ಪ್ರಸ್ತುತಿ: ಪ್ರಸನ್ನ.ಎಂ.ಮಾವಿನಕುಳಿ
ಬೆಂಗಳೂರು

ಮತ್ತದೇ ಕೆಕ್ಕಾರಿನಲ್ಲಿ ನಡೆದ ಘಟನೆ ಗಳನ್ನು ಪ್ರಸ್ತಾಪಿಸಲಿಕ್ಕಿದ್ದೇನೆ – ಪೂಜ್ಯ ಶ್ರೀಗಳು ಕೆಕ್ಕಾರಿನಲ್ಲಿ ಚಾತುರ್ಮಾಸ ಆರಂಭ ಮಾಡಿದ ದಿನಗಳವು.
ಒಂದು ದಿನ ಅಲ್ಲಿ ಹಲವು ಜನರ ಒಂದು ಗುಂಪು ಬಂದು ಶ್ರೀಗಳನ್ನು ಭೇಟಿ ಆಯಿತು – ಶ್ರೀಗಳಿಂದ ಮಂತ್ರಾಕ್ಷತೆ ಎಲ್ಲಾ ತೆಗೆದು ಕೊಂಡು ಅದ ಮೇಲೆ ಅಲ್ಲಿ ಕೆಲವರು ಅದೇನೋ ಹೇಳಲಿಕ್ಕೆ ಪ್ರಯತ್ನ ಪಡುತ್ತಿದ್ದರು; ಆದರೆ ಹೇಳುತ್ತಿರಲಿಲ್ಲ – ಗಮನಿಸಿದ್ದು ಗುರುಗಳು – ಅದೇನು ಹೇಳಿ ಎಂದು ಆತ್ಮೀಯತೆ ಯಿಂದ ಶ್ರೀಗಳು ಕೇಳಿದಾಗ ಯಾರಿಗಾದರೂ ಆ ಕ್ಷಣದಲ್ಲಿ ಎಲ್ಲ ಮುಜುಗರ ಎಲ್ಲವೂ ಹೊರಟೆ ಹೋಗುತ್ತದಲ್ಲ – ಸರಿ – “ಗುರುಗಳೇ ನಮ್ಮ ಸಮುದಾಯಕ್ಕೆ ಯಾರೂ ಗುರುಗಳಿಲ್ಲ – ಹತ್ತಾರು ಸಮುದಾಯಕ್ಕೆ ಮಾರ್ಗದರ್ಶನ ನೀಡುತ್ತಾ ಬಂದಿರುವ ತಾವು ನಮಗೂ ಸ್ವಾಮಿಗಳಾಗಬೇಕು .. ಆದರೆ“.. ಮತ್ತೆ ಮತ್ತೆ ತಡವರಿಸಿದರು “…ಆದರೆ ನಾವು ಹರಿಜನರ ಪಂಗಡ ಸ್ವಾಮಿ” -.. ಕೃತ್ರಿಮವಲ್ಲದ ಪ್ರಾಮಾಣಿಕ ಪ್ರಾರ್ಥನೆ ಆಗಿತ್ತು ಅದು .. ತಡವರಿಸಿದ್ದು ತಡೆದದ್ದು ಎಲ್ಲ ಆ ನನ್ನ ಬಾಂಧವರು.
ನಮ್ಮ ಸಂಸ್ಥಾನ ತಡೆಯಲೂ ಇಲ್ಲ ತಡವರಿಸಲೂ ಇಲ್ಲ – ಮತ್ತದೇ ಆತ್ಮೀಯತೆಯೊಂದಿಗೆ ತಕ್ಷಣ ಹೇಳಿಯೇ ಬಿಟ್ಟರು – ನೀವು ಇಂದಿನಿಂದ “ಕೇವಲ ಹರಿಜನರು ಮಾತ್ರವಲ್ಲ ಗುರು ಜನರೂ ಹೌದು”! ..

