ಶ್ರೀಮತಿ ಶ್ವೇತಾ ಶಾಸ್ತ್ರಿ (ಮುಂಡಾಜೆ) ಕಾನಾವು – ಇವರು ಚಕ್ರಕೋಡಿ ಮನೆತನದಲ್ಲಿ ಜನಿಸಿ ಕಾನಾವು ಕುಟುಂಬಕ್ಕೆ ವಿವಾಹವಾಗಿ ಸೇರಿದವರು. ಪ್ರಸ್ತುತ ದೂರದ ಅಮೇರಿಕಾದಲ್ಲಿದ್ದರೂ ಗುರುಪೀಠಕ್ಕಾಗಿ ಮಿಡಿಯುವ ಹೃದಯ ಅವರದ್ದು. ತಮ್ಮ ಪ್ರೀತಿಯನ್ನು ಸಮ್ಮುಖ ಲೇಖನರೂಪದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಶ್ವೇತಾರವರ ಕುಟುಂಬಕ್ಕೆ ಗುರುಕೃಪೆ ಸದಾ ಇರಲೆಂಬುದು ನಮ್ಮ ಆಶಯ.
~
ಸಂ

ಹೆಡ್ಡನಾಗಬೇಡೋ, ತಿಂದೀ ನೀ ಮಣ್ಣ!!
ಹಣ ಮುಕ್ಕುವ ಚಪಾಲಾ ಏಕಿನ್ನು?
ಮುಕ್ಕಿ ಕುಡಿಸೀತು ನೀರನ್ನು!

ಹಣದ ಚಪಲಕ್ಕೆ ತಮ್ಮವರನ್ನೇ ಗುರುಪೀಠದ ವಿರುದ್ಧ ನಿಲ್ಲಿಸಿದರೆ ಮೇಲಿನ “ಗೀತೆ”ಯoತೆ ಆಗಲಿದೆ ಅವರ ಜೀವನದ “ಗತಿ”!
ಕುರುಡು ಕಾಂಚಾಣ..
“ಇಲಿಯನ್ನು ಉಗ್ರಾಣದೊಳಗೆ ಎಂದೂ ಸೇರಿಸಬಾರದು” ಇದು ನಮಗೂ ಗೊತ್ತು, ಅವರಿಗೂ ಗೊತ್ತು.
ಆದರೆ ನಮ್ಮ ಒಳ್ಳೆಯತನ ನಮ್ಮನ್ನು ಮರೆಸಿತು!
“ಗುಳ್ಳೆ ನರಿಗಳನ್ನು ನಂಬಿ ಎಂದೂ ಸ್ನೇಹ ಬೆಳೆಸ ಬಾರದು” ಇದು ನಮಗೂ ಗೊತ್ತು, ಅವರಿಗೂ ಗೊತ್ತು.
ಆದರೆ ನಮ್ಮ ದೊಡ್ಡತನ ನಮ್ಮನ್ನು ಮರೆಸಿತು!
“ಉಂಡ ಮನೆಗೆ ಎರಡು ಬಗೆಯಬಾರದು” ಇದು ನಮಗೂ ಗೊತ್ತು, ಅವರಿಗೂ ಗೊತ್ತು.
ಆದರೆ ಅವರ ಹಣದ ವ್ಯಾಮೋಹ ‌ಅವರನ್ನು ಮರೆಸಿತು!
ಕುರುಡು ಕಾಂಚಾಣ..

ಎಲ್ಲಿಯೋ ಹುಟ್ಟಿ, ಎಲ್ಲಿಯೋ ಬೆಳೆದು ತಮ್ಮವರ ಕಷ್ಟಗಳಲ್ಲಿ ಭಾಗಿಯಾಗಿ ತನ್ನ ಎರಡು ಕುಟುಂಬಗಳ ಕೀರ್ತಿ, ಗೌರವಗಳನ್ನು ಹೆಚ್ಚಿಸಿ ದೀಪದಂತೆ ಬೆಳಗುವವಳು “ಸ್ತ್ರೀ”.
ಆದರೆ ನೀನು ಇಡೀ ಸಮಾಜದ ನೆಮ್ಮದಿಯನ್ನು ದೂರ ಮಾಡಿದೆ.
ಕಾಂಚಾಣದ ಆಸೆಗೆ ಬಿದ್ದು ನೂರೆಂಟು ತಪ್ಪು ದಾರಿಗಳನ್ನು ಹುಡುಕುತ್ತಾ, ಸೊಕ್ಕಿನಿಂದ ಕಾಸು ಕಾಸನ್ನು ಹೆಕ್ಕಿ, ನಿನ್ನ ಜೀವನದ ಗುರಿಯನ್ನು ತೋರಿಸುವ “ಗುರು” ವನ್ನು ಮರೆತೆಯಲ್ಲಾ?
ಈಗ ನನ್ನ ಧ್ವನಿಯಲ್ಲಿ ನೀನು ಈ ಹಾಡು ಕೇಳು– ಎಲ್ಲಿ ಜಾರಿತೋ ಮನವು ಎಲ್ಲೇ ಮೀರಿತೋ .. ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋ..
ಆದರೆ ನಿನ್ನ ಧ್ವನಿಯಲ್ಲಿ ಆದಷ್ಟು ಬೇಗ ಈ ಹಾಡನ್ನು ಕೇಳುವ ಬಯಕೆ-ಕುರುಡು ಕಾಂಚಾಣ ಕುಣಿಯುತಲಿತ್ತು!
ಕಾಲಿಗೆ ಬಿದ್ದವರ ತುಳಿಯುತಲಿತ್ತು!
ಕುರುಡು ಕಾಂಚಾಣ..

