LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಇದಕ್ಕೆಲ್ಲಾ ಒಂದು ಅಂತ್ಯ ಬೇಡವೆ?

Author: ; Published On: ಗುರುವಾರ, ಆಗಸ್ತು 28th, 2014;

Switch to language: ಕನ್ನಡ | English | हिंदी         Shortlink:

ಲೇಖಕರು ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ತಂತ್ರಜ್ಞಾನಿಗಳು, ಹಾಗೂ ಕಾನೂನು ಪದವೀಧರರು.
ಶ್ರೀಶ್ರೀಗಳವರನ್ನು ಅತ್ಯಂತ ಸಮೀಪದಿಂದ ಬಲ್ಲ “ಮಾವಿನಕುಳಿ” ಮನೆತನದವರು.

 

ಲೇಖಕರು: ಪ್ರಸನ್ನ.ಎಂ.ಮಾವಿನಕುಳಿ

ಲೇಖಕರು: ಪ್ರಸನ್ನ.ಎಂ.ಮಾವಿನಕುಳಿ

ಇಲ್ಲ, ಸಾಧ್ಯವಿಲ್ಲ.
ಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಕುರಿತು ಚರ್ಚಿತವಾಗುತ್ತಿರುವ ಆರೋಪಗಳನ್ನು ಕೇವಲ ಧಾರ್ಮಿಕ ನೆಲೆಯಲ್ಲಿ ನೋಡಲು ಸಾಧ್ಯವಿಲ್ಲ. ಈ ರಾಜ್ಯ ದೇಶದ ಲಕ್ಷಾಂತರ ಜನ ಭಕ್ತರುಗಳು ಇಟ್ಟಿರುವ ನಂಬಿಕೆಗಿಂತ ಹೊರತಾಗಿ ನಾನು ಈ ಪ್ರಕರಣವನ್ನು ವಸ್ತುಸ್ಥಿತಿಯ ಆಧಾರದ ಮೇಲೆ, ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದೂ, ನನ್ನ ವೈಯಕ್ತಿಕ ಆಸಕ್ತಿಗಳಿಂದ ಕಾನೂನು ಪದವೀಧರನೂ ಆಗಿರುವ ನಾನು, ಈ ಸಮಾಜದ ಒಬ್ಬ ಜವಾಬ್ದಾರಿಯುತ ನಾಗರೀಕನಾಗಿ ನೋಡಲು ಬಯಸುತ್ತೇನೆ. ಇದು ನಾನು ನನ್ನ ತಾಯಿ ಕೆಲವು ದೃಶ್ಯ ಮಾಧ್ಯಮಗಳು ಎಂದಿನಂತೆ ಅತಿ ರಂಜಿತವಾಗಿ ಆ ಆರೋಪಗಳನ್ನು ವೈಭವೀಕರಿಸುತ್ತಿರುವುದನ್ನು ನೋಡಲೇ ಬೇಡ ಎಂದು ಹೇಳಿದಾಗ ನಾನು ಕೊಟ್ಟ ಉತ್ತರ.

ನೋಡಿದೆನಲ್ಲಾ! ನನ್ನ ಇಡೀ ದಿನ ನನ್ನ ಕೆಲಸ ಕಾರ್ಯಗಳನ್ನು ಬದಿಗೊತ್ತಿ, ಯಾವ ದೃಶ್ಯ ಮಾಧ್ಯಮಗಳು ಅತಿರಂಜಿತವಾಗಿ ಶ್ರೀ ಶ್ರೀರಾಘವೇಶ್ವರರ ಮೇಲೆ ನೇತ್ಯಾತ್ಮಕ ಪ್ರಚಾರ ಮಾಡುತ್ತಿವೆಯೋ ಅಂತಹ ದೃಶ್ಯ ಮಾಧ್ಯಮಗಳನ್ನೇ ದಿನವಿಡೀ ನೋಡಿದೆನಲ್ಲಾ! ಹೌದು ಇದ್ದಿದ್ದದಾರೂ ಏನು, ತೋರಿಸಿದ್ದಾದರೂ ಏನು ಭಾರತೀಯ ದಂಡ ಸಂಹಿತೆ ಮತ್ತು ಭಾರತೀಯ ದಂಡಸಂಹಿತೆಯ ಪ್ರಕ್ರಿಯೆಯ ಪ್ರಕಾರ ಯಾವುದಾದರೂ ದೂರು ದಾಖಲಾಗಿದೆಯೇ, ಹೇಳಿಕೊಳ್ಳುತ್ತಿರುವ ದೂರಿನಲ್ಲಿ ಇರುವುದಾದರೂ ಏನು, ದೂರಿನ ಪ್ರತಿಯನ್ನು ಆಸಕ್ತಿಯಿಂದ ಅಭ್ಯಸಿಸಿದ ನನಗೆ ಸಿಕ್ಕಿದ್ದು ಸೊನ್ನೆ. ಮೊದಲಿಗೆ ಪಿರ್ಯಾದುದಾರರ ಹೆಸರೇ ಇಲ್ಲ. ಇರುವುದು ತಾನು ಇಂತಹವರ ಮಗಳು ಎಂದು ಮಾತ್ರ. ಹೋಗಲಿ ಅದರಲ್ಲಿ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಉಲ್ಲೇಖವಾದರೂ ಇದೆಯೇ ಊಹೂಂ ಅದೂ ಇಲ್ಲ. ಅದರಲ್ಲಿರುವುದು ತನ್ನ ತಾಯಿ ಲೈಂಗಿಕ ದೌರ್ಜನ್ಯ ನಡೆದ ಬಗ್ಗೆ ನನ್ನಲ್ಲಿ ಪ್ರಸ್ತಾಪಿಸಿದ್ದರು. ಎಲ್ಲಿ, ಯಾವಾಗ ಊಹೂಂ ಕೇಳಲೇ ಬೇಡಿ.

ಇದರ ಜೊತೆಗೆ ಬನಶಂಕರಿ ಪೊಲೀಸರ ಮೇಲೆ ಸಹಿತ ಆಪಾದನೆ. ಭಾರತೀಯ ದಂಡ ಸಂಹಿತೆ ಪ್ರಕ್ರಿಯೆ ಸೆಕ್ಷನ್ ೧೫೭ರ ಪ್ರಕಾರ ಠಾಣಾಧಿಕಾರಿ ದೂರನ್ನು ಸ್ವೀಕರಿಸಿ ಆ ದೂರಿನಲ್ಲಿ ಸತ್ಯಾಂಶವಿರಬಹುದು ಎಂದು ಅಭಿಪ್ರಾಯ ಹೊಂದುವಂತೆ ಆ ದೂರು ಇದ್ದಲ್ಲಿ ಆ ಠಾಣಾಧಿಕಾರಿ ದೂರನ್ನು ದಾಖಲಿಸಿಕೊಂಡು ಮುಂದುವರೆಯಬೇಕು. ಈಗ ನೀವೇ ಹೇಳಿ ಈ ಮೇಲಿನ ದೂರಿನಲ್ಲಿ ಮೇಲ್ನೋಟಕ್ಕೆ ಏನಾದರೂ ಸತ್ಯಾಂಶವಿದ್ದಂತೆ ಕಾಣುತ್ತದೆಯೇ?