ಇದು ನಮ್ಮ ಪ್ರೀತಿಯ ಶ್ರೀ ಸಂಸ್ಥಾನ. ನಿಜವಾದ ಅರ್ಥದಲ್ಲಿ ಜಗದ್ಗುರುಗಳು ಅವರು.
ಒಂದು ಅರ್ಥದಲ್ಲಿ ನನಗೆ ಮರುಕವಾಗುತ್ತದೆ ಕೆಲವು ಮಾಧ್ಯಮ ಮಿತ್ರರುಗಳ ಬಗೆಗೆ. ತಮ್ಮ ಜೀವ ಮಾನದಲ್ಲಿ ಎಂದೂ ಮಠಕ್ಕೆ ಹೋಗದ, ತಮ್ಮ ಇವತ್ತಿನ ವರೆಗೆ ಕಳೆದ ಆಯುಸ್ಸಿನಲ್ಲಿ ಒಮ್ಮೆಯೂ ಶ್ರೀಗಳನ್ನು ಭೇಟಿ ಮಾಡದ ಆ ಮಿತ್ರರು ಅದ್ಯಾವುದೋ ಒಂದು ಬಾವಿ ಯಲ್ಲಿ ಕುಳಿತು ಎಲ್ಲ ಸಮುದಾಯಕ್ಕೆ ಸೇರಿದ ಗುರುಗಳನ್ನು ಒಂದು ಸಮುದಾಯಕ್ಕೆ ಕಟ್ಟಿ ಹಾಕಲು ಪ್ರಯತ್ನಿಸುತ್ತಿದ್ದಾರೆ – ಇವುಗಳ ಜೊತೆಗೆ ಫೇಸ್ಬುಕ್ ಮತ್ತಿತರ ಕಡೆ ವೃಥಾ ಜಾತಿ ಬೇಧದ ಆರೋಪ – ಯಾವತ್ತಿಗೂ ಕೂಡ ಶ್ರೀ ಗುರುಗಳ ಪಾದ ಪೂಜೆ ಎಂದರೆ ನಮ್ಮ ಮಠ ಮತ್ತು ಪರಂಪರೆ ಯಲ್ಲಿ ಅದು ಗುರುಗಳ ಕಾಲು ತೊಳೆದು ಮಾಡುವ ಪೂಜೆ ಅಲ್ಲ ಎಂಬ ಸಾಮಾನ್ಯ ಜ್ಞಾನ ಕೂಡ ಇಲ್ಲದ ಆ ಮಹನೀಯರುಗಳು ಶೂದ್ರರಿಂದ ಕಾಲು ಮುಟ್ಟಿಸಿಕೊಳ್ಳದೆ ಪಾದ ಪೂಜೆ ಮಾಡಿಸಿಕೊಳ್ಳುತ್ತಾರೆ (ಪತ್ರಿಕೆ ಗಳಲ್ಲಿ ಬಳಸಿದ ಪದ ಬಳಸಿದ್ದಕ್ಕೆ ಕ್ಷಮೆ ಇರಲಿ) ಎನ್ನುವ ಮಾತುಗಳನ್ನು ಬರೆಯುವುದರ ಮೂಲಕ ನಮ್ಮ ಗುರು ಜನರೂ ಆಗಿರುವ ಹರಿಜನರನ್ನು ಅವಮಾನಿಸುತ್ತಿದ್ದಾರೆ ಕೂಡ.

