ಬೆಳಗಿಸಿದ ತಕ್ಷಣವೇ ಕತ್ತಲೆಯೆಲ್ಲ ಓಡಿಹೋಗುವುದು ಹಾಗೆಯೇ ಸಾವಿರ ಜನ್ಮದ ಅಜ್ಞಾನದ ಅಂಧಕಾರದಿಂದ ಜೀವನು ಬಂಧಿತನಾಗಿರಬಹುದು,
ಜೀವನದಲ್ಲಿ ಜ್ಞಾನ ಭಾಸ್ಕರನಾದ ಶ್ರೀ ಗುರುವಿನ ಆಗಮನವಾದ ತಕ್ಷಣ ಅಜ್ಞಾನ ಅಂಧಕಾರವೆಲ್ಲ ಕಳೆದು ಅವನು ಮುಕ್ತನಾಗುವನು.

ಜೀವನದಲ್ಲಿ ಎಲ್ಲರಿಗೂ ಗುರು ದೊರೆಯುವುದು ದುರ್ಲಭವು. ಅದರಲ್ಲಿಯೂ ಇಂಥ ಶ್ರೇಷ್ಠ ಗುರುಗಳು ದೊರೆಯಲು ಜನ್ಮ ಜನ್ಮಾಂತರಗಳ ಪುಣ್ಯವಿರಬೇಕು.
ಶ್ರೀ ಸಂಸ್ಥಾನದವರು ನಿಮಗೆ ಎಂಥಾ ಸ್ಥಾನವನ್ನು ನೀಡಿದ್ದರು. ಶ್ರೀರಾಮನ ಸೇವೆಯನ್ನು ಮಾಡಲು ಎಲ್ಲರಿಗೂ ಅವಕಾಶ ದೊರೆಯುವುದಿಲ್ಲ.

ರಾಮಕಥಾ ತಂಡಕ್ಕೆ ನೀವು ಸೇರ್ಪಡೆಯಾಗಿದ್ದರಿಂದ ನಿಮ್ಮ ಅಂತಸ್ತು, ಗೌರವ ನೂರ್ಮಡಿಯಾಯಿತು. ನೀವು ಒಬ್ಬ ಶ್ರೇಷ್ಠ ಗಾಯಕಿಯಾಗಿ ಗುರುತಿಸಲ್ಪಟ್ಟಿರಿ ಇವೆಲ್ಲಾ ಗುರುವಿನ ಕೃಪೆಯಿಂದ ಮಾತ್ರೆವೇ ಸಾಧ್ಯವಾಯಿತು. ಆದರೆ ನಿಮಗೆ ಅಂತಸ್ತು, ಗೌರವ, ಪ್ರಖ್ಯಾತಿ ತಂದುಕೊಟ್ಟ ಗುರುವಿಗೆ ನೀವೇನು ಕೊಟ್ಟಿರಿ?
ಗುರುಪೀಠಕ್ಕೆ ಕಳಂಕ ತರಲು ಹೊರಟಿರಿ, ಗುರುಗಳ ಮನಸ್ಸನ್ನು ನೋಯಿಸಿದಿರಿ, ಗುರುಬಂಧುಗಳ ಕೋಪಕ್ಕೆ ತುತ್ತಾದಿರಿ.
ಗುರುಗಳ ಬಗ್ಗೆ ತಿಳುವಳಿಕೆ ಇಲ್ಲದಿರುವವರ ಬಳಿ, ಹೋಗಿ ಗುರುಗಳ ಮೇಲೆ ಮಿಥ್ಯಾರೋಪ ಮಾಡಿದಿರಿ.