ಇಡೀ ನ್ಯಾಯಶಾಸ್ತ್ರ ಕಾನೂನು ಶಾಸ್ತ್ರವನ್ನು ಎರಡು ಶಬ್ದಗಳಲ್ಲಿ ಹೇಳುವುದಾದರೆ ಅದು “ಬೊನಾಫೈಡ್” ಮತ್ತು “ಮಾಲಾಫೈಡ್” ಪ್ರಾಮಾಣಿಕ ಮತ್ತು ಅಪ್ರಮಾಣಿಕ ಉದ್ದೇಶ. ಅದು ಯಾವುದೇ ಕಾನೂನು ಅಥವಾ ಕಾನೂನು ಪ್ರಕ್ರಿಯೆಗಳಾದರೂ ಕೊನೆಗೆ ನೋಡುವುದು ಪ್ರಾಮಾಣಿಕ ಉದ್ದೇಶವಿದೆಯೇ ಎಂಬುದಾಗಿ. ಹಲವು ವರ್ಷಗಳಿಂದ ಶ್ರೀಮಠದ ಶ್ರೀರಾಮ ಕಥಾಗಳಲ್ಲಿ ಭಾಗವಹಿಸುತ್ತಾ ಶ್ರೀಮಠದಿಂದ ಸಾಕಷ್ಟು ಹಣ ಮತ್ತು ಕೀರ್ತಿ ಸಂಪಾದಿಸಿಕೊಂಡು ನಂತರ ಸಾಕಷ್ಟು ಸಮಯದಿಂದ ಮಠಕ್ಕೆ ಬರುವುದನ್ನೇ ನಿಲ್ಲಿಸಿದ್ದ ಗಾಯಕಿಯೊಬ್ಬರು ಈಗ ಹತ್ತು ಹಲವಾರು ತಿಂಗಳುಗಳ ನಂತರ ಆರೋಪವೊಂದನ್ನು ಬೇರೊಬ್ಬರ ಮೂಲಕ ಮಾಡುತ್ತಾರೆಂದರೆ ಅದರಲ್ಲಿರುವ ಉದ್ದೇಶವೆಂತದ್ದು? ತೊಂದರೆಯೇ ಆಗಿದ್ದಲ್ಲಿ ತಕ್ಷಣ ಏಕೆ ಸೂಕ್ತ ವ್ಯಕ್ತಿಗಳನ್ನು ಸಂಪರ್ಕಿಸಲಿಲ್ಲ. ಕ್ರಿಮಿನಲ್ ಪ್ರಕರಣಗಳಲ್ಲಿ ಅತ್ಯಂತ ಮುಖ್ಯವಾಗಿರುವ ಟೈಮ್ ಫ್ಯಾಕ್ಟರ್ ಎಲ್ಲೋ ಕಳೆದು ಹೋಗಿ ಬಿದ್ದಿದೆಯಲ್ಲಾ. ಸರಿ, ಹೋಗಲಿ ಈಗಲಾದರೂ ಆರೋಪಿಸುತ್ತಿರುವ ದೌರ್ಜನ್ಯ ನಡೆದಿರಬಹುದು ಎಂದು ನಂಬಲು ಕಾರಣವಾಗುವ ಯಾವುದೇ ಸಾಕ್ಷಿ ದಾಖಲೆಗಳೂ ದೂರಿನಲ್ಲಿ ಹೇಳಲ್ಪಟ್ಟಿಲ್ಲ. ಭಾರತೀಯ ದಂಡ ಸಂಹಿತೆ ಪ್ರಕ್ರಿಯೆ ೨೧೩ರ ಸೆಕ್ಷನ್‌ನ ಪ್ರಕಾರ ಅಪರಾಧವನ್ನು ಹೇಳಬೇಕಾದಾಗ ಯಾವ ರೀತಿಯಲ್ಲಿ ಅಪರಾಧ ಆಯಿತು ಎಂಬುದನ್ನು ಕೂಡಾ ಹೇಳಬೇಕಾಗುತ್ತದೆ.

ಸಮಾಜಕ್ಕೆ ಹತ್ತು ಹಲವು ಕೊಡುಗೆಗಳನ್ನು ನೋಡಿ ನಮ್ಮ ಸನಾತನ ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಾ ಯಾವುದೇ ಜಾತಿ ಮತ ಭೇದವಿಲ್ಲದೇ ಸಮಾಜದ ಕೊಟ್ಟ ಕೊನೆಯ ವ್ಯಕ್ತಿಗೂ ತಲುಪುತ್ತಾ ಅವರ ಜೀವನ ಮಟ್ಟ ಸುಧಾರಣೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಶ್ರೀ ರಾಘವೇಶ್ವರಭಾರತೀಮಹಾಸ್ವಾಮಿಗಳ ವಿರುದ್ಧ ನಡೆಯುತ್ತಿರುವ ಒಂದು ಸಂಚು ಮತ್ತು ಲಾಬಿಯ ಅಂಗವಾಗಿರುವ ಈ ದೂರೆಂಬ ನಾಟಕವನ್ನು ಕೆಲವು ದೃಶ್ಯ ಮಾಧ್ಯಮಗಳು ತಮ್ಮ ಟಿ.ಆರ್.ಪಿ. ಹೆಚ್ಚಳಕ್ಕೆ ಬಳಸಿಕೊಳ್ಳುವುದು ನಿಲ್ಲಲಿ. ಆ ದೂರಿನ ಸತ್ಯಾಸತ್ಯತೆಯ ವಿಚಾರಣೆಯಾಗಲಿ, ಅದರ ಬದಲಾಗಿ ಮಾಧ್ಯಮಗಳೇ ನ್ಯಾಯಾಧೀಶರ ಸ್ಥಾನದಲ್ಲಿ ಕುಳಿತರೆ ಅದರಿಂದ ಸಮಾಜದ ಮತ್ತು ಸಮಾಜದ ಸ್ವಾಸ್ಥ್ಯವನ್ನು ಮೇಲಕ್ಕೆತ್ತರಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಶ್ರಮಿಸುವ ಸಮಾಜ ಸುಧಾರಕರಿಗಿಂತ ಅವರಿಂದ ಉಪಕೃತರಾಗುವ ಸಮಾಜಕ್ಕಾಗುವ ಹಾನಿ ಹೆಚ್ಚು ಎಂಬುದನ್ನು ಆ ಕೆಲವು ದೃಶ್ಯ ಮಾಧ್ಯಮಗಳಲ್ಲಿ ವಿನಂತಿಸಿಕೊಳ್ಳಲು ಬಯಸುತ್ತೇನೆ.

– ಲೇ: ಪ್ರಸನ್ನ ಎಂ. ಮಾವಿನಕುಳಿ, ಬಿ.ಇ., (ಐ.ಟಿ.), ಎಲ್.ಎಲ್.ಬಿ.

50 Responses to ಇದಕ್ಕೆಲ್ಲಾ ಒಂದು ಅಂತ್ಯ ಬೇಡವೆ?

 1. Bhagya

  Shree sannidanagalli pranamagalu, correctly said.. How could she do this to our Shree Swamiji? It really hurts.. Bhagya, San Diego, USA

  [Reply]

  Bhagyalakshmi Reply:

  I belive the woman has given ambiguous information in her statement/allegation with purpose. Because Samstana has tightly packed schedule. There are parivara,followers,devotees surrounding swamiji probably round the clock. Had she stated the accruals her case would not stand a chance even for a minute. I would say very lame and fruitless effort to defame our Guru. I pity those who tried to pull off such an act.

  [Reply]

 2. L N Prasad

  Hareraama

  100 % correct.

  Since Media is one of the most important & powerful communication channel , they should exhibit more responsibility while publishing such news / article.

  We know the entire story is created to damage the image of Sri Samstana by anti social elements & true will come out.

  Our humble request with media please don’t do these things for cheep publicity.

  Hareraama

  [Reply]

 3. drdpbhat

  hareraama.
  noorakke nooru sathya.drishya madhyamagalu samajakke olitannu madali.horatagi olitannu maduva ganya vyaktigala melina kshullaka aropagalanna vybhavikarisi samajakke haniyanna maduvudanna nillisali.
  hareraama.