ಲೇಖಕರು: ಪ್ರಸನ್ನ.ಎಂ.ಮಾವಿನಕುಳಿ

ಲೇಖಕರು: ಪ್ರಸನ್ನ.ಎಂ.ಮಾವಿನಕುಳಿ

ಹಾಗೆ ನೋಡಿದರೆ ನನಗೆ ಬೇರೆ ಸಮುದಾಯದಲ್ಲಿ ಇರುವ ಸ್ನೇಹಿತರ ಸಂಖ್ಯೆ ಯೇ ಜಾಸ್ತಿ – ಮಾತ್ರವಲ್ಲ ಅವರೊಡನೆಯೇ ಸಾಕಸ್ಟು ಬಾರಿ ಶ್ರೀ ಮಠಕ್ಕೆ ಹೋಗಿದ್ದೇನೆ ಅವರೊಂದಿಗೆ ಶ್ರೀಗಳನ್ನು ಭೇಟಿ ಮಾಡಿದ್ದೇನೆ – ಆಗೆಲ್ಲಾ ನನಗೆ ಕೊಟ್ಟಂತೆಯೇ ಅವರಿಗೂ ಅಷ್ಟೇ ಅಭಿಮಾನ ಪ್ರೀತಿಯಿಂದ ಮಂತ್ರಾಕ್ಷತೆ ಕೊಟ್ಟಿರುವುದನ್ನು ನನಗಿಂತ ಹೆಚ್ಚಾಗಿ ಅವರುಗಳೇ ಗಮನಿಸಿದ್ದಾರೆ – ಮತ್ತೆ ಮತ್ತೆ ಬಂದಿದ್ದಾರೆ -ಬಂದಾಗೆಲ್ಲಾ ಊಟ ಮಾಡಿಕೊಂಡು ಹೋಗಿ ಎನ್ನುವ ಒತ್ತಾಯ ಪೂರ್ವಕ ಆದೇಶ ಮಾಡಿದ್ದಾರೆ – ಹಾಗೆ ಒಟ್ಟಿಗೇ ನಾವೆಲ್ಲರೂ ಹೊಟ್ಟೆ ತುಂಬಾ ಊಟ ಮಾಡಿ ಎದ್ದು ಬಂದಿದ್ದೇವೆ!
ಹೌದು ಅನುಮಾನವೇ ಇಲ್ಲ – ಅವರು ನಿಜವಾದ ಅರ್ಥದಲ್ಲಿ ಜಗದ್ಗುರುಗಳು – ಅದಿಲ್ಲದಿದ್ದಲ್ಲಿ ಗೋ ಯಾತ್ರೆ ಯ ಸಂದರ್ಭದಲ್ಲಿ ೮ ಕೋಟಿ ಸಹಿ ಸಂಗ್ರಹ ಸಾದ್ಯವಾಗುತ್ತಿತ್ತೆ – (ಸ್ವಾಮಿ ನಮ್ಮ ಸಮುದಾಯ ಇರುವುದು ಕೆಲವು ಲಕ್ಷ ಮಾತ್ರ!)ಗೋ ಸಮ್ಮೇಳನ ರಾಮ ಸತ್ರಗಳಿಗೆ ಲಕ್ಷ ಲಕ್ಷ ಜನರ ಭಾಗವಹಿಸುವಿಕೆ ನಿಜವಾಗಿರುತ್ತಿತ್ತೆ – ನಮ್ಮ ಸಮುದಾಯದ ಜನ ಕೇವಲ ನೂರರ ಅಂಕೆಯಲ್ಲೂ ಇಲ್ಲದ ಆ ಗುಲ್ಬರ್ಗ ವಿಜಾಪುರದ ಭಾಗಗಳು ಅಲ್ಲೆಲ್ಲೋ ದೂರದ ಜೋಧಪುರ ಹೀಗೆ ಎಲ್ಲೇ ಶ್ರೀಗಳು ಹೋದರೂ ಸೇರುವ ಸಾವಿರ ಸಾವಿರ ಜನ – ಎಲ್ಲಿಂದ ಯಾಕಾಗಿ ಬರುತ್ತಾರೆ – ಉತ್ತರ ಇಷ್ಟೇ –  ಶ್ರೀಗಳ ಮೇಲೆ ಅಭಿಮಾನ ಬೆಳೆಸಿಕೊಳ್ಳಲು ಮತ್ತು ಅವರ ಆತ್ಮೀಯತೆಯ ಅರಿವಾಗಲು ಬೇಕಾಗಿದ್ದು ಯಾವುದೇ ಜಾತಿ ಮತ ಗಳಲ್ಲ – ಬದಲಾಗಿ ಅವರ ಒಂದು ಭೇಟಿ!
ಒಮ್ಮೆ ಭೇಟಿ ಆದರೆ ಮತ್ತೆ ಮತ್ತೆ ಹೋಗುವಂತೆ ಮಾಡುವುದು ಅವರ ಆತ್ಮೀಯತೆ – ಹೀಗೆ ಶ್ರೀ ಮಠದ ಪರಂಪರೆಯಂತೆ ಬಂದ ಹತ್ತು ಹಲವಾರು ಸಮುದಾಯಗಳ ಜೊತೆಗೆ ಇಡಿ ಹಿಂದೂ ಸಮಾಜ ಇದರ ಅನುಭವ ಪಟ್ಟಿದೆ ಮತ್ತು ಅದೇ ಅನುಭವ ಅವರೆಲ್ಲರನ್ನು ಶ್ರೀಗಳ ಮಠದ ಶಿಷ್ಯರನ್ನಾಗಿ ಮಾಡಿದೆ.