ಆದರೆ ಗುರುಗಳ ಹಾಗೂ ನಿಮ್ಮನ್ನು ಹತ್ತಿರದಿಂದ ಬಲ್ಲ ಮಠದ ಲಕ್ಷಾಂತರ ಭಕ್ತವೃಂದಕ್ಕೆ ನಿಜಸ್ಥಿತಿ ಬಗ್ಗೆ ತಿಳುವಳಿಕೆ ಇತ್ತು.
ಆದರೆ ಗುರುಗಳ ಯಾವ ವ್ರತವನ್ನೂ ನಿಮ್ಮಿಂದ ಭಂಗಗೊಳಿಸಲಾಗಲಿಲ್ಲ.
ಇದರಿಂದ ನಿಮಗೇನು ಸಿಕ್ಕಿತು? ಕೇವಲ ಕುಖ್ಯಾತಿ, ಮಾನಹಾನಿ, ಧನಹಾನಿ, ಜೀವಹಾನಿ. ಪೋಲೀಸು, ಸೆರೆಮನೆ, ಕೋರ್ಟ್ ಇದರಲ್ಲೇ ಹೈರಾಣಾದಿರಿ.
ಶ್ರಿಗಳಿಗೆ ಸ್ವತಃ ಶ್ರೀರಾಮನೇ ರಕ್ಷಣೆಗೆ ನಿಂತಿರುವಾಗ ಹುಲುಮಾನವರಿಂದ ಅವರಿಗೆ ತೊಂದರೆ ಮಾಡಲಾಗುವುದೇ?.

ನಾವು ಶ್ರೀರಾಮನನ್ನು ನೋಡಿಲ್ಲ, ರಾಮರಾಜ್ಯದಲ್ಲಿ ಇದ್ದೆವೋ ಇಲ್ಲವೋ ಗೊತ್ತಿಲ್ಲ.
ಆದರೆ ಶ್ರೀ ಸಂಸ್ಥಾನದವರ ನಡೆ ನುಡಿ, ಪ್ರೀತಿ, ಕರುಣೆ, ಮಾತೃವಾತ್ಸಲ್ಯದಿಂದ ಅವರೇ ನಮಗೆ ಶ್ರೀರಾಮನಂತೆ ಕಂಡರು.
ಅವರು ಎಲ್ಲಿಯೂ ತಾವು ಶ್ರೀರಾಮನೆಂದು ಹೇಳಿಕೊಂಡಿಲ್ಲ, ಆದರೆ ಅವರನ್ನು ಒಂದು ಬಾರಿ ನೋಡಿದರೆ ಸಾಕು, ಅವರನ್ನು ಒಂದು ಬಾರಿ ಮಾತನಾಡಿಸಿದರೆ ಸಾಕು, ಅವರೇ ಸಾಕ್ಷಾತ್ ಶ್ರೀರಾಮನ ಅವತಾರವೆಂದು ಎಂಥವರಿಗೂ ಅನ್ನಿಸದೇ ಇರದು.

ಶ್ರೀಸಂಸ್ಥಾನದವರು ಇದ್ದಲ್ಲಿ ಯಾವಾಗಲೂ ರಾಮ ರಾಜ್ಯ ಇರುತ್ತದೆ. ಇದಕ್ಕೆ ಕೆಕ್ಕಾರಿನ ಜಯ ಚಾತುರ್ಮಾಸ್ಯವೇ ಸಾಕ್ಷಿ.
ನಾನು ಕಂಡಂತೆ ಎಲ್ಲರನ್ನೂ ಅಂದರೆ ಬಡವ, ಬಲ್ಲಿದ, ಪ್ರಭಾವಿ, ಸಾಮಾನ್ಯ ಎಂಬ ಯಾವ ಭೇದವೂ ಇಲ್ಲದೆ ಎಲ್ಲರನ್ನೂ ಪ್ರೀತಿಯಿಂದ ನಗುಮೊಗದಿಂದ ಮಾತನಾಡಿಸುತ್ತಾರೆ.
ಅಲ್ಲಿ ಗುರು ದರ್ಶನ ಮಾಡುವುದಕ್ಕೆ ಹೋದವರಿಗೆ ಯಾವುದಕ್ಕೂ ಕೊರತೆ ಇರಲ್ಲಿಲ್ಲ.
ನಾನು ಒಬ್ಬ ಸಾಮಾನ್ಯ ಭಕ್ತನಾಗಿ ಅಲ್ಲಿಗೆ ಗುರುದರ್ಶನಕ್ಕೆ ಹೋಗಿದ್ದೆ ಅಲ್ಲಿ ನಮಗೆ ಊಟ, ವಸತಿ, ಗುರುಗಳ ಪ್ರೀತಿ ವಾತ್ಸಲ್ಯ ಎಲ್ಲವೂ ಯಥೇಚ್ಚವಾಗಿ ಸಿಕ್ಕಿತು,
ಅಲ್ಲಿಯ ಕಾರ್ಯಕರ್ತರು ರಾಮ ಬಂಟರಂತೆ ಕಾರ್ಯತತ್ಪರರಾಗಿದ್ದರು.