  [Reply]

 4. L.B.PERNAJE.

  ಭಾರತದ ಶ್ರೇಷ್ಟ ನ್ಯಾಯಾಲಯವು ಕಾನೂನುಗಳ ದುರ್ಬಳಕೆಯಾಗುತ್ತಿರುವುದನ್ನು ಗಮನಿಸಿದೆ.ವರದಕ್ಷಿಣೆ ವಿರೋಧಿ ಕಾಯಿದೆ,ಲೈಂಗಿಕ ಕಿರುಕುಳ ಕಾನೂನುಗಳು ದುರ್ಬಳಕೆಯಾಗುತ್ತಿವೆ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಕಿಸಿದ್ದಿದೆ.ಅದೇ ರೀತಿ ಇಲ್ಲಿಯೂ ಒಂದು ಪ್ರಯತ್ನ [ಕಾನೂನು ದುರ್ಬಳಕೆಯ ಯತ್ನ] ನಡೆದಂತೆ ಭಾಸವಾಗುತ್ತಿದೆ.ಪ್ರಾಯ ಪ್ರಬುದ್ಧೆಯಾಗಿರುವ ಒಬ್ಬ ಹೆಣ್ಮಗಳು ತನಗೆ ಲೈಂಗಿಕ ಕಿರಿಕುಳ ಕೊಟ್ಟಿದ್ದಾರೆ ಅಂದರೆ ಸ್ಪಲ್ಪ ಮಟ್ಟಿಗಾದರೂ ನಂಬಲು ಎಡೆಯಾಗಬಹುದು.ಆ ಪ್ರಾಯ ಪ್ರಬುದ್ಧೆಯ ತಾಯಿಯ ವಯಸ್ಸೆಷ್ಟು ? ಬಹುಷ: ಹಿರಿಯ ನಾಗರಿಕೆಯಾಗಿರಬಹುದು.ಅಂತಹವರಿಗೆ ಲೈಂಗಿಕ ಕಿರುಕುಳ ? ಅದೂ ಸಹಸ್ರಾರು ಮಂದಿ ಗೌರವಾನ್ವಿತ ಮಾತೆಯರು ಬಂದು ಹೋಗಿ ಮಾಡುವಂತಹಾ ಒಂದು ಮಠದಲ್ಲಿ ?ಲೈಂಗಿಕ ಕಿರುಕುಳಕ್ಕೊಳಗಾಗಿದ್ದಾರೆ ಎಂಬ ವ್ಯಕ್ತಿ ಯಾಕೆ ಇದು ತನಕ ಬಾಯಿ ಬಿಡಲಿಲ್ಲ ?ತನ್ಮೂಲಕ ಸಮಾಜವನ್ನು ಎಚ್ಚರಿಸಲಿಲ್ಲ ? ಒಂದೋ ಅವರಿಗೆ ಅದು ಸಹ್ಯವಾಗಿದ್ದಿರಬಹುದು /ಅಪೇಕ್ಷಣೀಯವಾಗಿದ್ದಿರಬಹುದು ಎಂದು ಬಾವಿಸಲು ಎಡೆಯಾಗುತ್ತಿದೆಯಲ್ಲವೇ? ಲೇಖಕರು ವಸ್ತು ನಿಷ್ಟವಾಗಿ ವಿಮರ್ಶಿದ್ದಾರೆ. ಸಮಾಜದ ಸದಸ್ಯರು ಯೋಚಿಸಲು ಹಾದಿ ತೋರಿದ್ದಾರೆ.ಅವರು ಅಭಿವಂದನಾರ್ಹರು.

  [Reply]

 5. ಸೀತಾರಾಮಚಂದ್ರ ಪುರಾಣಿಕ

  ಹರೇ ರಾಮ

  ಯಾಕೆ ಹೀಗೆ! ಈ ಜಗದಲ್ಲಿ ಸದ್ಗುಣಿಗಳು, ಸಾಮಾನ್ಯರು, ಸಾಧುಗಳು, ಜನ್ಮಿಸಲೇಬಾರದೇ? ಸ್ವಾರ್ಥ ಮನಕ್ಕೆ ಮಿತಿಯೇ ಇಲ್ಲವೇ?…
  ತಮ್ಮ ಕಾರ್ಯಸಾಧನೆಗಾಗಿ ಮತ್ತೊಬ್ಬರಿಗೆ ಕಿರುಕುಳ, ಮಾನಸಿಕ ಹಿಂಸೆ ನೀಡಿ ಇವರು ಪಡೆಯುವ ಆನಂದವಾದರೂ ಯಾರ ಲಾಭಕ್ಕಾಗಿ? ಸ್ವಲಾಭವೇ… ? ಕೀರ್ತಿಯೇ…? ಧನದಾಸೆಯೇ….?
  ಆತ್ಮವಿಮರ್ಶೆ ಮಾಡಲಾರದಷ್ಟು ಮೋಹ, ದಾಹ, ಕುರುಡೇ….! ಇನ್ನೊಬ್ಬರ ಕುತಂತ್ರಕ್ಕೆ ಬಲಿಯಾಗಿ, ಷಡ್ಯಂತ್ರ ರಚಿಸಿ ಈ ರೀತಿ ಮಾನ ಕಳೆಯುವ ಬದಲು, ತಮ್ಮ ಅಂತ್ಯವನ್ನು ಕರೆಯುವ ಬದಲು, ತಾವೇ ಅಂತ್ಯವಾಗಬಾರದೇ…!? ಛೆ… ಇವರೆಲ್ಲರೂ ಸಮಾಜದ ಭಾಗವಾಗಿರುವಾಗ, ಮುಂದಿನ ಪೀಳಿಗೆಗೆ ಇವರ ಕೊಡುಗೆಯಾದರೂ ಎಂತದ್ದು? ಇಂಥವರಿಗೆಲ್ಲ ಶೀಘ್ರ ಶಿಕ್ಷೆ(ಈಗಾಗಲೇ ಮಾನಸಿಕವಾಗಿ ತಳಮಳ, ಹಿಂಸೆ ಆರಂಭವಾಗಿರಬಹುದು, ನಿನ್ನೆ ರಾತ್ರಿ ಸರಿಯಾಗಿ ನೆಮ್ಮದಿ ನಿದ್ರೆ ಬಂದಿತ್ತೋ ಇಲ್ಲವೋ) ಸಿಗಲಿ.
  ಹರೇ ರಾಮ….

  [Reply]

 6. ಹರಿಹರ ಭಟ್ , ಬೆಂಗಳೂರು

  ಹರೇ ರಾಮ .

  ಶ್ರೀ ಗುರುಗಳ ಹೇಳಿಕೆ ಓದಿ ಅತೀವ ವೇದನೆಯಾಯಿತು. ದು:ಖದಿಂದೊಡಗೂಡಿದ ಅಶ್ರುಗಳು ಉದುರಿದವು.

  ಧೀರ್ಘ ಪರಂಪರೆಯ ಉತ್ಕೃಷ್ಟ ಹಿನ್ನೆಲೆಯುಳ್ಳ ನಮ್ಮ ಮಠ ಈ ಸ್ಥಿತಿಗೆ ತಳ್ಳಲ್ಪಡುತ್ತಿರುವದು ಶೋಚನೀಯ ವಿಚಾರ. ಧೀರ್ಘಾವಧಿಯಲ್ಲಿ ಆರೋಪ – ಪ್ರತ್ಯಾರೋಪಗಳು ನಮ್ಮ ಸಮಾಜದ ಮಠಗಳಲ್ಲಿ ಸಾಮಾನ್ಯವಾಗಿದ್ದಿತ್ತಾದರೂ , ಲೈಂಗಿಕ ಶೋಶಣೆಯಂತಹ ಹೀನ ಆರೋಪಗಳು ಕಳೆದ ಹತ್ತಾರು ದಶಕಗಳಲ್ಲಿ ಕೇಳಿಬಂದಿದ್ದಿಲ್ಲ. ಈ ರೀತಿ ಬೆಳವಣಿಗೆಗಳು ಹತ್ತಾರು ದಿನಗಳಲ್ಲಿ ಅಥವಾ ಒಂದೆರಡು ತಿಂಗಳುಗಳಲ್ಲಿ ಧುತ್ತೆಂದು ಎದ್ದು ನಿಲ್ಲಲು ಸಾಧ್ಯವಿಲ್ಲ. ಸುತ್ತ ಮುತ್ತ ಓಡಾಡುತ್ತ ದಿನ ನಿತ್ಯದ ಚಟುವಟಿಕೆಗಳಲ್ಲಿ ಭಾಗೀದಾರರಾಗಿರುವ ಶಿಷ್ಯ ಗುಂಪುಗಳ ಗಮನದಲ್ಲಿ ಬಂದಿದ್ದು ಆ ಪರಿಧಿಯಲ್ಲಿ ಪರಿಹಾರ ಕಾಣದಾದಾಗ ಈ ರೀತಿ ಸಾರ್ವಜನಿಕವಾಗಿ ಘಟನೆಗಳು ತೋರ್ಪಡುತ್ತವೆ.