ಗಂಡ-ಹೆಂಡತಿ, ಮಕ್ಕಳು, ಕಾಂಚಾಣ ಈಗ ಇದ್ದರೂ “ಚಿತೆ” ಏರುವಾಗ ಎಲ್ಲವೂ ಶೂನ್ಯ!
ಉಳಿಯುವುದು ಧಾನ, ಧರ್ಮ, ಮಾಡಿದ ಪುಣ್ಯ ಮಾತ್ರ..
ನಿನಗೆ ಯಾವ ರೀತಿಯಲ್ಲಿ ಹೇಳಲಿ?

ಆಧಾರವಿಲ್ಲದ ಜೀವಗಳಿಗೆ, ಛಲವಿಲ್ಲದ ಕುಡಿಗಳಿಗೆ ಉಸಿರನ್ನು, ಭರವಸೆಯನ್ನು ಕೊಟ್ಟವರು ನಮ್ಮ ಗುರುಗಳು.
ನಮ್ಮ ಸoಸ್ಥಾನ ಯಾವತ್ತೂ ಹರಿಯುವ ನದಿ. ಅಲ್ಲಿ ಕಲ್ಮಷಕ್ಕೆ ಜಾಗವೇ ಇಲ್ಲ.
ರಭಸವಾಗಿ ಹರಿಯುವ ನದಿಯ ವಿರುದ್ಧ ಈಜಿದರೆ ದಡ ಸೇರಬಹುದೇ ಆ ಜೀವ?

ಅಯ್ಯೊ, ಗುರುಗಳ ಬಗ್ಗೆ ಕೆಟ್ಟದಾಗಿ ಬರೆಯುವವರ ಕೈಗಳಿಗೆ, ಮಾತಾಡುವವರ ಬಾಯಿಗೆ “ಸತ್ಯ” ದ ಬಿಸಿ ಆದಷ್ಟು ಬೇಗ ತಾಗಲಿದೆ.
ಮಠದ ವಿರುದ್ಧ ಬರುವ ವಾರ್ತೆಗಳಿಂದ ನಿಮ್ಮ ಮನಸ್ಸಿಗೆ ಖುಷಿ ಆಗಿತ್ತಿದ್ದರೆ, ಅದು ಕೇವಲ ಕ್ಷಣಿಕ!
ನಿಮ್ಮ ಕೆಲಸ ನೀವು ನೋಡಿಕೊಳ್ಳಿ.
ಮಠದ ಪರವಾಗಿ ನಮ್ಮ ಕೆಲಸವನ್ನು ನಾವು ನೋಡಿಕೊಳ್ಳುತ್ತೇವೆ.
ನಿಮಗೀದೋ ಈ ಕೊನೆಯ ಮಾತು- ಅಳುವ ಕಡಲಲ್ಲಿ, ನಗೆಯ ದೋಣಿ ಆದಷ್ಟು ಬೇಗ ತೇಲಿ ಬoದು ದಡ ಸೇರಲಿದೆ. ಯಾವ ಪ್ರವಾಹ ಬoದರೂ ಅಷ್ಟೇ!! ಕಾಯುತ್ತಾ ಕುಳಿತಿರಿ!

ಕುವೆಂಪು ರವರ ಹಾಡನ್ನು ಸ್ವಲ್ಪ ಬದಲಾಯಿಸಿ, ರಾಮನಲ್ಲಿ ನನ್ನ ಪ್ರಾರ್ಥನೆ—
ಬಾ ಇಲ್ಲಿ ಸಂಭವಿಸು ಇಂದು
“ಆ” ಹೃದಯದಲ್ಲಿ ನಿತ್ಯವೂ
ಅವತರಿಪ ಸತ್ಯಾವತಾರ!!

|| ಹರೇ ರಾಮ ||

~*~*~

Facebook Comments Box