ಶ್ರೀಕಾರ್ಯಕರ್ತರಾಗಿ ಲೇಖಕ ಮಂಜುನಾಥ್.ಆರ್.

ಶ್ರೀಕಾರ್ಯಕರ್ತರಾಗಿ ಲೇಖಕ ಮಂಜುನಾಥ್.ಆರ್.

ನಮ್ಮ ಮನೆಗಳಲ್ಲಿ ಒಂದು ದಿನದ ಸಮಾರಂಭ ನಡೆಸಲು ಎಷ್ಟು ಗಡಿಬಿಡಿ, ಎಷ್ಟು ಆತಂಕ, ಅವಾಂತರ, ಪರದಾಟ ಪಡುತ್ತೇವೆ. ಆದರೆ ಕೆಕ್ಕಾರಿನೆ ಜಯ ಚಾತುರ್ಮಾಸದಲ್ಲಿ ಅರವತ್ತು ದಿನಗಳು ಲಕ್ಷಾಂತ ಗುರುಭಕ್ತರ ಆತಿಥ್ಯ ಅದ್ದೂರಿಯಾಗಿ ನಡೆಯಿತು. ಇದೆಲ್ಲ ಕೇವಲ ಶ್ರೀಸಂಸ್ಥಾನದವರ ಸಂಕಲ್ಪದಿಂದ ಮಾತ್ರ ಸಾದ್ಯವಾಯಿತು.
ರಾಮಕಥಾ, ಭಜಗೋವಿಂದಮ್, ಪುಸ್ತಕ ಬಿಡುಗಡೆ, ಆಹಾರೋತ್ಸವ ಒಂದಾ, ಎರಡಾ?
ಎಲ್ಲಾ ಎಷ್ಟು ಅದ್ದೂರಿಯಾಗಿ ಸಂಪನ್ನಗೊಂಡಿತು. ಇದೆಲ್ಲಾ ರಾಮನ ಕೃಪೆಯಿಲ್ಲದೆ ಸಾಧ್ಯವೇ?
ಸಾಕ್ಷಾತ್ ಶ್ರೀರಾಮನೇ ಸಾಕ್ಷಿಯಾಗಿ ನಿಂತು ನಡೆಸಿದ್ದಾನೆ.