  ಸ್ವಾತಂತ್ರ್ಯ ಪೂರ್ವದಲ್ಲಿ ಮೊಘಲರ ಆಡಳಿತಾವಧಿಯನ್ನೂ ಸೇರಿಸಿ ಯೋಚಿಸಿದಾಗ ಧರ್ಮ ಸಂಸ್ಥಾನಗಳಿಗೆ ತನ್ನದೇ ಆದ ಸಾತ್ವಿಕ ಹಿನ್ನೆಲೆಯಿತ್ತು ಮತ್ತು ಸಾರ್ವಜನಿಕವಾಗಿ ಸಂಶಯಕ್ಕಾಸ್ಪದವಿಲ್ಲದಂತೆ ಆ ಸಾತ್ವಿಕ ಹಿನ್ನೆಲೆ ಮತ್ತು ಪರಂಪರೆ ಢಾಳಾಗಿ ಸಾರ್ವಜನಿಕರಿಗೆ ಗೋಚರಿಸುತ್ತಿತ್ತು. ಮಠ ಮಾನ್ಯಗಳ ಚುಕ್ಕಾಣಿ ಹಿಡಿದವರು ಪ್ರಶ್ನಾತೀತರಾಗಿರಲಿಲ್ಲ ಮತ್ತು ಸಾರ್ವಜನಿಕ ಒಪ್ಪಿಗೆ ( acceptance ) ಬೇಕೆಂಬ ಸಮಾಜಮುಖೀ ಹಂಬಲವಿತ್ತು. ಕಾಲ ಕ್ರಮೇಣ ಧಾರ್ಮಿಕ ನೇತಾರರ ಅಧಿಕಾರದ ಹಂಬಲ, ಆರ್ಥಿಕ ಬಲ, ಅಧಿಕಾರೀ ಮತ್ತು ಆಡಳಿತ ವ್ಯವಸ್ಥೆಯ ಇತಿ – ಮಿತಿ ರಹಿತವಾದ ಸಂಪರ್ಕಗಳು, ಧಾರ್ಮಿಕ ಸಂಸ್ಥೆಗಳ ಚುಕ್ಕಾಣಿಹಿಡಿದವರಲ್ಲಿ ರಾಜಸಿಕ ಮತ್ತು ತಾಮಸ ಗುಣಗಳಿಗೆ ಆಸ್ಪದ ನೀಡಿ ಸಾತ್ವಿಕ ಗುಣಗಳು ಅವಗಣನೆಗೊಳಗಾಗಿದ್ದರಿಂದ ವರ್ತಮಾನದ ಘಟನೆಗಳು ಘಟಿಸಲು ಆರಂಭವಾಗಿವೆ.

  ಸಾಮಾನ್ಯ ಶಿಷ್ಯನೊಬ್ಬ ಮಠ ಮಾನ್ಯಗಳಿಂದ ನಿರೀಕ್ಷಿಸುವದು ಸಾತ್ವಿಕ ವಾತಾವರಣದ ಸಹಜೀವನ ಮಾತ್ರ. ಧೀರ್ಘಾವಧಿಯಲ್ಲಿ ಎಲ್ಲ ಶಿಷ್ಯರೂ ಸರಳರೂ , ದುರುಳರೂ ಸೇರಿದಂತೆ ತಮ್ಮ ಪರಂಪರೆಯ ಕೊಂಡಿ ಈ ಮಠ ಮಾನ್ಯಗಳು ಎಂಬ ಹೆಮ್ಮೆಯನ್ನು ಬೆಳೆಸುವಂತಾಗಲಿ ಎಂಬ ನೀರಿಕ್ಷೆಯಿಂದ ತಗ್ಗಿ ಬಗ್ಗಿ ನಡೆಯುತ್ತಿರುತ್ತಾರೆ. ಸಾತ್ವಿಕರಿಗೆ ದೇವರನ್ನು ಶ್ರೀ ರಾಮನ ರೂಪದಲ್ಲೂ ದುರುಳರಿಗೆ ದೇವರನ್ನು ಅರಿಭಯಂಕರ ಶಿವನ ರೂಪದಲ್ಲೂ ತೋರಿ ಕೊನೆಗೆ ಸರಳರಿಗೂ ದುರುಳರಿಗೂ ಸುಖಾಂತ್ಯವಾಗಬೇಕೆಂಬ ಶ್ರೀ ವಾಲ್ಮೀಕೀ ರಾಮಾಯಣದ ಸಂದೇಶವನ್ನು ಸರ್ವಕಾಲಕ್ಕೂ ಪ್ರಸ್ತುತ ಪಡಿಸುವಂತಹ ಕ್ರಿಯಾ ಚಟುವಟಿಕೆಗಳು ಮಠ ಮಾನ್ಯಗಳಿಂದ ಆಗಬೇಕು.

  ಯಾವುದೇ ಅಹಿತಕರ ಘಟನೆಗಳ ಹಿನ್ನೆಲೆ ಸಮೀಪವರ್ತಿಗಳಿಗೆ ಮಾತ್ರ ಲಭ್ಯವಿರುತ್ತದೆ . ಆದ ಕಾರಣ ಸತ್ಯವನ್ನು ಎತ್ತಿ ಹಿಡಿದು ಒಟ್ಟಾರೆ ಸಮಾಜದ ಸಾತ್ವಿಕ ವಾತಾವರಣವನ್ನು ಕಾಪಿಡುವ ಜವಾಬ್ದಾರಿ ಮಠ ಮಾನ್ಯಗಳ ದೈನಂದಿನ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಕೊಂಡವರ ಮೇಲಿರುತ್ತದೆ . ಆತ್ಮ ಸಾಕ್ಷಿಯನ್ನು ಬದಿಗಿಟ್ಟು ಕೆಲಸ ಮಾಡುವವರನ್ನು ಎಂದೂ ಆ ಪಾರಮಾರ್ಥಿಕ ಶಕ್ತಿ ಒಪ್ಪುವದಿಲ್ಲ ಎಂಬುದನ್ನು ಈ ಸಮಾಜದ ಸಾತ್ವಿಕ ಜೀವಿಗಳು ಹಲವಾರು ಪುರಾಣ – ಇತಿಹಾಸಗಳ ಉದಾಹರಣೆಗಳಿಂದ ಅರಿತವರಿದ್ದೇವೆ . ಅಲ್ಲದೆ ಪಾಪ – ಪುಣ್ಯಗಳು , ಜನ್ಮ – ಪುನರ್ಜನ್ಮಗಳು , ಕರ್ಮ ಸಿದ್ಧಾಂತ ಇವುಗಳನ್ನೆಲ್ಲಾ ನಂಬಿ ಬದುಕುತ್ತಿರುವ ಈ ಸಮಾಜದ ಜವಾಬ್ದಾರೀ ಜೀವಗಳ ಗುರುತರ ಜವಾಬ್ದಾರಿ – ಸತ್ಯ ಸೋಲದಂತೆ ಸುಳ್ಳು ಸುಖವನ್ನು ನೀಡದಂತೆ , ನೊಂದವರಿಗೆ ನ್ಯಾಯ ಮರೀಚಿಕೆಯಾಗದಂತೆ ನೋಡಿಕೊಳ್ಳುವದಾಗಿದೆ.

  ಒಟ್ಟಾರೆ ಸತ್ಯಾಸತ್ಯದ ವಿಮರ್ಶೆಯಾಗಬೇಕು. ಅಲ್ಪಕಾಲದಲ್ಲಿ ಸುಳ್ಳು ವಿಝ್ರಂಭಿಸಿದರೂ , ಧೀರ್ಘಕಾಲದಲ್ಲಿ ಸುಳ್ಳು ವಿಜಯಿಯಾಗಬಾರದು. ಸತ್ಯವೇ ಸದಾ ಕಾಲ ನಿಲ್ಲುವಂತಾಗಬೇಕು . ಇದೇ ಸಾತ್ವಿಕ ಸಮಾಜದ ಮತ್ತು ಸಾಮಾನ್ಯ ಶಿಷ್ಯನೊಬ್ಬನ ಆಶಯವಾಗಿರುತ್ತದೆ.

  ಹರೇ ರಾಮ.