ಹೌದು – ನಾನೂ ಕೂಡ ವೈಯುಕ್ತಿಕವಾಗಿ ನನಗೆ ಅವರ ಮೇಲಿರುವ ಅಭಿಮಾನ ಮತ್ತು ಗೌರವಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಭಾವಿಸುವುದಿಲ್ಲ – ಆದರೆ ಈ ಸಂದರ್ಭ ಅದನ್ನು ಅನಿವಾರ್ಯ ಗೊಳಿಸಿದೆ! ಆದ್ದರಿಂದ [ಸಾಮಾಜಿಕ ಮಾಧ್ಯಮ ಗಳಲ್ಲಿ ಇರುವ] ಎಲ್ಲ ನನ್ನ ಗುರು ಜನ ಮಿತ್ರರೇ ಕೂಗಿ ಹೇಳಿ – ಯಾರು ನಮ್ಮ ನಮ್ಮಲ್ಲಿ ಒಡಕು ತರಲು ಪ್ರಯತ್ನಿಸುತ್ತಿದ್ದಾರೆಯೋ, ಯಾರು ನಮ್ಮೆಲ್ಲರ ಸ್ವಾಮಿಗಳಾಗಿರುವ ಶ್ರೀಗಳನ್ನು ಒಂದು ಸಮುದಾಯಕ್ಕೆ ಸೀಮಿತ ಗೊಳಿಸುವ ಮೀರ್ ಸಾಧಕ್ ಬುದ್ದಿ ತೋರಿಸಿ ನಮ್ಮ ಹಿಂದೂ ಸಮಾಜವನ್ನು ಒಡೆಯಲು ಯತ್ನಿಸುತ್ತಾ ಇದ್ದಾರೆಯೋ, ಯಾವ ಶ್ರೀಗಳ ಜೊತೆಗೆ ಸಂತೋಷ ಮತ್ತು ಸಂಕ್ರಮಣ ಸಂದರ್ಭ ದಲ್ಲಿ ಕೂಡ ನಾವೆಲ್ಲರೂ ಇದ್ದು ಶ್ರೀಗಳಿಸ್ಕೋರ ನಮ್ಮ ಜೀವವೂ ತೃಣ ಸಮಾನ ಎಂದು ಹೋರಾಟ ಮಾಡಿದ್ದೆವೆಯೋ ಆ ಗುರುಗಳು ನಮ್ಮೆಲ್ಲರಿಗೆ ಸೇರಿದವರು ಎಂದು ಘರ್ಜಿಸಿ – ವಿನಾ ಕಾರಣ ನಮ್ಮ ಹಿಂದೂ ಸಮಾಜವನ್ನು ಒಡೆಯಲು ಯತ್ನಿಸಿ, ಗುರು ಜನರು ಎಂದು ಪ್ರೀತಿಯಿಂದ ಕರೆಯುವ ಪ್ರಾಂಜಲ, ನಿಷ್ಕಲ್ಮಶ, ಮಗುವಿನ ಮುಗ್ದ ಮನಸ್ಸಿನ ನಮ್ಮ ಇಡೀ ಹಿಂದೂ ಸಮಾಜದ ಶ್ರೇಷ್ಠ ಸಂತರಲ್ಲಿ ಒಬ್ಬರಾದ ನಮ್ಮ ಗುರುಗಳ ಮೇಲಿನ ಷಡ್ಯಂತ್ರ ಗಳಿಗೆ, ಕೀಳು ಅಭಿರುಚಿ ಯ ಬರಹಗಳಿಗೆ ಘಟ್ಟಿಯಾಗಿ ಒಂದು ದಿಕ್ಕಾರ ಹಾಕಿ – ಕೆಕ್ಕಾರಿನಲ್ಲಿ ಅದೊಂದು ಶುಕ್ರವಾರ ಮದ್ಯ ರಾತ್ರಿ ತಾವೇ ತಾವಾಗಿ ಸಾವಿರಾರು ಸಂಖ್ಯೆ ಯಲ್ಲಿ ಬಂದು ಗುರುಗಳ ಜೊತೆ “ನಾವಿದ್ದೇವೆ” ಎಂದು ಇಡೀ ಪ್ರಪಂಚಕ್ಕೆ ತೋರಿಸಿಕೊಟ್ಟ ನನ್ನ ಆತ್ಮೀಯ ಬಂಧುಗಳೇ, ನಮ್ಮೆಲ್ಲರೊಂದಿಗೆ ಇರುವ ಶ್ರೀ ಗುರುಗಳ ಬಂಧ ಈ ತಾಯಿ ಮಗಳು, ಈ ಪೀತ ಪತ್ರಿಕೆಗಳು ಈ ಟಿ ಆರ್ ಪಿ ಗಾಗಿ ಹೊಡೆದಾಡುವ ಟಿ ವಿ ಮಾಧ್ಯಮಗಳು, ಕೇವಲ ಕಾಮೆಂಟ್ ಹಾಕುವ ಉದ್ದೇಶದಿಂದಲೇ ಫೇಸ್ಬುಕ್ ಗಳಲ್ಲಿ ಶ್ರೀ ಮಠದ ಮೇಲೆ ಅಪಾದನೆ ಮಾಡುವ ಚಿಲ್ಲರೆ ಬರಹಗಳು ಇವೆಲ್ಲವನ್ನೂ ಮೀರಿ ಬೆಳೆದದ್ದು ಎಂದು ಅದೇ ಪ್ರಪಂಚಕ್ಕೆ ತೋರಿಸಿಕೊಡಿ!

ಹರೇ ರಾಮ

Facebook Comments Box