ಮಠಕ್ಕೆ ಭಾರವಾದ ಹೃದಯದಿಂದ, ಖಾಲಿ ಹೊಟ್ಟೆಯಿಂದ ಬನ್ನಿ, ಹೋಗುವಾಗ ಹಗುರವಾದ ಹೃದಯದಿಂದ ಭಾರವಾದ ಹೊಟ್ಟೆಯಿಂದ ಹೋಗಿ ಎನ್ನುವ,
ನಿಮ್ಮ ಕಷ್ಟಗಳನ್ನು ನಮಗೆ ಕೊಡಿ, ನಮ್ಮ ಕಷ್ಟ ನಿಮಗೆ ಬೇಡ ನಮ್ಮ ಸಂತೋಷ ನಿಮಗೆ ಕೊಡುತ್ತೇವೆ ಎನ್ನುವ ಕರುಣಾಮೂರ್ತಿಗೆ
– ಈ ರೀತಿಯ ದ್ರೋಹ ಬಗೆಯಲು ನಿಮಗೆ ಅದು ಹೇಗೆ ಮನಸ್ಸೊಪ್ಪಿತು?
ನೀವು ಮಾಡುದ್ದು ಸರಿಯೇ ಎಂದು ನಿಮ್ಮ ಅಂತರಾತ್ಮಕ್ಕೆ ನೀವೇ ಒಮ್ಮೆ ಕೇಳಿಕೊಳ್ಳಿ,
ಜನ್ಮಜನ್ಮಾಂತರಕ್ಕೂ, ವಂಷಾವಳಿಗೂ ಗುರುದ್ರೋಹದ ಅಪಚಾರವನ್ನು ಕೊಂಡೊಯ್ಯಬೇಡಿ.
ಉಂಡ ಮನೆಗೆ ದ್ರೋಹ ಬಗೆಯಬೇಡಿ.
ಧರ್ಮದ ವಿರುದ್ಧ ಹೋಗಬೇಡಿ.
ನಿಮ್ಮಲ್ಲಿ ಹಣವಿದ್ದಾಗ ಅಥವಾ ನಿಮ್ಮಿಂದ ಇನ್ನಿತರ ಉಪಯೋಗವಿದ್ದಾಗ ಮಾತ್ರ ಎಲ್ಲರೂ ನಿಮ್ಮ ಬೆಂಬಲಕ್ಕೆ ಬರುತ್ತಾರೆ ವಿನಃ ನಿಮ್ಮ ಬಗ್ಗೆ ಪ್ರೀತಿಯಿಂದಾಗಲೀ ಅಥವಾ ಅನುಕಂಪದಿಂದಾಗಲೀ ಅಲ್ಲ.
ನಿಮ್ಮಿಂದ ಏನೂ ಉಪಯೋಗವಿಲ್ಲ ಎಂದು ಗೊತ್ತಾದ ಮರುಕ್ಷಣವೇ ಎಲ್ಲರೂ ನಿಮ್ಮಿಂದ ದೂರ ಸರಿಯುತ್ತಾರೆ.
ಆದರೆ ಮಠದಿಂದ ಯಾವ ಅನುಕೂಲವೂ ಅಪೇಕ್ಷಿಸದ, ಕೇವಲ ಸಂಸ್ಥಾನದವರ ಆಶೀರ್ವಾದ ಮಾತ್ರವೇ ಬಯಸುವ ಲಕ್ಷಾಂತರ ಶಿಷ್ಯವೃಂದ ಶ್ರೀಮಠದ ಬೆಂಬಲಕ್ಕಿದೆ.
ಮಿಗಿಲಾಗಿ ಶ್ರೀರಾಮನೇ ಗುರುಗಳ ರಕ್ಷಣೆಗೆ ನಿಂತಿದ್ದಾನೆ.
ಹನುಮಂತನೇ ದುಷ್ಟ ಶಿಕ್ಷಣಕ್ಕೆ ನಿಂತಿದ್ದಾನೆ.

ಎಚ್ಚರವಿರಲಿ, ನೀವು ಇನ್ನಾದರೂ ನಿಮ್ಮ ತಪ್ಪನ್ನು ತಿದ್ದಿಕೊಳ್ಳದಿದ್ದರೆ ನಿಮ್ಮಿಂದಲೇ ನಿಮ್ಮ ಕುಟುಂಬದ, ವಂಶದ ಸರ್ವನಾಶ ಖಂಡಿತ.
ಇದು ಎಚ್ಚರಿಕೆಯಲ್ಲ ತಿಳುವಳಿಕೆ.
~
ಮಂಜುನಾಥ್.ಆರ್.
(ದೂ:9620915299)

Facebook Comments Box