  28.08.2014

  http://epapervijayavani.in/Details.aspx?id=15765&boxid=142117734

  [Reply]

 7. Soumya and Vinayak

  Very well said Prasanna.
  ತಮ್ಮ ವ್ಯಕ್ತಿತ್ವ, ಸಮಾಜಮುಖೀ ಕಾರ್ಯಕ್ರಮಗಳು ಮತ್ತು ರಾಮಕಥೆಯ ಮೂಲಕ ನಮ್ಮ ಬದುಕಿಗೆ ಮಾರ್ಗದರ್ಶನ ನೀಡುತ್ತಿರುವ ಶ್ರೀ ಗುರುಗಳ ಪಾತ್ರ ನಮ್ಮ ಮನೆಗಳಲ್ಲಿ, ನಮ್ಮ ಮನಗಳಲ್ಲಿ ಬಹಳ ಶ್ರೇಷ್ಟವಾದದ್ದು. ಆ ಶ್ರದ್ಧೆ, ನಂಬಿಕೆಗಳು ಇಂತಹ ಪ್ರಕರಣಗಳಿಂದ ಕುಂದುವುದಿಲ್ಲ. ನಮ್ಮ ‘ಗುರು’ಗಳಂತಹ ಗುರುಗಳವರ ತೇಜೋವಧೆ ಮಾಡಲು ಯತ್ನಿಸುತ್ತಿರುವ ಎಲ್ಲಾ ಶಕ್ತಿಗಳಿಗೆ ಧಿಕ್ಕಾರವಿರಲಿ!
  || ಹರೇ ರಾಮ ||

  [Reply]

 8. L.A.Hegde Dombivali

  Namma Gurugala Hagoo Mathada TejoVadhe Madalu Yathnisida Ella Shaktigalige(Vyaktigalige) Dhikkarvirali

  [Reply]

 9. DATTU

  HARERAAMA,

  THERE SHOULD BE A LAW ON MEDIA NOT TO TELECAST OR PRINT NEWS IN THE PAPER BEFORE KNOWING THE TRUTH.

  DATTU, DOMBIVLI

  [Reply]

 10. shreevatsa

  We are all with you Shri Samsthana.

  You are 100% correct Prassanna,

  ನಮ್ಮ ಗುರುಗಳವರ ತೇಜೋವಧೆ ಮಾಡಲು ಯತ್ನಿಸುತ್ತಿರುವ ಎಲ್ಲಾ ಶಕ್ತಿಗಳಿಗೆ ಧಿಕ್ಕಾರವಿರಲಿ! ಧಿಕ್ಕಾರವಿರಲಿ!

  ಹರೇ ರಾಮ

  [Reply]

 11. Veena sandeep

  ||gurubhyo namaha||
  Mahileyarige siguttiruva anukampada ati dodda durupayogakke best example idu…shri gurugalinda onde ondu sari ashirvada padeda yavude vyakti idannu nambalara …antaha vyaktitva shrigaladdu…we are all with samstana …dustarige shiksheyagali…hare rama

  [Reply]

 12. Srinivasa Iyengar K. S.

  Apart from mischievous elements who do mud slinging against the most sincere and respectable swamiji – we should expect that anti-Hindu forces may also be encouraging such acts.

  [Reply]

 13. Aparna P.I Bhat

  “Shree Gurubhyo Namaha”
  Suryakke moda musukidare prakasha kammiyaguvude? Vajrakke dhoolu tumbidarenu, holahu kammiyaguvude? Asaadhya!!!
  Namma shreesamsthana shuddha aparanji. Gurugala helikeyonde saaku, avara manakaada gaaya tiliyalu….”yatra naaryastu poojyante ramante tatra devatha” annodu gurugalu kalisida pasta. Adakke premalatha, neevu mulladiri….nimagu,.nimmannu prachodisida vyakthigaligu dhikkaravirali…..sadyakke yavattu savilla….gurugalondige namma pranavu jotheyagide…..berpadisalu yava shakthigu sadhyavilla….
  Nemmadiya jeevana arama samsthanakke dorakali…..

  [Reply]

 14. maya

  Hareraaama …..
  idu ella bhakthara maathu
  Hareraama ……

  [Reply]

 15. chetana

  Hare Raama…
  enta aghatakari…belavanige namma havyaka samajaddli. namma samajada unnatige hagalu ratri ennade shramisuttiruva esto nammanta jivigalige santvana samadhana kottanta guruvina nade nudige endu inta kshullaka vichara apakyati taruvantaddalla. adaru ibelavanige samajana innodu vargakke prashne yagi uliyade adastu bega ella manjinte pariharavagi, ramanalli guru kanuva guruvinalli ramana kanuva namage samajakke nemmadi taralendu beduttene.

  [Reply]

 16. vijayasubrahmanya, kumble

  Raama kathege Enthaa bhaavaneyalli gaayakiyaagi seriddaLO!!
  shree peetadalli vijrumbhisuttiruva prathyksha kaanuva devaranthiruva sree Gurugalannu inthaa heena apa pracaara maaduva Aa gaayakige manasaadaru hege banto? idu akeya hethabbeyannu apa pracaara maadidudakkintalu ghoravaadudu .vamsha paaramparya idara dushpala benna bidadu.
  NanagaadarU I suddi Oduvaaga Deha Hindidantaa Anubhava Agtide!!!

  [Reply]

 17. Gajanan P Hegde

  Hare Ram:
  Probably the complainant is against money or she is influenced by a third party.
  They deserve severe punishment. Jai Sri Ram. Jai Guruji.

  Gajanan P Hegde
  Kavalakki

  [Reply]

 18. G.P.Hegde

  Hare Ram.
  Even the Guruji excuses the complainant the Law will punish them properly.
  Jai Sri Ram.

  [Reply]

 19. Shreekrishna

  Media disappears once the interest dies down what about the humiliation an innocent person undergone. We should sue these shameless media for propagating false news and behaving as if they are the court ang give judgement.
  We all sure that truth will trimph and evil forces will get their reply.

  [Reply]

 20. vishwa

  ಹರೇ ರಾಮ
  ನಮ್ಮ ಗುರುಗಳವರ ತೇಜೋವಧೆ ಮಾಡಲು ಯತ್ನಿಸುತ್ತಿರುವ ಎಲ್ಲಾ ಶಕ್ತಿಗಳಿಗೆ ಧಿಕ್ಕಾರವಿರಲಿ! ಧಿಕ್ಕಾರವಿರಲಿ!

  [Reply]

 21. Nishanth

  ಹರೇರಾಮ,,,

  ಶಡ್ಯಂತರದ ಆಪಾದನೆ …

  [Reply]

 22. Radhakrishna Bhagavath Bhagavath

  Sathyameva jayathe.jai sri rama. From hanuman temple suchindrum

  [Reply]

 23. Vishweshwara Bhat

  Sriguru Charanagalige Vandane

  Satyameva Jayate

  We are all with you Shri Samsthana

  [Reply]

 24. ಉಷಾ ಪುರಾಣಿಕ, ಮಡಗಾಂವ್-ಗೋವಾ

  ಹರೇ ರಾಮ
  ರಾಮನ ಸೇವೆಗೆ ಸಲ್ಲದ ಜನುಮ
  ಮಾನವನಾದರೂ ಏನಿದೆ ಹನುಮ
  ವಾನರನಾಗಿಯೂ ರಾಮನ ಕಂಡೆ
  ರಾಮ ಪ್ರೇಮ ಪರಮಾನ್ನವನುಂಡೆ…..
  ಎನ್ನುವ ನುಡಿಮುತ್ತುಗಳನ್ನು ಲೋಕ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನೇ ಸಮರ್ಪಿಸಿದ ಶ್ರೀಗುರುಗಳ ಬಾಯಲ್ಲಿ ಕೇಳಿದಾಗ ಸಾಕ್ಷಾತ್ ಕೃತಯುಗದ ಶ್ರೀರಾಮನೇ ಕಲಿಯುಗದಲ್ಲಿ ಶ್ರೀಗುರುಗಳಲ್ಲಿ ಅವತಾರವೆತ್ತಿದಂತೆ ಭಾಸವಾಗುತ್ತದೆ.
  ಶ್ರೀರಾಮನ ಮೇಲೆ ಇಂತಹ ಅಪವಾದಗಳೆಂದರೆ ನಂಬಲಸಾಧ್ಯವಾದ ಮಾತುಗಳಿವು.
  ಅಂದು ಶ್ರೀರಾಮ ಮಂಥರೆಯ ಕುತಂತ್ರದಿಂದ ಕೈಕೇಯಿಯ ಮಾತಿನಂತೆ 14 ವರ್ಷ ವನವಾಸ ಅನುಭವಿಸಿದ ಆದರೆ ಇಂದು ಕಲಿಯುಗದಲ್ಲಿ ಇಂತಹ ರಾಮಕ್ಷೇತ್ರದಲ್ಲಿ ಮಂಥರೆಯಂತಹ ನೀಚರು, ಕುತಂತ್ರಿಗಳು, ವಂಚಕರು ಇದ್ದಾರೆ. ಅವರೆಲ್ಲರ ಅಟ್ಟಹಾಸಕ್ಕೆ ಕೊನೆಯಿಲ್ಲವೇ….? ಶ್ರೀ ಗುರುಗಳ ಸೇವೆಗೆ ದೇಶದ ಮೂಲೆ ಮೂಲೆಗಳಿಂದ ಜನರು ತಮ್ಮ ನಿತ್ಯಕಾರ್ಯಗಳನ್ನು ಬದಿಗೊತ್ತಿ ಮಠದಲ್ಲಿ ಬಂದು ತಮ್ಮ ಸೇವೆ ಮಾಡುತ್ತಾರೆ. ಆದರೆ ಇಷ್ಟು ವರ್ಷಗಳ ಕಾಲ ಅವರಲ್ಲಿ ಸೇವೆ ಮಾಡಿ[ಪ್ರತಿಯಾಗಿ ಸಂಭಾವನೆ ಪಡೆದಿರಲೂಬಹುದು- ಆದರೂ ಸೇವೆ ಎಂದಿಟ್ಟುಕೊಳ್ಳೋಣ] ಆವರು ಕೊಟ್ಟ ಭಿಕ್ಷೆಯನ್ನುಂಡು ಅವರಿಗೇ ಈ ರೀತಿ ಮೋಸ ಮಾಡುವ ಜನರಿಗೆ ಈ ಸಮಾಜ ಏನು ಮಾಡಬೇಕು, ಅಂತಹವರಿಗೇಕೆ ಸ್ಥಾನ-ಮಾನ!
  ಇಂತಹವರಿಗೆ ಸಾಧಾರಣವಾಗಿ ನ್ಯಾಯಾಲಯದಿಂದ ಸಿಗುವ ಶಿಕ್ಷೆ – ದಂಡಗಳು ಸಲ್ಲದು. ಇಂತಹ ನೀಚರು ಹಂತ-ಹಂತವಾಗಿ ನರಳಿ-ನರಳಬೇಕು, ಚಿತ್ರಹಿಂಸೆ ಅನುಭವಿಸಿ ಬದುಕಬೇಕು.[ಕಾಲಿಗೆ ಬಿದ್ದು ಕ್ಷಮೆ ಕೋರಿದರೂ ಕ್ಷಮಾರ್ಹರಲ್ಲ]
  ಸಾಕ್ಷಾತ್ ದೈವೀ ಸ್ವರೂಪನಾದ ಶ್ರೀರಾಮನ ಗುಣಗಾನಗಳನ್ನು ತಮ್ಮ ಕಂಠಸಿರಿಯಲ್ಲಿ ಹಾಡಿ ಜನಕ್ಕೆ ರಾಮನ ಬಗ್ಗೆ ಪ್ರೀತಿ, ಪ್ರೇಮ, ಚೆಲುವು ಮೂಡುವಂತೆ ಮಾಡಿದ ಇವರು, ಈಗ ಅಂತಹ ಸಾಕ್ಷಾತ್ ರಾಮನ ಮೇಲೆ ಇಂತಹ ಆರೋಪ ಸೃಷ್ಟಿಸಿದ್ದಾರೆಂದರೆ ಇವರೆಂತಹ ಹೇಡಿಗಳಾಗಿರಬಹುದು?
  ವಿಷಯ ತಿಳಿದಾಗಿನಿಂದ ಮನಸ್ಸೇ ಕದಡಿ ಹೋಗಿದೆ. (ಕೂಗಿಹೇಳುವರೆಗೂ ಸಮಾಧಾನವಿರಲಿಲ್ಲ, ಈಗ ಹಗುರಾಗಿದೆ)
  ನನಗೆ ಅವರ ಕಂಠದಿಂದ ಹೊರಬಂದಿರುವ ಗಾನಗಳನ್ನು ಕೇಳಿದರೆ, ಆ ಗಾನದ ತಾತ್ಪರ್ಯ ಅವರ ಮೇಲಾಗಿಲ್ಲವೇ, ಸಾಹಿತ್ಯವನ್ನವರು ಅನುಭವಿಸಿಲ್ಲವೇ, ಕೇವಲ ಸಂಭಾವನೆಗಾಗಿ-ಹೆಸರಿಗಾಗಿ-ಪ್ರಸಿದ್ದಿಗಾಗಿ ಮುಖಸ್ತುತಿ ಮಾಡಿದರೇ ಎಂದೆನಿಸುತ್ತಿದೆ. ಧನದ ಮುಂದೆ ಮನುಷ್ಯ ಇಷ್ಟೊಂದು ದುರ್ಬಲನೇ.
  ಇಂತಹ ರಾವಣ-ಶೂರ್ಪನಕಿಯರ ಸಂಹಾರ ಶೀಘ್ರದಲ್ಲಾಗಲಿ. ಎಲ್ಲರೂ ಎಚ್ಚೆತ್ತುಕೊಳ್ಳೋಣ. ವಿನಂತಿಯೇನೆಂದರೆ ದಯವಿಟ್ಟು ರಾಮನಾಗಿ, ರಾಮನ ಗುಣಗಳನ್ನು ಆನುಸರಿಸಿ-ಅನುಯಾಯಿಗಳಾಗಿ ರಾಮರಾಜ್ಯವನ್ನು ನಿರ್ಮಾಣಗೊಳಿಸೋಣ.
  ಸಮಾಜದಲ್ಲಿರುವ ರಾವಣರೆಡೆಗೆ ಜಾಗೃತರಾಗಿದ್ದು, ನೀಚರನ್ನು ಸದೆಬಡಿಯೋಣ
  ಹರೇರಾಮ.

  [Reply]

 25. Ganesh Adiga

  Lets not only ignore such news in the media but also try and spread news that these are all baseless allegations.
  But just imagine if the same nuisance was created in a Gowda or Lingayat community (forget Muslims) would the disciples leave such trouble creators like that itself or would some one from the same community dare make such allegations against their seers? I strongly feel we are going soft on such trouble makers and its high time we seriously deal with those people who are at the bottom of all these issues and teach them a lesson and put them in their place once and for all.

  [Reply]

 26. Triguna

  Well said Prasanna… Thanks for the enlightenment..

  Triguna

  [Reply]

 27. Triguna

  Belakke irave bradu… Satyakke sankashta baradu…

  Hare Ram.

  [Reply]

 28. Jayalakshmi,mangalore,

  Shri Gurubhyonamaha Shri Samsthanadameale maadida aaropakke dhikkara. Ramanakatheli shoorpanaki eddu,ShriRamananthaha GURUGALingo shorpanaki kaata viparyasa.Devare intha raakshasara samhara madu.Hare Rama.

  [Reply]

 29. Ganapathy.k

  media wants only TRP. they do not bother weather it is true or not.Most of them are like terrorist who kill any body for their misplaced belief.I condemn the blackmail for money.Shree Raghaveshwara Bharathi swamiji blessed all, irrespective of their cast.

  [Reply]

 30. vijayasubrahmanya, kumble

  ಹರೇ ರಾಮ, ಹೂವಾಗಿ ರಾಮ ಕಥೆಗೆ ಬಂದು ನೀಚ ಕಾರ್ಕೋಟಕ ಹಾವಾಗಿ ಹೆಡೆಯೆತ್ತಿದ ಆ ವಿಷಸರ್ಪವನ್ನು ಲಯಕಾರಕನಾದ ರುದ್ರನು ನಿಗ್ರಹಿಸಲಿ

  [Reply]

 31. ಸುಬ್ರಹ್ಮಣ್ಯ ಭಟ್ಟ, ಲಕ್ಷ್ಮೀ ಕೃಪಾ ಮನೆ, ನೇರಳೆಕಟ್ಟೆ, ಮಾಣಿ.

  ಹರೇ ರಾಮ

  ಯಾಕೆ ಹೀಗೆ!
  ನಮ್ಮ ‘ಗುರು’ಗಳಂತಹ ಗುರುಗಳವರ ತೇಜೋವಧೆ ಮಾಡಲು ಯತ್ನಿಸುತ್ತಿರುವ ಎಲ್ಲಾ ಶಕ್ತಿಗಳಿಗೆ ಧಿಕ್ಕಾರವಿರಲಿ!
  ಹೆಚ್ಚಿನಂಶ, ಈ ವರೆಗೆ ಆ ಪಾಪಿಗಳು ಮಾಡಿರುವ ರಾಮ ಜಪ ಸಾಲದಾಗಿದೆ. ಇನ್ನು ಮುಂದೆ ಅವರೆಲ್ಲ, ಜೀವನ ಪರ್ಯಂತ ಕೃಷ್ಣನ ಜನ್ಮಸ್ಥಾನಲ್ಲಿ ಇದ್ದುಕೊಂಡು ಇನ್ನೂ ಹೆಚ್ಚು ರಾಮ ಜಪ ಮಾಡಲಿ. ಜೀವನದ ಕೊನೆಗಾದ್ರೂ ಆ ಪಾಪಿಗಳಿಗೆಲ್ಲ ಶ್ರೀರಾಮ ಸದ್ಭುದ್ದಿ ಕರುಣಿಸಲಿ.
  ಹರೇ ರಾಮ,ಹರೇ ರಾಮ,ಹರೇ ರಾಮ…..

  [Reply]

 32. ಮಹೇಶ್ ಪುಚ್ಚಪ್ಪಾಡಿ

  ಶ್ರೀಗಳ ವಿರುದ್ದ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಸಾಮಾನ್ಯ ಜನರಿಗೂ ಅರಿವಾಗುತ್ತಿದೆ.ಇದಕ್ಕೆ ಪುಷ್ಟಿ ಸಾಕಷ್ಟು ಪುಷ್ಟಿ ಇದೆ. ದೂರು ನೀಡಿದ್ದರ ಹಿಂದೆ ಸಮಾಜವನ್ನು ದಿಕ್ಕು ತಪ್ಪಿಸುವ ತಂತ್ರ ಇದೆ. ಇಲ್ಲಿ ಕಾನೂನು ದುರ್ಬಳಕೆಯಾಗಿದೆ.ನೊಂದ ಮಹಿಳೆಯರಿಗೆ ಅನ್ಯಾಯವಾಗಬಾರದು ಎಂದು ರಚಿಸಿದ್ದ ಕಾನೂನು ಈಗ ದುರ್ಬಳಕೆ ಆಗುತ್ತಿದೆ.ಹೀಗಾಗಿ ಈ ಬಗ್ಗೆ ನ್ಯಾಯಾಲಯ, ವಕೀಲರು ಗಮನಹರಿಸಬೇಕು.
  ಶ್ರೀಗಳ ಜೊತೆ ನಾವಿದ್ದೇವೆ.

  [Reply]

 33. Mahendra Gayatri

  Shree Gurubhyo namah.

  Gurudeva, we are always with you. I wish this Ganesh Chaturthi that Maha Ganapati himself will stand against these false allegations.

  hare Raama

  [Reply]

 34. Shankara narayana Prasanna

  Hare Raama,
  Kindly havyaka lawyers take case against media and complainants for defamation of our PEETHA

  [Reply]

 35. shashiprabha r karnik

  HARERAAMA we are all with sri sri sri guruji

  [Reply]

 36. Manjunath.R, Tumkur

  Hare Raama

  you are 100% Correct. we must protest. we are with Sri Gurudeva.

  Manjunath, Tumkur

  [Reply]

 37. raveendra

  raveendra 30th aug14
  good writing & thanks to prasanna. media should rethink while telecasting & they should
  collect the information from trusted sources/reporters.law makers should think about misuse of the law.in this particular incidence third person/ force may be involving.
  hare ram.

  [Reply]

 38. Aruna K.S.Bhat

  || ಹರೇ ರಾಮ ||

  ಕೋತಿ ತಾನು ಕೆಡುವುದಲ್ಲದೆ, ವನವನ್ನೆಲ್ಲಾ ಕೆಡಿಸಿತು ಎಂಬ ಗಾದೆಯಿದೆ. ಈ ಷಡ್ಯಂತ್ರವು ನಮ್ಮ ಗುರುಗಳ ವಿರುದ್ಧ ಹೇಗೋ ಅದು ನಮ್ಮೆಲ್ಲರ ವಿರುದ್ಧವೂ ಆಗಿದೆ. ಗುರುಗಳು, ಶ್ರೀ ಮಠದ ಸಂಸ್ಥಾನ ಹಾಗೂ ಶ್ರೀಮಠದ ಭಕ್ತರ ಮನಸ್ಸಿಗೆ ನೋವುಂಟು ಮಾಡುವ ಪ್ರಯತ್ನ ಅಷ್ಟೆ. ಒಂದು ವರುಷದ ಹಿಂದೆಯೂ ಇದೇ ರೀತಿಯ ಷಡ್ಯಂತ್ರವು ನಿಷ್ಫಲವಾಗಿತ್ತು ಎಂಬುದನ್ನು ಈ ಸಂದರ್ಭದಲ್ಲಿ ಗಮನಿಸಬಹುದಾಗಿದೆ. ಇದು ಅದರ ಮುಂದುವರಿದ ಇನ್ನೊಂದು ಮುಖವಷ್ಟೆ. ಆದರೆ, ಮಾಧ್ಯಮದವರು ಈ ವಿಷಯವನ್ನು ಸುಳ್ಳು ಸುಳ್ಳೇ ವೈಭವೀಕರಿಸಿ ಬಿತ್ತರಿಸುವುದನ್ನು ಕಂಡರೆ ಮನಸ್ಸು ಕೆಂಡವಾಗುತ್ತದೆ. ಈ ವಿಷಯದಲ್ಲಿ ನಾವೇನು ಮಾಡಬಹುದು ಎಂಬುದೇ ತೋಚುತ್ತಿಲ್ಲ. ದುಷ್ಟ ಶಕ್ತಿಗಳಿಗೆ ಧಿಕ್ಕಾರವಿರಲಿ!

  ನಮ್ಮ ಸಮುದಾಯದಲ್ಲೂ ಈ ರೀತಿಯ ಗುಂಪಿದೆ ಎಂದರೆ ಅದು ಆತಂಕಕಾರಿ ವಿಷಯ. ಒಬ್ಬ ಹವ್ಯಕ ಮಹಿಳೆಯಲ್ಲೂ ಇಂಥಾದ್ದೊಂದು ಕೆಟ್ಟ ದುರುದ್ದೇಶವಿದೆ ಎಂದರೆ ಛೇ! ಎಂತಹ ನಾಚಿಕೆಗೇಡು. ನೂಲಿನಂತೆ ಸೀರೆ, ತಾಯಿಯಂತೆ ಮಗಳು. ಆ ದುಷ್ಟ ಗುಂಪಿಗೆ ಸರಿಯಾದ ಶಾಸ್ತಿಯಾಗಲಿ. ಆ ಮೂಲಕವಾದರೂ ಶ್ರೀರಾಮನು ಅವರಿಗೆ ಸದ್ಬುದ್ಧಿಯನ್ನು ಕರುಣಿಸಲಿ. || ಸತ್ಯಮೇವ ಜಯತೇ|| || ಸತ್ಯಮೇವ ಜಯತೇ|| || ಸತ್ಯಮೇವ ಜಯತೇ ||

  [Reply]

 39. G G Hegde Talekeri

  Hareraama.

  Dhusta shakhtigalu sarvanashavagali.

  [Reply]

 40. Manjunath.R, Tumkur

  ಹರೇ ರಾಮ,
  ನಮ್ಮ ‘ಗುರು’ಗಳಂತಹ ಗುರುಗಳವರ ತೇಜೋವಧೆ ಮಾಡಲು ಯತ್ನಿಸುತ್ತಿರುವ ಎಲ್ಲಾ ಶಕ್ತಿಗಳಿಗೆ ಧಿಕ್ಕಾರವಿರಲಿ! ಇಂತಹವರಿಗೆ ಸಾಧಾರಣವಾಗಿ ನ್ಯಾಯಾಲಯದಿಂದ ಸಿಗುವ ಶಿಕ್ಷೆ – ದಂಡಗಳು ಸಲ್ಲದು. ಇಂತಹ ನೀಚರು ಹಂತ-ಹಂತವಾಗಿ ನರಳಿ-ನರಳಬೇಕು, ಚಿತ್ರಹಿಂಸೆ ಅನುಭವಿಸಿ ಬದುಕಬೇಕು ನಮ್ಮ ಗುರುಗಳವರ ತೇಜೋವಧೆ ಮಾಡಲು ಯತ್ನಿಸುತ್ತಿರುವ ಎಲ್ಲಾ ಶಕ್ತಿಗಳಿಗೆ ಧಿಕ್ಕಾರವಿರಲಿ! ಧಿಕ್ಕಾರವಿರಲಿ!
  ಗುರದೇವ, ನಾವು ನಿಮ್ಮೊಂದಿಗೆ ಯಾವಾಗಲೂ.

  Manjunath.R, Tumkur

  [Reply]

 41. k govinda bhat

  ltest new says brother of accused sharty attempted to sueside.
  but media says it is due to harrasment by followers of guruji . his deeds did so no any otherswhat you grows you must reep it hare ram

  [Reply]

 42. k govinda bhat

  latest news says brother of accused sharty attempted to sueside.
  media says it is due to harrasment by followers of guruji . PAAPAVU PAAPIYANNU KOLLUTTADE MAAdIDDU UNNO MAYARAAYA hare ram

  [Reply]

  [Reply]

  geethamanjappa Reply:

  ಸುಳ್ಳನ್ನು ಸತ್ಯ ಸತ್ಯ ಸತ್ಯ ಎಂದು
  ಪ್ರತಿಪಾದಿಸಲು ಹೊರಟು
  ಸುಳ್ಳೂ ಮುನಿಸಿಕೊಂಡು
  ಬಲಿ ತೆಗೆದುಕೊಂಡಿತೆ ?

  [Reply]

 43. Sreepad Rao

  Hare Raama,

  We have to protest against this media,simply they wants to increase there TRP ratings.

  We were with our Matt.

  Sreepad Rao, Goa

  [Reply]

 44. Shrikant Hegde, Raja Rajeshwari Nagar, Bangalore

  Hare Raama!

  Yes, I agree with you on this COMPLETELY.
  It is my firm belief & is quite evident from the series of incidents [like [fake CD case, Gokarna Mahabaleshwara chariot case, Black mailing and host of such attempts] that there is a huge conspiracy against our MUTH and the Religion at large, using or through some of the internal faces.

  This is high time that we should expose all such bad elements of this society to protect and uphold the dignity of our MUTH.

  Hare Raama

  [Reply]

 45. akhila guru

  Hare raama….

  Satyameva jayate…

  [Reply]

 46. akshata joshi

  || ಹರೇ ರಾಮ ||
  ಶ್ರೀರಾಘವೇಶ್ವರಭಾರತೀಮಹಾಸ್ವಾಮಿ
  ನಾವು ನಿಮ್ಮೊಂದಿಗೆ ಯಾವಾಗಲೂ……

  [Reply]

 47. pakalakunja gopalakrishna bhat

  ಮಾಧ್ಯಮಗಳು ಪ್ರಗತಿಪರರು, ಬುದ್ದಿಜೀವಿಗಳು. ..(?)…ಆದರೆ ಈ ಪ್ರಗತಿಪರರು, ಬುದ್ದಿಜೀವಿಗಳು ಸಮಾಜವೇ ನಾಚುವಂತೆ ಹಿಂದೂ ಧರ್ಮದ ಅವಹೇಳನ ಮಾಡುವವರು… . ಖಾವಿ ಮೇಲಿನ ಗೌರವ ಕಡಿಮೆ ಮಾಡುವಲ್ಲಿ ಇವರ ಪಾತ್ರ ಮಹತ್ವದ್ದು…. ನಿಷ್ಕಂಕಿತ, ಪ್ರಬುದ್ಧ ಸಮಾಜವೇ ಗೌರವಿಸುವ, ಪೂಜ್ಯ ಸ್ವಾಮೀಜಿಗಳ ಮೇಲೆ ಕೇವಲ ಕಪೋಲಕಲ್ಪಿತ ಆಪಾದನೆ ಬಂದ ಮಾತ್ರಕ್ಕೆ ಅವರನ್ನು ಎಕವಚನದಲ್ಲಿ ಕರೆಯುವ, ಅವರನ್ನು ತಪ್ಪಿತಸ್ಥರು ಎನ್ನುವಂತೆ ತೋರಿಸೋ ಮಾಧ್ಯಮಗಳಿಗೆ ಮರ್ಯಾದೆ ಎಲ್ಲಿ ? ಸ್ವಾಮಿಗಳನ್ನು , ಗುರುಗಳನ್ನು ಮಾಡಿದ್ದೇ ಈ ಮಾಧ್ಯಮಗಳು ಎನ್ನುವಂಥಾಗಿದೆ. ಎಲ್ಲಾ ಮಾಧ್ಯಮಗಳಲ್ಲಿ ಕೈ ಮುಗಿದು ಕೇಳುತ್ತೇನೆ. ಇಂಥವರ ಕಪೋಲಕಲ್ಪಿತ ಹೇಳಿಕೆ ಪತ್ರಿಕೆಯಲ್ಲಿ ಪ್ರಕಟಿಸಬೇಡಿ, ಟಿವಿ ಮಾಧ್ಯಮಗಳು ಟಿಆರ್’ಪಿಗಾಗಿ ಇಂಥವರನ್ನು ಪ್ರೋತ್ಸಾಹಿಸಬೇಡಿ. ಹಣಮಾಡುವ ಉದ್ದೇಶಕ್ಕೇ ಪವಿತ್ರ ಖಾವಿ ಮರ್ಯಾದೆ ತೆಗಿಬೇಡಿ. ಜನರ ನಂಬಿಕೆ, ಭಾವನೆ ಹಾಗೂ ಧರ್ಮವನ್ನು ಹಣ ಮಾಡಲು ಬಳಸಿಕೊಳ್ಳಬೇಡಿ. ಖಾವಿಗೆ ವಿಶೇಷ ಮರ್ಯಾದೆ ಕೊಡುವವರು ನಾವು. ನಿಮ್ಮ ಭಟ್ಟಿಂಗಿತನಕ್ಕೇ ಜನ ಬೇಸತ್ತು ನಿಮ್ಮ ಮರ್ಯಾದೆ ಕಳುಚುವ ಸಮಯ ದೂರವಿಲ್ಲ.

  [Reply]

 48. pallathadka mohana (mohananna, harihar)

  hare raama. thanks to prasanna for coming out with a clear picture about the issue. idondu shadyanthra embudaralli eradu maathilla. idu swathantryada athireka. elladakku ondu ithi mithi irabeku. sathyakke duraviruva vishayagalannu vaibhaveekarisuva madhyamagalige modalu kadivana haakabeku. matthu idu (patrika/madyama) swatantryada durupayogavallave ? idu ondu reethiya sajjanara mele neevu maduthiruva athyachravallave ? ganesh adigara helikege nanna sahamatha ide. yaaru yene helidaruu kaage kaageye, kogile kogileye. sreegalu samajamukhiyagi madida ondondu karyakramagalu ithihasa baredide. Ramayana Mahasatra, Goyatre, Gosamsatt, Vishwagosammelana, Deepa Gowpura, Gowsandhya, Kotineerajana, eega Rama Katha. Idaralli bhagiyagi bhagyavantharagi. hare raama

  [Reply]

Leave a Reply

Highslide for Wordpress Plugin